ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar) ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ವರ್ಷದ ಆರಂಭದಲ್ಲಿಯೇ ಶಿವಣ್ಣನ ಈ ಸಿನಿಮಾದ ಒಂದು ಮೋಷನ್ (Ghost Motion Poster) ಪೋಸ್ಟರ್ ಗಮನ ಸೆಳೆಯುತ್ತಿದೆ. ಶಿವರಾಜ್ ಕುಮಾರ್ ಆರಂಭದಲ್ಲಿದ್ದ ಆ ಲುಕ್ ಇಲ್ಲಿ ಮತ್ತೆ ಬಂದಂತಿದೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಜೈಲ್ (Ghost Film Jail Set) ಸೆಟ್ನಲ್ಲಿಯೇ ಆಗಿದೆ. ಮೈಸೂರಿನಲ್ಲಿ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಚಿತ್ರದ ಶಿವಣ್ಣನ ರೆಟ್ರೋ ಲುಕ್ನ ಮಹತ್ವದ ಭಾಗದ ಚಿತ್ರೀಕರಣ ಮಾಡಲಾಗಿದೆ. ಹಾಗೇನೆ ಸಿನಿಮಾದ ಒಂದು ಮೋಷನ್ (Ghost Film) ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರಿಂದ ಚಿತ್ರದ ಬಗ್ಗೆ ಕುತೂಹಲ ಈಗ ಜಾಸ್ತಿ ಆಗಿದೆ.
ಘೋಸ್ಟ್ ದಿ ಗ್ಯಾಂಗ್ಸ್ಟರ್-ಶಿವಣ್ಣನ ಹೊಸ ಖದರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕುತ್ತಿದೆ. 2023 ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳ ಲಿಸ್ಟ್ ನಲ್ಲಿ ಘೋಸ್ಟ್ ವಿಭಿನ್ನವಾಗಿಯೇ ನಿಲ್ಲೋ ಹಾಗೆ ಕಾಣುತ್ತಿದೆ.
ಚಿತ್ರದಲ್ಲಿ ಶಿವರಾಜ್ ಕುಮಾರ್ ಲುಕ್ ವಿಭಿನ್ನವಾಗಿಯೇ ಇದೆ. ಇದನ್ನ ಕಂಡ್ರೆ, ಇಂಗ್ಲೀಷ್ ಸಿನಿಮಾದ ಫೀಲ್ ಆಗುತ್ತಿದೆ. ಡೈರೆಕ್ಟರ್ ಶ್ರೀನಿ ಒಳ್ಳೆ ಪಾತ್ರಗಳನ್ನೆ ಡಿಸೈನ್ ಮಾಡಿದ್ದಾರೆ. ಆ ಪ್ರಕಾರ ಶಿವಣ್ಣ ಇಲ್ಲಿ ರೆಟ್ರೋ ಲುಕ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ರೆಟ್ರೋ ಸಖತ್ ಲುಕ್
ಘೋಸ್ಟ್ ಸಿನಿಮಾದಲ್ಲಿ ಇಲ್ಲಿವರೆಗೂ ಶಿವರಾಜ್ ಕುಮಾರ್ ಪಾತ್ರ ಹೇಗಿದೆ ಅನ್ನೋ ಕುತೂಹಲ ಇತ್ತು. ಅದಕ್ಕೆ ಶಿವಣ್ಣ ಗನ್ ಹಿಡಿದು ನಿಂತ ಪೋಸ್ಟರ್ ಉತ್ತರವಾಗಿಯೇ ಸಿಕ್ಕಿತ್ತು. ಆದರೆ ರೆಟ್ರೋ ಲುಕ್ ಕೂಡ ಇರುತ್ತದೆ ಅನ್ನೋ ಅಂದಾಜು ಕೂಡ ಇರಲಿಲ್ಲ ಅಂತಲೇ ಹೇಳಬಹುದು.
ಆದರೆ ಶ್ರೀನಿ ತಮ್ಮ ಈ ಚಿತ್ರದಲ್ಲಿ ಘೋಸ್ಟ್ ಪಾತ್ರಕ್ಕೆ ಪ್ಲ್ಯಾಶ್ ಬ್ಯಾಕ್ ಕೂಡ ಇಟ್ಟಿದ್ದಾರೆ. ಅದಕ್ಕಾಗಿಯೇ ರೆಟ್ರೋ ಲೋಕವನ್ನೂ ಸೃಷ್ಟಿಸಿದ್ದಾರೆ. ಶಿವರಾಜ್ ಕುಮಾರ್ ಯಂಗ್ ಲುಕ್ನ ಮೋಷನ್ ಪೋಸ್ಟರ್ ರಿವೀಲ್ ಮಾಡಿ ಈಗಲೇ ಚಿತ್ರ ಪ್ರೇಮಿಗಳಿಗೆ ಕುತೂಹಲ ಮೂಡಿಸಿದ್ದಾರೆ.
ಶಿವಣ್ಣನ ರೆಟ್ರೋ ಲುಕ್ಕು-ಸಿಗರೇಟ್ ಸೇದೋ ಸ್ಟೈಲು
ಮೈಸೂರಿನಲ್ಲಿ ಘೋಸ್ಟ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಪೂರ್ಣ ಆಗಿದೆ. ಇಲ್ಲಿಯೇ ಚಿತ್ರದ ಮಹತ್ವದ ಸೀನ್ಗಳನ್ನೂ ತೆಗೆದಿದ್ದಾರೆ. ಮೊನ್ನೆ ಮೊನ್ನೆ ಶಿವಣ್ಣನ ಒಂದು ರೆಟ್ರೋ ಲುಕ್ನ ಪುಟ್ಟ ವೀಡಿಯೋವನ್ನೂ ಡೈರೆಕ್ಟರ್ ಶ್ರೀನಿ ರಿವೀಲ್ ಮಾಡಿದ್ದರು.
Watch out for #SHIVANNA’s Vintage look in #GHOST..
Presenting you the MotionPoster of #GHOST..
shooting in progress
music by @arjunjanyamusic @sandeshpro @nimmashivanna@baraju_SuperHit pic.twitter.com/bubq3rOnlC
— SRINI (@lordmgsrinivas) January 1, 2023
ಘೋಸ್ಟ್ ಚಿತ್ರದಲ್ಲಿ ಶಿವರಾಜ್ಕುಮಾರ್ ಗ್ಯಾಂಗ್ಸ್ಟರ್
ಡೈರೆಕ್ಟರ್ ಶ್ರೀನಿ ತಮ್ಮ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮಾಡಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣವನ್ನ ಬೆಂಗಳೂರಿನಲ್ಲಿ ಮಾಡಿದ್ದಾರೆ. ಇದಕ್ಕಾಗಿಯೇ ಬಹು ಕೋಟಿ ವೆಚ್ಚದ ಸೆಟ್ ಅನ್ನೂ ಹಾಕಿಸಿದ್ದಾರೆ.
ಅಲ್ಲಿಯೇ ಬಹುತೇಕ ಭಾಗವನ್ನ ಚಿತ್ರೀಕರಣ ಮಾಡಿದ್ದಾರೆ. ಎರಡನೇ ಹಂತದ ಚಿತ್ರೀಕರಣವನ್ನ ಮೈಸೂರಿನಲ್ಲಿ ಮಾಡಿಕೊಂಡಿದ್ದಾರೆ. ಮೂರನೇ ಹಂತದ ಚಿತ್ರೀಕರಣ ಫೆಬ್ರವರಿ ತಿಂಗಳಲ್ಲಿಯೇ ಶುರು ಆಗಲಿದೆ.
ಮಹೇಂದ್ರ ಸಿಂಹ ಕ್ಯಾಮರಾ ಕಣ್ಣಲ್ಲಿ ಇಡೀ ಘೋಸ್ಟ್ ಸಿನಿಮಾ ಮೂಡಿ ಬರುತ್ತಿದೆ. ಮಾಸ್ತಿ ಮತ್ತು ಪ್ರಸನ್ನ ಅವರ ಮಸ್ತ್ ಡೈಲಾಗ್ಗಳೂ ಇಲ್ಲಿವೆ. ಅರ್ಜುನ್ ಜನ್ಯ ಈ ಚಿತ್ರಕ್ಕೂ ಮ್ಯೂಸಿಕ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾದ ಮೋಷನ್ ಪೋಸ್ಟರ್ ಈಗ ಭಾರೀ ಕುತೂಹಲ ಕೆರಳಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ