ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: `ಆಳ್​ ಕನ್ನಡ ತಾಯ್​​, ಬಾಳ್​ ಕನ್ನಡ ತಾಯ್’ ಎಂದು ಶಿವಣ್ಣ ವಾರ್ನಿಂಗ್​!

ಇದೀಗ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್(Shiva Rajkumar​) ಕೂಡ ಗರಂ ಆಗಿದ್ದಾರೆ. ಕನ್ನಡ ಧ್ವಜ ಸುಟ್ಟವರ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಧ್ವಜವನ್ನು ಸುಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಅಣ್ಣಾವ್ರ ಫೋಟೋ ಪೋಸ್ಟ್​ ಮಾಡಿದ ಶಿವಣ್ಣ

ಅಣ್ಣಾವ್ರ ಫೋಟೋ ಪೋಸ್ಟ್​ ಮಾಡಿದ ಶಿವಣ್ಣ

  • Share this:
ಕನ್ನಡಿಗರ ತಾಳ್ಮೆಯನ್ನು ಎಂಇಎಸ್ (MES)​ ಕಾರ್ಯಕರ್ತರು ಪದೇ ಪದೇ ಕೆಣಕುತ್ತಿದ್ದಾರೆ. ಕಾಲು ಕೆರೆದು ಜಗಳಕ್ಕೆ ನಿಂತಿದ್ದಾರೆ. ಕನ್ನಡಿಗರು ಶಾಂತಿಪ್ರಿಯರು ನಿಜ..ಆದರೆ ತಾಳ್ಮೆ ಕೆಟ್ಟರೆ ಸಿಂಹ(Lion)ಗಳಂತೆ ನುಗ್ಗಿ ಅವರನ್ನು ಬೇಟೆಯಾಡುತ್ತೇವೆ. ಎಂಇಎಸ್‌ ಮುಖಂಡ ದೀಪಕ್ ದಳವಿ (Deepak Dalvi) ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ನ ಕೆಲವರು ಮಹಾರಾಷ್ಟ್ರ(Maharashtra)ದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ(Kannada Flag) ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ''ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ'' ಎಂದು ಬರೆದು ಕೊಂಡಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸ್ಯಾಂಡಲ್​ವುಡ್ ​(Sandalwood) ನಟರೆಲ್ಲ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್ (Shiva Rajkumar​) ಕೂಡ ಗರಂ ಆಗಿದ್ದಾರೆ. ಕನ್ನಡ ಧ್ವಜ ಸುಟ್ಟವರ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಧ್ವಜವನ್ನು ಸುಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ''ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ'' ಎಂದು ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. 

ಅಣ್ಣಾವ್ರ ಫೋಟೋ ಪೋಸ್ಟ್​ ಮಾಡಿದ ಶಿವಣ್ಣ

ಕನ್ನಡ  ಧ್ವಜ ಸುಟ್ಟಿರುವುದನ್ನು ಖಂಡಿಸಿ ಶಿವಣ್ಣ ಪೋಸ್ಟ್​ವೊಂದನ್ನು ಹಾಕಿದ್ದಾರೆ. ತಮ್ಮ ಟ್ವೀಟ್​ ಅನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಗೃಹ ಸಚಿವ ಆರಗ ಜ್ಞಾನೇಂದ್ರ (Home minister Araga Gnanendra) ಹಾಗೂ  ಬೆಳಗಾವಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಒತ್ತಾಯ ಮಾಡಿದ್ದಾರೆ. ಟ್ವೀಟ್‌ಗೆ ಡಾ ರಾಜ್‌ಕುಮಾರ್ ಅವರು ಒಂದು ಕೈಯಲ್ಲಿ ಕನ್ನಡದ ಧ್ವಜ ಹಿಡಿದ ಚಿತ್ರ ಹಾಗೂ ಮತ್ತೊಂದು ಕೈಯಲ್ಲಿ, ''ಆಳ್ ಕನ್ನಡ ತಾಯ್, ಬಾಳ್ ಕನ್ನಡ ತಾಯ್'' ಎಂಬ ಸಾಲು ಬರೆದಿರುವ ಪ್ಲಕಾರ್ಡ್ ಹಿಡಿದಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಇನ್ನೂ ಶಿವಣ್ಣರ ಈ ಟ್ವೀಟ್​ ಅನ್ನು ಕನ್ನಡಿಗರು ಶೇರ್​ ಮಾಡಿದ್ದಾರೆ. ಕನ್ನಡಿಗರ ಹೋರಾಟಕ್ಕೆ ಶಿವಣ್ಣ ಪೋಸ್ಟ್​ ಮಾಡಿರುವುದು ಆನೆ ಬಲ ಬಂದಿದೆ.ಇದನ್ನು ಓದಿ : ಸಿಂಹದಂತೆ ಕ್ಯೂಟ್​ ಆಗಿ ಘರ್ಜಿಸಿದ ರಾಯನ್​ ರಾಜ್​ ಸರ್ಜಾ: ವಿಡಿಯೋ ವೈರಲ್​!

ಟ್ವೀಟ್​ ಮಾಡಿದ್ದ ನಟ ಜಗ್ಗೇಶ್​

ನಟ ಜಗ್ಗೇಶ್ ಸಹ ಇಂದು ಬೆಳಿಗ್ಗೆ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದರು. ''ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ. ಹಾಗೂ ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟ್ವೀಟ್ ಮಾಡಿ ಒತ್ತಾಯ ಮಾಡಿದ್ದರು. ಇನ್ನೂ ಹಲವು ಸ್ಯಾಂಡಲ್​ವುಡ್​ ನಟರು ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕನ್ನಡಿಗರ ತಂಟೆಗೆ ಬಂದರೆ ಪರಿಣಾಮ ಸರಿ ಇರಲ್ಲ ಎಂದು ವಾರ್ನಿಂಗ್​ ನೀಡುತ್ತಿದ್ದಾರೆ.

ಇದನ್ನು ಓದಿ : ಛೇ.. ಕೊನೆಗಾಲದಲ್ಲಿ ಹಿರಿಯ ನಟನಿಗೆ ಇದೆಂಥಾ ಪರಿಸ್ಥಿತಿ: ಪತ್ನಿ, ಮಕ್ಕಳಿಂದಲೇ ಟಾರ್ಚರ್​!

ಮುಖಕ್ಕೆ ಮಸಿ ಬಳಿದ  ಕನ್ನಡಗಿನ ಬಂಧನ

ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್‌ನವರು ಪ್ರತಿಭಟನಾ ರ್‍ಯಾಲಿ ಮಾಡಿ ತಿಲಕ್‌ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ಅಂತೆಯೇ ದೂರು ಸ್ವೀಕರಿಸಿ, ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ.  
Published by:Vasudeva M
First published: