Shiva Rajkumar: 48 ದೇಶಗಳ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ; ರಿಲೀಸ್​ ಆಗಲಿದೆ ಭಜರಂಗಿ-2 ಚಿತ್ರದ ಟೀಸರ್

Happy Birthday Shiva Rajkumar: ವಿಶ್ವದ ಮೂಲೆ ಮೂಲೆಯ ಅಭಿಮಾನಿಗಳು ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನ ತಾವಿದ್ದಲ್ಲಿಯೇ ಸಂಭ್ರಮಿಸಿದರು. ತಮ್ಮ ‌ನೆಚ್ಚಿನ ನಟನನ್ನು ವೀಡಿಯೋ ಕಾಲ್ ಮೂಲಕ ಮುಖಾಮುಖಿಯಾಗಿ ಶುಭ ಹಾರೈಸಿದರು.

ಶಿವ ರಾಜ್​ಕುಮಾರ್​

ಶಿವ ರಾಜ್​ಕುಮಾರ್​

  • Share this:
ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್​ ಶಿವರಾಜ್ ಕುಮಾರ್​ಗೆ ಇಂದು ಜನುಮ ದಿನದ ಸಂಭ್ರಮ. ಕೊರೋನಾ ಹಿನ್ನೆಲೆಯಲ್ಲಿ ಶಿವಣ್ಣ ಈ ಬಾರಿ ಹುಟ್ಟುಹಬ್ಬವನ್ನ ಬಹಳ ಸರಳವಾಗಿ ಆಚರಿಸಿಕೊಂಡರು . ಕುಟುಂಬ ಸದಸ್ಯರ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು ಸೆಂಚುರಿ ಸ್ಟಾರ್.

ಇನ್ನು ಒಂದು ವಾರದ ಹಿಂದೇನೆ ಮನೆ ಬಳಿ ಯಾರೂ ಅಭಿಮಾನಿಗಳು ಬರಬೇಡಿ ಅಂತ ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ವಿಶ್ ಮಾಡಿ ಸಂಭ್ರಮಿಸಿದರು.

ಹಾಗೆ ಕರುನಾಡಿ‌ನ ಅಭಿಮಾನಿಗಳಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯ ಅಭಿಮಾನಿಗಳು ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನ ತಾವಿದ್ದಲ್ಲಿಯೇ ಸಂಭ್ರಮಿಸಿದರು. ತಮ್ಮ ‌ನೆಚ್ಚಿನ ನಟನನ್ನು ವೀಡಿಯೋ ಕಾಲ್ ಮೂಲಕ ಮುಖಾಮುಖಿಯಾಗಿ ಶುಭ ಹಾರೈಸಿದರು. ಕತಾರ್, ದುಬೈ, ಲಂಡನ್, ಫ್ರಾನ್ಸ್, ಅಮೇರಿಕ ಸೇರಿದಂತೆ 48 ದೇಶಗಳ ಅಭಿಮಾನಿಗಳು ಈ ವೀಡಿಯೋ ‌ಮುಖಾಮುಖಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಅಂದಹಾಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಕೊಡುಗೆಗಳು ಸಾಕಷ್ಟು ಸಿಕ್ಕಿವೆ. ಅದರಲ್ಲಿ ಭಜರಂಗಿ-2 ಚಿತ್ರದ ಟೀಸರ್ ಹೈಲೈಟ್. ಹರ್ಷ ನಿರ್ದೇಶನದ ಈ ಸಿನಿಮಾಗೆ ಭಾವನಾ ನಾಯಕಿ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಮೇ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಶೂಟಿಂಗ್​ ಅರ್ಧಕ್ಕೆ ನಿಂತಿತ್ತು.

ಇದನ್ನೂ ಓದಿ: ನಿಮ್ಮ ಆರೋಗ್ಯ ನನಗೆ ಮುಖ್ಯ; ಬರ್ತ್​ ಡೇ ಬಾಯ್​ ಶಿವಣ್ಣನಿಂದ ಅಭಿಮಾನಿಗಳಿಗೆ ಮನವಿ

ಹಾಗೆ ಒಂದಷ್ಟು ಹೊಸ ಸಿನಿಮಾಗಳು ಸಹ ಅನೌನ್ಸ್ ಆಗಿದ್ದು, ಡಾಲಿ ಧನಂಜಯ್ ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ ಶಿವಣ್ಣ. ಅಷ್ಟೇ ಅಲ್ಲದೆ ಸಂಬಂಧಿ ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಮೈಲಾರಿ ಎಂಬುವವರ ನಿರ್ಮಾಣದಲ್ಲಿ ಪ್ರೊಡಕ್ಷನ್ ನಂ-೨ ಎಂಬ ಸಿನಿಮಾ ಸಹ ಅನೌನ್ಸ್ ಆಗಿದೆ.
Published by:Rajesh Duggumane
First published: