ರಾಜ್ ಬಿ ಶೆಟ್ಟಿ(Raj B Shetty), ರಿಷಬ್ ಶೆಟ್ಟಿ(Rishab Shetty) ನಟಿಸಿರುವ ಗರುಡ ಗಮನ ವೃಷಭ ವಾಹನ(Garuda Gamana Vrishabha Vahana) ಸಿನಿಮಾ ಕೂಡ ಜೀ 5(Zee 5) ಪಾಲಾಗಿದೆ. 'ಭಜರಂಗಿ 2', 'ಪುಕ್ಸಟ್ಟೆ ಲೈಫ್' ನಂತರದಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಗರುಡಗಮನ ವೃಷಭ ವಾಹನ' ಸಿನಿಮಾವನ್ನು ಓಟಿಟಿಯಲ್ಲಿ ಪ್ರೇಕ್ಷಕರು ನೋಡಬಹುದು. ಬಹಳ ಸರಳವಾಗಿ ಮೂಡಿಬಂದರೂ ಈ ಚಿತ್ರದ ಕಂಟೆಂಟ್ ವಿಭಿನ್ನವಾಗಿ ಮೂಡಿ ಬಂದಿತ್ತು.ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯದ್ದೇ ಫೀಲ್ ಕೊಟ್ಟಿತ್ತು. ಈ ಹಿಂದೆ ನೋಡಿರದ ರೀತಿಯಲ್ಲಿ ಈ ಸಿನಿಮಾ ಮಜಾ ಕೊಟ್ಟಿತ್ತು. ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್ ಕಿಕ್ ಕೊಟ್ಟಿತ್ತು. ಈ ಚಿತ್ರದ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೌಡಿಸಂ ಸಿನಿಮಾವನ್ನೂ ಹೀಗೂ ಮಾಡಬಹುದು ಎಂದು ರಾಜ್ ಬಿ ಶೆಟ್ಟಿ ಸ್ಯಾಂಡಲ್ವುಡ್(Sandalwood)ಗೆ ತೋರಿಸಿಕೊಟ್ಟಿದ್ದರು. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ ಅವರು ಖರೀದಿ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಈಗ ಜೀ 5 ಪಾಲಾಗಿದೆ.
ರಾಜ್ ಬಿ ಶೆಟ್ಟಿಗೆ ಸಪ್ರೈಸ್ ಕರೆ ಮಾಡಿದ ಶಿವಣ್ಣ!
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದಾರೆ. ತಮ್ಮ ಗುರುತನ್ನು ಹೇಳಿಕೊಳ್ಳದ ಶಿವಣ್ಣ, ಮಾಸ್ ಸ್ಟೈಲ್ನಲ್ಲೇ ರಾಜ್ ಶೆಟ್ಟಿ ಕಾಲೆಳೆದಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೀ5ನಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಪ್ರಚಾರ ಹಾಗೂ ರಿಲೀಸ್ ದಿನಾಂಕವನ್ನು ವಿಭಿನ್ನವಾಗಿ ವೀಕ್ಷಕರ ಮುಂದಿಡಲಾಗಿದೆ. ಈಗಾಗಲೇ ಜೀ5ಲ್ಲಿ ಬಿಡುಗಡೆಯಾಗಿರುವ ‘ಭಜರಂಗಿ 2’ ದಾಖಲೆಯ ವೀಕ್ಷಣೆಯೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂತಸದಲ್ಲಿರುವ ಶಿವಣ್ಣ ರಾಜ್ ಬಿ ಶೆಟ್ಟಿಗೆ ಕರೆ ಮಾಡಿದ್ದಾರೆ. ಇವರಿಬ್ಬರ ನಡುವಿನ ಮಾತುಕತೆ ಸಖತ್ ಮಜಾ ಕೊಡುತ್ತೆ. ಶಿವಣ್ಣ ಎಂದು ಕಡೆಯಲ್ಲಿ ರಾಜ್ ಬಿ ಶೆಟ್ಟಿಗೆ ತಿಳಿಯುತ್ತೆ.
ಇದನ್ನು ಓದಿ : Rashmika Mandanna-Vijay Deverakonda ನಡುವೆ ಸಂಥಿಂಗ್.. ಸಂಥಿಂಗ್? ಒಟ್ಟಿಗೆ ಗೋವಾದಲ್ಲಿ ಇವ್ರು ಮಾಡಿದ್ದೇನು ನೀವೇ ನೋಡಿ...!
ನೀನೇನು ದೊಡ್ಡ ಡಾನಾ ಎಂದು ಕಾಲೆಳೆದ ಶಿವಣ್ಣ!
ರಾಜ್ ಬಿ ಶೆಟ್ಟಿಗೆ ಕರೆ ಮಾಡಿದ ಶಿವಣ್ಣ, ‘‘ಮಂಗಳಾದೇವಿಗೆ ನೀನೇನು ದೊಡ್ಡ ಡಾನಾ?’’ ಎಂದು ಕೇಳಿದ್ದಾರೆ. ‘‘ಯಾರು ಯಾರು’’ ಎಂದು ಗೊಂದಲದಲ್ಲಿ ಕೇಳಿರುವ ರಾಜ್ ಶೆಟ್ಟಿಗೆ, ‘‘ಅಲ್ಲೇ ಬರ್ಲಾ? ನಾನೋ ನೀನೋ ನೋಡೇ ಬಿಡೋಣ’’ ಎಂದು ಶಿವಣ್ಣ ಹೇಳಿದ್ದಾರೆ. ‘‘ಸರಿ ಬನ್ನಿ, ನೋಡೇ ಬಿಡೋಣ’’ ಎಂದು ಪ್ರತ್ಯುತ್ತರ ನೀಡಿದ್ದಾರೆ ರಾಜ್. ಜತೆಗೆ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.
ಆಗ ಶಿವಣ್ಣ ‘‘ನಾನು ಭಜರಂಗಿ’’ ಎಂದು ನಕ್ಕಿದ್ದಾರೆ. ಆಗ ರಾಜ್ ಬಿ ಶೆಟ್ಟಿಗೆ ಇದು ಶಿವಣ್ಣ ಎಂದು ತಿಳಿದಿದೆ. ಮೊದಲು ನೀವು ಓಂ ಮಾಡಿದ್ದು, ಅದಕ್ಕೆ ನೀವೇ ದೊಡ್ಡ ಡಾನ್ ಎಂದ ರಾಜ್ ಬಿ ಶೆಟ್ಟಿ ತಮಾಷೆ ಮಾಡಿದ್ದಾರೆ.
ಇದನ್ನು ಓದಿ : Ramya ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡುವಂತೆ ರಚ್ಚು ರಿಕ್ವೆಸ್ಟ್: ಡಿಂಪಲ್ ಕ್ವೀನ್ ಮನವಿಗೆ ಏನಂದ್ರು ನೋಡಿ ಮೋಹಕ ತಾರೆ!
ಜನವರಿ 13ಕ್ಕೆ ಜೀ 5ನಲ್ಲಿ ಗರುಡ ಗಮನ!
‘ಗರುಡ ಗಮನ…’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಜನವರಿ 13ರಿಂದ ಪ್ರಸಾರವಾಗಲಿದೆ. ಸಂಕ್ರಾಂತಿ ಹಬ್ಬದ ಮುನ್ನಾದಿನವೇ ಚಿತ್ರ ಬಿಡುಗಡೆಯಾಗುತ್ತಿರುವುದು ಸಿನಿಪ್ರೇಮಿಗಳಿಗೆ ಖುಷಿ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ