HOME » NEWS » Entertainment » SHIVA RAJKUMAR BIRTHDAY SPECIAL FANS READY TO RELEASE SHIVA58 SONG ON YOUTUBE HG

Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು

Happy Birthday Shiva Rajkumar: ಇತ್ತೀಚೆಗೆ ಕಿಚ್ಚ ಸುದೀಪ್​ ಅವರ ಕಡೆಯಿಂದ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ‘ಶಿವಣ್ಣ ಮಹೋತ್ಸವ’ ಎಂಬ ಹೊಸ ಡಿಪಿಯನ್ನು ಬಿಡುಗಡೆ ಮಾಡಿಸಿದ್ದರು. ಆ ಮೂಲಕ ಕಿಚ್ಚನ ಕಡೆಯಿಂದ ಗಾಜನೂರು ಗಂಡಿನ ಹುಟ್ಟುಹಬ್ಬಕ್ಕೆ ಅಡ್ವಾನ್ಸ್​ ವಿಶ್​ ಮಾಡಿಸಿದ್ದರು. ಇದೀಗ ಅಭಿಮಾನಿಗಳು ಟಗರು ಶಿವನ ಬರ್ತ್​​​​ ​ಡೇಗೆ ಸ್ಪೆಷಲ್​ ಹಾಡನ್ನು ಸಿದ್ಧಪಡಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಂದ ಈ ಹಾಡನ್ನು ಬಿಡುಗಡೆ ಮಾಡಿಸಲ್ಲಿದ್ದಾರೆ.

news18-kannada
Updated:July 11, 2020, 3:35 PM IST
Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು
ಶಿವ ರಾಜ್​ಕುಮಾರ್​
  • Share this:
ಯಂಗ್​ ಆ್ಯಂಡ್​ ಎನರ್ಜಿಟಿಕ್ ನಟ​ ಶಿವ ರಾಜ್​ಕುಮಾರ್​ ಅವರ ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿ ಇದೆ. ಈಗಾಗಲೇ ಅಭಿಮಾನಿಗಳಲ್ಲಿ ಮನದಲ್ಲಿ ಸಂತಸ ಮನೆ ಮಾಡಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್​ ಅವರ ಕಡೆಯಿಂದ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ‘ಶಿವಣ್ಣ ಮಹೋತ್ಸವ’ ಎಂಬ ಹೊಸ ಡಿಪಿಯನ್ನು ಬಿಡುಗಡೆ ಮಾಡಿಸಿದ್ದರು. ಆ ಮೂಲಕ ಕಿಚ್ಚನ ಕಡೆಯಿಂದ ಗಾಜನೂರು ಗಂಡಿನ ಹುಟ್ಟುಹಬ್ಬಕ್ಕೆ ಅಡ್ವಾನ್ಸ್​ ವಿಶ್​ ಮಾಡಿಸಿದ್ದರು. ಇದೀಗ ಅಭಿಮಾನಿಗಳು ಟಗರು ಶಿವನ ಬರ್ತ್​​​​ ​ಡೇಗೆ ಸ್ಪೆಷಲ್​ ಹಾಡನ್ನು ಸಿದ್ಧಪಡಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಂದ ಈ ಹಾಡನ್ನು ಬಿಡುಗಡೆ ಮಾಡಿಸಲ್ಲಿದ್ದಾರೆ.

ಶಿವಣ್ಣಗಾಗಿ ಅಭಿಮಾನಿಗಳು @58 ಸ್ಟಿಲ್​​​ ಯಂಗ್​ ಮಾ.. ಹಾಡನ್ನು ಸಿದ್ಧಪಡಿಸಿದ್ದಾರೆ. ಇಂದು ಸಂಜೆ 5.30ಕ್ಕೆ ಈ ಹಾಡನ್ನು ಪುನೀತ್​ ರಾಜ್​ ಕುಮಾರ್​ ಬಿಡುಗಡೆ ಮಾಡುತ್ತಿದ್ದಾರೆ. ವರುಣ್​​ ಸ್ಟೂಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ಶಿವ ರಾಜ್​ಕುಮಾರ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲಿದ್ದಾರೆ. ವಯಸ್ಸು ಎಷ್ಟೇ ಆದರು ಎನರ್ಜಿಟಿಕ್​ ಹೀರೋ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಆಕ್ಟಿಂಗ್​​ಗೂ ಜೈ, ಡ್ಯಾನ್ಸ್​ಗೂ ಸೈ ಎಂಬ ಶಿವರಾಜ್ ಕುಮಾರ್​ ಬಗೆ ಬಗೆಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡುತ್ತಾ ಬಂದಿದ್ದಾರೆ.

Youtube Video


1986 ರಿಂದ ನಾಯಕನಾಗಿ ಸ್ಯಾಂಡಲ್​ವುಡ್​ ಪ್ರವೇಶಿಸಿದ ಶಿವ ರಾಜ್​ಕುಮಾರ್​ ‘ಆನಂದ್’​ ಸಿನಿಮಾ ಮೂಲಕ ಅಭಿಮಾನಿಗಳಿಗೆ ಹತ್ತಿವಾದರು. ಆನಂತರ ಇವರ ನಟನೆಯ ‘ಓಂ’ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹಿಟ್​ ಆಗಿತ್ತು. 100ಕ್ಕೂ ಹೆಚ್ಚು ದಿನಗಳನ್ನು ಪೂರೈಸಿತ್ತು. ಅಷ್ಟು ಮಾತ್ರವಲ್ಲ, ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾ ಆಗಾಗ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಲೇ ಇರುತ್ತದೆ.  ಆ ಮೂಲಕ ಶಿವಣ್ಣ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ.

ಇವರು ನಟಿಸಿದ ‘ಚಿಗುರಿದ ಕನಸು’, ‘ಹೃದಯ ಹೃದಯ’, ‘ಜೋಗಿ’, ‘ನಮ್ಮೂರ ಮಂದಾರ ಹೂವೆ’, ‘ಎಕೆ 47’,  ‘ಭಜರಂಗಿ’, ‘ಮುಫ್ತಿ’, ‘ಟಗರು’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಇವರು ಭಜರಂಗಿ -2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೊರೋನಾ ಹಾವಳಿ ಕಡಿಮೆಯಾದಂತೆ ತೆರೆಗೆಬರಲಿದೆ.

ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ
Published by: Harshith AS
First published: July 11, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories