• Home
  • »
  • News
  • »
  • entertainment
  • »
  • Shivarajkumar@60: ಹ್ಯಾಟ್ರಿಕ್ ಹೀರೋ ಬರ್ತ್​ ಡೇಗೆ 60 ಗಂಟೆ ನಾನ್​ ಸ್ಟಾಪ್​ ಸಿನಿಮೋತ್ಸವ, ಸತತ 3 ದಿನಗಳ ಕಾಲ ಶಿವಣ್ಣ ಹಬ್ಬ!

Shivarajkumar@60: ಹ್ಯಾಟ್ರಿಕ್ ಹೀರೋ ಬರ್ತ್​ ಡೇಗೆ 60 ಗಂಟೆ ನಾನ್​ ಸ್ಟಾಪ್​ ಸಿನಿಮೋತ್ಸವ, ಸತತ 3 ದಿನಗಳ ಕಾಲ ಶಿವಣ್ಣ ಹಬ್ಬ!

ಬರ್ತ್​ ಡೇ ವಿಶೇಷ

ಬರ್ತ್​ ಡೇ ವಿಶೇಷ

Shiva Rajkumar: ಕೊನೆಯದಾಗಿ ಕಳೆದ ವರ್ಷ ಬಿಡುಗಡೆಯಾದ ʻಭಜರಂಗಿ-2ʼ ಸಿನಿಮಾ ಮೂಲಕ ಈ ಹೊಸ ಪ್ರಯತ್ನ ಮುಕ್ತಾಯವಾಗಲಿದೆ.  ಈ ಹೊಸ ಪ್ರಯೋಗ ಭಾರತೀಯ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

  • Share this:

ಜೀ ಪಿಚ್ಚರ್ (Zee Picture), ಕಳೆದು 2 ವರ್ಷಗಳಿಂದ ಅದ್ಬುತ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದೆ. ಯಾವುದಾರೂ ವಿಶೇಷ ದಿನವಿದ್ದರೆ ಅದಕ್ಕೊಂದು ವಿಶೇಷ ಥೀಮ್​ ತಯಾರಿಸಿ ಇನ್ನೂ ವಿಶೇಷವನ್ನಾಗಿಸುತ್ತದೆ.  ಈ ಬಾರಿ ಸಹ ವಿಭಿನ್ನ ಕಾನ್ಸೆಪ್ಟ್​   ಮೂಲಕ ಬಂದಿದ್ದು, ಡಾ.ಶಿವರಾಜ್‌ಕುಮಾರ್‌ (Shivarajkumar) ಬರ್ತ್‌ಡೇ (Birthday) ಪ್ರಯುಕ್ತ ಹೊಸ ಯೋಜನೆ ಮಾಡಿದೆ.


60 ಗಂಟೆ ವಿಶೇಷ ಸಿನಿಮಾ ಪ್ರದರ್ಶನ


ಹೌದು, ಇದೇ ಜುಲೈ 12ಕ್ಕೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಜೀ ಪಿಚ್ಚರ್ 60 ನಾನ್ ಸ್ಟಾಪ್​ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದೆ.  ಹೌದು, ಶಿವಣ್ಣನ 60ನೆ ಜನ್ಮದಿನದ ವಿಶೇಷವಾಗಿ ಈ ಹೊಸ ಪ್ರಯತ್ನ ಮಾಡಲಾಗುತ್ತಿದೆ.


sandalwood actor shivarajkumar real name is nagaraj shivaputta swamy


ಹೌದು, ನಟ ಶಿವರಾಜ್​ಕುಮಾರ್ ಅಭಿನಯದ ಬರೋಬ್ಬರಿ 20 ಸಿನಿಮಾಗಳನ್ನು 3 ದಿನಗಳ ಕಾಲ ನಿರಂತರವಾಗಿ ಜೀ ಪಿಚ್ಚರ್‌ನಲ್ಲಿ ಪ್ರಸಾರ ಮಾಡಲು ನಿರ್ಧರಿಸಿದೆ.  ಹೌದು, ಇದೇ ಭಾನುವಾರದಿಂದ ಈ ವಿನೂತನ ಪ್ರಯೋಗ ಆರಂಭವಾಗಿದ್ದು, ಭಾನುವಾರ ಬೆಳಗ್ಗೆ 9ಕ್ಕೆ ʻಭಾಗ್ಯದ ಬಳೆಗಾರʼ ಸಿನಿಮಾದಿಂದ ಆರಂಭಿಸಲಾಗುತ್ತದೆ. ನಂತರ ಮಂಗಳವಾರ ಜುಲೈ 12ರ ರಾತ್ರಿ 9 ಗಂಟೆಯವರಗೆ ನಿರಂತರವಾಗಿ 60 ಗಂಟೆಗಳ ಶಿವರಾಜ್‌ಕುಮಾರ್‌ ಅಭಿನಯದ ಸಿನಿಮಾಗಳನ್ನೇ ಪ್ರಸಾರ ಮಾಡಲಿದೆ.


actor shiva rajkumar is not happy with trolls about him


ಇನ್ನು ಕೊನೆಯದಾಗಿ ಕಳೆದ ವರ್ಷ ಬಿಡುಗಡೆಯಾದ ʻಭಜರಂಗಿ-2ʼ ಸಿನಿಮಾ ಮೂಲಕ ಈ ಹೊಸ ಪ್ರಯತ್ನ ಮುಕ್ತಾಯವಾಗಲಿದೆ.  ಈ ಹೊಸ ಪ್ರಯೋಗ ಭಾರತೀಯ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಯಾಗಿದ್ದು, ಸೂಪರ್‌ ಸ್ಟಾರ್ ಒಬ್ಬರ‌ ಬರ್ತ್‌ಡೇಯನ್ನ ಹೀಗೆ ನಿರಂತರವಾಗಿ 60 ಗಂಟೆಗಳ ಕಾಲ ಸಿನಿಮಾ ಪ್ರಸಾರ ಮಾಡುವ ಮೂಲಕ ಆಚರಿಸುತ್ತಿರುವುದು ನಿಜಕ್ಕೂ ಬಹಳ ವಿಶೇಷ.


ಇದನ್ನೂ ಓದಿ: ಈ ಕಾರಣಕ್ಕೆ ಸಿನಿಮಾದಿಂದ ದೂರವಿದ್ರಂತೆ ಮಾನ್ವಿತಾ ಕಾಮತ್!


ಮೂಲಗಳ ಪ್ರಕಾರ ಈ 60 ಗಂಟೆ ಸಿನಿಮಾ ಪ್ರದರ್ಶನದಲ್ಲಿ ಶಿವಣ್ಣ ಅವರ ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ʻಜೋಗಿʼ, ʻತವರಿನ ಸಿರಿʼ, ʻಭಜರಂಗಿʼ, ʻಪ್ರೀತ್ಸೆʼ, ʻಕುರುಬನ ರಾಣಿʼ, ʻದಿ ವಿಲನ್‌ʼ, ʻಮಫ್ತಿʼ ಪಿಚ್ಚರ್‌ಗಳು ಪ್ರಸಾರವಾಗಲಿವೆ ಎನ್ನಲಾಗುತ್ತಿದೆ.  ಇನ್ನು ಈ ದಿನದ ವಿಶೇಷವಾಗಿ ರಾತ್ರಿ 9.30 ಕ್ಕೆ ಶಿವಣ್ಣ ಅವರ ವೀಕೆಂಡ್​ ವಿತ್​ ಸ್ಪೆಷಲ್​ ಪ್ರಸಾರವಾಗಲಿದೆ.


Shiva rajkumar gives hint regarding bairagi 2 film


ಬೈರಾಗಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ


ನಿಜಕ್ಕೂ ಇದು ವಿಭಿನ್ನ ಪ್ರಯತ್ನವಾಗಿದ್ದು, ಶಿವಣ್ಣ ಅಭಿಮಾನಿಗಳ ಸಂತೋಕ್ಷಕ್ಕೆ ಕಾರಣವಾಗಿದೆ. ಇತ್ತೀಚೆಗೆ ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ ಜೋಡಿಯಾಗಿದ್ದಾರೆ.


ಇದನ್ನೂ ಓದಿ: ಅಟಲ್​ ಜೀ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ, ಅಜಾತಶತ್ರು ಪಾತ್ರಕ್ಕೆ ಜೀವ ನೀಡಲಿದ್ದಾರೆ ಈ ನಟ


ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’. ಶಿವಣ್ಣ  ಅವರ ಕಳೆದ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು, ಶಿವಣ್ಣನ ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದರು. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್'ಗೆ ಫ್ಯಾನ್ಸ್ ಫಿದಾ ಆಗಿದ್ದರು. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Published by:Sandhya M
First published: