• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • HBD Shiva Rajkumar: ನಿಮ್ಮ ಆರೋಗ್ಯ ನನಗೆ ಮುಖ್ಯ; ಬರ್ತ್​ ಡೇ ಬಾಯ್​ ಶಿವಣ್ಣನಿಂದ ಅಭಿಮಾನಿಗಳಿಗೆ ಮನವಿ

HBD Shiva Rajkumar: ನಿಮ್ಮ ಆರೋಗ್ಯ ನನಗೆ ಮುಖ್ಯ; ಬರ್ತ್​ ಡೇ ಬಾಯ್​ ಶಿವಣ್ಣನಿಂದ ಅಭಿಮಾನಿಗಳಿಗೆ ಮನವಿ

ಶಿವ ರಾಜ್​ಕುಮಾರ್

ಶಿವ ರಾಜ್​ಕುಮಾರ್

Happy Birthday Shiva Rajkumar: ಈ ಬಾರಿ ನನ್ನ ಹುಟ್ಟುಹಬ್ಬ ವಿಭಿನ್ನವಾಗಿರಲಿದೆ. ಮೊದಲು ಆರೋಗ್ಯಕ್ಕೆ ಆದ್ಯತೆ. ಆರೋಗ್ಯವೇ ಭಾಗ್ಯ. ನನ್ನ ಅಭಿಮಾನಿಗಳ ವಿಷಯದಲ್ಲಿ ನನಗೆ ವಿಶೇಷವಾದ ಜವಾಬ್ದಾರಿಯಿದೆ. ಆದ್ದರಿಂದ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇನೆ. ಅಭಿಮಾನಿಗಳು ತಮ್ಮ ಮನೆಯಿಂದಲೇ ನನಗೆ ಶುಭಾಶಯ ಕೋರಬಹುದೆಂದು ಶಿವ ರಾಜ್​ಕುಮಾರ್​ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಹ್ಯಾಟ್ರಿಕ್​  ಹೀರೋ ಶಿವ ರಾಜ್​ಕುಮಾರ್ ಅವರ ಹುಟ್ಟುಹಬ್ಬವೆಂದರೆ ಅಭಿಮಾನಿಗಳೆಗೆ ಎಲ್ಲಿಲ್ಲದ ಸಂತಸ. ಪ್ರತಿ ವರ್ಷ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ದಕಾಗಿ ಮನೆ ಮುಂದೆ ಸೇರಿ ಕೇಕ್​ ಕತ್ತರಿಸಿ, ಹೂವಿನ ಹಾರಹಾಕಿ ಅವರಿಗೆ ಶುಭಾಶಯ ತಿಳಿಸುತ್ತಿದ್ದರು. ಆದರೆ ಈ ವರ್ಷ ಕೊರೋನಾದಿಂದಾಗಿ  ಶಿವರಾಜ್​ ಕುಮಾರ್ ಸರಳವಾಗಿ ಹುಟ್ಟುಹಬ್ಬ ಆಚರಣೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕೊರೋನಾ ಕಡಿಮೆಯಾದ ನಂತರ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


ಈ ಬಾರಿ ನನ್ನ ಹುಟ್ಟುಹಬ್ಬ ವಿಭಿನ್ನವಾಗಿರಲಿದೆ. ಮೊದಲು ಆರೋಗ್ಯಕ್ಕೆ ಆದ್ಯತೆ. ಆರೋಗ್ಯವೇ ಭಾಗ್ಯ. ನನ್ನ ಅಭಿಮಾನಿಗಳ ವಿಷಯದಲ್ಲಿ ನನಗೆ ವಿಶೇಷವಾದ ಜವಾಬ್ದಾರಿಯಿದೆ. ಆದ್ದರಿಂದ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇನೆ. ಅಭಿಮಾನಿಗಳು ತಮ್ಮ ಮನೆಯಿಂದಲೇ ನನಗೆ ಶುಭಾಶಯ ಕೋರಬಹುದೆಂದು ಶಿವ ರಾಜ್​ಕುಮಾರ್​ ಹೇಳಿದ್ದಾರೆ.


ಶಿವ ರಾಜ್​ಕುಮಾರ್​  58ನೇ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಕಳೆದ ಎರಡು ವಾರದಿಂದ ಶಿವಣ್ಣ ಹುಟ್ಟುಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.  ‘ಶಿವಣ್ಣ ಮಹೋತ್ಸವ’ ಆಚರಿಸಲು ಅಭಿಮಾನಿಗಳು ಡಿಪಿ ಸಿದ್ಧಪಡಿಸಿದ್ದರು. ನಟ ಸುದೀಪ್​ ಕೈಯಲ್ಲಿ ಡಿಪಿಯನ್ನು ಬಿಡುಗಡೆಗೊಳಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಅಂತೆಯೇ ಅಭಿಮಾನಿಗಳು ಶಿವ @59... ಸ್ಟಿಲ್​ ಯಂಗ್​ ಮಾ.. ಹಾಡನ್ನು ಸಿದ್ಧಪಡಿಸಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ. ಆ ಮೂಲಕ  ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಭಜರಂಗಿ-2


ಕೊರೋನಾ ಸಮಯವಾದರು ಶಿವಣ್ಣನಿಗೆ ಅಭಿಮಾನಿಗಳು ಬಗೆ ಬಗೆಯ ಸರ್​ಪ್ರೈಸ್​ಗಳನ್ನು ಕೊಟ್ಟಿದ್ದಾರೆ. ಇನ್ನು ಭಜರಂಗಿ-2 ಸಿನಿಮಾ ತಂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಟೀಸರ್​ ಬಿಡುಗಡೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮಾರ್ಕ್​ ಲಕ್ಕಿ ಗೋಪಾಲ್​ ಮೊದಲ ನಿರ್ದೇಶನದ, ಶಿವಣ್ಣನ ನಟನೆಯ ಸಿನಿಮಾ ಕೂಡ ಇಂದು ಘೋಷಣೆಯಾಗಲಿದೆ.


ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ


Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು

First published: