Bhajarangi 2 Teaser: ಭಜರಂಗಿ ಶಿವಣ್ಣನಿಗೆ ವಿಶೇಷ ಉಡುಗೊರೆ ನೀಡಿದ ನಿರ್ದೇಶಕ ಎ ಹರ್ಷ

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್

ಭಜರಂಗಿ 2 ಸಿನಿಮಾದಲ್ಲಿ ಶಿವ ರಾಜ್​ಕುಮಾರ್​ ಜೊತೆಗೆ ನಟಿ ಭಾವನಾ ನಟಿಸುತ್ತಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದೀಗ ಶಿವಣ್ಣ ಬರ್ತ್​ ಡೇ ಸ್ಪೆಷಲ್ ಆಗಿ ಭಜರಂಗಿ 2 ಸಿನಿಮಾದ ಟೀಸರ್​ ಬಿಡುಗಡೆಗೊಂಡಿರುವುದು ಅಭಿಮಾನಿಗಳ ಸಂತೋಷಕ್ಕೆ ಮತ್ತೊಂದು ಕಾರಣವಾಗಿದೆ.

ಮುಂದೆ ಓದಿ ...
  • News18
  • 3-MIN READ
  • Last Updated :
  • Share this:

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೆಂಚುರಿ ಸ್ಟಾರ್​ ಶಿವ ರಾಜ್​ಕುಮಾರ್​ಗೆ ಭಜರಂಗಿ-2 ಚಿತ್ರತಂಡ ಚಿತ್ರದ ಟೀಸರ್​ ಅನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದೆ. ಆ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ವಿಶೇಷವಾಗಿ ವಿಶ್​ ಮಾಡಿದೆ.


ಭಜರಂಗಿ ಸಿನಿಮಾದಲ್ಲಿ ಯಶಸ್ಸುಗಳಿಸಿದ ಶಿವ ರಾಜ್​​ಕುಮಾರ್​ ಭಜರಂಗಿ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ ಹರ್ಷ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇತ್ತೀಚೆಗೆ ಚಿತ್ರತಂಡ ಶಿವ ರಾಜ್​ಕುಮಾರ್​ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿಕೊಂಡಿತ್ತು. ನಿರ್ದೇಶಕ ಹರ್ಷ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದರು. ಇದೀಗ ಎ2 ಮ್ಯೂಸಿಕ್​ ಯೂಟ್ಯೂಬ್​ ಖಾತೆಯಲ್ಲಿ ಭಜರಂಗಿ 2 ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ. ಆ ಮೂಲಕ ಅಭಿಮಾನಿಗಳಿಗೆ ಸಿಹಿ ತಿಂದಷ್ಟು ಸಂತೋಷವಾಗಿದೆ.


ಭಜರಂಗಿ 2 ಸಿನಿಮಾದಲ್ಲಿ ಶಿವ ರಾಜ್​ಕುಮಾರ್​ ಜೊತೆಗೆ ನಟಿ ಭಾವನಾ ನಟಿಸುತ್ತಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದೀಗ ಶಿವಣ್ಣ ಬರ್ತ್​ ಡೇ ಸ್ಪೆಷಲ್ ಆಗಿ ಭಜರಂಗಿ 2 ಸಿನಿಮಾದ ಟೀಸರ್​ ಬಿಡುಗಡೆಗೊಂಡಿರುವುದು ಅಭಿಮಾನಿಗಳ ಸಂತೋಷಕ್ಕೆ ಮತ್ತೊಂದು ಕಾರಣವಾಗಿದೆ.




ಟೀಸರ್​ ವೀಕ್ಷಿಸಿ ಅನೇಕರು ಕಮೆಂಟ್​ ಬರೆದಿದ್ದಾರೆ, ಅದರಲ್ಲಿ ಒಬ್ಬರು ಸಮುದ್ರದಲ್ಲಿ ನೀರು ಖಾಲಿಯಾಗಬಹುದು ಆದರೆ ಶಿವಣ್ಣನ ಎನರ್ಜಿ ಮಾತ್ರ ಖಾಲಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ಸೂಪರ್ ಮೇಕಿಂಗ್. ಶಿವಣ್ಣ ಅವರ ಬಗ್ಗೆ ಹೇಳಬೇಕಾ ಟೀಸರ್ ನೋಡಿದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಯ್ತು ಆಲ್ ದಿ ಬೆಸ್ಟ್ ಶಿವಣ್ಣ ಎಂದು ಕಾಮೆಂಟ್​ ಬರೆದಿದ್ದಾರೆ.




ರಾಮ್​ ಧೂಳಿಪುಡೀಸ್​ ಚಿತ್ರತಂಡ ಕೂಡ ಶಿವ ರಾಜ್​ಕುಮಾರ್​ ಹುಟ್ಟುಬ್ಬಕ್ಕೆ ‘ಪ್ರೊಡಕ್ಷನ್​​​ ನಂ 1’ ಎಂಬ ಹೆಸರಿನ ವಿಶೇಷ ಪೋಸ್ಟರ್​ ಬಿಡುಗಡೆ ಮಾಡಿ ಶುಭಾಶಯ ಕೋರಿದೆ. ಈ ಸಿನಿಮಾಗೆ ಸ್ವಾತಿ ವೇನಪಲ್ಲಿ, ಶ್ರೀಕಾಂತ್​ ಧೂಳಿಪುಡಿ, ನರಳ ಶ್ರೀನಿವಾಸ್​ವ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ.




ಇನ್ನು ಶಿವ ರಾಜ್​ಕುಮಾರ್​ ಮತ್ತು ನಟ ಡಾಲಿ ಧನಂಜಯ್​​ ‘ಪ್ರೊಡಕ್ಷನ್​ ನಂ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಎಸ್​ ಡಿ ವಿಜಯ್​​​ ಮಿಲ್ಟನ್​​​, ಜೆ ಅನೂಪ್​ ಸೀಳಿನ್​​ ಕಥೆ, ಚಿತ್ರಕಥೆ, ನಿರ್ದೇಶನ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್​​ ಬಂಡವಾಳ ಹೂಡುತ್ತಿದ್ದಾರೆ.




ಎಪ್ರೋಟೈಸ್​ ರಿನೈಸೆನ್ಸ್​ ಟಾಕೀಸ್​ ಪ್ರೈವೇಟ್​ ಲಿಮಿಟೆಡ್​​ ಶಿವಣ್ಣನಿಗಾಗಿ ಸಿನಿಮಾವೊಂದನ್ನು ಮಾಡುತ್ತಿದೆ. ಈ ಚಿತ್ರತಂಡ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

top videos
    First published: