Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದ ಚಿತ್ರ ಎಲ್ಲಿಗೆ ಬಂತು? ಡೈರೆಕ್ಟರ್ ಹರ್ಷ ಏನ್ ಹೇಳ್ತಾರೆ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (HATRICK HERO ) ಅಭಿನಯದ ವೇದ ಚಿತ್ರದ ಫಸ್ಟ್ ಲುಕ್ ಭಾರೀ (FIRST LOOK VIRLA) ವೈರಲ್ ಆಗಿತ್ತು. ಅಂದಿನಿಂದಲೇ ಈ ಚಿತ್ರದ ಬಗ್ಗೆ ಸಹಜವಾಗಿಯೇ ಒಂದು ಕುತೂಹಲ ಮೂಡಿತ್ತು

ವೇದ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ

ವೇದ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ

  • Share this:
    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (HATRICK HERO ) ಅಭಿನಯದ ವೇದ ಚಿತ್ರದ ಫಸ್ಟ್ ಲುಕ್ ಭಾರೀ (FIRST LOOK VIRLA) ವೈರಲ್ ಆಗಿತ್ತು.ಅಂದಿನಿಂದಲೇ ಈ ಚಿತ್ರದ ಬಗ್ಗೆ ಸಹಜವಾಗಿಯೇ ಒಂದು ಕುತೂಹಲ ಮೂಡಿತ್ತು. ಆದರೆ, ಈ ಸಿನಿಮಾದ ಹೊಸ ಅಪ್​ ಡೇಟ್ಸ್ (FILM UPDATES) ಏನೂ ಇಲ್ವೇ ? ಹೀಗೆ ಕೇಳೋ ಹೊತ್ತಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಪೋಸ್ಟರ್ ಜೊತೆಗೆ ಒಂದಷ್ಟು ಮಾಹಿತಿ ಹರಿದಾಡುತ್ತಲೇ ಇತ್ತು. ಆದರೆ ಚಿತ್ರದ ನಿರ್ದೇಶಕ ಹರ್ಷಾ (DIRECTOR HARSHA) ಈಗ ಒಂದಷ್ಟು ಡಿಟೈಲ್ಸ್ ಕೊಟ್ಟಿದ್ದಾರೆ. ಅಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳು ಇವೆ.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ಮೊದಲ ಪೋಸ್ಟರ್ ನಿಂದಲೇ ಭಾರೀ ಗಮನ ಸೆಳೆದಿದೆ. ಶಿವರಾಜ್​ ಕುಮಾರ್ ಅವರನ್ನ ಇಲ್ಲಿ ಬೇರೆ ರೂಪದಲ್ಲಿಯೇ ಕಾಣಬಹುದಾಗಿದ್ದು ಇಷ್ಟೊಂದು ವಿಶೇಷತೆಯ ವೇದ ಪ್ರೇಕ್ಷಕರಿಗೆ ಬೇರೆ ರೀತಿಯ ಕಥೆಯನ್ನೆ ಹೇಳೋಕೆ ಬರ್ತಾಯಿದೆ.

    ಶಿವರಾಜ್ ಕುಮಾರ್ ವೇದ ಚಿತ್ರದ ಅಪ್​ಡೇಟ್ಸ್ ಏನು ?
    ವೇದ ಚಿತ್ರದ ಚಿತ್ರೀಕರಣ ಶೇಡಕ 80 ರಷ್ಟು ಈಗ ಕಂಪ್ಲೀಟ್ (COMPLETED) ಆಗಿದೆ. ಸಿನಿಮಾದ ಎರಡು ಹಾಡಿನ ಚಿತ್ರೀಕರಣ ಕೂಡ ಬಾಕಿ ಇದೆ. ಆಕ್ಷನ್ ಪಾರ್ಟ್ ಕಂಪ್ಲೀಟ್ ಆಗಿದೆ. ಆದರೆ, ಶೀಘ್ರದಲ್ಲಿಯೇ ಕೇರಳಕ್ಕೂ ಸಿನಿಮಾ ತಂಡ ಹೋಗ್ತಾಯಿದೆ.

    ಕೇರಳದಲ್ಲಿ 3ರಿಂದ4 ನಾಲ್ಕು ದಿನ ಚಿತ್ರೀಕರಣ ಮಾಡಲಿದೆ ವೇದ ಟೀಮ್
    ದೇವರ ನಾಡು ಕೇರಳದಲ್ಲೂ (KERALA) ವೇದ ಸಿನಿಮಾ ತಂಡ ಚಿತ್ರೀಕರಣ ಮಾಡಲಿಕ್ಕೆ ಪ್ಲಾನ್ ಮಾಡಿದೆ. ಇಲ್ಲಿಯ ಸುಂದರ ತಾಣದಲ್ಲಿ ಹಾಡುಗಳನ್ನೆ ಚಿತ್ರೀಕರಿಸಬಹುದು ವೇದ ಟೀಮ್ (VEDA TEAM) ಅಂತ ಗೆಸ್ ಮಾಡಿದ್ರೆ ತಪ್ಪಾಗುತ್ತದೆ. ಯಾಕೆಂದ್ರೆ ಚಿತ್ರದ ತಂಡ ಇಲ್ಲಿ ಸೀನ್​ ಗಳನ್ನ ಚಿತ್ರೀಕರಿಸೋಕೆ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿಯೇ ಮೂರರಿಂದ ನಾಲ್ಕು ದಿನದ ಸೆಡ್ಯೂಲ್ ಹಾಕಿಕೊಂಡಿದೆ.

    ವೇದ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಹರ್ಷಾ ಕೋರಿಯೋಗ್ರಾಫಿ
    ಡೈರೆಕ್ಟರ್ ಹರ್ಷಾ ಎಲ್ಲರಿಗೂ ಗೊತ್ತಿರೋ ಹಾಗೆ ಒಬ್ಬ ಒಳ್ಳೆ ಕೋರಿಯೋಗ್ರಾಫರ್. ಚಿತ್ರ ನಿರ್ದೇಶನಕ್ಕೆ ಇಳಿದ ಮೇಲೂ ಬೇರೆ ಚಿತ್ರಗಳಿಗೆ ಕೋರಿಯೋಗ್ರಾಫಿ ಕೂಡ ಮಾಡ್ತಾರೆ. ಅದರಂತೆ ವೇದ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಕೋರಿಯೋಗ್ರಾಫಿಯನ್ನೂ ಹರ್ಷ
    (HARSHA) ಮಾಡುತ್ತಿದ್ದಾರೆ.

    ಒಂದು ಸಿನಿಮಾ 7 ಹಾಡು-ಎಲ್ಲವೂ ಭಿನ್ನ ವಿಭಿನ್ನ
    ಈಗೀನ ಟ್ರೆಂಡ್ ಪ್ರಕಾರ ಚಿತ್ರದಲ್ಲಿ ಐದು ಹಾಡುಗಳೇ ಇರುತ್ತವೆ. ಆದರೆ ವೇದ ಚಿತ್ರದಲ್ಲಿ 7 ಹಾಡುಗಳನ್ನ ಪ್ಲಾನ್ ಮಾಡಲಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರೋ ಈ ಎಲ್ಲ ಹಾಡುಗಳು ಕಥೆ ಮೇಲೆನೆ ಸಾಗುತ್ತವೆ.ಅಂತಹ ಹಾಡುಗಳು ಕಥೆಗೂ ಪೂರಕವಾಗಿಯೇ ಇರುತ್ತವೆ.

    ಶಿವರಾಜ್ ಕುಮಾರ್  ಚಿತ್ರಕ್ಕೆ ಡ್ರಮರ್ ಶಿವಮಣಿ ಡ್ರಮ್ ಟಚ್
    ವೇದ ಚಿತ್ರಕ್ಕೆ ನಿರ್ದೇಶಕ ಹರ್ಷ ಫೋಕ್ ಟಚ್ ಕೂಡ ಕೊಟ್ಟಿದ್ದು ಸದ್ಯ ಇನ್ನೂ ಒಂದು ಅಪ್​ ಡೇಟ್ ಏನಪ್ಪ ಅಂದ್ರೆ ಡ್ರಮರ್ ಶಿವಮಣಿ ಕೂಡ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ಡ್ರಮ್ ಕೂಡ ನುಡಿಸಿದ್ದಾರೆ.

    ಹ್ಯಾಟ್ರಿಕ್ ಹೀರೋನ 125 ಚಿತ್ರದ ರಿಲೀಸ್ ಯಾವಾಗ ?
    ವೇದ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಸಿನಿಮಾ ತಂಡವೂ ಅಷ್ಟೇ ಖುಷ್ ಆಗಿಯೇ ಇದೆ.ಅದರಲ್ಲೂ ಇದೇ ವರ್ಷವೇ ವೇದ ಚಿತ್ರ ರಿಲೀಸ್ ಆಗುತ್ತಿದ್ದು ಡಿಸೆಂಬರ್ ಕೊನೆ ಕ್ರಿಸ್ಮಸ್ ಹೊತ್ತಿಗೆ ಸಿನಿಮಾ ರಿಲೀಸ್ ಆಗುತ್ತದೆ.
    First published: