Raj Kundra: ಮೊದಲ ಹೆಂಡತಿಗೆ ನನ್ನ ತಂಗಿಯ ಗಂಡನ ಜೊತೆ ​ಸಂಬಂಧವಿತ್ತು: ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ

Shilpa Shetty: ಸೆಲೆಬ್ರಿಟಿ ಕಪಲ್​ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇವತ್ತು ರಾಜ್​ ಕುಂದ್ರಾ ತಮ್ಮ ಮೊದಲ ಪತ್ನಿ ಹಾಗೂ ಮುರಿದು ಬಿದ್ದ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹೌದು, ಬರೋಬ್ಬರಿ 15 ವರ್ಷಗಳ ನಂತರ ರಾಜ್​ ಕುಂದ್ರಾ ಮೊದಲ ಪತ್ನಿಯಿಂದ ದೂರಾಗಿದ್ದಕ್ಕೆ ಏನು ಕಾರಣ ಎಂದು ಹೇಳಿಕೊಂಡಿದ್ದಾರೆ.

ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ ಹಾಗೂ ನಟಿ ಶಿಲ್ಪಾ ಶಟ್ಟಿ

ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ ಹಾಗೂ ನಟಿ ಶಿಲ್ಪಾ ಶಟ್ಟಿ

  • Share this:
ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ (Shilpa Shetty) ಹಾಗೂ ರಾಜ್​ ಕುಂದ್ರಾ  (Raj Kundra) ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ. ಈ ಸ್ಟಾರ್​ ಕಪಲ್​ ದಾಂಪತ್ಯಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಮಗ ವಿಯಾನ್​ ಇತ್ತೀಚೆಷ್ಟೆ 9ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಜ್​ ಹಾಗೂ ಶಿಲ್ಪಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕುಟುಂಬದ ಜೊತೆಗಿನ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 2006ರಲ್ಲಿ ರಾಜ್​ ಕುಂದ್ರಾ ಹಾಗೂ ಅವರ ಮೊದಲ ಪತ್ನಿ ಕವಿತಾ ಕುಂದ್ರಾ  (Kavita Kundra) ಅವರು ಕಾನೂನಿನ ಪ್ರಕಾರ ದೂರಾದರು. ಆದರೆ ಈಗ ರಾಜ್​ ಕುಂದ್ರಾ ತಮ್ಮ ವಿಚ್ಛೇದಿತ ಪತ್ನಿ ಕವಿತಾ (Raj Kundra breaks his silence on his divorce) ಬಗ್ಗೆ ಮೌನ ಮುರಿದಿದ್ದಾರೆ.

ಸೆಲೆಬ್ರಿಟಿ ಕಪಲ್​ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇವತ್ತು ರಾಜ್​ ಕುಂದ್ರಾ ತಮ್ಮ ಮೊದಲ ಪತ್ನಿ ಹಾಗೂ ಮುರಿದು ಬಿದ್ದ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹೌದು, ಬರೋಬ್ಬರಿ 15 ವರ್ಷಗಳ ನಂತರ ರಾಜ್​ ಕುಂದ್ರಾ ಮೊದಲ ಪತ್ನಿಯಿಂದ ದೂರಾಗಿದ್ದಕ್ಕೆ ಏನು ಕಾರಣ ಎಂದು ಹೇಳಿಕೊಂಡಿದ್ದಾರೆ.

Raj Kundra, Shilpa Shetty, Raj Kundra First Wife Kavita, Raj Kundra Divorce, Kavita Kundra, Bollywood actress Shilpa Shetty, birthday, Bollywood, marriage, Raj Kundra, Shilpa Shetty, wedding, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ ಮದುವೆ, ರಾಜ್​ ಕುಂದ್ರಾ ಮೊದಲನೇ ಪತ್ನಿ ಕವಿತಾ, ಕವಿತಾಗೆ ವಿಚ್ಚೇದನ ಕೊಟ್ಟ ರಾಜ್​ ಕುಂದ್ರಾ , Shilpa Shetys husband Raj Kundra opens up on his Divorce with first wife Kavita ae
ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ ಹಾಗೂ ನಟಿ ಶಿಲ್ಪಾ ಶಟ್ಟಿ


ಶಿಲ್ಪಾ ಶೆಟ್ಟಿ ಅವರನ್ನು ವರಿಸುವ ಮೊದಲೇ ರಾಜ್​ ಕುಂದ್ರಾ ಅವರಿಗೆ ಮದುವೆಯಾಗಿತ್ತು. ಅದು ಕವಿತಾ ಎಂಬುವರ ಜತೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬದ ಸಮಯದಲ್ಲಿ ಕೆಲವೊಂದು ಹಳೇ ಸುದ್ದಿಗಳು ವೈರಲ್​ ಆಗಿದ್ದವು. ಅವುಗಳನ್ನು ನೋಡಿದ ನಂತರ ಇನ್ನೂ ಮೌನವಾಗಿರುವುದು ಸರಿಯಲ್ಲ ಎಂದು ಇಂಗ್ಲಿಷ್​ ಪತ್ರಿಕೆಗೆ ನೀಡಿರುವ ಸಂದರ್ಶನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Avika Gor: ಫೇಸ್​ ಕ್ರೀಮ್​ ಜಾಹೀರಾತಿಗೆ ನೋ ಎಂದ ಬಾಲಿಕಾ ವಧು ಖ್ಯಾತಿಯ ನಟಿ ಅವಿಕಾ ಗೋರ್​

ಮೊದಲ ಪತ್ನಿ ಕವಿತಾ ಅವರಿಗೆ ತನ್ನ ತಂಗಿ ಗಂಡನ ಜೊತೆ ಸಂಬಂಧ ಇತ್ತು, ಅವರಿಬ್ಬರೂ ಸಂಬಂಧಗಳ ವಿಷಯದಲ್ಲಿ ತುಂಬಾ ಹತ್ತಿರ ಬಂದಿದ್ದರು. ಅವರಿಬ್ಬರನ್ನು ಸಾಕಷ್ಟು ಸಲ ನೋಡಬಾರದ ಸ್ಥಿತಿಯಲ್ಲಿ ನನ್ನ ತಾಯಿಯೇ ನೋಡಿದ್ದರು. ಇದರಿಂದಾಗಿ ಎರಡು ಕುಟುಂಬಗಳ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಹೀಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ನಂತರ ಅವರಿಂದ ದೂರಾಗಲು ನಿರ್ಧರಿಸಿದೆ ಎಂದು ರಾಜ್​ ತಿಳಿಸಿದ್ದಾರೆ.

Raj Kundra, Shilpa Shetty, Raj Kundra First Wife Kavita, Raj Kundra Divorce, Kavita Kundra, Bollywood actress Shilpa Shetty, birthday, Bollywood, marriage, Raj Kundra, Shilpa Shetty, wedding, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ ಮದುವೆ, ರಾಜ್​ ಕುಂದ್ರಾ ಮೊದಲನೇ ಪತ್ನಿ ಕವಿತಾ, ಕವಿತಾಗೆ ವಿಚ್ಚೇದನ ಕೊಟ್ಟ ರಾಜ್​ ಕುಂದ್ರಾ , Shilpa Shetys husband Raj Kundra opens up on his Divorce with first wife Kavita ae
ಕವಿತಾ ಹಾಗೂ ರಾಜ್​ ಕುಂದ್ರಾ


ಇನ್ನು ರಾಜ್ ಕುಂದ್ರಾ ಹಾಗೂ ಅವರ ವಿಚ್ಛೇದಿತ ಮಡದಿ ಕವಿತಾಗೆ ಒಂದು ಹೆಣ್ಣು ಮಗುವಿದೆ. ಆದರೆ ಇಲ್ಲಿಯ ವರೆಗೆ ಆ ಮಗುವನ್ನೂ ರಾಜ್ ಕುಂದ್ರಾ ನೋಡಿಯೇ ಇಲ್ಲವಂತೆ. ಮಗುವಿಗೆ 40 ದಿನಗಳು ಇದ್ದಾಗ ನೋಡಿದ್ದು, ನಂತರ ಮಗುವಿನ ಜತೆ ಮಾತನಾಡಿಯೂ ಇಲ್ಲ ನೋಡಲು ಆಗಲಿಲ್ಲ. ಸಾಕಷ್ಟು ಸಲ ಕುಟುಂಬದ ಮುಖೇನ ಮಗಳನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದೆ. ಆದರೆ ಕವಿತಾ ಅವರ ಮನೆಯವರು ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಇನ್ನು ಕವಿತಾರ ಜೊತೆ ಮಾತನಾಡಲು ಎಂದೂ ಪ್ರಯತ್ನಿಸಲಿಲ್ಲ ಎಂದು ರಾಜ್​ ವಿವರಿಸಿದ್ದಾರೆ.

ಇನ್ನು ಈ ವಿಷಯದ ಬಗ್ಗೆ ಮಾತನಾಡಬಾರದು ಎಂದು ಶಿಲ್ಪಾ ತುಂಬಾ ಸಲ ಹೇಳಿದ್ದರು. ಆದರೂ ಪದೇ ಪದೇ ಮೊದಲ ಮದುವೆಯ ಸುದ್ದಿ ಬಗ್ಗೆ ಹರಿದಾಡುವ ಗಾಳಿ ಮಾತು ಕೇಳಿ ಸಾಕಾಗಿತ್ತು ಅದಕ್ಕೆ ಈಗ ಹೇಳುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Kannada Bigg Boss 8: ಮತ್ತೆ ಆರಂಭವಾಗಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!

ಈಗ ಖುಷಿಯಿಂದ ನೆಮ್ಮದಿಯಾಗಿ ಸಂಸಾರ ಮಾಡುತ್ತಿದ್ದೇನೆ. ಕವಿತಾ ಜೊತೆ ತುಂಬಾ ಕೆಟ್ಟ ದಿನಗಳನ್ನು ನೋಡಿದ್ದೇನೆ. ಆಗ ಜೀವನ ವಿಷಮಯವಾಗಿತ್ತು. ಎರಡು ಕುಟುಂಬಗಳನ್ನು ನಾಶ ಮಾಡಿದರು. ಮಗಳ ಬಳಿ ನಾನು ಹೋದರೆ ಕವಿತಾ ಸಹಿಸುತ್ತಿರಲಿಲ್ಲ. ಆದರೆ ನನಗೆ ಒಂದು ನಂಬಿಕೆ ಇದೆ. ಮಗಳು ಮುಂದೊಂದು ದಿನ ನನ್ನ ಬಳಿ ಬರುತ್ತಾಳೆಂದು ಅಂತ ಹೇಳಿಕೊಂಡಿದ್ದಾರೆ ಉದ್ಯಮಿ ರಾಜ್​ ಕುಂದ್ರಾ.
Published by:Anitha E
First published: