ಸದ್ದಿಲ್ಲದೆ ಕೊರೋನಾ ಲಾಕ್ಡೌನ್ನಲ್ಲೇ ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದ ನಟಿ ಪ್ರಣೀತಾ ಸುಭಾಷ್ ಅವರ ಮದುವೆ ವಿಷಯ ನಿನ್ನೆಯಷ್ಟೆ ಬಹಿರಂಗವಾಯಿತು. ಪ್ರಣೀತಾ ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದ ನಿತಿನ್ ರಾಜು ಅವರನ್ನು ಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದಾರೆ. ಕಾಮನ್ ಫ್ರೆಂಡ್ಸ್ಗಳ ಮೂಲಕ ಪರಿಚಯವಾದ ನಿತಿನ್ ಅವರೊಂದಿಗಿನ ಸ್ನೇಹ ನಂತರದಲ್ಲಿ ಪ್ರೀತಿಯಾಗಿ ಬದಲಾಗಿ, ನಂತರದಲ್ಲಿ ಮದುವೆವರೆಗೆ ಬಂತು ಎಂದು ಪ್ರಣೀತಾ ಸುಭಾಷ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಲಾಕ್ಡೌನ್ ನಿಯಮಗಳನ್ನು ಪಾಲಿಸುವ ಮೂಲಕವೇ ಮದುವೆ ಮಾಡಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಣೀತಾ ಹಾಗೂ ನಿತಿನ್ ರಾಜು ಅವರ ಮದುವೆಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ರಮ್ಯಾ, ಶಾನ್ವಿ ಶ್ರೀವಾಸ್ತವ್, ಮಾನ್ವಿತಾ ಕಾಮತ್, ಸಿಂಪಲ್ ಸುನಿ ಆ ಸೇರಿದಂತೆ ಸಾಕಷ್ಟು ಮಂದಿ ಪ್ರಣೀತಾಗೆ ಶುಭ ಕೋರಿದ್ದಾರೆ. ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಪ್ರಣೀತಾ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
View this post on Instagram
ಶಿಲ್ಪಾ ಶೆಟ್ಟಿ ಹಾಗೂ ಪ್ರಣೀತಾ ಅವರ ಪರಿಚಯ ಬಾಲಿವುಡ್ ಸಿನಿಮಾದ ಮೂಲಕ ಆಗಿದ್ದು. ಹೌದು, ಪ್ರಣೀತಾ ಸುಭಾಷ್ ಹಾಗೂ ಶಿಲ್ಪಾ ಶೆಟ್ಟಿ ನಟಿಸುತ್ತಿರುವ ಹಂಗಾಮ 2 ಸಿನಿಮಾ ತೆರೆಗಪ್ಪಳಿಸಲು ಸಿದ್ಧವಾಗಿದೆ. ಈ ಸಿನಿಮಾದ ಚಿತ್ರೀಕರಣದಿಂದಾಗಿ ಶಿಲ್ಪಾ ಹಾಗೂ ಪ್ರಣೀತಾರ ನಡುವೆ ಒಂದು ಒಳ್ಳೆಯ ಸ್ನೇಹ ಸಂಬಂಧ ಬೆಸೆದುಕೊಂಡಿದೆ.
ಪ್ರಣೀತಾ ಸುಭಾಷ್ ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಪ್ರಣೀತಾ ಸುಭಾಷ್ ಅಭಿನಯದ ಸಿನಿಮಾ ಹಂಗಾಮ 2 ಇನ್ನೇನು ರಿಲೀಸ್ ಆಗೋದಿದೆ. ಈ ಚಿತ್ರದಲ್ಲಿ ಪರೇಶ್ ರಾವಲ್ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಈ ಸಿನಿಮಾದ ಪ್ರಚಾರಕ್ಕಾಗಿ ಹಿಂದಿ ಕಿರುತೆರೆಯ ಖ್ಯಾತ ಕಾಮಿಡಿ ಶೋ ಕಪಿಲ್ ಶರ್ಮಾ ಶೋನಗೂ ಬಂದಿದ್ದರು. ಕನ್ನಡದಲ್ಲಿ ಪೊರ್ಕಿ, ಜರಾಸಂದ, ಬ್ರಹ್ಮ ಸೇರಿದಂತೆ ತಮಿಳು, ತೆಲುಗು ಹಾಗು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Chiru Sarja: ಚಿರು ನೆನಪು: ಸ್ನೇಹಿತನ ಜೊತೆ ತೆಗೆಸಿಕೊಂಡ ಕಡೆಯ ಫೋಟೋ ಹಂಚಿಕೊಂಡ ಪನ್ನಗಾಭರಣ
ಬೆಂಗಳೂರಿನ ಹೊರ ವಲಯದಲ್ಲಿರುವ ಪ್ರಣೀತಾ ಅವರ ಮನೆಯಲ್ಲೇ ಮದುವೆಯಾಗಿದೆ. ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೋಡಿರುವ ಪ್ರಣೀತಾ ಸುಭಾಷ್ ತಮ್ಮ ಮದುವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮದು ಪ್ರೇಮ ವಿವಾಹ. ತುಂಬಾ ಸಮಯದಿಂದ ಪರಿಚಯವಿತ್ತು. ಇಬ್ಬರಿಗೂ ತುಂಬಾ ಜನ ಕಾಮನ್ ಫ್ರೆಂಡ್ ಇದ್ದಾರೆ. ಒಂದು ಹಂತದಲ್ಲಿ ಮದುವೆಯಾಗುವ ನಿರ್ಧಾರ ಮಾಡಿದೆವು. ಹಿರಿಯ ಸಮ್ಮತಿಯಿಂದ ಮದುವೆಯಾಗಿದೆ. ಕೋವಿಡ್ನಿಂದಾಗಿ ಮದುವೆಗೆ ಇನ್ನು ಹೆಚ್ಚಿನ ಸಮಯ ಕಾಯಬೇಕಾಗಿತ್ತು. ಅದಕ್ಕೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ವಿವಾಹವಾಗಿದ್ದಾಗಿ ತಿಳಿಸಿದ್ದಾರೆ ಪ್ರಣೀತಾ ಸುಭಾಷ್.ಕೋವಿಡ್ ಲಾಕ್ಡೌನ್ನಿಂದಾಗಿ ತನ್ನ ಕನಸು ನನಸಾಗಿದೆ. ನನಗೆ ಸಾರ್ವಜನಿಕವಾಗಿ ಸುದ್ದಿಯಾಗೋದು ಇಷ್ಟವಿಲ್ಲ. ಈಗ ನನ್ನಿಷಟದಂತೆ ಮದುವೆಯಾಗಿದೆ. ಕೋವಿಡ್ ಲಾಕ್ಡೌನ್ ಇಲ್ಲದೇ ಹೋಗಿದ್ದರೆ ಸರಳವಾಗಿ ವಿವಾಹವಾಗಲು ಕೊಂಚ ಕಷ್ಟಪಡಬೇಕಿತ್ತು. ಆದರೆ ಇದರಿಂದಾಗಿ ಈಗ ಎಲ್ಲವೂ ನನ್ನಿಷ್ಟದಂತೆಯೇ ಆಗಿದೆ ಎಂದಿದ್ದಾರೆ ಪ್ರಣೀತಾ.
ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮೋಸ್ಟ್ ಡಿಸೈರಬಲ್ ಮಹಿಳೆ
ಇನ್ನು ಪ್ರಣೀತಾ ತಮ್ಮದೇ ಆದ ಫೌಂಡೇಶನ್ ಮಾಡಿಕೊಂಡು ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಜೊತೆಗೆ ಲಾಕ್ಡೌನ್ನಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ಹಾಗೂ ದಿನಸಿ ಕಿಟ್ಗಳನ್ನು ನೀಡುವ ಮೂಲಕ ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಇನ್ನೂ ಪ್ರಾಣಿ ಪ್ರೇಮಿಯಾಗಿರುವ ಪ್ರಣೀತಾ ಅನಾಥ ಪ್ರಾಣಿಗಳನ್ನು ದತ್ತು ಪಡೆಯುವಂತೆಯೂ ಸಾಕಷ್ಟು ಮಂದಿಗೆ ಪೋತ್ಸಾಹ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ವಿವಷಯಗಳು ಹಾಗೂ ರಾಜಕೀಯ ಬೆಳವಣಿಗೆಗೆಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಲೂ ಪ್ರಣೀತಾ ಈ ಬಗ್ಗೆ ಸಾಕಷ್ಟು ಟ್ವೀಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ