ಸ್ನೇಹಿತರಿಗೆ ಸಹಾಯ ಮಾಡುವ ನೆಪದಲ್ಲಿ ಕಿರಿಕಿರಿ ಮಾಡಬೇಡಿ: Shilpa Shetty ಹೊಸ ಪೋಸ್ಟ್​ ವೈರಲ್​..!

ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್​ ಅಪ್ಲಿಕೇಷನ್​ಗಳಲ್ಲಿ ಪ್ರಸರಣ ಮಾಡಿದ ಆರೋಪ ಹೊತ್ತಿರುವ ರಾಜ್​ ಕುಂದ್ರಾ ಅವರು ಜಾಮೀನು ಪಡೆದು ಮನೆ ಮರಳಿದ್ದಾರೆ. ಹೀಗಿರುವಾಗಲೇ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ತಮಗಾದ ನೋವಿನ ಅನುಭವಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ

  • Share this:
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಸಾಮಾನ್ಯವಾಗಿ, ಇನ್‍ಸ್ಟಾಗ್ರಾಂನಲ್ಲಿ ಸ್ಪೂರ್ತಿದಾಯಕ ಉಲ್ಲೇಖಗಳನ್ನು ಹಂಚಿಕೊಳುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಉಲ್ಲೇಖ ಸಹಾಯ ಮಾಡುವುದರ ಕುರಿತದ್ದಾಗಿದೆ. ಎರಡು ತಿಂಗಳ ಹಿಂದೆ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು (Raj Kundra) ಪೊಲೀಸರು ಬಂಧಿಸಿದ್ದು, ಆ ಕಾರಣದಿಂದಾಗಿ ಶಿಲ್ಪಾ ಮತ್ತು ಅವರ ಕುಟುಂಬ ಸಂಕಷ್ಟದ ಸಮಯ ಎದುರಿಸಿತ್ತು. ಆದರೆ ಇದೀಗ , ಅಶ್ಲೀಲ ಚಿತ್ರ (pornography) ತಯಾರಿಕೆಯ ಆರೋಪದ ಮೇಲೆ ಬಂಧಿತರಾಗಿದ್ದ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಕ್ಕಿದೆ. ತನ್ನ ಪತಿಯ ಬಂಧನವಾದ ದಿನದಿಂದಲೂ ಶಿಲ್ಪಾ ಶೆಟ್ಟಿ ಇನ್‍ಸ್ಟಾಗ್ರಾಂನಲ್ಲಿ ಸ್ಪೂರ್ತಿದಾಯಕ ಉಲ್ಲೇಖಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಕೆಲವು ಸ್ಪೂರ್ತಿದಾಯಕ ಸಾಲುಗಳಿವೆ. ಅಮೆರಿಕದ ಕಾದಂಬರಿಕಾರ ಇಡಬ್ಲ್ಯೂ ಹೋವೆ ಅವರದ್ದು. “ನಿಮ್ಮ ಸ್ನೇಹಿತ ಕಷ್ಟದಲ್ಲಿದ್ದಾಗ , ನಾನೇನಾದರೂ ಮಾಡಬೇಕೆ ಎಂದು ಕೇಳುವ ಮೂಲಕ ಆತನಿಗೆ ಕಿರಿಕಿರಿ ಮಾಡಬೇಡಿ, ಸೂಕ್ತವಾದದ್ದೇನಾದರು ಯೋಚಿಸಿ ಮತ್ತು ಅದನ್ನು ಮಾಡಿ” ಎಂದಿದೆ.  ಆ ಪೋಸ್ಟ್‌ಗೆ ಶಿಲ್ಪಾ ಶೆಟ್ಟಿ “ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸಿ” ಎಂದು ಅಡಿಬರಹವನ್ನು ನೀಡಿದ್ದಾರೆ.

Shilpa Shetty shares a quote about helping other in need ae
ಶಿಲ್ಪಾ ಶೆಟ್ಟಿ ಅವರ ಇನ್​ಸ್ಟಾಗ್ರಾಂ ಸ್ಟೋರಿಸ್​


ಈ ಮೊದಲು ಶಿಲ್ಪಾ ಕಷ್ಟದ ಸನ್ನಿವೇಶದಿಂದ ಹೊರ ಬರುವ ಕುರಿತು ಪೋಸ್ಟ್ ಹಂಚಿಕೊಂಡಿದ್ದರು. ಅವರು ಪುಸ್ತಕವೊಂದರಿಂದ ಚೇತರಿಸಿಕೊಳ್ಳುವುದರ ಕುರಿತು ಕೆಲವು ಸಾಲುಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Raj Kundra: ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ..!

ಆ ಸಾಲುಗಳು ಹೀಗಿವೆ : “ನಾವು ಕಷ್ಟಗಳಿಂದ ಪಾಠ ಕಲಿಯುತ್ತೇವೆ. ಹಾಗಾಗಿ ಕಷ್ಟಗಳು ನಮ್ಮನ್ನು ಗಟ್ಟಿ ಮಾಡುತ್ತವೆ ಎಂಬುದನ್ನು ನಾವು ಕೇಳಿದ್ದೇವೆ. ಇದು ಬಹುಶ: ನಿಜವಾಗಿರಬಹುದು, ಆದರೆ ನಾವು ಆಲೋಚಿಸಿದಷ್ಟು ಸುಲಭವಾಗಿ ಅಲ್ಲ. ಕಷ್ಟದ ಸಮಯದಿಂದಾಗಿ ನಾವು ಗಟ್ಟಿಯಾಗುವುದಲ್ಲ; ಕಷ್ಟದ ಸಮಯದಲ್ಲಿ ಕೆಲಸ ಮಾಡುವುದರ ಮೂಲಕ ಗಟ್ಟಿ ಆಗುತ್ತೇವೆ. ಅರಿವಿಗೆ ಬಾರದೇ ನಮ್ಮೊಳಗೆ ಅಡಗಿರುವ ಸಾಮರ್ಥ್ಯವನ್ನು ಹೊರ ತರಲು ಕಷ್ಟಗಳು ಒತ್ತಡ ಹಾಕಬಲ್ಲವು.

ಈ ಅಡಗಿಕೊಂಡಿರುವ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದರಿಂದ  ಮತ್ತೆ ಕಷ್ಟಗಳು ಬಂದರೆ ಎದುರಿಸಲು ಸಹಾಯ ಆಗಬಹುದು. ನಾನು ಕೂಡ ಇತರರಂತೆ ಕಷ್ಟದ ಸಮಯಗಳನ್ನು ದ್ವೇಷಿಸುತ್ತೇನೆ. ಆದರೆ, ನನ್ನೊಳಗೆ ಅವುಗಳನ್ನು ಸಹಿಸುವ ಮತ್ತು ಅವುಗಳಿಂದ ಹೊರ ಬರುವ ಸಾಮರ್ಥ್ಯ ಇದೆ ಎಂಬುವುದು ನನಗೆ ಗೊತ್ತು.”
ತನ್ನ ಪತಿ ರಾಜ್ ಕುಂದ್ರಾ ಅವರು ಜೈಲಿನಿಂದ ಬಿಡುಗಡೆ ಕೆಲವು ನಿಮಿಷಗಳ ನಂತರ ಶಿಲ್ಪಾ ಶೆಟ್ಟಿ, ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ, ಪ್ರೇರಣಾತ್ಮಕ ಉಲ್ಲೇಖವೊಂದನ್ನು ಹಂಚಿಕೊಂಡಿದ್ದರು. ಅವರು “ನಿಮ್ಮನ್ನು ನೆಲಕ್ಕೆ ತಳ್ಳುವ ಸನ್ನಿವೇಶಗಳು” ಮತ್ತು “ದೃಢ ನಿಶ್ಚಯ ಮತ್ತು ಪ್ರೇರಣೆಯೊಂದಿಗೆ” ಮರಳಿ ಎದ್ದು ನಿಲ್ಲುವುದು ಎಂದು ಮಂಗಳವಾರ ಬರೆದುಕೊಂಡಿದ್ದರು.

ಇದನ್ನೂ ಓದಿ: ರಾಜ್​ ಕುಂದ್ರಾ ಬಂಧನ ಪ್ರಕರಣ: ಪೊಲೀಸರಿಗೆ ಮೊದಲು ಹೇಳಿಕೆ ಕೊಟ್ಟಿದ್ದು ನಾನೇ ಎಂದ ಶರ್ಲಿನ್ ಚೋಪ್ರಾ..!

ಜನಪ್ರಿಯ ಚಾನಲ್ ಒಂದರಲ್ಲಿ ಪ್ರಸಾರ ಆಗುವ ಡ್ಯಾನ್ಸ್ ರಿಯಾಲಿಟಿ ಶೋ, ಸೂಪರ್ ಡ್ಯಾನ್ಸರ್ 4ರ ತೀರ್ಪುಗಾರರಲ್ಲಿ ಒಬ್ಬರಾಗಿರುವ ಶಿಲ್ಪಾ ಶೆಟ್ಟಿ, ಆಗಸ್ಟ್‌ನಲ್ಲಿ ತಮ್ಮ ಕೆಲಸಗಳಿಗೆ ಮರಳಿದರು. ಇತ್ತೀಚೆಗೆ ಬಿಡುಗಡೆ ಆದ, ಪ್ರಿಯದರ್ಶನ್ ನಿರ್ದೇಶನದ ಹಂಗಾಮ 2 ಕಾಮಿಡಿ ಚಿತ್ರದ ಮೂಲಕ ಸುಮಾರು ಒಂದು ದಶಕದ ಬಳಿಕ ಶಿಲ್ಪಾ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಜುಲೈ 23ರಿಂದ ಡಿಸ್ನಿ  ಪ್ಲಸ್ ಹಾಟ್‍ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಶಬ್ಬೀರ್ ಖಾನ್ ನಿರ್ದೇಶನದ ಆ್ಯಕ್ಷನ್, ರೊಮ್ಯಾಂಟಿಕ್ , ಕಾಮಿಡಿ ಸಿನಿಮಾ ನಿಕಮ್ಮಾದಲ್ಲೂ ಶಿಲ್ಪಾ ಶೆಟ್ಟಿ ಅಭಿನಯಿಸಲಿದ್ದಾರೆ.
Published by:Anitha E
First published: