• Home
  • »
  • News
  • »
  • entertainment
  • »
  • Kantara Movie: ಬಾಲ್ಯದ ಊರನ್ನು ನೆನಪಿಸಿತಂತೆ ಕಾಂತಾರ! ಕ್ಲೈಮ್ಯಾಕ್ಸ್ ನೋಡಿ ರೋಮಾಂಚನ ಆಯ್ತು ಅಂದ್ರು ಶಿಲ್ಪಾ ಶೆಟ್ಟಿ

Kantara Movie: ಬಾಲ್ಯದ ಊರನ್ನು ನೆನಪಿಸಿತಂತೆ ಕಾಂತಾರ! ಕ್ಲೈಮ್ಯಾಕ್ಸ್ ನೋಡಿ ರೋಮಾಂಚನ ಆಯ್ತು ಅಂದ್ರು ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ, ಕಾಂತಾರ

ಶಿಲ್ಪಾ ಶೆಟ್ಟಿ, ಕಾಂತಾರ

Kantara Movie: ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಈಗ ಪರ ಭಾಷೆಯಲ್ಲೂ ಪ್ರೇಕ್ಷಕರನ್ನು ರಂಜಿಸಿದೆ. ಸಿನಿಮಾ ವೀಕ್ಷಿಸಿದ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಕಾಂತಾರ ಸಿನಿಮಾ ನೋಡಿ ತಮ್ಮ ಅನುಭವ ಹಂಚಿಕೊಂಡವರ ಸಂಖ್ಯೆ ತುಂಬಾ ಇದೆ. ಬೇರೆ ಭಾಷೆಯ ಸಿನಿ ತಾರೆಗಳೂ ಸಹ ಕಾಂತಾರಕ್ಕೆ (Kantara) ಮನಸೋತು ತಮ್ಮ ಅನುಭವ ಹೇಗಿತ್ತು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಇದೀಗ ಕನ್ನಡತಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೂಡ ತಮ್ಮ ಅನುಭವವನ್ನ (Experience) ಬರೆಯುವುದರ ಮೂಲಕ ಕಾಂತಾರ ಸಿನಿಮಾ (Cinema) ಹೇಗಿತ್ತು ಅನ್ನೋದನ್ನ ಸೋಶಿಯಲ್ ಮೀಡಿಯಾದಲ್ಲಿ (Social Media) ತಮ್ಮ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.


ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಈಗ ಹಿಂದಿ ಮತ್ತು ತೆಲುಗು ಭಾಷೆಯಲ್ಲೂ ಪ್ರೇಕ್ಷಕರನ್ನು ರಂಜಿಸಿದೆ. ಸಿನಿಮಾ ವೀಕ್ಷಿಸಿದ ಸ್ಟಾರ್ ನಟರೂ ಸಹ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಭಾಕ್ಸ್​ ಆಫಿಸ್​ನಲ್ಲೂ ಭರ್ಜರಿ ಹಣ ಗಳಿಸುತ್ತಿದೆ. ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ, ನಾನಿ, ಮಲಯಾಳಂ ನಟ ಪೃಥ್ವಿರಾಜ್, ಕಾರ್ತಿ, ತಮಿಳುನಟ ಧನುಷ್ ಸೇರಿದಂತೆ ಹಲವಾರು ಜನ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಎಂಥಾ ಅದ್ಭುತ ಸಿನಿಮಾ, ನೋಡಿ ಮೈ ರೋಂಮಾಂಚನವಾಯ್ತು. ಓ ಮೈ ಗಾಡ್ ಎಂಥಾ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದ ನರೇಟಿವ್, ವೈಬ್ ಮತ್ತು ಚಿತ್ರದಲ್ಲಿನ ಒಳ ಜಗತ್ತು ನೋಡುತ್ತಿದ್ದಂತೆ ಮೈ ರೊಮಾಂಚನವಾಯ್ತು.


ಚಿತ್ರದ ಕೊನೆಯಲ್ಲಿ ಗೂಸ್​​ಬಂಪ್ಸ್​​ ಬಂತು ಎಂದು ಬರೆದಿದ್ದಾರೆ. ಸಿನಿಮಾ ನೋಡುತ್ತಿರುವಾಗ ಕ್ಲೈಮಾಕ್ಸ್​ ಸಮಯಲ್ಲಿ ಚಿತ್ರ ಮಂದಿರದಲ್ಲಿ ಕೂತಿದ್ದ ಎಲ್ಲಾ ಪ್ರೇಕ್ಷಕರನ್ನು ಸಿನಿಮಾದ ಒಳ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು ಅಷ್ಟು ಅದ್ಭುತ ಅನುಭವ ನೀಡಿದೆ ಈ ಸಿನಿಮಾ ಎಂದು ಹೇಳಿದ್ದಾರೆ. ಈದು ಈ ಚಿತ್ರಕ್ಕಿರುವ ಶಕ್ತಿ ಎಂದು ಬರೆದಿದ್ದಾರೆ.


ಇದನ್ನೂ ಓದಿ: ಬಾಲಿವುಡ್​ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್


ರಿಷಬ್ ಅವರಿಗೆ ಅಭಿನಂದನೆ ಸಲ್ಲಿಸಿದ ಶಿಲ್ಪಾ ಶೆಟ್ಟಿ


ಈ ಚಿತ್ರ ನೋಡಿದಾಕ್ಷಣ ನನಗೆ ನನ್ನ ಊರಿನ ನೆನಪಾಯ್ತು, ಎಲ್ಲರೂ ಈ ಚಿತ್ರವನ್ನು ನೋಡಲೇ ಬೇಕು ಎಂದು ಹೇಳಿದ್ದಾರೆ. ತುಂಬಾ ಚನ್ನಾಗಿ ಕಥೆಯ ನರೇಷನ್ ಮಾಡಿದ್ದಾರೆ, ಅಭಿನಯವೂ ಅಷ್ಟೇ ಸುಂದರವಾಗಿ ಮೂಡಿಬಂದೆದೆ ಇದು ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ನಂಬಿಕೆ ಆಧರಿಸಿದ ಈ ಚಿತ್ರ ನಿಜಕ್ಕೂ ತುಂಬಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರದ ಯಶಸ್ಸನ್ನು ಅನುಭವಿಸಿ ಇದು ನಿಜಕ್ಕೂ ಒಳ್ಳೆ ಸಿನಮಾ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕಾಂತಾರದಲ್ಲಿ ರಿಷಬ್ ಕಡಿಯುವ ಬೃಹತ್ ಮರ ನಿಜವಾದ ಮರವಾ?


ತಮ್ಮ ಊರು ನೆನಪಿಸಿಕೊಂಡ ಶಿಲ್ಪಾ ಶೆಟ್ಟಿ


ಮಂಗಳೂರಿನವರೇ ಆದ ಶಿಲ್ಪಾ ಶೆಟ್ಟಿ ತಮ್ಮ ಮೂಲ ನೆಲೆಯ ನೆನಪು ಮಾಡಿಕೊಂಡಿದ್ದಾರೆ. ಅದನ್ನೂ ಸಹ ಅವರು ತಮ್ಮ ಫೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲಾ ಸಿನಿ ಪ್ರೇಮಿಗಳು ಮತ್ತು ಸಿನಿ ತಾರೆಯರು ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದು. ಈ ಚಿತ್ರ ಇನ್ನಷ್ಟು ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳು ಎದ್ದು ತೋರುತ್ತಿವೆ. ಇನ್ನು ಹಲವು ಪರ ಭಾಷೆಗಳಲ್ಲಿ ಈ ಚಿತ್ರ ತೆರೆ ಕಂಡರೂ ಆಶ್ಚರ್ಯವಿಲ್ಲ.


ಶಿಲ್ಪಾ ಶೆಟ್ಟಿ ಅವರ ಇನ್ಸ್ಟಾಗ್ರಾಮ್ ಫೋಸ್ಟ್ ಇಲ್ಲಿದೆ ನೋಡಿ




ಒಟ್ಟಿನಲ್ಲಿ ಹೇಳೋದಾದ್ರೆ ಎಲ್ಲಾ ಭಾಷೆಯ ನಟರೂ ಮತ್ತು ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದು ಇನ್ನು ಮುಂದಿನ ದಿನಗಳಲ್ಲಿ ಇದಕ್ಕೂ ಅಧಿಕ ಯಶಸ್ಸು ಕಾಣುವುದು ಖಂಡಿತ.

First published: