Shilpa Shetty: 10 ಕೋಟಿ ಆಫರ್​ ಒಲ್ಲೆ ಎಂದ ಶಿಲ್ಪಾಶೆಟ್ಟಿ: ನಟಿಯ ನಿರ್ಧಾರವನ್ನು ಶ್ಲಾಘಿಸಿದ ಮಾಜಿ ಮುಖ್ಯಮಂತ್ರಿ

Shilpa Shetty: ಕರಾವಳಿಯ ಚೆಲುವೆ ಶಿಲ್ಪಾ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೆ ಜಾಹೀರಾತು ಕಂಪನಿಯಿಂದ ಒಂದು ದೊಡ್ಡ ಅವಕಾಶ ಅರಸಿ ಬಂದಿತ್ತು. ಅದು 10 ಕೋಟಿಯ ಆಫರ್. ಆದರೆ ಶಿಲ್ಪಾ ಶೆಟ್ಟಿ ಮುಲಾಜಿಲ್ಲದೆ ಅದಕ್ಕೆ ಒಲ್ಲೆ ಎಂದಿದ್ದಾರೆ.

Anitha E | news18
Updated:August 21, 2019, 6:44 PM IST
Shilpa Shetty: 10 ಕೋಟಿ ಆಫರ್​ ಒಲ್ಲೆ ಎಂದ ಶಿಲ್ಪಾಶೆಟ್ಟಿ: ನಟಿಯ ನಿರ್ಧಾರವನ್ನು ಶ್ಲಾಘಿಸಿದ ಮಾಜಿ ಮುಖ್ಯಮಂತ್ರಿ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾನ್​ ಹಾಗೂ ಶಿಲ್ಪಾಶೆಟ್ಟಿ​
  • News18
  • Last Updated: August 21, 2019, 6:44 PM IST
  • Share this:
ಸೆಲೆಬ್ರಿಟಿಗಳು ಹಣದ ಆಸೆಗೆ ಜನರನ್ನು ಮರಳು ಮಾಡುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸಹಜ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಆಗಾಗ ಕೆಲವು ಸೆಲೆಬ್ರಿಟಿಗಳು ಮಾತ್ರ ಇಂತಹ ಜಾಹೀರಾತುಗಳಲ್ಲಿ ಭಾಗವಾಗುವ ಅವಕಾಶ ಬಂದರೂ ನಿರಾಕರಿಸುತ್ತಾರೆ.

ಇದಕ್ಕೆ ಸಾಕಷ್ಟು ಉದಾಹರಣಗಳಿವೆ. ಈ ಹಿಂದೆ ಶ್ವೇತವರ್ಣದ ಕ್ರೀಮ್​ ತಯಾರಿಕಾ ಸಂಸ್ಥೆಯೊಂದರ ಕೋಟಿ ಕೋಟಿ ಆಫರ್​ ಅನ್ನು ಕಂಗನಾ ಒಂದೇ ಮಾತಿನಲ್ಲಿ ನಿರಾಕರಿಸಿದ್ದರು. ಇದಾದ ನಂತರ ಸಾಯಿ ಪಲ್ಲವಿ ಸಹ ಇದೇ ಕೆಲಸ ಮಾಡಿದ್ದರು. ಈಗ ನಟಿ ಶಿಲ್ಪಾ ಶೆಟ್ಟಿ ಸರದಿ.

Shilpa Shetty Practicing yoga
ಯೋಗಾಸನ ಮಾಡುತ್ತಿರುವ ಶಿಲ್ಪಾಶೆಟ್ಟಿ


ಕರಾವಳಿಯ ಚೆಲುವೆ ಶಿಲ್ಪಾ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೆ ಜಾಹೀರಾತು ಕಂಪನಿಯಿಂದ ಒಂದು ದೊಡ್ಡ ಅವಕಾಶ ಅರಸಿ ಬಂದಿತ್ತು. ಅದು 10 ಕೋಟಿಯ ಆಫರ್. ಆದರೆ ಶಿಲ್ಪಾ ಶೆಟ್ಟಿ ಮುಲಾಜಿಲ್ಲದೆ ಅದಕ್ಕೆ ಒಲ್ಲೆ ಎಂದಿದ್ದಾರೆ.

ಇದನ್ನೂ ಓದಿ: ಎಂಟು ತಿಂಗಳು ಮೊದಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಸಿನಿಮಾ 'ಕೆ.ಜಿ.ಎಫ್​ ಚಾಪ್ಟರ್​ 2'

ಶಿಲ್ಪಾ ಅವರದ್ದು ಹೆಸರಿಗೆ ತಕ್ಕಂತೆ ಕಡೆದಿಟ್ಟ ಶಿಲಾಬಾಲಿಕೆಯಂತಹ ಸೌಂದರ್ಯ. ಪ್ರತಿನಿತ್ಯ ಯೋಗ, ವ್ಯಾಯಾಮ, ಜಿಮ್ ಮಾಡುವ ಮೂಲಕ ಕಾಪಾಡಿಕೊಂಡಿರೋ ಝೀರೋ ಫಿಗರ್ ಬ್ಯೂಟಿ. ಈ ಚೆಲುವೆಯನ್ನು ಆಯುರ್ವೇದಿಕ್ ಕಂಪನಿಯೊಂದು ಸ್ಲಿಮ್ ಆಗೋ (ದೇಹದ ತೂಕ ಇಳಿಸಿಕೊಳ್ಳುವ) ಮಾತ್ರೆಗಳಿಗೆ ರಾಯಭಾರಿ ಆಗುವಂತೆ ಕೋರಿದೆ. ಆದರೆ ಈ ಪ್ರಾಡಕ್ಟ್​ ಬಗ್ಗೆ ಶಿಲ್ಪಾ ಅವರಿಗೇ ಭರವಸೆ ಬಾರದ ಕಾರಣಕ್ಕೆ 10 ಕೋಟಿ ಆಫರ್​ಗೆ ನೋ ಎಂದಿದ್ದಾರೆ.

ಇನ್ನು ಶಿಲ್ಪಾ ಶೆಟ್ಟಿ ಅವರ ಈ ನಿರ್ಧಾರವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌವ್ಹಾಣ್​ ಅವರು ಶ್ಲಾಘಿಸಿದ್ದಾರೆ. ಸೆಲೆಬ್ರಿಟಿಗಳಿಗೆ ಸಾಮಾಜಿಕ ಕಳಕಳಿ ಇರಬೇಕು. ಅದನ್ನು ಶಿಲ್ಪಾಶೆಟ್ಟಿ ಮಾಡಿ ತೋರಿಸಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

  ಇನ್ನು ಇಂತಹದ್ದೇ ವಿಷಯವಾಗಿ ಕೆಲ ವರ್ಷಗಳ ಹಿಂದೊಮ್ಮೆ ಚರ್ಚೆಗೆ ಬಂದಿತ್ತು. ಆಗ ಜನರನ್ನು ಮರಳು ಮಾಡುವ ಜಾಹೀರಾತುಗಳು ಹಾಗೂ ಅವುಗಳ ತಾರಾ ಪ್ರಚಾರ ಕುರಿತಾಗಿ ವ್ಯವಹರಿಸುವ ವಿಧಿ ವಿಧಾಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಕೇಂದ್ರೀಯ ಗ್ರಾಹಕ ರಕ್ಷಣೆ ಸಮಿತಿ ಉಪ ಸಮಿಯನ್ನು ರೂಪಿಸಿತ್ತು. ಒಂದು ವೇಳೆ ಇಂತಹ ಜಾಹೀರಾತುಗಳ ಕುರಿತು ದೂರು ದಾಖಲಾದಾಗ ಪರಿಹಾರ ಕೊಡುವಾಗ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೂ ಪರಿಹಾರ ವಸೂಲು ಮಾಡಲು ಒಮ್ಮತದಿಂದ ನಿರ್ಧರಿಸಲಾಗಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

Kangana: 600 ರೂಪಾಯಿ ಸೀರೆ ತೊಟ್ಟ ಕಂಗನಾ: ಫಿದಾ ಆದ ನೆಟ್ಟಿಗರು..! 

 

 

 
First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading