Shilpa Shetty Divorce?: ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ಮುಂದಾದ ಶಿಲ್ಪಾ ಶೆಟ್ಟಿ? ಮಕ್ಕಳಿಗಾಗಿ ಹೊಸ ಜೀವನ!

Shilpa Shetty Planning to Separate from Raj Kundra: ಇನ್ನು ಶಿಲ್ಪಾ ಡಿವೋರ್ಸ್ ನೀಡಿದರೆ ರಾಜ್ ಕುಂದ್ರಾ ಪತ್ನಿ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಬ್ಬರ ಖಾಸಗಿ ಬದುಕು ಮಾಧ್ಯಮಗಳಿಗೆ ಆಹಾರವಾಗಲಿದೆ ಎಂದೂ ಆಪ್ತರು ಶಿಲ್ಪಾರನ್ನು ಎಚ್ಚರಿಸುತ್ತಿದ್ದಾರಂತೆ.

ನಟಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ

ನಟಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ

  • Share this:
Shilpa Shetty getting divorced from raj kundra: ಮಂಗಳೂರು ಬೆಡಗಿ, ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಜೀವನ ಜು.19ರ ಬಳಿಕ ತಲೆಕೆಳಗಾಗಿದೆ. ಗಂಡ-ಇಬ್ಬರು ಮಕ್ಕಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದ ಶಿಲ್ಪಾ ಬಾಳಲ್ಲಿ ಈಗ ಕತ್ತಲೆ ಆವರಿಸಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ (Porn Case) ಪ್ರಕರಣದಲ್ಲಿ ಶಿಲ್ಪಾ ಪತಿ, ಉದ್ಯಮಿ ರಾಜ್​ ಕುಂದ್ರಾರನ್ನು ಮುಂಬೈ ಕ್ರೈಂ ಬ್ರಾಂಚ್​ ಪೊಲೀಸರು ಜು.19ರ ರಾತ್ರಿ ಬಂಧಿಸಿದ್ದರು. ನಂತರ ದಿನೇ ದಿನೇ ರಾಜ್​ ಕುಂದ್ರಾ ವಿರುದ್ಧ ಹಲವು ಆರೋಪಗಳು, ಪ್ರಕರಣಗಳು ಬಯಲಾಗುತ್ತಲೇ ಹೋಯ್ತು. ಮೊದಮೊದಲು ಪತಿಯನ್ನು ಬೆಂಬಲಿಸಿದ್ದ ಶಿಲ್ಪಾಗೆ ನಂತರದ ದಿನಗಳಲ್ಲಿ ಭ್ರಮನೀರಸವಾಗಿದೆ. ಪತಿಯ ಅವ್ಯವಹಾರಗಳು ಬಯಲಾಗುತ್ತಲೇ ಶಿಲ್ಪಾ ತನ್ನ ಮತ್ತು ಕುಟುಂಬದ ಇಮೇಜ್​ ಹಾಳಾಗುತ್ತಿರುವ ಬಗ್ಗೆ ಡಿಪ್ರೆಸ್​​ ಆಗಿದ್ದಾರಂತೆ.

ತಪ್ಪಾಗಿದೆ.. ಮುಂದೆ ಸರಿ ಮಾಡಿಕೊಳ್ಳುವೆ

ಕೋರ್ಟ್​​ ಜಾಮೀನು ನೀಡದ ಹಿನ್ನೆಲೆಯಲ್ಲಿ ರಾಜ್​ ಕುಂದ್ರಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಂದೂವರೆ ತಿಂಗಳಾದರೂ ಹೊರ ಬಂದಿಲ್ಲ. ಇತ್ತ ಶಿಲ್ಪಾ ಶೆಟ್ಟಿ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. 2 ವಾರಗಳ ಹಿಂದೆ ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆಗಿ ಮುಂದುವರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದ ಶಿಲ್ಪಾ, ನಾನು ಮತ್ತಷ್ಟು ಸ್ಟ್ರಾಂಗ್​ ಆಗಿದ್ದೇನೆ ಎಂದಿದ್ದರು. 2 ದಿನಗಳ ಹಿಂದೆ ಪುಸ್ತಕವೊಂದರ ಸಾಲುಗಳನ್ನು ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ತಪ್ಪಾಗಿದೆ  ಆದರೆ ಮುಂದೆ ಎಲ್ಲವನ್ನು ಸರಿ ಮಾಡಿಕೊಳ್ಳುವೆ ಎಂದು ಅರ್ಥ ನೀಡುವ ಸಾಲುಗಳಿದ್ದವು.

ಹೊಸ ದಾರಿಯಲ್ಲಿ ಶಿಲ್ಪಾ

ಶಿಲ್ಪಾ ಶೆಟ್ಟಿ ಅವರ ಆಪ್ತ ಗೆಳತಿ ಮಾಧ್ಯಮದೊಂದಿಗೆ ಮಾತನಾಡಿದ್ದು, ಶಿಲ್ಪಾ ಪತಿ ರಾಜ್​​ ಕುಂದ್ರಾರಿಂದ ದೂರವಾಗಲು ಬಯಸಿದ್ದಾರಂತೆ. ಫ್ಯಾಮಿಲಿಯ ಇಮೇಜ್​​, ಮಕ್ಕಳ ಭವಿಷ್ಯಕ್ಕಾಗಿ ಜೀವನದಲ್ಲಿ ಹೊಸ ಅಧ್ಯಾಯ ಶುರು ಮಾಡಲಿದ್ದಾರಂತೆ. ಮಕ್ಕಳನ್ನು ಆರೋಪಿ ತಂದೆಯಿಂದ ದೂರವಿಡಲು ಮುಂದಾಗಿದ್ದಾರಂತೆ. ರಾಜ್​ ಕುಂದ್ರಾ ಜೈಲಿನಿಂದ ಬಂದ ಬಳಿಕ ಕೂತು ಮಾತನಾಡಿ ಡಿವೋರ್ಸ್​ ನಿರ್ಧಾರ ತಿಳಿಸಲಿದ್ದಾರಂತೆ. ಪ್ರಕರಣ ಬಯಲಾಗುತ್ತಲೇ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ಆಸ್ತಿಯಿಂದ ಅಂತರ ಕಾಯ್ದುಕೊಂಡಿದ್ದಾರಂತೆ.

ರಾಜ್​​ ಕುಂದ್ರಾ ಹಣ ಮುಟ್ಟುತ್ತಿಲ್ಲ ಶಿಲ್ಪಾ

ನನಗೆ ತಿಳಿಸದೇ ಪತಿ ಅಶ್ಲೀಲ ವಿಡಿಯೋದಿಂದ ಹಣ ಗಳಿಕೆಗೆ ಇಳಿದಿದ್ದು, ಅದರಲ್ಲಿ ಶಿಲ್ಪಾ ಕೂಡ ಭಾಗಿಯಾಗಿದ್ದರು ಎಂಬ ನಿಟ್ಟಿನಲ್ಲಿ ನಡೆದ ತನಿಖೆಯಿಂದ ಶಿಲ್ಪಾ ತೀವ್ರವಾಗಿ ಅಘಾತಕ್ಕೊಳಗಾಗಿದ್ದಾರೆ ಎಂದು ಅವರ ಗೆಳತಿ ಹೇಳಿದ್ದಾರೆ. ನಿಜವಾಗಿಯೂ ರಾಜ್​ ಕುಂದ್ರಾ ಅಕ್ರಮಗಳ ಬಗ್ಗೆ ಶಿಲ್ಪಾಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಆಕೆ ಇನ್ಮುಂದೆ ನಟಿಯಾಗಿ ಮುಂದುವರೆಯಲು ಬಯಸಿದ್ದಾರೆ. ರಾಜ್​ ಕುಂದ್ರಾರಿಂದ ದೂರವಾದರೂ ಶಿಲ್ಪಾ ಶೆಟ್ಟಿಯ ಬಳಿ ಒಳ್ಳೆಯ ಆಸ್ತಿ ಇದೆ. ರಿಯಾಲಿಟಿ ಶೋಗಳಿಂದಲೂ ಒಳ್ಳೆಯ ಆದಾಯ ಹೊಂದಿದ್ದಾರೆ. ಅದರೊಂದಿಗೆ ಮುಂದುವರೆಯಲು ಶಿಲ್ಪಾ ಬಯಸಿದ್ದಾರಂತೆ.

ಇದನ್ನೂ ಓದಿ: Mouni Roy: ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ ಮೌನಿ ರಾಯ್; ಇಂಥ ಡ್ರೆಸ್​ ಬೇಕಿತ್ತಾ ಎಂದ ನೆಟ್ಟಿಗರು!

ಶಿಲ್ಪಾ ವಿರುದ್ಧ ತಿರುಗಿ ಬೀಳ್ತಾರಾ ರಾಜ್​​ ಕುಂದ್ರಾ?

ಪತಿಯಿಂದ ದೂರವಾಗಲು ಶಿಲ್ಪಾ ಶೆಟ್ಟಿ ಸಿದ್ದವಿರುವುದು ಬಹುತೇಕ ಖಚಿತವಾಗಿದೆ. 2009ರಲ್ಲಿ ಶಿಲ್ಪಾ-ರಾಜ್​ ಕುಂದ್ರಾ ಮದುವೆಯಾಗಿದ್ದರು. ಲಂಡನ್​ ಮೂಲದ ರಾಜ್​​​ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಶಿಲ್ಪಾರನ್ನು 2ನೇ ಮದುವೆಯಾಗಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಇನ್ನು ಶಿಲ್ಪಾ ಡಿವೋರ್ಸ್​​ ನೀಡಿದರೆ ರಾಜ್​​ ಕುಂದ್ರಾ ಪತ್ನಿ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಬ್ಬರ ಖಾಸಗಿ ಬದುಕು ಮಾಧ್ಯಮಗಳಿಗೆ ಆಹಾರವಾಗಲಿದೆ ಎಂದೂ ಆಪ್ತರು ಶಿಲ್ಪಾರನ್ನು ಎಚ್ಚರಿಸುತ್ತಿದ್ದಾರಂತೆ. ಆದರೆ ಶಿಲ್ಪಾ ಮಾತ್ರ ಪತಿಯಿಂದ ದೂರವಾಗುವ ನಿರ್ಧಾರಕ್ಕೆ ಬದ್ದರಾಗಿದ್ದಾರೆ ಎನ್ನಲಾಗುತ್ತಿದೆ.
Published by:Kavya V
First published: