ಟ್ರೋಲಿಗರಿಗೆ ಅರ್ಥವಾಗದ ಶಿಲ್ಪಾ ಶೆಟ್ಟಿಯ ಡ್ರೆಸ್ಸಿಂಗ್​ ಸ್ಟೈಲ್​: ಅಸಭ್ಯ ಕಮೆಂಟ್​ಗಳಿಂದ ಚುಚ್ಚಿದ ಜನರು!


Updated:August 28, 2018, 12:27 PM IST
ಟ್ರೋಲಿಗರಿಗೆ ಅರ್ಥವಾಗದ ಶಿಲ್ಪಾ ಶೆಟ್ಟಿಯ ಡ್ರೆಸ್ಸಿಂಗ್​ ಸ್ಟೈಲ್​: ಅಸಭ್ಯ ಕಮೆಂಟ್​ಗಳಿಂದ ಚುಚ್ಚಿದ ಜನರು!

Updated: August 28, 2018, 12:27 PM IST
ನ್ಯೂಸ್​ 18 ಕನ್ನಡ

ಮುಂಬೈ(ಆ.28): ಶಿಲ್ಪಾ ಶೆಟ್ಟಿಯವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಟ್ರೋಲಿಗರಿಗೆ ಆಹಾರವಾಗಿದೆ. ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಈ ಫಟೋದಲ್ಲಿ ಒಂದು ಸ್ಲಿಟ್​ ಡ್ರೆಸ್​ ಧರಿಸಿದ್ದಾರೆ. ಹೊಸ ಫ್ಯಾಷನ್​ ಇದಾಗಿದ್ದು, ಪ್ಯಾಂಟ್​ ಅಥವಾ ಇನರ್​ನ್ನು ಧರಿಸಿಲ್ಲ.

ಆದರೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಟ್ರೋಲಿಗರು ಬಾಲಿವುಡ್​ ನಟಿಗೆ ಹಲವಾರು ಸಲಹೆಗಳನ್ನು ನೀಡಲಾರಂಭಿಸಿದ್ದಾರೆ. ಹಲವಾರು ಮಂದಿ ಕೆಟ್ಟ ಕಮೆಂಟ್​ಗಳನ್ನೂ ನೀಡಿದ್ದಾರೆ. ಹಲವಾರು ಟ್ರೋಲಿಗರು ಶಿಲ್ಪಾಗೆ ಸಲ್ವಾರ್​ ಧರಿಸಲು ಸಲಹೆ ನೀಡಿದ್ದರೆ, ಮತ್ತೆ ಕೆಲವರು ಈ ನಾಚಿಕೆ ಇರಲಿ ಎಂದು ಕಮೆಂಟ್​ ಮಾಡಿದ್ದಾರೆ.

ಇನ್ನು ಈ ಫೋಟೋದಲ್ಲಿ ಶಿಲ್ಪಾ ಕುರ್ತಾ ಧರಿಸಿರಲಿಲ್ಲ ಎಂಬುವುದು ಗಮನಾರ್ಹ. ಅವರು ಕೆಲ ಸಮಯದ ಹಿಂದೆ ಫ್ಯಾಷನ್​ ಆಗಿದ್ದ ಡಬಲ್​ ಸ್ಲಿಟ್​ ಬಟ್ಟೆ ಧರಿಸಿದ್ದಾರೆ. ಕಪ್ಪು ಬಣ್ಣದ ಈ ಬಟ್ಟೆಯಲ್ಲಿ ಶಿಲ್ಪಾರವರ ಫಿಟ್ನೆಸ್​ ಕಂಡು ಬರುತ್ತದೆ. ಅದರೆ ಜನರು ಮಾತ್ರ ಈ ವಿಚಾರದಲ್ಲಿ ಶಿಲ್ಪಾರನ್ನು ಹಿಯಾಳಿಸಿದ್ದಾರೆ.

ಎರಡು ದಿನಗಳವರೆಗೆ ಅಧಿಕ ಸಂಖ್ಯೆಯಲ್ಲಿ ಶೇರ್​ ಆಗಿರುವ ಈ ಫೋಟೋದಲ್ಲಿ ಶಿಲ್ಪಾ ತಮ್ಮ ಮಗನನ್ನು ಶಾಲೆಯಿಂದ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಇನ್ನು ಶಿಲ್ಪಾ ಟ್ರೋಲರ್ಸ್​ಗಳ ಟೀಕೆಗೊಳಗಾಗಿದ್ದು, ಇದೇ ಮೊದಲಲ್ಲ. ಇನ್​ಸ್ಟಾ ಗ್ರಾಂನಲ್ಲಿ ಬಹಳಷ್ಟು ಚುರುಕಾಗಿರುವ ಅವರು ಸಾಮಾನ್ಯವಾಗಿ ತಮ್ಮ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಅವರ ಅನೇಕ ಫೋಟೋಗಳಿಗೆ ಜನರು ಕೆಟ್ಟ ಕಮೆಂಟ್​ ನೀಡುತ್ತಾರೆ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ, ಅಂತಹವರಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.

ಈ ದಿನಗಳಲ್ಲಿ ಶಲ್ಪಾ ರೇಡಿಯೋ ಕಾರ್ಯಕ್ರಮವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ನೇಹಾ ಧೂಪಿಯಾ ಹಾಗೂ ಕರಣ್​ ಜೋಹರ್​ ಕಳೆದ ಕೆಲ ಸಮಯದಿಂದ ರೇಡಿಯೋ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಶಿಲ್ಪಾ ಕೂಡಾ ಖಾಸಗಿ ರೇಡಿಯೋ ಒಂದರ ಆಡಿಯೋದಲ್ಲಿ ಮಹಾಭಾರತದ ದ್ರೌಪದಿ ಪಾತ್ರಕ್ಕೆ ತಮ್ಮ ಧ್ವನಿ ನೀಡುತ್ತಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...