KGF 2: ರಾಕಿ ಭಾಯ್​ ಸ್ಟೈಲ್​ ಫಾಲೋ ಮಾಡಿದ ಶಿಲ್ಪಾ ಶೆಟ್ಟಿ! ಇವ್ರಿಗೂ ವೈಲೆನ್ಸ್​​ ಅಂದ್ರೆ ಇಷ್ಟ ಇಲ್ವಂತೆ

ಕೆಜಿಎಫ್​ 2 ಸಿನಿಮಾ ಕ್ರಿಯೆಟ್​ ಮಾಡಿದ ಕ್ರೇಜ್​ ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಈ ಸಿನಿಮಾದ ಡೈಲಾಗ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿಗಳು ಯಶ್​ ಅವರ ವೈಲೆನ್ಸ್​ ಡೈಲಾಗ್​ಗೆ ರೀಲ್ಸ್​ ಮಾಡುತ್ತಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​, ಶಿಲ್ಪಾ ಶೆಟ್ಟಿ

ರಾಕಿಂಗ್​ ಸ್ಟಾರ್​ ಯಶ್​, ಶಿಲ್ಪಾ ಶೆಟ್ಟಿ

  • Share this:
ಸಲಾಂ ರಾಕಿ ಭಾಯ್ (Rocky Bhai)​.. ಇಡೀ ವಿಶ್ವವೇ ಕಳೆದೆರೆಡು ವಾರಗಳಿಂದ ಇದೊಂದು ವಿಷಯದ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕಾರಣ ನಮ್ಮ ಮಾನ್​ಸ್ಟರ್​ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​. ಹೌದು, ಕೆಜಿಎಫ್​ 2 (KGF 2) ಸಿನಿಮಾ ಇಡೀ ವಿಶ್ವದಲ್ಲೇ ತನ್ನ ಆರ್ಭಟವನ್ನು ಮುಂದುವರೆಸಿದ. ವಿಶ್ವದ ಮೂಲೆ ಮೂಲೆಯಲ್ಲೂ ರಾಕಿ ಭಾಯ್​ ವೈಲೆನ್ಸ್ (Violence) ಜೋರಾಗಿದೆ. ಇನ್ನೂ ದಾಖಲೆಗಳೆಲ್ಲ ಯಶ್​ ಅಬ್ಬರದ ಮುಂದೆ ಬ್ರೇಕ್​ ಆಗಿದೆ. ಒಂದೊಂದೆ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿರುವ ಕೆಜಿಎಫ್​ 2 ಕೆಲವೇ ದಿನಗಳಲ್ಲಿ ಸಾವಿರ ಕೋಟಿ  ಕ್ಲಬ್ ಸೇರಲಿದೆ. ಕೆಜಿಎಫ್​ 2 ಸಿನಿಮಾ ನೋಡಿದ ಬೇರೆ ಭಾಷೆಯ ಸಿನಿಮಾಗಳು ನಟ, ನಟಿಯರು ಫಿದಾ ಆಗಿದ್ದಾರೆ. ಕೆಜಿಎಫ್​ 2 ಸಿನಿಮಾ ನೋಡಿ ಸೋಷಿಯಲ್​ ಮೀಡಿಯಾ (Social Media) ದಲ್ಲಿ ತಮ್ಮ ಅಭಿಪ್ರಾಯ  ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಈ ಸಿನಿಮಾದ ವೈಲೆನ್ಸ್ ರೀಲ್ಸ್ (Violence Reels)​ ಇನ್​ಸ್ಟಾಗ್ರಾಂ (Instagram), ಫೇಸ್​ ಬುಕ್​ (Facebook) ತುಂಬ ಇದೆ.

ರಾಕಿ ಭಾಯ್ ಸ್ಟೈಲ್​ ಕಾಪಿ ಮಾಡಿದ ಶಿಲ್ಪಾ ಶೆಟ್ಟಿ!

ಕೆಜಿಎಫ್​ 2 ಸಿನಿಮಾ ಕ್ರಿಯೆಟ್​ ಮಾಡಿದ ಕ್ರೇಜ್​ ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಈ ಸಿನಿಮಾದ ಡೈಲಾಗ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿಗಳು ಯಶ್​ ಅವರ ವೈಲೆನ್ಸ್​ ಡೈಲಾಗ್​ಗೆ ರೀಲ್ಸ್​ ಮಾಡುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕೂಡ ಇದೀಗ ರಾಕಿ ಭಾಯ್​ ಸ್ಟೈಲ್​ ಕಾಪಿ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಕೆಜಿಎಫ್​ 2 ಸಿನಿಮಾ ಡೈಲಾಗ್​ ಹೇಳಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

'ಐ ಡೋಂಟ್​ ಲೈಕ್​ ವೈಲೆನ್ಸ್'​ ಎಂದ ಶಿಲ್ಪಾ ಶೆಟ್ಟಿ!

ಕೆಜಿಎಫ್​ 2 ಸಿನಿಮಾ ಬಗ್ಗೆ ಮಾತನಾಡದೇ ಇರುವವರ ಸಂಖ್ಯೆ ತೀರಾ ಕಡಿಮೆ ಅನ್ನಬಹುದು. ಪುಟ್ಟ-ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ರಾಕಿ ಭಾಯ್ ಅಬ್ಬರ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಬರುವ ಡೈಲಾಗ್ಸ್​ಗಳನ್ನು ಹೇಳುತ್ತಿರುತ್ತಾರೆ. ಅದರಲ್ಲೂ ವೈಲೆನ್ಸ್​ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.ಈಗ ಶಿಲ್ಪಾ ಶೆಟ್ಟಿ 'ವೈಲೆನ್ಸ್​.. ವೈಲೆನ್ಸ್​.. ಐ ಡೋಂಟ್​ ಲೈಕ್​ ಇಟ್​. ಬಟ್​ ವೈಲೆನ್ಸ್​ ಲೈಕ್ಸ್​ ಮೀ' ಎಂದು ಹೇಳಿದ್ದಾರೆ. ಈ ಹಿಂದೆ ರವೀನಾ ಟಂಡನ್​ ಮಾಡಿರುವ ರಮೀಕಾ ಸೇನ್​ ಪಾತ್ರ ಮೆಚ್ಚಿದ್ದ ಶಿಲ್ಪಾ ಶೆಟ್ಟಿ ಈ ಬಗ್ಗೆ ಟ್ವೀಟ್ ಮಾಡಿದ್ದರು.
View this post on Instagram


A post shared by Voompla (@voompla)

ಇದನ್ನೂ ಓದಿ: ಸಿನಿಮಾ ಮಕಾಡೆ ಮಲ್ಕೊಂಡ್ರು ಪಾರ್ಟಿ ಮಾಡಿದ ಚಿತ್ರತಂಡ, ನಿಮ್ಗೇ ಇದು ಸರಿನಾ? ಎಂದು ಟ್ರೋಲಿಗರಿಂದ ಕ್ಲಾಸ್!

ರಾಕಿ ಭಾಯ್​ನ​ ನೋಡ್ಲೇಬೇಕು ಅಂತ ಕಣ್ಣೀರಿಟ್ಟ ಬಾಲಕ!

ಇಲ್ಲೊಬ್ಬ ಹುಡುಗ ರಾಕಿ ಭಾಯ್​ ಅಂದರೆ ಎಷ್ಟು ಇಷ್ಟ ಅಂತ ಹೇಳಿದ್ದಾನೆ ನೋಡಿ. ಹೌದು, ಕೆಜಿಎಫ್​ 2 ಸಿನಿಮಾ ನೋಡಿದ ಪುಟ್ಟ ಬಾಲಕನೊಬ್ಬ ರಾಕಿ ಭಾಯ್​ನ ಭೇಟಿ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಬಾಲಕ ಯಶ್​ ಅವರನ್ನು ಭೇಟಿಯಾಗಬೇಕೆಂದು ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾನೆ. ಬಾಲಕನನ್ನು ವ್ಯಕ್ತಿಯೊಬ್ಬ ಯಾಕೆ ಬೇಜಾರಾಗಿದ್ದೀಯಾ? ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿರುವ ಪುಟ್ಟ ಬಾಲಕ 'ನಾನು ಯಶ್ ಅವರನ್ನು ಭೇಟಿ ಮಾಡಬೇಕು' ಎಂದು ಹೇಳಿದ್ದಾನೆ. ಇದಕ್ಕೆ ವ್ಯಕ್ತಿ ನೀನು ಅವರನ್ನು ಈಗ ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಬಾಲಕ ಕಣ್ಣೀರಿಟ್ಟಿದ್ದಾನೆ.

ಇದನ್ನೂ ಓದಿ: ರಾಕಿ ಭಾಯ್​ನ ನೋಡ್ಲೇ ಬೇಕು ಅಂತ ಕಣ್ಣೀರಿಟ್ಟ ಬಾಲಕ! ವಿಡಿಯೋ ನೋಡಿ ಯಶ್​ ಹೇಳಿದ್ದು ಹೀಗೆ

ವಿಡಿಯೋ ವೈರಲ್​ ಆಗ್ತಿದ್ದಂತೆ ರಿಪ್ಲೈ ಮಾಡಿದ ಯಶ್​!

ಟ್ವಿಟ್ಟರ್​ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ರಾಕಿಂಗ್​ ಸ್ಟಾರ್​ ಯಶ್​ ಅವರಿಗೆ ತಲುಪವಷ್ಟು ಈ ವಿಡಿಯೋ ವೈರಲ್​ ಆಗಿದೆ. ' ಚಿನ್​ ಅಪ್​ ಸನ್ನಿ, ರಾಕಿ ಭಾಯ್​ ನೋಡುತ್ತಿದ್ದಾರೆ..ಚಿಯರ್​ ಅಪ್​.. ನನಗೆ ಸ್ಯಾಡ್​ನೆಸ್​ ಇಷ್ಟವಾಗಲ್ಲ' ಎಂದು ಡೈಲಾಗ್ ರೂಪದಲ್ಲೇ ರಿಪ್ಲೈ ಮಾಡಿದ್ದಾರೆ. ಪುಟ್ಟ ಮಗುವಿನ ಮನವಿಗೆ ರಾಕಿ ಭಾಯ್​ ಸ್ಪಂಧಿಸಿರುವುದನ್ನು ಕಂಡ ಅಭಿಮಾನಿಗಳು ಯಶ್​ಗೆ ಜೈಕಾರ ಹಾಕಿದ್ದಾರೆ. ಇದೀಗ ಈ ವಿಚಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗತ್ತಿದೆ.
Published by:Vasudeva M
First published: