Shilpa Shetty: ಹೆಂಡ್ತಿ ಮುಂದೆ ಮಲ್ಟಿ ಮಿಲೇನಿಯರೂ ಆಗ್ಬೇಕು ಬೆಂಡು! ರಾಜ್​ ಕುಂದ್ರಾ ಅವಸ್ಥೆ ನೋಡಿ..

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಇಬ್ಬರು ಫನ್ನಿ ಜೋಡಿಗಳಾಗಿದ್ದು, ಅಭಿಮಾನಿಗಳನ್ನು ತಮ್ಮ ರೀಲ್ಸ್ ವಿಡಿಯೋಗಳ ಮೂಲಕ ರಂಜಿಸುತ್ತಿರುತ್ತಾರೆ. ಇಂತ ಅನೇಕ ಫನ್ನಿ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.

ರಾಜ್​ ಕುಂದ್ರಾ, ಶಿಲ್ಪಾ ಶಿಟ್ಟಿ

ರಾಜ್​ ಕುಂದ್ರಾ, ಶಿಲ್ಪಾ ಶಿಟ್ಟಿ

  • Share this:
ಬಾಲಿವುಡ್(Bollywood) ಬೆಡಗಿ, ಬಳುಕುವ ಬಳ್ಳಿ, ಶಿಲ್ಪಾ ಶೆಟ್ಟಿ(Shilpa Shetty) ಪತಿ ರಾಜ್ ಕುಂದ್ರಾ(Raj Kundra) ತಮ್ಮ ಪ್ರೀತಿ(Love) ಪತ್ನಿಗೋಸ್ಕರ ಪಾತ್ರೆ ಹೇಗೆ ತೊಳಿತ್ತಾರೆ ಗೊತ್ತಾ? ಪಾಪಾ ಒಲ್ಲದ ಗಂಡನಿಗೆ ಶಿಲ್ಪಾ ಪಾತ್ರೆ(Vessels) ತೊಳೆಯಲು ಹೇಗೆ ಪ್ರೇರೇಪಿಸಿದ್ದಾರೆ ಅಂತ ನೋಡಿದರೆ ನೀವು ಬಿದ್ದು ಬಿದ್ದು ನಗ್ತೀರಾ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಲ್ಟಿಮಿಲಿಯನರ್(Multi Milliner) ರಾಜ್ ಕುಂದ್ರಾ ತಮ್ಮ ಪ್ರೀತಿ ಪತ್ನಿಗೋಸ್ಕರ ಪಾತ್ರೆ ತೊಳಿಯುತ್ತಿರುವ ವಿಡಿಯೋ(Video) ವೈರಲ್ ಆಗಿದೆ. ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿ ದಂಪತಿಗಳ ವೈಯಕ್ತಿಕ ಬದುಕಲ್ಲಿ ಅನೇಕ ಬಿರುಗಾಳಿ ಬಂದು ಹೋದರೂ ಇಬ್ಬರು ಅನ್ಯೋನ್ಯವಾಗಿ, ಖುಷಿಯಾಗಿ ತಮ್ಮ ಮಕ್ಕಳೊಟ್ಟಿಗೆ ಚಂದದ ಜೀವನ ನಡೆಸುತ್ತಿದ್ದಾರೆ. ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಇಬ್ಬರು ಫನ್ನಿ(Funny) ಜೋಡಿಗಳಾಗಿದ್ದು, ಅಭಿಮಾನಿಗಳನ್ನು ತಮ್ಮ ರೀಲ್ಸ್(Reels) ವಿಡಿಯೋಗಳ ಮೂಲಕ ರಂಜಿಸುತ್ತಿರುತ್ತಾರೆ. ಇಂತ ಅನೇಕ ಫನ್ನಿ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.

ಗಂಡನ ಕೈಲಿ ಪಾತ್ರೆ ತೊಳಿಸಿದ ಶಿಲ್ಪಾಶೆಟ್ಟಿ!

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಗಂಡ ರಾಜ್ ಕುಂದ್ರಾ ಅವರನ್ನು ಅಣುಕಿಸಿ ಪಾತ್ರೆ ತೊಳೆಯುವಂತೆ ಪ್ರೇರೇಪಿಸುವ ದೃಶ್ಯಕ್ಕೆ ಇಬ್ಬರು ಲಿಪ್ ಸಿಂಕ್ ಮಾಡಿದ್ದಾರೆ. ಈ ಲಿಂಪ್ ಸಿಂಕ್ ಮಾಡುವ ರೀಲ್ಸ್ ವಿಡಿಯೋಗಳು ಜನ ಸಾಮಾನ್ಯರಿಂದ ಹಿಡಿದು ಸೆಲಿಬ್ರಿಟಿಗಳವರೆಗೂ ಹೆಚ್ಚು ಜನಪ್ರಿಯ. ಸಿನಿಮಾ ನಟ, ನಟಿಯರು ಸಹ ತಮ್ಮಷ್ಟಿದ ಅನೇಕ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ಜೋಡಿ ಶಿಲ್ಪಾ ಮತ್ತು ಕುಂದ್ರಾ ಇದಕ್ಕೆ ಹೊರತಾಗಿಲ್ಲ. ಇವರಿಬ್ಬರ ಪಾತ್ರೆ ತೊಳೆಯುವ ವಿಡಿಯೋ ಸದ್ಯ ಸದ್ದು ಮಾಡ್ತಿದೆ.

ಇನ್​ಸ್ಟಾಗ್ರಾಂ ರೀಲ್ಸ್​ ವಿಡಿಯೋ ವೈರಲ್​!

ಹೌದು, ರಾಜ್ ಕುಂದ್ರಾ ಅಡುಗೆ ಮನೆ ಸಿಂಕ್ ಮುಂದೆ ನಿಂತುಕೊಂಡು ಕೈ ತೊಳೆಯುತ್ತಿರುವಾಗ ಶಿಲ್ಪಾ ಶೆಟ್ಟಿ ಬಂದು ಗಂಡನನ್ನು ಅಣುಕಿಸುತ್ತಾಳೆ. ಡಿಶ್ ವಾಶ್ ಬಾರ್ ನಿಂದ ಬರೀ ಕೈ ತೊಳೆದರೆ ಸಾಲದು ಪಾತ್ರೆಯನ್ನು ತೊಳಿಬೇಕು ಅನ್ನೋ ಡೈಲಾಗ್ ಗೆ ಶಿಲ್ಪಾ ಲಿಂಪ್ ಸಿಂಕ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕುಂದ್ರಾ ಮುಖ ಸಪ್ಪೆ ಮಾಡಿಕೊಂಡು ಹೆಂಡತಿ ಹೇಳಿದ ಮಾತಿಗೋಸ್ಕರ ಪಾತ್ರೆ ತೊಳೆಯಲು ಮುಂದಾಗ್ತಾರೆ.

ಹೆಂಡತಿ ಕೈಲಿ ಸಿಕ್ಕಿಬಿದ್ದ ರಾಜ್​ಕುಂದ್ರಾ!

ಕೈ ತೊಳೆಯಲು ಬಂದು ಹೆಂಡತಿ ಕೈಗೆ ಸಿಕ್ಕಿಬಿದ್ದೆ ಎಂಬ ಭಾವನೆಯನ್ನು ರಾಜ್ ಮುಖದಲ್ಲಿ ನೀವು ವಿಡಿಯೋದಲ್ಲಿ ನೋಡಬಹುದು. ಅಳು ಮುಖ ಹಾಕಿಕೊಂಡೆ ಮಲ್ಟಿಮಿಲಿಯನರ್ ರಾಜ್ ಕುಂದ್ರಾ ಪಾತ್ರೆ ತೊಳೆಯಲು ಮುಂದಾಗ್ತಾರೆ. ಈ ದೃಶ್ಯಕ್ಕೆ ಇಬ್ಬರು ಅಭಿನಯಿಸಿದ್ದು, ರಾಜ್ ಕುಂದ್ರಾ ಸ್ಥಿತಿ ಹೀಗಾಯ್ತಲ್ಲಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಇದನ್ನೂ ಓದಿ: ನಟ ಸೋನು ವಿರುದ್ಧ ಎಫ್​ಐಆರ್ ದಾಖಲು, ಕಾರು ಸೀಝ್

ರಾಜ್ ಮತ್ತು ಶಿಲ್ಪಾ ಮಾಡಿರುವ ಈ ವೀಡಿಯೊ ಎಕ್ಸೋ ಡಿಶ್‌ವಾಶ್ ಬಾರ್‌ಗಾಗಿ ಪಾವತಿಸಿದ ಜಾಹೀರಾತಾಗಿದೆ. ಸೋಪನಲ್ಲಿ ಪದೇ ಪದೇ ಕೈತೊಳೆದು ಕೊಳ್ಳುವ ಬದಲು ಅದರ ಜೊತೆಗೆ ಎರಡು ಪಾತ್ರೆಗಳನ್ನು ತೊಳೆದುಬಿಡಿ ಎಂದು ಶಿಲ್ಪಾ ಎಕ್ಸೋ ಡಿಶ್‌ವಾಶ್ ಬಾರ್‌ ಅನ್ನು ಕುಂದ್ರಾ ಕೈಗೆ ಇಡುತ್ತಾಳೆ.

ಇದನ್ನೂ ಓದಿ: Big Boss ನಿರೂಪಣೆಗೆ ಈ ಸ್ಟಾರ್ ನಟ ಗುಡ್‌ ಬೈ, ಹಾಗಿದ್ರೆ ಇನ್ಯಾರು ಬರ್ತಾರೆ!

ಈ ವೀಡಿಯೊ ಖಂಡಿತವಾಗಿಯೂ ತಮಾಷೆಯಾಗಿದೆ ಮತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಉದ್ಯಮಿ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಅವರ ಈ ವೀಡಿಯೊವನ್ನು ಮಾನವ್ ಮಂಗಳಾನಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Published by:Vasudeva M
First published: