Shilpa Shetty: ವಿವಾಹ ವಾರ್ಷಿಕೋತ್ಸವ ದಿನದಂದು ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ನೀಡಿದ ಶಿಲ್ಪಾ

Shilpa marriage anniversary :12 ವರ್ಷಗಳ ಹಿಂದೆ ಈ ದಿನ ಪರಸ್ಪರ ಒಂದು ಪ್ರಾಮಿಸ್​ ಮಾಡಿಕೊಂಡಿದ್ದೆವು. ಒಳ್ಳೆಯ ಮತ್ತು ಕಷ್ಟದ ಕಾಲವನ್ನು ಜೊತೆಯಾಗಿ ಹಂಚಿಕೊಳ್ಳುತ್ತೇವೆ, ಪ್ರೀತಿಯಲ್ಲಿ ನಂಬಿಕೆ ಇಡುತ್ತೇವೆ, ಪ್ರತಿ ದಿನ ಜೊತೆಯಾಗಿ ಇರುತ್ತೇವೆ ಎಂದು ಪ್ರಾಮಿಸ್​ ಮಾಡಿದ್ದೆವು. ನಮ್ಮ ದಾಂಪತ್ಯಕ್ಕೆ 12 ವರ್ಷವಾಗಿ ಮುಂದುವರಿಯುತ್ತಿದೆ. ಎಲ್ಲ ಸಮಯದಲ್ಲೂ ನಮ್ಮ ಜೊತೆ ಇದ್ದ ಹಿತೈಷಿಗಳಿಗೆ ಧನ್ಯವಾದಗಳು’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

ಶಿಲ್ಪಾಶೆಟ್ಟಿ

ಶಿಲ್ಪಾಶೆಟ್ಟಿ

 • Share this:
  ಬಾಲಿವುಡ್‌(Bollywood) ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ(Raj kundra) ಪ್ರಸ್ತುತ ಪೋರ್ನ್ ವಿಡಿಯೋಗಳನ್ನು(Porn Videos) ತಯಾರಿಸಿ ಪ್ರಸಾರ ಮಾಡಿದ ಅರೋಪದಡಿಯಲ್ಲಿ ಕಂಬಿ ಎಣಿಸಿ ವಾಪಾಸ್ ಬಂದಿದ್ದಾರೆ.. ಕಳೆದ ಜುಲೈ 19 ರಂದು ಕುಂದ್ರಾ ಅವರನ್ನು ಮುಂಬೈ ಪೋಲಿಸರು(Mumbai police) ಬಂಧಿಸಿದ್ರು. ಇದಾದ ಬಳಿಕ ರಾಜ್ ಕುಂದ್ರಾ ಜೈಲಿನಿಂದ(Jail) ಬಂದ ಬಳಿಕ ಶಿಲ್ಪಾ ಶೆಟ್ಟಿ ತನ್ನ ಮಕ್ಕಳೊಂದಿಗೆ ತನ್ನ ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ವಾಸಿಸಲು ಯೋಜಿಸುತ್ತಿದ್ದಾರೆ ಎಂಬ ಉಹಾಪೋಹಗಳು ಕೇಳಿ ಬಂದಿದ್ದವು.. ಆದ್ರೆ ಇದಕ್ಕೆಲ್ಲಾ ಬ್ರೇಕ್ ಹಾಕಿದ ಶಿಲ್ಪಾ ಶೆಟ್ಟಿ ತನ್ನ ಗಂಡನ ಪರ ನಿಂತಿದ್ರು.. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ(Social Media) ಗಂಡನ ಪರ ಮಾತುಗಳನ್ನಾಡಿ ಬೆಂಬಲಕ್ಕೆ ನಿಂತಿದ್ರು. ಹಿಮಾಚಲ ಪ್ರದೇಶದ(Himachala) ಧರ್ಮಶಾಲಾದ(Dharmashala) ದೇವಸ್ಥಾನಕ್ಕೆ(Temple) ತೆರಳಿ ಸಾರ್ವಜನಿಕವಾಗಿಯು ಕಾಣಿಸಿಕೊಂಡಿದ್ರು.ಅದೇ ಈ ಫೋಟೋಗಳನ್ನು ಶಿಲ್ಪಾಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂಬ ಸಂದೇಶವನ್ನು ವಿರೋಧಿಗಳಿಗೆ ನೀಡಿದ್ರು ಈ ಇಲ್ಲ ಗೊಂದಲಗಳ ನಡುವೆ ಶಿಲ್ಪಾ ಶೆಟ್ಟಿ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವ(marriage anniversary)ಆಚರಿಸಿಕೊಳ್ಳುತ್ತಿದ್ದಾರೆ.

  12ನೇ ವಿವಾಹ ವಾರ್ಷಿಕೋತ್ಸವದಲ್ಲಿ ನಟಿ ಶಿಲ್ಪಾ ಶೆಟ್ಟಿ ದಂಪತಿ

  ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರ 12ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.ಈ ಹಿನ್ನೆಲೆ ಶಿಲ್ಪಾ ಇನ್‍ಸ್ಟಾಗ್ರಾಮ್(Instagram) ನಲ್ಲಿ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡು ಪತಿಗೆ ಭಾವನಾತ್ಮಕಾವಾಗಿ ಸಂದೇಶ ಬರೆದುಕೊಂಡಿದ್ದಾರೆ. ಪ್ರತಿ ದಿನ ಜೊತೆಯಾಗಿ ಇರುತ್ತೇವೆ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ

  12 ವರ್ಷಗಳ ಹಿಂದೆ ಈ ದಿನ ಪರಸ್ಪರ ಒಂದು ಪ್ರಾಮಿಸ್​ ಮಾಡಿಕೊಂಡಿದ್ದೆವು. ಒಳ್ಳೆಯ ಮತ್ತು ಕಷ್ಟದ ಕಾಲವನ್ನು ಜೊತೆಯಾಗಿ ಹಂಚಿಕೊಳ್ಳುತ್ತೇವೆ, ಪ್ರೀತಿಯಲ್ಲಿ ನಂಬಿಕೆ ಇಡುತ್ತೇವೆ, ಪ್ರತಿ ದಿನ ಜೊತೆಯಾಗಿ ಇರುತ್ತೇವೆ ಎಂದು ಪ್ರಾಮಿಸ್​ ಮಾಡಿದ್ದೆವು. ನಮ್ಮ ದಾಂಪತ್ಯಕ್ಕೆ 12 ವರ್ಷವಾಗಿ ಮುಂದುವರಿಯುತ್ತಿದೆ. ಎಲ್ಲ ಸಮಯದಲ್ಲೂ ನಮ್ಮ ಜೊತೆ ಇದ್ದ ಹಿತೈಷಿಗಳಿಗೆ ಧನ್ಯವಾದಗಳು’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.
  1993 ರಲ್ಲಿ ಬಾಜಿಗರ್ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಶಿಲ್ಪಾ ಶೆಟ್ಟಿ ಶಿಲ್ಪಾ ಮೇನ್ ಕಿಲಾಡಿ ತು ಅನಾರಿ, ಆವೋ ಪ್ಯಾರ್ ಕರೇನ್, ಹಿಮ್ಮತ್, ಇನ್ಸಾಫ್, ಧಡ್ಕನ್, ಜಂಗ್, ಇಂಡಿಯನ್, ರಿಶ್ಟೇ, ವೆಪನ್, ಫಾರೆಬ್, ಲೈಫ್ ಇನ್ ಮೆಟ್ರೋ, ಅಪ್ನೆ, ದೋಸ್ತಾನ, ಡಸ್, ಗರ್ವ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ :28 ವರ್ಷಗಳ ಹಿಂದೆ Shilpa Shettyಗೆ ನಟನೆ ಹೇಳಿ ಕೊಟ್ಟಿದ್ದ Shah Rukh Khan

  ಇನ್ನು 2009ರಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ವಿಹಾನ್​ ಮತ್ತು ಸಮೀಶಾ ಎಂಬಿಬ್ಬರು ಮಕ್ಕಳಿದ್ದಾರೆ. ಸದ್ಯ 12ನೇ ವರ್ಷದ ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಮದುವೆ ಫೋಟೋ ಪೋಸ್ಟ್​ ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

  ಇದನ್ನೂ ಓದಿ :ಪತಿಗಾಗಿ ವ್ರತ ಮಾಡಿದ ಶಿಲ್ಪಾ ಶೆಟ್ಟಿ: ಮಡದಿಯ ಜೊತೆ ಕಾಣಿಸಿಕೊಳ್ಳದ ರಾಜ್​ ಕುಂದ್ರಾ..!

  ಇನ್ನು ಮತ್ತೊಂದು ಕಡೆ ವಿವಾಹ ವಾರ್ಷಿಕೋತ್ಸವ ಅಚರಿಸಿಕೊಳ್ಳುತ್ತಿರುವಾಗಲೇ ​ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ 1.51 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಮುಂಬೈ ಮೂಲದ ಉದ್ಯಮಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶನಿವಾರ ನಿತಿನ್ ಬಾರೈ ಎಂಬ ಉದ್ಯಮಿಯು ಶಿಲ್ಪಾ-ಕುಂದ್ರಾ ದಂಪತಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ
  Published by:ranjumbkgowda1 ranjumbkgowda1
  First published: