Raj Kundra Porn Case: ರಾಜ್​ ಕುಂದ್ರಾ ಜೊತೆ ಮನೆಗೆ ಬಂದ ಪೊಲೀಸ್​; ಬಿಕ್ಕಿ-ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ

ನನಗೂ ಹಾಟ್​​ಶಾಟ್ಸ್​ ಕಂಪನಿಗೂ ಯಾವುದೇ ಸಂಬಂಧ ಇಲ್ಲ. ವಿವಾದಾತ್ಮಕ ಹಾಟ್​​ ಶಾಟ್ಸ್​ ಅಪ್ಲಿಕೇಶನ್ ಬಗ್ಗೆ ನನಗೆ ಯಾವುದೇ ನಿಖರವಾದ ವಿಷಯ ತಿಳಿದಿಲ್ಲ ಎಂದು ಪೊಲೀಸರ ಮುಂದೆ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ರಾಜ್​ ಕುಂದ್ರಾ-ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ-ಶಿಲ್ಪಾ ಶೆಟ್ಟಿ

 • Share this:
  ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆ ಆರೋಪದಡಿ ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಗಂಡ ಉದ್ಯಮಿ ರಾಜ್ ​ಕುಂದ್ರಾ ಅವರನ್ನು ಮುಂಬೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಲು ಶುಕ್ರವಾರ ದಂಪತಿಯ ಸ್ವಂತ ಮನೆ ಮೇಲೆ ಕ್ರೈಂ ಬ್ರಾಂಚ್​ ಟೀಮ್ ದಾಳಿ ಕೂಡ ನಡೆಸಿದೆ. ಪೊಲೀಸ್ ಮೂಲಗಳ ಪ್ರಕಾರ, ಶಿಲ್ಪಾಶೆಟ್ಟಿ ಅವರ ಹೇಳಿಕೆಯೂ ಸಹ ದಾಖಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಉದ್ಯಮಿ ರಾಜ್​ಕುಂದ್ರಾ ಅವರನ್ನೂ ಮನೆಗೆ ಕರೆದೊಯ್ಯಲಾಗಿತ್ತು. ಅಪರಾಧ ದಳದ ಅಧಿಕಾರಿಗಳು ರಾಜ್​ ಕುಂದ್ರಾ ಮನೆ ಮೇಲೆ ದಾಳಿ ನಡೆಸಿದಾಗ, ಶಿಲ್ಪಾ ಶೆಟ್ಟಿ ತನ್ನ ಗಂಡನ ಮೇಲೆ ಕೂಗಾಡಿದ್ದಾಳೆ. ಜೊತೆಗೆ ಅಧಿಕಾರಿಗಳು ಶಿಲ್ಪಾ ಶೆಟ್ಟಿ ಹೇಳಿಕೆ ಪಡೆಯುವಾಗ ಆಕೆ ಅಕ್ಷರಶಃ ಕುಸಿದು ಬಿದ್ದು, ಬಿಕ್ಕಿ-ಬಿಕ್ಕಿ ಅತ್ತಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಸುಮಾರು 2 ಗಂಟೆಗಳ ಕಾಲ ಶಿಲ್ಪಾ ಶೆಟ್ಟಿ ವಿಚಾರಣೆ ನಡೆಸಿದ್ದಾರೆ.

  ನನಗೂ ಹಾಟ್​​ಶಾಟ್ಸ್​ ಕಂಪನಿಗೂ ಯಾವುದೇ ಸಂಬಂಧ ಇಲ್ಲ. ವಿವಾದಾತ್ಮಕ ಹಾಟ್​​ ಶಾಟ್ಸ್​ ಅಪ್ಲಿಕೇಶನ್ ಬಗ್ಗೆ ನನಗೆ ಯಾವುದೇ ನಿಖರವಾದ ವಿಷಯ ತಿಳಿದಿಲ್ಲ ಎಂದು ಪೊಲೀಸರ ಮುಂದೆ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಜೊತೆಗೆ ಕಾಮೋದ್ರೇಕ ಚಿತ್ರಗಳಿಗೂ ನೀಲಿ ಚಿತ್ರಗಳಿಗೂ ವ್ಯತ್ಯಾಸವಿದೆ. ನನ್ನ ಗಂಡ ರಾಜ್​ ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣ ಮಾಡುತ್ತಿರಲಿಲ್ಲ, ಇದರಲ್ಲಿ ಅವರು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

  ಇದನ್ನೂ ಓದಿ:Yashika Aannand: ನಟಿ ಯಶಿಕಾ ಆನಂದ್​ಗೆ ಭೀಕರ ಅಪಘಾತ; ಸಾವು-ಬದುಕಿನ ನಡುವೆ ಹೋರಾಟ

  ರಾಜ್​ ಕುಂದ್ರಾ ಅವರನ್ನು ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮುಂಬೈ ಪೊಲೀಸರು ರಾಜ್​ ಕುಂದ್ರಾ ಮತ್ತು ಥೋರ್ಪ್​ ಅವರನ್ನು ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಹಾಜರು ಪಡಿಸುವ ಮೊದಲು 7 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

  ಇನ್ನು ರಾಜ್​​ ಕುಂದ್ರಾ ಸಂಬಂಧಿ ಪ್ರದೀಪ್​ ಭಕ್ಷಿ ಆ್ಯಪ್​​ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್​​ಕುಂದ್ರಾ ಪಾತ್ರವಿಲ್ಲ. ಲಂಡನ್​ ಮೂಲದ ವ್ಯಕ್ತಿ ದ್ವೇಷಪೂರಿತವಾಗಿ ನನ್ನ ಪತಿ ವಿರುದ್ಧ ಆರೋಪ ಮಾಡಿದ್ದಾರೆ. ಅನಗತ್ಯವಾಗಿ ನನ್ನ ಪತಿಯನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಶಿಲ್ಪಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಇಡೀ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

  ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಶಿಲ್ಪಾ ಇದೊಂದು ಕೆಟ್ಟ ಘಳಿಗೆ ಆದಷ್ಟು ಬೇಗ ಮುಗಿಯಲಿದೆ ಎಂದಿದ್ದಾರೆ. ಶಿಲ್ಪಾ ಸೋದರಿ ಶಮಿತಾ ಕೂಡ ಭಾವ ರಾಜ್​ಕುಂದ್ರಾ ಇನೋಸೆಂಟ್​​​ ಎಂದು ಹೇಳಿದ್ದಾರೆ. ಆದರೆ ಬಾಲಿವುಡ್​ನ ಹಲವು ನಟಿಯರು ರಾಜ್​​ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ರಾಜ್​ಕುಂದ್ರಾ ಬಂಧನವಾದಾಗಿನಿಂದ ಹಲವು ವಿಷಯಗಳು ಬಯಲಾಗುತ್ತಲೇ ಇವೆ.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಇನ್ನು ರಾಜ್​ಕುಂದ್ರಾ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್​​ ಮೊರೆ ಹೋಗಿದ್ದಾರೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮ-2 ಸಿನಿಮಾ OTTಯಲ್ಲಿ ರಿಲೀಸ್​ ಆಗಿದೆ. ಈ ಬಗ್ಗೆ ಮಾತನಾಡಿರುವ ಶಿಲ್ಪಾ ನನ್ನಿಂದ ಸಿನಿಮಾ ಮೇಲೆ ಯಾವುದೇ ಪರಿಣಾಮ ಬೀರಬಾರದು. ದಯವಿಟ್ಟು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
  Published by:Latha CG
  First published: