Shilpa Shetty-Raj Kundra: ಮುಖ ಮುಚ್ಚಿಕೊಂಡು ಹೋಗಿ ಗಣಪತಿ ತಂದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಕಾಣಿಸಿಕೊಂಡರೂ, ಅವರು ಪೂರ್ಣ ಮುಖ ಮುಚ್ಚಿಕೊಂಡೆ ಹೊರಗೆ ಬರ್ತಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

  • Share this:
ಜೈಲಿನಿಂದ ಆಚೆ ಬಂದ ಮೇಲೆ ಈವರೆಗೂ ಅವರು ತಮ್ಮ ಪೂರ್ಣ ಮುಖ ತೋರಿಸಿಲ್ಲ. ತೋರಿಸುವುದಕ್ಕೂ ಅವರು ಇಷ್ಟ ಪಡುತ್ತಿಲ್ಲ ಎಂದು ಶಿಲ್ಪಾ ಶೆಟ್ಟಿಯೇ ಹೇಳಿದ್ದಾರೆ


ಪ್ರತಿ ವರ್ಷದಂತೆ ಈ ವರ್ಷವೂ ಶಿಲ್ಪಾ ಶೆಟ್ಟಿ ಮನೆಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ನಿನ್ನೆಯೇ ರಾಜ್ ಕುಂದ್ರಾ ಗಣಪತಿ ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು.


ಈ ಸಮಯದಲ್ಲೂ ಅವರು ತಮ್ಮ ಮುಖದ ಮಾಸ್ಕ್ ಹಾಕುವುದನ್ನು ಮರೆತಿಲ್ಲ. ಹಾಗೆಯೇ ಹೋಗಿ ಗಣಪತಿ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ


ಏರ್ ಪೋರ್ಟ್ ಸೇರಿದಂತೆ ಯಾವುದೇ ಸ್ಥಳದಲ್ಲಿ ರಾಜ್ ಕುಂದ್ರಾ ಕಂಡರೂ, ಮುಖಕ್ಕೆ ಪೂರ್ತಿ ಮಾಸ್ಕ್ ಹಾಕಿಕೊಂಡೆ ಇರುತ್ತಾರೆ.


Today Bollywood actor Shilpa Shetty 47th Birthday
ಕ್ಯಾಮೆರಾಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಅವರು ಬಂಧನವಾಗಿದ್ದರು.


ಹಲವು ದಿನಗಳ ಕಾಲ ಜೈಲಿನಲ್ಲೂ ಇದ್ದರು. ಜೈಲಿನಿಂದ ಆಚೆ ಬಂದ ಮೇಲೆ ಅವರು ಈ ರೀತಿಯಾಗಿ ಬದಲಾಗಿದ್ದಾರೆ.


ಮನೆಯಲ್ಲಿ ಇದ್ದಾಗಲೂ ಅವರು ಪೂರ್ತಿ ಮುಖ ಮುಚ್ಚುವಂತಹ ಮಾಸ್ಕ್ ಧರಿಸುತ್ತಾರೆ. ಮನೆಗೆ ಬಂದ ಗಣಪನನ್ನು ಸ್ವಾಗತಿಸುವ ವೇಳೆಯೂ ಅವರು ಮುಖ ಮುಚ್ಚಿಕೊಂಡಿದ್ದರು


ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಶೂಟಿಂಗ್ ಸಂದರ್ಭದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಹಾಗಾಗಿ ಅವರಿಗೆ ನಡೆಯಲು ಕಷ್ಟ ಆಗುತ್ತಿದೆ. ವಾಕರ್ ಸಹಾಯದಿಂದ ಕುಂಟುತ್ತಾ ಬಂದು ಗಣೇಶನ ವಿಗ್ರಹವನ್ನು ಸ್ವೀಕರಿಸಿದ್ದಾರೆ.
Published by:Pavana HS
First published: