Sherlyn Chopra ವಿರುದ್ಧ 50 ಕೋಟಿ ಮಾನಹಾನಿ ಮೊಕದ್ದಮೆ ಹೂಡಿದ Shilpa Shetty - Raj Kundra

ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ವಕೀಲರು ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ( defamation suit) ಹೂಡಿದ್ದಾರೆ.

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮತ್ತು ಶೆರ್ಲಿನ್ ಚೋಪ್ರಾ

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮತ್ತು ಶೆರ್ಲಿನ್ ಚೋಪ್ರಾ

  • Share this:
ಈಗಾಗಲೇ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ತೊಡಗಿಕೊಂಡಿರುವ ಆರೋಪದಡಿ ಉದ್ಯಮಿ ರಾಜ್ ಕುಂದ್ರಾ  ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ವಿಷಯ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈಗ ಇದೇ ಸೆಲೆಬ್ರಿಟಿ ದಂಪತಿ ರಾಜ್ ಕುಂದ್ರಾ (Raj Kundra) ಮತ್ತು ಶಿಲ್ಪಾ ಶೆಟ್ಟಿ (Shilpa Shetty) ದಂಪತಿ ಮತ್ತೊಮ್ಮೆ ಇದೇ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಅಂತೀರಾ? ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ವಕೀಲರು ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ( defamation suit) ಹೂಡಿದ್ದಾರೆ ಎಂದು ವರದಿಯಾಗಿದೆ. ಶೆರ್ಲಿನ್ ಚೋಪ್ರಾ  (Sherlyn Chopra) ಮುಂಬೈನ ಜುಹೂ ಪೊಲೀಸ್ ಠಾಣೆಯಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ರಾಜ್ ಮತ್ತು ಶಿಲ್ಪಾ ವಕೀಲರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶೆರ್ಲಿನ್ ಚೋಪ್ರಾ ತಮ್ಮ ದೂರಿನಲ್ಲಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದರು. ದಂಪತಿ ವಕೀಲರ ಎಚ್ಚರಿಕೆಯ ಹೊರತಾಗಿಯೂ ನಟಿ ಶೆರ್ಲಿನ್ ಪತ್ರಿಕಾಗೋಷ್ಠಿ ಕರೆದಿದ್ದರು.

Shilpa Shetty,Shilpa Shetty Kundra, Shilpa Shetty Talks About Helping Others in Need, Shilpa Shetty,  Raj kundra, Instagram, ಶಿಲ್ಪಾ ಶೆಟ್ಟಿ,  ರಾಜ್ ಕುಂದ್ರಾ, ಇನ್‍ಸ್ಟಾಗ್ರಾಂ, Raj Kundra, Raj Kundra Porn Case,Raj Kundra Arrest,Raj Kundra Interim Relief,Shilpa Shetty Super Dancer,Super Dancer, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಬಂಧನ, ಬಾಲಿವುಡ್​, ಅಶ್ಲೀಲ ಸಿನಿಮಾಗಳ ಪ್ರಕರಣ, ಸೂಪರ್​ ಡ್ಯಾನ್ಸರ್​ ಸೆಟ್, ಶಮಿತಾ ಶೆಟ್ಟಿ​, Shilpa Shetty shares a quote about helping other in need ae
ನಟಿ ಶಿಲ್ಪಾ ಶೆಟ್ಟಿ


ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಕೀಲರು ಕಳುಹಿಸಿದ ನೋಟಿಸ್ ಪ್ರಕಾರ, ದಂಪತಿ ಮೇಲೆ ಹಾಕಲಾದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ, ಅದು ಸುಳ್ಳು, ನಕಲಿ, ಕ್ಷುಲ್ಲಕ, ಆಧಾರ ರಹಿತ ಎಂದು ಹೇಳಿದ್ದಾರೆ. ಈ ನೋಟಿಸ್‌ನಲ್ಲಿ ರಾಜ್ ಮತ್ತು ಶಿಲ್ಪಾ ವಕೀಲರು ಈ ಆರೋಪಗಳನ್ನು ಶೆರ್ಲಿನ್ 'ಅಪಮಾನ ಮಾಡುವ ಮತ್ತು ಹಣ ಸುಲಿಗೆ ಮಾಡುವ ದುರುದ್ದೇಶದಿಂದ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಇದಲ್ಲದೆ, ಜೆಎಲ್ ಸ್ಟ್ರೀಮ್ ಆ್ಯಪ್‌ನ ವ್ಯವಹಾರಗಳಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂಓದಿ: ರಾಜ್​ ಕುಂದ್ರಾ ಬಂಧನ ಪ್ರಕರಣ: ಪೊಲೀಸರಿಗೆ ಮೊದಲು ಹೇಳಿಕೆ ಕೊಟ್ಟಿದ್ದು ನಾನೇ ಎಂದ ಶರ್ಲಿನ್ ಚೋಪ್ರಾ..!

"ಅನಗತ್ಯ ವಿವಾದವನ್ನು ಸೃಷ್ಟಿಸಲು ಮತ್ತು ಮಾಧ್ಯಮದ ಗಮನವನ್ನು ಸೆಳೆಯಲು ಶಿಲ್ಪಾ ಶೆಟ್ಟಿ ಹೆಸರನ್ನು ಎಳೆಯಲು ಶೆರ್ಲಿನ್ ಮಾಡಿದ ಪ್ರಯತ್ನವಲ್ಲದೆ ಬೇರೇನೂ ಅಲ್ಲ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ನೋಟಿಸ್‌ನಲ್ಲಿ "ಈ ಆರೋಪಗಳು ಆಲೋಚನೆ ಮಾಡಿ ದುರುದ್ದೇಶದಿಂದ ಮಾಡಲಾಗಿದ್ದು, ಬೇರೇನೂ ಅಲ್ಲ” ಎಂದು ಹೇಳಿದ್ದಾರೆ. ಶೆರ್ಲಿನ್ ಚೋಪ್ರಾ 1860ರ ಭಾರತೀಯ ದಂಡ ಸಂಹಿತೆಯ 499, 550, 389 ಮತ್ತು 195(ಎ) ಅಡಿ ಅಪರಾಧ ಮಾಡಿದ್ದಾರೆ. ನಮಗೆ ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ನಾವು ಶೆರ್ಲಿನ್ ಚೋಪ್ರಾ ವಿರುದ್ಧ ನ್ಯಾಯಕ್ಕಾಗಿ ಸಕ್ಷಮ ನ್ಯಾಯಾಲಯದ ಮುಂದೆ ವಿಚಾರಣೆಯನ್ನು ಪ್ರಾರಂಭಿಸುತ್ತೇವೆ. ನಾವು ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ಮಾನಹಾನಿ ಮೊಕದ್ದಮೆ ಹೂಡಿದ್ದೇವೆ" ಎಂದು ಬರೆಯಲಾಗಿದೆ.

ಇದನ್ನೂಓದಿ: Sherlyn Chopra- ಶಿಲ್ಪಾ, ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ ನಟಿ ಶರ್ಲಿನ್ ಚೋಪ್ರಾ

ಅಕ್ಟೋಬರ್ 14ರಂದು ಶೆರ್ಲಿನ್ ಚೋಪ್ರಾ ಅವರು  ಶಿಲ್ಪಾ ಮತ್ತು ರಾಜ್ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರು. ದೂರು ನೀಡುವ ಮೊದಲು, ಶೆರ್ಲಿನ್ ಪೊಲೀಸ್‌ ಠಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನು ಸಹ ಕರೆಯಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಇದರ ನಂತರ, ಶಿಲ್ಪಾ ಮತ್ತು ರಾಜ್ ವಕೀಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು ಮತ್ತು ಶೆರ್ಲಿನ್‌ಗೆ ಮಾನಹಾನಿಯ ಎಚ್ಚರಿಕೆ ನೀಡಿದ್ದರು. ಆದರೂ, ನಟಿ ಎಫ್ಐಆರ್ ದಾಖಲಿಸಿದರು ಮತ್ತು ಅದರ ನಂತರ ಪತ್ರಿಕಾಗೋಷ್ಠಿ ನಡೆಸಿದ್ದರು.
Published by:Anitha E
First published: