Shikhar Dhawan - Preity Zinta: ಶಿಖರ್ ಧವನ್ ಜೊತೆ ಪ್ರೀತಿ ಜಿಂಟಾ ಜಿಮ್ ನಲ್ಲಿ ವರ್ಕೌಟ್, ವಿಡಿಯೋ ವೈರಲ್

ಶಿಖರ್ ಧವನ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿರುವ ಮೋಜಿನ ವೀಡಿಯೋದಲ್ಲಿ, ಟೈಗರ್ ಶ್ರಾಫ್ ಚಿತ್ರದ ಹೀರೋಪಂತಿಯ ಸಂಭಾಷಣೆಗಳೊಂದಿಗೆ ಇಬ್ಬರೂ ಜಿಮ್ ನಲ್ಲಿ ಕಠಿಣವಾದ ತಾಲೀಮುಗಳನ್ನು ನಡೆಸುತ್ತಿರುವುದನ್ನು ನಾವು ನೋಡಬಹುದು.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ

  • Share this:
ಗುಳಿ ಕೆನ್ನೆಯ ಬೆಡಗಿ (Dimple Queen) ಮತ್ತು ಬಾಲಿವುಡ್ ನಟಿ (Bollywood Actress) ಪ್ರೀತಿ ಜಿಂಟಾ (Preity Zinta) ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಇವರ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರಿಗೆ ಈಕೆಯ ಗುಳಿ ಕೆನ್ನೆ ಮತ್ತು ಆಕೆಯ ಮುದ್ದಾದ ನಗು (Cute Smile) ಕಣ್ಮುಂದೆ ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ನಟಿ ಸುಮಾರು ಹದಿನೈದು ವರ್ಷಗಳ ಹಿಂದೆ ಎಂದರೆ 2008 ರಲ್ಲಿ ಕ್ರಿಕೆಟ್ ತಂಡವೊಂದರಲ್ಲಿ (Cricket Team) ಹಣವನ್ನು ಹೂಡಿಕೆ ಮಾಡುವ ಮೂಲಕ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (Indian Premier League) ತಮ್ಮನ್ನು ತೊಡಗಿಸಿಕೊಂಡರು ಮತ್ತು ಆಗಿನಿಂದಲೇ ಅನೇಕ ಕ್ರಿಕೆಟ್ ಆಟಗಾರಾರನ್ನು (Cricket player) ಇವರು ಚೆನ್ನಾಗಿಯೇ ಬಲ್ಲರು ಮತ್ತು ಅವರೊಂದಿಗೆ ಉತ್ತಮ ಒಡನಾಟವನ್ನು ಸಹ ಹೊಂದಿದ್ದಾರೆ ಎಂದು ಹೇಳಬಹುದು.

ಪ್ರೀತಿ ಜಿಂಟಾ ಅವರು ಶಿಖರ್ ಧವನ್ ಅವರೊಂದಿಗೆ ಜಿಮ್ ನಲ್ಲಿ ವರ್ಕೌಟ್
ಅಂದಿನಿಂದಲೇ ಪ್ರೀತಿ ಜಿಂಟಾ ತಮ್ಮ ತಂಡವಾದ ಪಂಜಾಬ್ ಕಿಂಗ್ಸ್ ಅನ್ನು ಹಲವಾರು ಪಂದ್ಯಗಳಲ್ಲಿ ಬೆಂಬಲಿಸುತ್ತ ಬಂದಿದ್ದಾರೆ. ಈ ಋತುವಿನಲ್ಲಿಯೂ ಸಹ, ಇವರು ಅನೇಕ ಪಂದ್ಯಗಳಿಗೆ ಹಾಜರಾಗುವ ಮೂಲಕ ತನ್ನ ತಂಡವನ್ನು ಹುರಿದುಂಬಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಅಷ್ಟೆ ಅಲ್ಲ, ಮಂಗಳವಾರದಂದು ಪ್ರೀತಿ ಜಿಂಟಾ ಮತ್ತು ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿರುವ ಕ್ರಿಕೆಟಿಗ ಶಿಖರ್ ಧವನ್ ಅವರೊಂದಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವುದು ಸಹ ಕಂಡು ಬಂದಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ಮೋಜಿನ ವೀಡಿಯೋ ಹಂಚಿಕೊಂಡ ಶಿಖರ್ ಧವನ್
ಶಿಖರ್ ಧವನ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿರುವ ಮೋಜಿನ ವೀಡಿಯೋದಲ್ಲಿ, ಟೈಗರ್ ಶ್ರಾಫ್ ಚಿತ್ರದ ಹೀರೋಪಂತಿಯ ಸಂಭಾಷಣೆಗಳೊಂದಿಗೆ ಇಬ್ಬರೂ ಜಿಮ್ ನಲ್ಲಿ ಕಠಿಣವಾದ ತಾಲೀಮುಗಳನ್ನು ನಡೆಸುತ್ತಿರುವುದನ್ನು ನಾವು ನೋಡಬಹುದು.




ಇದನ್ನೂ ಓದಿ: Famous actor: ನಟನೆ ಬಿಟ್ಟು ಕಸ ಗುಡಿಸುವ ಕೆಲಸ ಮಾಡಲು ಮುಂದಾದ ಈ ಖ್ಯಾತ ನಟ!

ಕ್ರಿಕೆಟಿಗ ಶಿಖರ್ ಧವನ್ ಮತ್ತು ಪ್ರೀತಿ ಜಿಂಟಾ ಹಿನ್ನೆಲೆ ಆಡಿಯೊದಲ್ಲಿ "ಚೋಟಿ ಬಚ್ಚಿ ಹೋ ಕ್ಯಾ" ಎಂಬ ಸಾಲನ್ನು ಅದರಲ್ಲಿ ಸೇರಿಸುವುದನ್ನು ಮರೆಯಲಿಲ್ಲ. ಈ ವೀಡಿಯೋವನ್ನು ಹಂಚಿ ಕೊಂಡಿರುವ ಶಿಖರ್ ಧವನ್, "ಪ್ರೀತಿ ಜಿಂಟಾ, ಒಂದು ಉತ್ತಮ ಜಿಮ್ ಸೆಷನ್ ಅನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.

ಪ್ರೀತಿ ಜಿಂಟಾ ಅವರ ತಾಲಿಮೀನ ಮತ್ತೊಂದು ವೀಡಿಯೋ ವೈರಲ್
ಪ್ರೀತಿ ಜಿಂಟಾ ಇದೇ ಜಿಮ್ ನಲ್ಲಿ ಮಾಡಿದ ತಾಲಿಮೀನ ಮತ್ತೊಂದು ವೀಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದಾರೆ. ಅದರಲ್ಲಿ ಈ ಬಾರಿ ಪ್ರೀತಿ ಒಬ್ಬರೇ ಜಿಮ್ ನಲ್ಲಿ ತಾಲೀಮು ಮಾಡುತ್ತಿರುವುದನ್ನು ನಾವು ಇದರಲ್ಲಿ ನೋಡಬಹುದು. ಈ ವೀಡಿಯೋದ ಶೀರ್ಷಿಕೆಯಲ್ಲಿ "ನಾನು ನನ್ನ ಮೇಲೆ ಕೇಂದ್ರೀಕರಿಸಬಹುದಾದ ನನ್ನ ನೆಚ್ಚಿನ ಸ್ಥಳ" ಎಂದು ಬರೆದು ಅವರು ಹೃದಯದ ಎಮೋಜಿಗಳನ್ನು ಅಲ್ಲಿ ಹಾಕಿ ಕೊಂಡಿದ್ದಾರೆ.










View this post on Instagram






A post shared by Preity G Zinta (@realpz)




ಕೆಲವು ದಿನಗಳ ಹಿಂದೆ, ಪ್ರೀತಿ ಜಿಂಟಾ ಮತ್ತೊಂದು ಕ್ಲಿಪ್ ಅನ್ನು ಹಂಚಿ ಕೊಂಡಿದ್ದರು, ಅದರಲ್ಲಿ ಅವರು ಓಡುತ್ತಿರುವುದನ್ನು ಕಾಣಬಹುದು. ಶೀರ್ಷಿಕೆಯಲ್ಲಿ, "ಆರೋಗ್ಯವಾಗಿರಲು ನಾನು ಓಡುತ್ತಿದ್ದೇನೆ" ಎಂದು ಬರೆದು ಕೊಂಡಿದ್ದರು. ಪ್ರೀತಿ ಅವರ ಸ್ನೇಹಿತ ಮತ್ತು ಹಲವಾರು ಚಿತ್ರಗಳಲ್ಲಿ ಇವರೊಂದಿಗೆ ನಟಿಸಿದ ಸಹನಟ ಹೃತಿಕ್ ರೋಷನ್ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ "ಓಹೋ ನೀವು ಎಲ್ಲಿಗೆ ಓಡುತ್ತಿದ್ದೀರಿ? ಸ್ವಲ್ಪ ಹೊತ್ತು ಕಾಯಿರಿ, ನಾನೂ ಬರುತ್ತೇನೆ" ಎಂದು ಬರೆದಿದ್ದಾರೆ.

ಹಲವಾರು ತಿಂಗಳುಗಳ ನಂತರ ಜಿಮ್ ಗೆ ಮರಳಿದ ಪ್ರೀತಿ ಜಿಂಟಾ
ಇತ್ತೀಚಿಗೆ ಹಂಚಿಕೊಂಡ ಒಂದು ಪೋಸ್ಟ್ ನಲ್ಲಿ ನಟಿ ಪ್ರೀತಿ ಜಿಂಟಾ ಅವರು ಹಲವಾರು ತಿಂಗಳ ನಂತರ ಜಿಮ್ ಗೆ ಮರಳುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. "ತಿಂಗಳುಗಳ ನಂತರ ಜಿಮ್ ನಲ್ಲಿ ನನ್ನ ಚೈತನ್ಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಈ ವ್ಯಾಯಾಮವು ಸಮತೋಲನಕ್ಕೆ, ತಿರುಳು, ಸೊಂಟವನ್ನು ಬಲಪಡಿಸಲು ಮತ್ತು ಸಾಮಾನ್ಯ ಹೊಂದಾಣಿಕೆಗೆ ಉತ್ತಮವಾಗಿದೆ" ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಮಕ್ಕಳೊಂದಿಗೆ ಟೈಗರ್ ಆಟವಾಡಿದ Yash, ಅಪ್ಪನ ಆ್ಯಕ್ಟಿಂಗ್​ಗೆ ಹೆದರಿದ ಯಥರ್ವ್

ಅಡುಗೆ ಮಾಡಲು ಸೈ ಎಂದ ಜಿಂಟಾ
ಕೆಲವು ತಿಂಗಳ ಹಿಂದೆ ತಾಯಿಯಾಗಿ ಬದಲಾದ ಪ್ರೀತಿ ಜಿಂಟಾ ಅವರು ಅಡುಗೆ ಮಾಡುವುದನ್ನು ಎಷ್ಟು ಆನಂದಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುವ ಪೋಸ್ಟ್ ಅನ್ನು ಸಹ ಹಂಚಿ ಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, "ಅಡುಗೆ ಮಾಡುವುದು ನನ್ನ ನೆಚ್ಚಿನ ವಿಷಯಗಳಲ್ಲಿ ಒಂದಾಗಿದೆ. ಏನು ಅಡುಗೆ ಮಾಡುತ್ತಿದ್ದೇನೆ ಎಂದು ನೀವು ಊಹಿಸಬಲ್ಲಿರಾ" ಎಂದು ಬರೆದು ಕೊಂಡಿದ್ದಾರೆ.










View this post on Instagram






A post shared by Preity G Zinta (@realpz)




ಪ್ರೀತಿ ಜಿಂಟಾ ಅವರು 2016ರಲ್ಲಿ ಜೀನ್ ಗುಡ್ನೊಫ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ತಮ್ಮ ಅವಳಿ ಮಕ್ಕಳನ್ನು ಸ್ವಾಗತಿಸಿದರು.
Published by:Ashwini Prabhu
First published: