ಬಾಲಿವುಡ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ನಂತರದಲ್ಲಿ ನಾಯಕ ನಟನಾಗಿ ಎಂಟ್ರಿ ಕೊಡುತ್ತಾರೆ. ಕರಣ್ ಜೋಹರ್ ಅವರ ಸ್ಟುಡೆಂಟ್ ಆಫ್ ದಿ ಇಯರ್ (Student Of the Year) ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ಬಣ್ಣ ಹಚ್ಚುತ್ತಾರೆ. ಈ ಸಿನಿಮಾದಿಂದಾಗಿಯೇ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತು. ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಸಿದ್ಧಾರ್ಥ್ ಅವರು ಸಾಕಷ್ಟು ಏರಿಳಿತಗಳನ್ನು ಕಂಡರು. ಇದೇ ಮೊದಲ ಸಲ ತಮ್ಮ ಗೆಳತಿ ಕಿಯಾರಾ ಅಡ್ವಾಣಿ (Kiara Advani) ಜತೆ ನಟ ಸಿದ್ದಾರ್ಥ್ ಮಲ್ಹೋತ್ರಾ ಶೇರ್ಷಾ (Shershaah) ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಆಗಸ್ಟ್ 12ರಂದು ಒಟಿಟಿ ಮೂಲಕ ಶೇರ್ಷಾ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಎಲ್ಲರ ಮನಗೆದ್ದಿದೆ.
ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಂ ಬಾತ್ರಾ ಅವರ ಪಾತ್ರಕ್ಕೆ ಸಿದ್ದಾರ್ಥ್ ಜೀವ ತುಂಬಿದ್ದು, ಅವರ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಕ್ರಂ ಬಾತ್ರಾ ಅವರ ಗೆಳತಿ ಡಿಂಪಲ್ ಚಿಮಾ ಪಾತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಕೂಡ ಮನೋಜ್ಞವಾಗಿ ನಟಿಸಿದ್ದಾರೆ. ಕಿಯಾರಾ ಸರಳ ಸಹಜ ನಟನೆ ಎಲ್ಲರ ಮನಗೆದ್ದಿದ್ದು, ಅವರ ಬೆಸ್ಟ್ ಸಿನಿಮಾ ಇದು ಎಂಬ ಮಾತು ಕೇಳಿ ಬಂದಿದೆ.
ಶೇರ್ಷಾ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅವರ ಜೋಡಿ ಈಗ ಎಲ್ಲರ ಮೆಚ್ಚುಗೆ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಹಿನ್ನಲೆ ಇತ್ತೀಚೆಗಷ್ಟೆ ಚಿತ್ರತಂಡ ಸಕ್ಸಸ್ ಪಾರ್ಟಿ ಕೂಡ ಮಾಡಿತ್ತು. ಇದರ ಬೆನ್ನಲ್ಲೇ ಈಗ ಸಿನಿಮಾ ಹೊಸ ದಾಖಲೆ ಒಂದನ್ನು ಬರೆದಿದೆ.
View this post on Instagram
ಇದನ್ನೂ ಓದಿ: Baiju Bawra: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ರಣವೀರ್ ಸಿಂಗ್-ಆಲಿಯಾ ಭಟ್..!
ನಿರ್ದೇಶಕ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿರುವ ಶೇರ್ಷಾ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿದೆ. ಇದರ ಬೆನ್ನಲ್ಲೇ ಇದೀಗ ಈ ಚಿತ್ರಕ್ಕಾಗಿ ನಾಯಕ ಹಾಗೂ ನಾಯಕಿ ಪಡೆದ ಸಂಭಾವನೆ ಮೊತ್ತದ ಎಷ್ಟು ಅನ್ನೋದು ಬಹಿರಂಗವಾಗಿದೆ.
ಇದನ್ನೂ ಓದಿ: Neha Dhupia Baby Shower: ಗರ್ಭಿಣಿ ನಟಿ ನೇಹಾ ಧೂಪಿಯಾಗೆ ಸಿಕ್ತು ಸ್ನೇಹಿತೆಯರ ಕಡೆಯಿಂದ ಭರ್ಜರಿ ಸರ್ಪ್ರೈಸ್..!
ಶೇರ್ಷಾ ಚಿತ್ರಕ್ಕಾಗಿ ನಟ ಸಿದ್ಧಾರ್ಥ್ ಮಲ್ಹೋತ್ರಾ 7 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಚಿತ್ರ ಆರಂಭಕ್ಕೂ ಮುನ್ನ ಅವರು ವಿಕ್ರಂ ಬಾತ್ರಾ ಅವರ ಕುಟುಂಬ ಸದಸ್ಯರು, ಸ್ನೇಹಿತರ ಭೇಟಿ ಮಾಡಿ ಅವರ ಬಗ್ಗೆ ಸಾಕಷ್ಟು ವಿಚಾರಗಳ ಮಾಹಿತಿ ಪಡೆದು ಹೋಂ ವರ್ಕ್ ಮಾಡಿದ್ದರಂತೆ. ನಟಿ ಕಿಯಾರಾ ಈ ಚಿತ್ರಕ್ಕಾಗಿ 4 ಕೋಟಿ ಸಂಭಾವನೆ ಪಡೆದಿದ್ದಾರೆ. ಡಿಂಪಲ್ ಚಿಮಾ ಪಾತ್ರದ ಅವರ ನಟನೆಗೆ ವಿಕ್ರಂ ಬಾತ್ರಾ ಕುಟುಂಬ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: Disha Madan: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕುಲವಧು ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್..!
ಶೇರ್ಷಾ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಸಿನಿಮಾ ಆಫರ್ಗಳು ಸಿದ್ಧಾರ್ಥ್ ಮಲ್ಹೋತ್ರ ಅವರನ್ನು ಅರಸಿ ಬರುತ್ತಿವೆ.. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಹೆಚ್ಚಾಗಿದೆಯಂತೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಯಾವ ಸಿನಿಮಾ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ