ಅಸಹಾಯಕ ಹುಡುಗಿಯರ ಬಗ್ಗೆ ಕರುಣೆ ತೋರಿಸಿ: ಶಿಲ್ಪಾ ಶೆಟ್ಟಿ ಬಳಿ ಮನವಿ ಮಾಡಿದ ಶರ್ಲಿನ್ ಚೋಪ್ರಾ

“ಬಲಿಪಶುಗಳಾಗಿರುವ ಹುಡುಗಿಯರ ಬಗ್ಗೆ ನೀವು ಕರುಣೆ ತೋರಬೇಕೆಂದು ನಾನು ಕೋರುತ್ತೇನೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ” ಎಂದು ಶೆರ್ಲಿನ್ ಚೋಪ್ರಾ ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ರಾಜ್​ ಕುಂದ್ರಾ -ಶಿಲ್ಪಾ ಶೆಟ್ಟಿ ಹಾಗೂ ಶರ್ಲಿನ್​ ಚೋಪ್ರಾ

ರಾಜ್​ ಕುಂದ್ರಾ -ಶಿಲ್ಪಾ ಶೆಟ್ಟಿ ಹಾಗೂ ಶರ್ಲಿನ್​ ಚೋಪ್ರಾ

  • Share this:
ಶರ್ಲಿನ್ ಚೋಪ್ರಾ  (Sherlin Chopra) ಉದ್ಯಮಿ ರಾಜ್ ಕುಂದ್ರಾ ಅವರ ವಿರುದ್ದ ಒಂದಕ್ಕಿಂತ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ತಾನು ರಾಜ್ ಕುಂದ್ರಾ (Raj Kundra) ಅವರಿಂದ ಅರೆ ಬೆತ್ತಲೆ ಫೋಟೋ ಶೂಟ್ ವಿಷಯದಲ್ಲಿ ಮೋಸ ಹೋಗಿರುವುದಾಗಿ ಮತ್ತು ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಅವರು ಆರೋಪಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಅದನ್ನು ಮೊಬೈಲ್ ಆ್ಯಪ್ ಮೂಲಕ ವಿತರಣೆ ಮಾಡುತ್ತಿದ್ದ ಆರೋಪದಡಿ ಕಳೆದ ತಿಂಗಳಿನಿಂದ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದಾರೆ. ಈಗ ಶರ್ಲಿನ್  ಚೋಪ್ರಾ ಅವರು ಒಂದು ವಿಡಿಯೋ ಮಾಡಿದ್ದು, ಅದರಲ್ಲಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ಒಂದು ಮನವಿ ಮಾಡಿದ್ದಾರೆ. ಜೊತೆಗೆ ಆ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಸೂಪರ್ ಡಾನ್ಸರ್  ಚಾಪ್ಟರ್ 4 ರಿಯಾಲಿಟಿ ಶೋ  ತೀರ್ಪುಗಾರರಲ್ಲಿ ಒಬ್ಬರಾಗಿರುವ ಶಿಲ್ಪಾ, ಅದರಲ್ಲಿ ರಾಣಿ ಲಕ್ಷ್ಮಿ ಬಾಯಿಯನ್ನು ಹೊಗಳಿದ್ದನ್ನು ಪ್ರಶ್ನಿಸಿರುವ ಶರ್ಲಿನ್ ಚೋಪ್ರಾ, ರಾಜ್ ಕುಂದ್ರಾ ಪ್ರಕರಣದಲ್ಲಿ ಪೊಲೀಸ್ ಸ್ಟೇಶನ್‍ಗಳಲ್ಲಿ ಧೈರ್ಯವಾಗಿ ತಮ್ಮ ಹೇಳಿಕೆಗಳನ್ನು ನೀಡಿರುವ ಅಸಹಾಯಕ ಹುಡುಗಿಯರ ಬಗ್ಗೆ ಸ್ವಲ್ಪವಾದರೂ ಕರುಣೆ ಇದೆಯೇ ಎಂದು ಕೇಳಿದ್ದಾರೆ. ತಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ಫೋಟೋ ಶಾಪ್ ಮಾಡಿರುವಂತದ್ದು ಎಂದು ಶಿಲ್ಪಾ ಹಿಂಬಾಲಕರು ತನ್ನನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ಕೂಡ ಶೆರ್ಲಿನ್ ಹೇಳಿಕೊಂಡಿದ್ದಾರೆ.

Shilpa Shetty,Shilpa Shetty Kundra,Raj Kundra,Raj Kundra Porn Case,Raj Kundra Arrest,Raj Kundra Interim Relief,Shilpa Shetty Super Dancer,Super Dancer, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಬಂಧನ, ಬಾಲಿವುಡ್​, ಅಶ್ಲೀಲ ಸಿನಿಮಾಗಳ ಪ್ರಕರಣ, ಸೂಪರ್​ ಡ್ಯಾನ್ಸರ್​ ಸೆಟ್, ಶಮಿತಾ ಶೆಟ್ಟಿ​, Shilpa Shetty returns to Super Dancer set after Husband Raj Kundras arrest ae
ನಟಿ ಶಿಲ್ಪಾ ಶೆಟ್ಟಿ


ನಂಬಿಕೆಯ ಕುರಿತು ಇನ್‍ಸ್ಟಾಗ್ರಾಂನಲ್ಲಿ ಶಿಲ್ಪಾ ಇತ್ತೀಚೇಗೆ ಮಾಡಿರುವ ಪೋಸ್ಟ್ ಬಗ್ಗೆ ಉಲ್ಲೇಖಿಸುತ್ತಾ “ದೇಶದ ಎಲ್ಲಾ ತನಿಖಾ ಏಜನ್ಸಿಗಳು ನಿನಗಿಂತ , ನನಗಿಂತ ಮತ್ತು ನಿನ್ನ ಹಿಂಬಾಲಕರಿಗಿಂತ ಅತ್ಯಧಿಕ ಶಿಕ್ಷಣ ಪಡೆದಿವೆ ಎಂದು ನಾನು ನಿನಗೆ ಹೇಳಲು ಬಯಸುತ್ತೇನೆ” ಎಂದು ಶೆರ್ಲಿನ್ ಹೇಳಿದ್ದಾರೆ.

ಇದನ್ನೂ ಓದಿ: Shershaah: ಹೊಸ ದಾಖಲೆ ಬರೆದ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಶೇರ್​ಷಾ ಸಿನಿಮಾ

ಶಿಲ್ಪಾ ನಂಬಿಕೆ ಮತ್ತು ಸಕಾರಾತ್ಮಕತೆಯ ಕುರಿತು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾರೆ. ಅವುಗಳನ್ನೇ ಉಲ್ಲೇಖಿಸುತ್ತಾ, “ನಂಬಿಕೆಯು ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲೂ ಬೆಳಕನ್ನು ಹರಡಬಲ್ಲ ಅತ್ಯಂತ ಸಮರ್ಥ ಶಕ್ತಿಯಾಗಿದೆ ಎಂದು ನನಗನಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. ಶಿಲ್ಪಾ ಅವರಲ್ಲಿ , ನ್ಯಾಯದ ನಿರೀಕ್ಷೆಯಲ್ಲಿರುವ ಹುಡುಗಿಯರಿಗೆ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತಾ ತಮ್ಮ ವಿಡಿಯೋ ಸಂದೇಶವನ್ನು ಮುಗಿಸಿದ್ದಾರೆ ಶರ್ಲಿನ್.

“ಬಲಿಪಶುಗಳಾಗಿರುವ ಹುಡುಗಿಯರ ಬಗ್ಗೆ ನೀವು ಕರುಣೆ ತೋರಬೇಕೆಂದು ನಾನು ಕೋರುತ್ತೇನೆ. ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ” ಎಂದು ಶರ್ಲಿನ್ ಚೋಪ್ರಾ ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಈ ಮೊದಲು, ಈಗಾಗಲೇ ನಡೆಯುತ್ತಿರುವ ರಾಜ್ ಕುಂದ್ರಾ ಪ್ರಕರಣದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಶರ್ಲಿನ್ ಚೋಪ್ರಾ, ಮುಂಬೈನ ಕ್ರೈಂ ಬ್ರ್ಯಾಂಚ್ ಪ್ರಾಪರ್ಟಿ ಸೆಲ್‍ಗೆ ದೂರು ನೀಡಿದ್ದರು. ಅವರು ಏಪ್ರಿಲ್‍ನಲ್ಲಿ ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ದೂರು ನೀಡಿದ್ದರು. ಅನುಮತಿ ಇಲ್ಲದೇ ತನ್ನ ಮನೆಗೆ ರಾಜ್ ಕುಂದ್ರಾ ಬಂದಿದ್ದರು. ವಿರೋಧಿಸಿದರೂ ಕೂಡ ತನ್ನನ್ನು ಚುಂಬಿಸಲು ಪ್ರಯತ್ನಸಿದ್ದರು ಎಂದು ಶೆರ್ಲಿನ್ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಉದ್ಯಮಿ ರಾಜ್​ ಕುಂದ್ರಾ ಅವರನ್ನು ಜುಲೈ 19ರಂದು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ವಶಕ್ಕೆ ಪಡೆದಿದ್ದರು. ರಾಜ್ ಕುಂದ್ರಾ ಒಡೆತನದ ಆ್ಯಪ್​ಗಳಲ್ಲಿ 51 ಅಶ್ಲೀಲ ಸಿನಿಮಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ರಾಜ್​ ಕುಂದ್ರಾ ಬಂಧನದ ನಂತರವೂ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ ಅವರ ಮನೆಗೆ ಹೋಗಿ ವಿಚಾರಣೆ ಹಾಗೂ ತನಿಖೆ ನಡೆಸಿದ್ದಾರೆ.

ರಾಜ್​ ಕುಂದ್ರಾ ಅವರನ್ನು ಮೊದಲಿಗೆ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈ ನಡುವೆ ರಾಜ್​ ಕುಂದ್ರಾ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರನ್ನು ಬಂಧಿಸಿರುವುದು ಕಾನೂನು ಬಾಹಿರವಾಗಿದೆ ಎಂದು ವಕೀಲರು ವಾದಿಸಿದ್ದರು. ಇನ್ನು ಇದೇ ವೇಳೆ ಸರ್ಕಾರಿ ಪರ ವಕೀಲರು ರಾಜ್​ ಕುಂದ್ರಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತಹ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್​ ಕುಂದ್ರಾ ಅವರ ಬಂಧನ ಕಾನೂನಿನ ಪ್ರಕಾರವೇ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು.
Published by:Anitha E
First published: