Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತಂತೆ. ಇದನ್ನ ಆತನೇ ತನಗೆ ಹೇಳಿದ್ದ ಎಂದೂ ಶೆರ್ಲಿನ್ ಪೊಲೀಸರಿಗೆ ಹೇಳಿದ್ದಾಳೆ

ಶೆರ್ಲಿನ್ ಚೋಪ್ರಾ-ರಾಜ್​ ಕುಂದ್ರಾ

ಶೆರ್ಲಿನ್ ಚೋಪ್ರಾ-ರಾಜ್​ ಕುಂದ್ರಾ

 • Share this:
  ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆ ಆರೋಪದಡಿಯಲ್ಲಿ ಅರೆಸ್ಟ್​ ಆಗಿ, ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ಉದ್ಯಮಿ ರಾಜ್​ ಕುಂದ್ರಾ ಬಗ್ಗೆ ಪ್ರತಿದಿನ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಈಗ ಸಿಕ್ಕಿರುವ ಹೊಸ ಮಾಹಿತಿ ರಾಜ್​ ಕುಂದ್ರಾ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಗೆ ಶಾಕ್ ಕೊಡುವ ವಿಷಯವಾಗಿದೆ. ಅವರ ದಾಂಪತ್ಯ ಜೀವನದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕೆಂದರೆ, ನಟಿ-ಮಾಡೆಲ್ ಶೆರ್ಲಿನ್ ಚೋಪ್ರಾ ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಮುಂಬೈನ ಕ್ರೈಂ ಬ್ರಾಂಚ್ ಪ್ರಾಪರ್ಟಿ ಸೆಲ್​ಗೆ​​ ಹೇಳಿಕೆ ನೀಡಿದ್ದಾರೆ. ಶೆರ್ಲಿನ್​ 2021 ಏಪ್ರಿಲ್​ ತಿಂಗಳಿನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣದಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದರು.

  ನಟಿ ಶೆರ್ಲಿನ್ ನೀಡಿರುವ ದೂರಿನ ಪ್ರಕಾರ, 2019ರಲ್ಲಿ ರಾಜ್​ ಕುಂದ್ರಾ ಒಂದು ಆ್ಯಪ್​ ಬ್ಯುಸಿನೆಸ್​ ಬಗ್ಗೆ ಮಾತನಾಡಲು​ ನನ್ನನ್ನು ಕರೆದಿದ್ದರು. ಬ್ಯುಸಿನೆಸ್ ಮೀಟಿಂಗ್ ಮುಗಿದ ಬಳಿಕ, 2019ರ ಮಾರ್ಚ್ 27ರಂದು ರಾಜ್​ ಕುಂದ್ರಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು. ಇದರಿಂದ ನಮ್ಮ ನಡುವೆ ಜಗಳ ಉಂಟಾಯಿತು‘ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.

  ಇದನ್ನೂ ಓದಿ: KGF 2 Adheera First Look Poster: ನಡುಕ ಹುಟ್ಟಿಸ್ತಿದ್ದಾನೆ ಅಧೀರ; ಸಂಜಯ್ ದತ್ ಬರ್ತ​​ಡೇಗೆ ಬಂಪರ್ ಪೋಸ್ಟರ್

  ‘ಇದೇ ವೇಳೆ, ನಾನು ಬೇಡ-ಬೇಡ ಎಂದು ಎಷ್ಟೇ ವಿರೋಧಿಸಿದರೂ ಕೂಡ ರಾಜ್​ ಕುಂದ್ರಾ ನನಗೆ ಬಲವಂತವಾಗಿ ಕಿಸ್​ ಮಾಡಲು ಬಂದರು. ಆಗ ನನಗೆ ತುಂಬಾ ಭಯವಾಯಿತು. ಇದೆಲ್ಲವನ್ನೂ ನಿಲ್ಲಿಸುವಂತೆ ನಾನು ಕೇಳಿಕೊಂಡೆ. ಆದರೂ ಮೈಮೇಲೆ ಬೀಳಲು ಯತ್ನಿಸುತ್ತಿದ್ದರು. ಆಗ ಅವರನ್ನು ತಳ್ಳಿ ಬಾತ್​ರೂಂಗೆ ಹೋಗಿ ಅಡಗಿಕೊಂಡೆ‘ ಎಂದು ಚೋಪ್ರಾ ಅಂದು ನಡೆದ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  ನನಗೆ ಮದುವೆಯಾಗಿರುವ ಪುರುಷ ಅಥವಾ ಉದ್ಯಮಿಯ ಜೊತೆ ಸಂಬಂಧ ಬೆಳೆಸಲು ಇಷ್ಟವಿಲ್ಲ ಎಂದು ರಾಜ್ ​ಕುಂದ್ರಾಗೆ ಶೆರ್ಲಿನ್ ಹೇಳಿದ್ದರು ಎಂದು ತಿಳಿದು ಬಂದಿದೆ.

  ಇದಷ್ಟೇ ಅಲ್ಲದೇ, ರಾಜ್​ ಕುಂದ್ರಾ ತನ್ನ ಪತ್ನಿ ಶಿಲ್ಪಾ ಶೆಟ್ಟಿ ಬಗ್ಗೆ ಹೇಳಿರುವ ಹೇಳಿಕೆ ಈಗ ಬಹಿರಂಗಗೊಂಡಿದೆ. ‘ ಶಿಲ್ಪಾಶೆಟ್ಟಿ ಜೊತೆ ನನ್ನ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿರುತ್ತೇನೆ‘ ಎಂದು ಶೆರ್ಲಿನ್ ಚೋಪ್ರಾ ಜೊತೆ ಹೇಳಿಕೊಂಡಿದ್ದ ರಾಜ್​ ಕುಂದ್ರಾ ಹೇಳಿಕೆ ಇದೀಗ ಹೊರಬಂದಿದೆ.

  ರಾಜ್ ಕುಂದ್ರಾ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಶೆರ್ಲಿನ್​ ಚೋಪ್ರಾಗೂ ಬಂಧನದ ಭಯ ಕಾಡುತ್ತಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ರಾಜ್​ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್​ ಚೋಪ್ರಾ ಹೇಳುತ್ತಿದ್ದಾರೆ. ಹಲವು ಆಯಾಮಗಳಿಂದ ತನಿಖೆ ಮುಂದುವರಿದಿದ್ದು, ಅನೇಕ ನಟಿಯರ ಹೆಸರುಗಳು ಹೊರಬರುತ್ತಿವೆ. ಶಿಲ್ಪಾ ಶೆಟ್ಟಿಗೆ ಪೊಲೀಸರು ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂಬ ಮಾಹಿತಿ ಕೂಡ ಕೇಳಿಬಂದಿದೆ.

  ಇದನ್ನೂ ಓದಿ:Karnataka Cabinet Crisis: ಸಿಎಂ ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ರಚನೆ ಮಾಡಲ್ಲ; ಉಮೇಶ್ ಕತ್ತಿ

  ಶೆರ್ಲಿನ್​ ಚೋಪ್ರಾ ಬಿಚ್ಚಿಟ್ಟಿರುವ ಈ ಹೇಳಿಕೆ ದೇಶಾದ್ಯಂತ ಶಾಕಿಂಗ್ ಅಲೆಯನ್ನು ಎಬ್ಬಿಸಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ಆರೋಪದಡಿಯಲ್ಲಿ ಮುಂಬೈ ಪೊಲೀಸರು ಜುಲೈ 19ರಂದು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದರು. ಜೊತೆಗೆ ಕೆಲವು ದಿನಗಳ ಹಿಂದೆ ಅವರ ಮನೆ ಮೇಲೂ ದಾಳಿ ನಡೆಸಿ, ಪತ್ನಿ ಶಿಲ್ಪಾ ಶೆಟ್ಟಿ ಹೇಳಿಕೆಯನ್ನು ಪಡೆದಿದ್ದರು. ಈ ವೇಳೆ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್​ ಕುಂದ್ರಾ ಮೇಲೆ ಕೂಗಾಡಿ ಜೋರಾಗಿ ಅತ್ತಿದ್ದರು. ತನಗೂ ಹಾಟ್​​ಶಾಟ್ಸ್​ ಅಪ್ಲಿಕೇಶನ್​ಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದರು.
  Published by:Latha CG
  First published: