• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RamGopal Varma: ಮತ್ತೊಂದು ವಿವಾದ ಮಾಡಿಕೊಂಡ್ರು ಆರ್​ಜಿವಿ: ವರ್ಮಾ ಆ ನಟಿಗೆ ಕಳುಹಿಸಿದ ವಿಡಿಯೋದಲ್ಲಿ ಏನಿತ್ತು ?

RamGopal Varma: ಮತ್ತೊಂದು ವಿವಾದ ಮಾಡಿಕೊಂಡ್ರು ಆರ್​ಜಿವಿ: ವರ್ಮಾ ಆ ನಟಿಗೆ ಕಳುಹಿಸಿದ ವಿಡಿಯೋದಲ್ಲಿ ಏನಿತ್ತು ?

ನಟಿ ಶರ್ಲಿನ್​ ಚೋಪ್ರಾ

ನಟಿ ಶರ್ಲಿನ್​ ಚೋಪ್ರಾ

RamGopal Varma: ಶೆರ್ಲಿನ್ ಚೋಪ್ರಾ ಈಗ ರಾಮ್ ಗೋಪಾಲ್ ವರ್ಮಾ ಕಳಿಸಿದ್ದ ನೋಡಬಾರದ ವಿಡಿಯೋ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೊದಲಿಗೆ ಶೆರ್ಲಿನ್ ಚೋಪ್ರಾ ರಾಮ್ ಗೋಪಾಲ್ ವರ್ಮಾ ತಮ್ಮ ವಾಟ್ಸ್​ಆ್ಯಪ್​ ನಂಬರ್​ಗೆ ಸಿಕ್ಕಾಪಟ್ಟೆ ಮಾಧಕವಾಗಿದ್ದ ದೃಶ್ಯಗಳನ್ನು ಕಳುಹಿಸಿದ್ದರಂತೆ.

  • News18
  • 4-MIN READ
  • Last Updated :
  • Share this:

ರಾಮ್ ಗೋಪಾಲ್‍ವರ್ಮಾ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರೋ ವರ್ಮಾ ಬಾಲಿವುಡ್ ತಾರೆಯೊಬ್ಬರಿಗೆ ನೋಡಬಾರದ ವಿಡಿಯೋ ಕಳಿಸಿರೋ ಸುದ್ದಿ ಸಿನಿರಂಗದಲ್ಲೇ ದೊಡ್ಡ ಹಲ್‍ಚಲ್ ಎಬ್ಬಿಸಿದೆ.

ಶೆರ್ಲಿನ್ ಚೋಪ್ರಾ ಈಗ ರಾಮ್ ಗೋಪಾಲ್ ವರ್ಮಾ ಕಳಿಸಿದ್ದ ನೋಡಬಾರದ ವಿಡಿಯೋ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೊದಲಿಗೆ ಶೆರ್ಲಿನ್ ಚೋಪ್ರಾ ರಾಮ್ ಗೋಪಾಲ್ ವರ್ಮಾ ತಮ್ಮ ವಾಟ್ಸ್​ಆ್ಯಪ್​ ನಂಬರ್​ಗೆ ಸಿಕ್ಕಾಪಟ್ಟೆ ಮಾಧಕವಾಗಿದ್ದ ದೃಶ್ಯಗಳನ್ನು ಕಳುಹಿಸಿದ್ದರಂತೆ.
 
View this post on Instagram
 

#sundaymood 💋


A post shared by Sherlyn Chopra (@sherlynchopra) on

ಅದಕ್ಕೂ ಮೊದಲು ಶರ್ಲಿನ್​ ಅವರಿಗೆ ವಯಸ್ಕರ ಸಿನಿಮಾದಲ್ಲಿ ಅಭಿನಯಿಸೋಕೆ ರಾಮ್​ಗೋಪಾಲ್​ ವರ್ಮಾ ಆಫರ್​ ಕೊಟ್ಟಿದ್ದರಂತೆ. ಅದಕ್ಕಾಗಿ ಅವರು ಒಂದು ಕತೆಯನ್ನು ಸಹ ಕಳುಹಿಸಿದ್ದರಂತೆ. ಅದರಲ್ಲಿ ಲೈಂಗಿಕತೆಯ ಹೊರತಾಗಿ ಯಾವುದೇ ಕತೆ ಇರಲಿಲ್ಲವಂತೆ. ಅದಕ್ಕಾಗಿಯೇ ಶರ್ಲಿನ್​ ಆ ಆಫರ್​ ಅನ್ನು ತಿರಸ್ಕರಿಸಿದ್ದರಂತೆ. ಈ ಬಗ್ಗೆ ಶರ್ಲಿನ್​ ಖುದ್ದು ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ.ಈ ರೀತಿಯ ಸಿನಿಮಾದಲ್ಲಿ ನಟಿಸೋಕೆ ಸಾಧ್ಯಾನಾ ಅಂತ ಕೇಳಿದ್ರಂತೆ. ಬೋಲ್ಡ್ ನಟಿಯಾಗಿದ್ರೂ ಶೆರ್ಲಿನ್ ಈ ಪಾತ್ರದಲ್ಲಿ ನಟಿಸೋಕೆ ಒಪ್ಪಲಿಲ್ಲವಂತೆ.

Ram Gopal Varma
ರಾಮ್​ಗೋಪಾಲ್​ ವರ್ಮಾ


2016ರಲ್ಲಿ ರಾಮ್ ಗೋಪಾಲ್ ವರ್ಮಾ ಜಿಎಸ್‍ಟಿ ಅನ್ನೋ ವಯಸ್ಕರ ಸಿನಿಮಾ ಮಾಡಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ದೃಶ್ಯಗಳಿದ್ದ ಸಿನಿಮಾದಲ್ಲಿ ಪೋರ್ನ್ ಸ್ಟಾರ್ ಮಿಯಾ ಮಲ್ಕೋವಾ ನಟಿಸಿದ್ರು. ಈ ಸಿನಿಮಾಗೆ ರಾಮ್ ಗೋಪಾಲ್ ವರ್ಮಾ ಮೊದಲು ಆಫರ್ ಮಾಡಿದ್ದು ಶೆರ್ಲಿನ್ ಚೋಪ್ರಾ ಅವರಿಗೆ. ಆಫರ್ ಕೇಳಿದ ನಟಿಗೆ ಶಾಕ್ ಕೊಟ್ಟಿದ್ರು ವರ್ಮಾ. ವರ್ಮಾಗೆ ಈ ತರಹ ವಿವಾದಗಳು ಹೊಸತೇನೂ ಅಲ್ಲ. ಇಷ್ಟಕ್ಕೂ ಶೆರ್ಲಿನ್‍ಗೂ ವಿವಾದಗಳೇನೂ ಹೊಸತಲ್ಲ, ಯಾಕಂದ್ರೆ ಪ್ಲೇಬಾಯ್‍ನಲ್ಲಿ ಬೆತ್ತಲಾದ ಮೊದಲ ಮಹಿಳೆಯಾಗಿ ಶೆರ್ಲಿನ್ ವಿವಾದಾತ್ಮಕವಾಗಿ ಸುದ್ದಿಯಾಗಿದ್ರು.

ಇದನ್ನೂ ಓದಿ: Mika Singh: ಪಾಕಿಸ್ತಾನದಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಬ್ಯಾನ್​ ಆದ ಖ್ಯಾತ ಬಾಲಿವುಡ್​ ಗಾಯಕ

ವಿವಾದ ಮಾಡಿಕೊಳ್ಳೋದೇ ವರ್ಮಾ ಸ್ಟೈಲ್. ನಮಗೆ ವಿವಾದ ಅನ್ನಿಸೋದು ರಾಮ್ ಗೋಪಾಲ್ ವರ್ಮಾಗೆ ಕಾಮನ್ ಈ ಹಿಂದೆ 'ಸಾವಿತ್ರಿ' ಅನ್ನೋ ವಯಸ್ಕರ ಸಿನಿಮಾ ಪೋಸ್ಟರ್ ಬಿಡುತ್ತಲೇ ವಿವಾದ ಹುಟ್ಟಿಕೊಂಡಿತ್ತು. ಇನ್ನು 'ಲಕ್ಷ್ಮೀಸ್ ಎನ್​ಟಿಆರ್' ಸಿನಿಮಾ ಮಾಡಿ ತೆಲುಗು ಚಿತ್ರರಂಗದ ದೊಡ್ಮನೆಯನ್ನೇ ಎದುರು ಹಾಕಿಕೊಂಡ್ರು ವರ್ಮಾ, ಸಿನಿಮಾವನ್ನು ರಿಲೀಸ್ ಕೂಡ ಮಾಡಿದ್ರು.

ಟಾಲಿವುಡ್ ಪವರ್​ ಸ್ಟಾರ್​ ಪವನ್ ಕಲ್ಯಾಣ್‍ಗೂ ವ್ಯಂಗ್ಯವಾಡಿದ್ದರು. ಈ ಜಗತ್ತಿನ ಎಲ್ಲ ಮಹಿಳೆಯರೂ ಸನ್ನಿ ಲಿಯೋನ್ ಕೊಡುವಷ್ಟೇ ಸಂತೋಷವನ್ನು ಗಂಡಸರಿಗೆ ಕೊಡಬೇಕು ಅನ್ನೋ ಹುಚ್ಚಾಟದ ಹೇಳಿಕೆಯನ್ನೂ ಕೊಟ್ಟು ವಿವಾದ ಮಾಡಿಕೊಂಡಿದ್ದರು. ಹೀಗೆ ಹೇಳುತ್ತಾ ಹೋದರೆ ರಾಮ್ ಗೋಪಾಲ್ ವರ್ಮಾ ಮಾಡಿಕೊಂಡಷ್ಟು ವಿವಾದಗಳನ್ನು ಮತ್ಯಾವ ಸೆಲೆಬ್ರಿಟಿಯೂ ಮಾಡಿಕೊಂಡಿಲ್ಲ ಎನಿಸುತ್ತೆ. ಸದ್ಯಕ್ಕೆ ಶೆರ್ಲಿನ್ ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಇದು ಆರ್​ಜಿವಿಗೆ ಹೊಸತೂ ಅಲ್ಲ, ವಿವಾದವೂ ಅಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ಮಾಡಲು ಇಲ್ಲಿ ಕ್ಲಿಕ್ಮಾಡಿ

Ileana Dcruz: ಸೂರ್ಯನ ಕಣ್ಣನ್ನೇ ಕುಕ್ಕಿದ ಬಳುಕುವ ಬಳ್ಳಿ ಇಲಿಯಾನಾರ ಬಿಕಿನಿ ಪೋಸ್​

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು