ಬಾಯ್ಕಾಟ್ ಟ್ರೆಂಡ್, ಅವಹೇಳನಕಾರಿ ಕಮೆಂಟ್ಗಳು, ಚಿತ್ರಬಿಡುಗಡೆಗೆ ತಡೆಯೊಡ್ಡುವ ಬೆದರಿಕೆಯ ನಡುವೆಯೇ ಪಠಾಣ್ (Pathaan) ಸದ್ದಿಲ್ಲದೆಯೇ ಚಿತ್ರಮಂದಿಗಳಲ್ಲಿ (Theater) ಬಿಡುಗಡೆಯಾಗುವ ದಿನ ಸಮೀಪಿಸಿದೆ. ದೀಪಿಕಾ (Deepika Padukone) ಹಾಡುಗಳಲ್ಲಿ ಬಿಕಿನಿ ತೊಟ್ಟು ಅಂಗಾಂಗ ಪ್ರದರ್ಶನ ಮಾಡಿದ್ದಾರೆ ಎಂಬ ಕಮೆಂಟ್ಗಳು ಒಂದೆಡೆಯಾದರೆ, ಹಾಡುಗಳಲ್ಲಿ ಬೇಕೆಂದೇ ವಿವಾದಾತ್ಮಕ ಪದಗಳನ್ನು ಸೇರಿಸಲಾಗಿದೆ ಎಂಬ ಅಪವಾದಗಳು ಇನ್ನೊಂದೆಡೆ. ಕೇಸರಿ ಬಣ್ಣದ ವಿವಾದ ಹೀಗೆ ಬಿಡುಗಡೆಗೆ ಮುನ್ನವೇ ಪಠಾಣ್ ಚಿತ್ರ, ಬಾಯ್ಕಾಟ್ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ತಾಣಗಳಲ್ಲಿ ರಾರಾಜಿಸಿದೆ.
ಪಠಾಣ್ ಚಿತ್ರದ ಮೂಲಕ ಶಾರುಖ್ ಕಮ್ಬ್ಯಾಕ್
ಅದರೂ ಶಾರುಖ್ ಖಾನ್ ಪಠಾಣ್ ಚಿತ್ರದಲ್ಲಿ ಡ್ಯಾಶಿಂಗ್ ರೇಂಜ್ನಲ್ಲಿ ಮಿಂಚಿದ್ದು ಸಾಲು ಸಾಲು ಸೋಲು ಕಂಡಿರುವ ಬಾಲಿವುಡ್ ಬಾದ್ಷಾ ಪಠಾಣ್ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಪಠಾನ್ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿರುವ ಶಾರುಖ್ ಮೈಯನ್ನು ಹುರಿಯಾಗಿಸಿಕೊಂಡು ಸಿಕ್ಸ್ ಪ್ಯಾಕ್ ಮೈಕಟ್ಟಿನೊಂದಿಗೆ ಯುವಕರನ್ನೂ ನಾಚಿಸುವಂತೆ ಕಂಡುಬಂದಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಪಠಾಣ್ ಅನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತವಿರುವ ಶಾರುಖ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಬಿಡುಗಡೆ ದಿನಗಳ ಎಣಿಕೆ ಮಾಡುತ್ತಿದ್ದಾರೆ.
ಬಾಲಿವುಡ್ ಚಿತ್ರ ನಿರ್ಮಾಪಕರು ಶಾರುಖ್ ಮೈಕಟ್ಟಿಗೆ ಫಿದಾ
ಶಾರುಖ್, ಪಠಾಣ್ ಚಿತ್ರದಲ್ಲಿ ಮಿಂಚಿರುವ ಪರಿಗೆ ಸಂಪೂರ್ಣ ಬಾಲಿವುಡ್ ಕೂಡ ದಂಗಾಗಿಬಿಟ್ಟಿದೆ. ಚಿತ್ರ ನಿರ್ಮಾಪಕ ಶೇಖರ್ ಕಪೂರ್ ಕೂಡ ಶಾರುಖ್ ಲುಕ್ಗೆ ಫಿದಾ ಆಗಿದ್ದು ಅದ್ಭುತವಾಗಿ ಕಾಣುತ್ತಿದ್ದಾರೆ ಎಂದು ಹೊಗಳಿದ್ದಾರೆ.
ಇವರ ಹೊಗಳಿಕೆಯೊಂದಿಗೆ ನಿರ್ದೇಶಕ ಸುಧೀರ್ ಮಿಶ್ರಾ ಕೂಡ ದನಿಗೂಡಿಸಿದ್ದು, ಶಾರುಖ್ರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ ಎಂದರೆ ತಪ್ಪಾಗಲಾರದು.
ಯುವ ನಾಯಕರನ್ನು ನಾಚಿಸುತ್ತಾರೆ ಶಾರುಖ್
ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರನಿರ್ಮಾಪಕ ಶೇಖರ್ ಕಪೂರ್ ಶಾರುಖ್ ಮೈಕಟ್ಟನ್ನು ಬಣ್ಣಿಸಿದ್ದು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಅಜಾನುಬಾಹು ಮೈಕಟ್ಟನ್ನು ತೆರೆದ ಉಡುಗೆಯಲ್ಲಿ ಪ್ರದರ್ಶಿಸಿರುವ ಶಾರುಖ್ ಇದಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ ಎಂಬುದನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.
ಶಾರುಖ್ಗೆ ವಯಸ್ಸಾದರೂ ಇಷ್ಟು ಅದ್ಭುತವಾಗಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ? ಇಂದಿನ ಯುವ ನಾಯಕರನ್ನು ಮೀರಿಸುವಂತೆ ಶಾರುಖ್ ಕಂಡುಬಂದಿದ್ದಾರೆ ಎಂದು ನಿರ್ಮಾಪಕರು ಹೊಗಳಿದ್ದಾರೆ.
ಶೇಖರ್ ಕಪೂರ್ಗೆ ಪ್ರತ್ಯುತ್ತರ ನೀಡಿದ ಸುಧೀರ್ ಮಿಶ್ರ
ಶೇಖರ್ ಕಪೂರ್ ಮಾಡಿರುವ ಟ್ವೀಟ್ಗೆ ದನಿಗೂಡಿಸಿರುವ ಸುಧೀರ್ ಮಿಶ್ರಾ ಕೂಡ ಶಾರುಖ್ ಮೈಕಟ್ಟಿಗೆ ಹಾಗೂ ಅವರು ಪಟ್ಟ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪಠಾಣ್ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ
ಪಠಾಣ್ ಇದೇ ತಿಂಗಳ 25 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಹಾಗೂ ಜಾನ್ ಅಬ್ರಹಾಂ ಚಿತ್ರದಲ್ಲಿ ಜೊತೆಯಾಗಿ ಇದೇ ಮೊದಲ ಬಾರಿಗೆ ಕಂಡುಬಂದಿದ್ದಾರೆ.
ಇದನ್ನೂ ಓದಿ: Pathaan Movie: ಒಂದೇ ದಿನದಲ್ಲಿ ಪಠಾಣ್ ಸಿನಿಮಾದ ಎರಡೂವರೆ ಲಕ್ಷ ಟಿಕೆಟ್ ಸೇಲ್!
ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ. ಗಣರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆಗಳನ್ನು ಗುರಿಯಾಗಿರಿಸಿಕೊಂಡು 25 ರ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಿಕೊಂಡಿದೆ ಚಿತ್ರತಂಡ. ತಮಿಳು ಹಾಗೂ ತೆಲುಗು ಭಾಷೆಗಳ ಡಬ್ಬಿಂಗ್ ಆವೃತ್ತಿಗಳೊಂದಿಗೆ ಪಠಾಣ್ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.
ಚಿತ್ರದ ಬೇಷರಂ ರಂಗ್ ಹಿಟ್ ಆದ ಗೀತೆ
ಚಿತ್ರದಲ್ಲಿ ಶಾರುಖ್ ರಾಫೀಲ್ಡ್ ಏಜೆಂಟ್ ಪಠಾಣ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಪಠಾಣ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ಖ್ಯಾತ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್ ಜೋಡಿ.
ದೀಪಿಕಾ ಪಡುಕೋಣೆ ಹಾಗೂ ಶಾರುಖ್ ನಟನೆಯ ಬೇಶರಂ ರಂಗ್ ಶೀರ್ಷಿಕೆಯ ಮೊದಲ ಹಾಡು ಡಿಸೆಂಬರ್ 12, 2022 ರಂದು ಬಿಡುಗಡೆಯಾಯಿತು ಮತ್ತು ಇದು ಮೆಗಾ ಹಿಟ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ