• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Shekhar Kapur: 15 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ ಶೇಖರ್ ಕಪೂರ್, ಮದುವೆ ಬಗ್ಗೆ ಏನು ಹೇಳಿದ್ದಾರೆ?

Shekhar Kapur: 15 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ ಶೇಖರ್ ಕಪೂರ್, ಮದುವೆ ಬಗ್ಗೆ ಏನು ಹೇಳಿದ್ದಾರೆ?

ಶೇಕರ್​ ಕಪೂರ್​

ಶೇಕರ್​ ಕಪೂರ್​

ಸೂಕ್ಷ್ಮ ಕಥೆಗಳಿರುವ ಚಲನಚಿತ್ರಗಳಿಂದ ಮತ್ತು ಆ ಚಲನಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಅದಕ್ಕೆ ಅನೇಕ ರೀತಿಯ ಪ್ರಶಂಸೆಗಳು ಮತ್ತು ಪ್ರಶಸ್ತಿಗಳು ಈ ಮಾತಿಗೆ ಕಾರಣ ಎಂದು ಹೇಳಬಹುದು.

 • Share this:
 • published by :

ಬಾಲಿವುಡ್ (Bollywood)‌ ನಟ ನಾಸಿರುದ್ದೀನ್ ಷಾ ಮತ್ತು ನಟಿ ಶಬಾನ ಆಜ್ಮಿ ಅವರ ಅಭಿನಯದ 1983 ರಲ್ಲಿ ತೆರೆಕಂಡ ಹಿಂದಿ ಚಿತ್ರ ಮಾಸೂಮ್ ಚಿತ್ರದಿಂದ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಶೇಖರ್ ಕಪೂರ್ ಈಗಿನ ಜನರಿಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. 80ರ ದಶಕದ ಸಿನೆಮಾಗಳನ್ನು ನೋಡಿದ ಜನರಿಗೆ ಇವರ ನಿರ್ದೇಶನದ ಬಗ್ಗೆ ಮತ್ತು ಸಿನಿಮಾ (Film) ಮೇಲಿನ ಆಸಕ್ತಿ ಬಗ್ಗೆ ತಿಳಿದಿರುತ್ತದೆ. ಸಾಮಾನ್ಯವಾಗಿ ಹಿಂದಿ ಚಿತ್ರೋದ್ಯಮದಲ್ಲಿ ಶೇಖರ್ ಕಪೂರ್ ಅವರನ್ನು ‘ದಿ ಮ್ಯಾನ್ ವಿತ್ ದಿ ಮಿದಾಸ್ ಟಚ್’ (The Man With The Midas Touch) ಎಂದು ಕರೆಯುತ್ತಾರೆ. ಇದಕ್ಕೆ ಕಾರಣವೆಂದರೆ ಅವರು ಮಾಡಿರುವ ವಿಭಿನ್ನ ರೀತಿಯ ಸೂಕ್ಷ್ಮ ಕಥೆಗಳಿರುವ ಚಲನಚಿತ್ರಗಳಿಂದ ಮತ್ತು ಆ ಚಲನಚಿತ್ರಗಳನ್ನು (Film) ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಅದಕ್ಕೆ ಅನೇಕ ರೀತಿಯ ಪ್ರಶಂಸೆಗಳು ಮತ್ತು ಪ್ರಶಸ್ತಿಗಳು ಈ ಮಾತಿಗೆ ಕಾರಣ ಎಂದು ಹೇಳಬಹುದು.


ಬರೀ ಮಾಸೂಮ್ ಚಿತ್ರವಲ್ಲದೆ, 1989 ರಲ್ಲಿ ಬಿಡುಗಡೆಯಾದ ಮಿಸ್ಟರ್ ಇಂಡಿಯಾ ಸಹ ಭಾರತೀಯ ಸಿನೆಮಾದ ಅತ್ಯಂತ ಅಪ್ರತಿಮ ಚಲನಚಿತ್ರಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಂತರ ವಿಭಿನ್ನ ಕಥೆ ಇರುವಂತಹ 1994 ರಲ್ಲಿ ತೆರೆಕಂಡ ಬ್ಯಾಂಡಿಟ್ ಕ್ವೀನ್ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಮತ್ತು 1998 ರಲ್ಲಿ ಬಿಡುಗಡೆಯಾದ ಶೇಖರ್ ಅವರ ಎಲಿಜಬೆತ್ ಚಿತ್ರ ಅಕಾಡೆಮಿ ಪ್ರಶಸ್ತಿಗಳಲ್ಲಿ ಏಳು ನಾಮನಿರ್ದೇಶನಗಳನ್ನು ಪಡೆಯಿತು. ಶೇಖರ್ ಅವರ ಸಿನೆಮಾಗಳ ಕಥೆಗಳು ಎಷ್ಟು ವಿಭಿನ್ನವಾಗಿರುತ್ತವೆಯೋ, ಇವರ ವೈಯುಕ್ತಿಕ ಜೀವನ ಸಹ ಅಷ್ಟೇ ವಿಭಿನ್ನವಾಗಿದೆ ಅಂತ ಹೇಳಬಹುದು.


ಸುಮಾರು 15 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ ಶೇಖರ್ ಕಪೂರ್


ಶೇಖರ್ ಅವರು ಎಲಿಜಬೆತ್: ದಿ ಗೋಲ್ಡನ್ ಏಜ್ (2007) ಚಿತ್ರದ ಸುಮಾರು 15 ವರ್ಷಗಳ ನಂತರ, ಅವರು ರೊಮ್ಯಾಂಟಿಕ್ ಹಾಸ್ಯ ಚಿತ್ರ ‘ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್’ ಅನ್ನು 2022 ರಲ್ಲಿ ನಿರ್ದೇಶನ ಮಾಡುವುದರ ಜೊತೆಗೆ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿದರು ಅಂತ ಹೇಳಬಹುದು. ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದರ ವಿಶ್ವ ಪ್ರಥಮ ಪ್ರದರ್ಶನ ಮತ್ತು ರೋಮ್ ಫಿಲ್ಮ್ ಫೆಸ್ಟ್ ನಲ್ಲಿ ದೊಡ್ಡ ಗೆಲುವಿನ ನಂತರ, ಇದು ಅಂತಿಮವಾಗಿ ಕಳೆದ ಶುಕ್ರವಾರ ಎಂದರೆ ಮಾರ್ಚ್ 17 ರಂದು ಭಾರತದಲ್ಲಿ ಬಿಡುಗಡೆಯಾಯಿತು.


ಶಬಾನಾ ಆಜ್ಮಿ, ಎಮ್ಮಾ ಥಾಂಪ್ಸನ್ ಮತ್ತು ಲಿಲಿ ಜೇಮ್ಸ್ ಅವರಂತಹವರಿಂದ ಶೀರ್ಷಿಕೆ ಪಡೆದ ಇದು, ಡೇಟಿಂಗ್ ಅಪ್ಲಿಕೇಶನ್ ಗಳ ಹಿಡಿತದಲ್ಲಿ ಸಿಕ್ಕಿರುವ ಜಗತ್ತಿನಲ್ಲಿ ಈ ಮದುವೆಗಳು ಮತ್ತು ನಿಜವಾದ ಪ್ರೀತಿಯನ್ನು ಕಂಡು ಹಿಡಿಯುವ ಬಗ್ಗೆ ಕಥೆಯನ್ನು ಹೊಂದಿದೆ ಅಂತ ಹೇಳಲಾಗುತ್ತಿದೆ.


ನ್ಯೂಸ್ 18 ಜೊತೆಗಿನ ವಿಶೇಷ ಚಾಟ್ ನಲ್ಲಿ ಶೇಖರ್ ಕಪೂರ್ ಅವರು 1980 ರ ದಶಕದಲ್ಲಿ ಲಂಡನ್ ನಲ್ಲಿ ಬೆಳೆದ ವರ್ಷಗಳೇ ತಮ್ಮ ಈ ರೀತಿಯ ವಿಭಿನ್ನ ಕಥೆಯುಳ್ಳ ಚಲನಚಿತ್ರಗಳನ್ನು ನಿರ್ಮಿಸುವ ಶೈಲಿಗೆ ಕಾರಣ ಎಂದು ಹೇಳುತ್ತಾರೆ. ಆ ಲಂಡನ್ ನ ಓಣಿಗಳಲ್ಲಿ ನಡೆದುಕೊಂಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅವರು "ನಾನು ಆಗ ಹೊಸ ರೀತಿಯ ಸಂಗೀತ ಕ್ರಾಂತಿಯ ಭಾಗವಾಗಿದ್ದೆ. ನಾನು ಮೊದಲ ಬಾರಿಗೆ ಇಂಗ್ಲೀಷ್ ಸಂಗೀತಗಾರರಾದ ಮಿಕ್ ಜಾಗರ್ ಅವರನ್ನು ಭೇಟಿಯಾದಾಗ, ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು ಹೈಡ್ ಪಾರ್ಕ್ ನಲ್ಲಿ ಅವರು 'ಐ ಕಾಂಟ್ ಗೆಟ್ ನೋ ಸೆಟಿಸ್ಫ್ಯಾಕ್ಷನ್' ಹಾಡುವಾಗ ಎಂದು ನಾನು ಅವರಿಗೆ ಹೇಳಿದೆ" ಎಂದಿದ್ದಾರೆ.


ಆಗಿನ ಡೇಟಿಂಗ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ ಶೇಖರ್ ಕಪೂರ್?


ಆಗ ನಮ್ಮಲ್ಲಿ ಈಗಿನ ದಿನಗಳಲ್ಲಿರುವ ಹಾಗೆ ಅನೇಕ ರೀತಿಯ ಡೇಟಿಂಗ್ ಅಪ್ಲಿಕೇಶನ್ ಗಳು ಇರಲಿಲ್ಲ. ನಾವು ಡೇಟಿಂಗ್ ಮಾಡುವವರನ್ನು ಈ ರೆಸ್ಟೋರೆಂಟ್ ಗಳಲ್ಲಿ ಅಥವಾ ಉದ್ಯಾನವನಗಳಲ್ಲಿ ಭೇಟಿಯಾಗುತ್ತಿದ್ದೆವು. "ನನ್ನ ಬಹಳಷ್ಟು ಪ್ರೀತಿ-ಸಂಬಂಧಗಳು ಪಾರ್ಕ್‌ನಲ್ಲಿಯೇ ಹುಟ್ಟಿಕೊಂಡಿದ್ದವು. ಆದ್ದರಿಂದ, ನಾನು ಡೇಟಿಂಗ್ ಅಪ್ಲಿಕೇಶನ್ ಗಳನ್ನು ಆಗ ಮಿಸ್ ಮಾಡಿಕೊಂಡೆ ಅಂತ ಹೇಳುವುದಿಲ್ಲ, ಆದರೆ ಆಗಿನ ಸಮಯ ಈಗಿನ ಸಮಯಕ್ಕಿಂತಲೂ ತುಂಬಾನೇ ವಿಭಿನ್ನವಾಗಿತ್ತು" ಎಂದು ಅವರು ಹೇಳಿದರು.


ಇದನ್ನೂ ಓದಿ: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!


ತಮ್ಮ ಅನುಭವಗಳು ಕಥೆಗಳ ರೂಪದಲ್ಲಿ ಹೇಳುವ ಪ್ರಕ್ರಿಯೆಯನ್ನು ಹೇಗೆ ರೂಢಿಸಿಕೊಂಡೆವು ಎಂಬುದರ ಬಗ್ಗೆ ಮಾತನಾಡಿದ ಕಪೂರ್ "ಆ ಸಮಯದಲ್ಲಿ, ನಾವು ನಮ್ಮ ಸ್ವಂತ ಮಾದರಿಯ ಮಾನದಂಡಗಳನ್ನು ರೂಢಿಸಿ ಕೊಂಡೆವು. ನಾನು ಆಗ ಭಾರತದಿಂದ ಲಂಡನ್‌ಗೆ ಹೋದ ಮಧ್ಯಮ ವರ್ಗದ ಹುಡುಗನಾಗಿದ್ದೆ ಮತ್ತು ನಾನು ಸಂಪೂರ್ಣವಾಗಿ ಪ್ರಯೋಗಶೀಲತೆಯನ್ನು ಇಷ್ಟಪಡುತ್ತಿದ್ದೆ. ಆದ್ದರಿಂದ, ನನಗೆ ಹೊಸತು ಅಂತ ಕಾಣಿಸಿದ್ದನ್ನು ತಿಳಿದುಕೊಳ್ಳಲು ಮತ್ತು ಅದನ್ನು ಪ್ರಯತ್ನಿಸಲು ನಾನು ಎಂದಿಗೂ ಹಿಂದೆ ಬಿದ್ದಿಲ್ಲ" ಎಂದು ಶೇಖರ್ ಹೇಳಿದರು.


ಅನೇಕರನ್ನು ಆಕರ್ಷಿಸಿದ ಅವರ ಕಥೆ ಹೇಳುವ ಶೈಲಿಯ ಮತ್ತೊಂದು ವಿಶೇಷವಾದ ಅಂಶವೆಂದರೆ ಅವರು ತಮ್ಮ ಮನಸ್ಸಿಗೆ ತೋಚಿದ್ದನ್ನು ಹಾಗೆಯೇ ಪರದೆಯ ಮೇಲೆ ತೋರಿಸಲು ಹಿಂಜರಿಯುವುದಿಲ್ಲ ಮತ್ತು ತಾವು ತಪ್ಪು ಅಂತ ಅಂದುಕೊಳ್ಳದೆ ಹೋದರೆ, ಅದರ ಬಗ್ಗೆ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ.


ಉದಾರವಾದಿ ಮಹಿಳೆಯರ ಬಗ್ಗೆ ಈ ನಿರ್ದೇಶಕ ಹೇಳಿದ್ದೇನು ನೋಡಿ


ಉದಾರವಾದಿ ಮಹಿಳೆಯರು ಇಂದು ತಮ್ಮದೇ ಆದ ಆಯ್ಕೆಗಳನ್ನು ಮಾಡುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ನಿರ್ದೇಶಕ ಶೇಖರ್ ಕಪೂರ್ ಅವರು "ಮಹಿಳೆಯರ ವಿಷಯದಲ್ಲಿ ಎರಡು ಮುಖ್ಯವಾದ ಲೈಂಗಿಕ ಕ್ರಾಂತಿಗಳು ನಡೆದವು. ಒಂದು ಮಾತ್ರೆ, ಇದ್ದಕ್ಕಿದ್ದಂತೆ ಅವರು ಗರ್ಭಿಣಿಯಾಗುವುದರಿಂದ ಮುಕ್ತರಾದರು ಮತ್ತು ಅವರು ಲೈಂಗಿಕತೆಯ ಬಗ್ಗೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರಾದರು"


ಪಂಜಾಬಿನಲ್ಲಿ ಹುಡುಗಿ ಸದಾ ನಾಚಿಕೆ ಪಟ್ಟುಕೊಳ್ಳುತ್ತಲೇ ಇರಬೇಕು ಅಂತ ನಮ್ಮಲ್ಲಿ ಹೇಳುತ್ತಿದ್ದರು. ಇದು ಆಗ ಒಂದು ದೊಡ್ಡ ಹೇರಿಕೆಯಾಗಿತ್ತು ಮತ್ತು ಅದು ಎಲ್ಲಾ ರೀತಿಯ ಆಲೋಚನೆಗಳಿಗೆ ಕಾರಣವಾಯಿತು. ಡೇಟಿಂಗ್ ಅಪ್ಲಿಕೇಶನ್ ಗಳು ಅದನ್ನು ಈಗ ತೆಗೆದು ಹಾಕಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಹಿಳೆ ಪುರುಷನನ್ನು ಇಷ್ಟಪಡುತ್ತಾಳೆ ಮತ್ತು ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಾಳೆ ಎಂದು ಅವಳು ಪುರುಷನಿಗೆ ನೇರವಾಗಿ ಹೇಳಬಹುದು ಮತ್ತು ಅದು ಸ್ವೀಕಾರಾರ್ಹವಾಗಿದೆ. ಇದು ಎರಡನೇ ಲೈಂಗಿಕ ಕ್ರಾಂತಿಯಾಗಿದ್ದು, ಪುರುಷರು ಮತ್ತು ಮಹಿಳೆಯರನ್ನು ಸಮಾನರನ್ನಾಗಿ ಮಾಡಿತು ಅಂತ ಹೇಳ್ತಾರೆ ಶೇಖರ್.


ಈಗಿನ ಪ್ರೀತಿ ಮತ್ತು ಮದುವೆಗಳ ಬಗ್ಗೆ ಶೇಖರ್ ಅವರ ಆಲೋಚನೆಗಳೇನು?


"ಸಮಾನತೆಯ ಈ ಕ್ಷಣದಲ್ಲಿ ನೀವು ಲೈಂಗಿಕತೆಯೊಂದಿಗೆ ಮುಕ್ತವಾಗಿ ಪ್ರಯೋಗ ಮಾಡುತ್ತಿರುವಾಗ, ಪ್ರೀತಿ ಮತ್ತು ಅನ್ಯೋನ್ಯತೆ ಎಲ್ಲಿದೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಡೇಟಿಂಗ್ ಅಪ್ಲಿಕೇಶನ್ ಗಳಲ್ಲಿ ಇರುವ ಹೆಚ್ಚಿನ ಹುಡುಗಿಯರು ಮತ್ತು ಪುರುಷರು, ಅವರು ಯಾರೊಂದಿಗಾದರೂ ಒಂದು ನಿರ್ದಿಷ್ಟ ಅನ್ಯೋನ್ಯತೆಯನ್ನು ಹುಡುಕುತ್ತಿದ್ದಾರೆ. ಅವರು ದೀರ್ಘಕಾಲೀನ ಸಂಬಂಧಗಳನ್ನು ಹುಡುಕುತ್ತಿಲ್ಲದಿರಬಹುದು, ಆದರೆ ಪ್ರೀತಿ ಮತ್ತು ಸಂಬಂಧದ ಆ ಕ್ಷಣಗಳು ನಿಜವಾಗಿಯೂ ಯಾವುದೇ ವ್ಯಕ್ತಿಗೆ ತುಂಬಾನೇ ಮುಖ್ಯವಾಗುತ್ತವೆ" ಎಂದು ಶೇಖರ್ ಹೇಳಿದರು.


ಆದರೆ ಈಗಿನ ಯುವ ಪೀಳಿಗೆಗೆ ನಿಜವಾದ ಪ್ರೀತಿಯನ್ನು ಹುಡುಕುವುದು ತುಂಬಾನೇ ಕಷ್ಟಕರವಾದ ಸವಾಲಾಗಿದೆ ಅಂತ ಹೇಳಬಹುದು. "ಯುವಕರು ಇದನ್ನು ಹೇಗೆ ನಿಭಾಯಿಸುತ್ತಾರೆಂದು ನನಗೆ ತಿಳಿದಿಲ್ಲ. ನಾವು ಈ ವಿಷಯದಲ್ಲಿ ಹೆಚ್ಚು ಸುರಕ್ಷಿತವಾಗಿದ್ದೆವು. ನಮಗೆ ನಮ್ಮದೇ ಆದ ಇತಿ-ಮಿತಿಗಳು ಇದ್ದವು. ಆದರೆ ಈಗ ಅದ್ಯಾವುದು ಇಲ್ಲವಾಗಿದೆ. ಹಾಗಾಗಿ ನೀವು ನಿಮ್ಮ ಜೀವನದಲ್ಲಿ ಏನು ಮಾಡುತ್ತೀರೋ, ಅದಕ್ಕೆ ನೀವೇ ಜವಾಬ್ದಾರರಾಗಿದ್ದೀರಿ" ಎಂದು ಅವರು ಹೇಳುತ್ತಾರೆ.


ಅವರ ಚಿತ್ರವನ್ನ ವೈಯುಕ್ತಿಕ ದೃಷ್ಟಿಕೋನದಿಂದ ನೋಡಲು ಶೇಖರ್ ನಿರ್ಧರಿಸಿದರಂತೆ..


ಸಾಂಪ್ರದಾಯಿಕ ಜಗತ್ತು ಆಧುನಿಕ ಘಟಕವಾಗಿ ಪರಿವರ್ತನೆಗೊಳ್ಳುವುದನ್ನು ನೋಡಿದ ನಂತರ, ‘ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್’ ಚಿತ್ರವನ್ನು ನಾವು ವೈಯಕ್ತಿಕ ದೃಷ್ಟಿಕೋನದಿಂದ ನೋಡಲು ಶೇಖರ್ ಅವರು ನಿರ್ಧರಿಸಿದರಂತೆ.


ಇದನ್ನೂ ಓದಿ: ನಂದನ್ ಬಳಿ ಸಹಾಯ ಕೇಳಲು ಸ್ವಾಭಿಮಾನ ಅಡ್ಡಿ, ಅಪ್ಪನ ಸ್ಥಿತಿ ಕಂಡು ಕಣ್ಣೀರು!


"ನಾನು ಲಿಲ್ಲಿಯೊಂದಿಗೆ ಮಾತನಾಡುತ್ತಿದ್ದಾಗ, ಅವಳ ರೀತಿಯಲ್ಲಿ ಈ ಚಿತ್ರದಲ್ಲಿ ಒಂದು ಪಾತ್ರವಿದೆ, ಆ ಪಾತ್ರವು ನಿಜವಾದ ಜೀವನದ ಅರ್ಥವನ್ನು ಹುಡುಕಲು ಪ್ರಯತ್ನಿಸುತ್ತಾಳೆ ಎಂದು ಹೇಳಿದೆ. ಡೇಟಿಂಗ್ ಅಪ್ಲಿಕೇಶನ್ ಗಳ ಮತ್ತು ತಂತ್ರಜ್ಞಾನಗಳ ಕಾರಣದಿಂದಾಗಿ, ಕಾಲ ತುಂಬಾನೇ ಬದಲಾಗಿದೆ ಮತ್ತು ನಾವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಸಾಗುತ್ತಿದೆ.


top videos  ಈ ವೇಗದಲ್ಲಿ ನೀವು ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಂಡು ಹಿಡಿಯಬೇಕು, ಲಿಲ್ಲಿ ಮತ್ತು ನಾನು ಮೊದಲು ಮಾತನಾಡಲು ಪ್ರಾರಂಭಿಸಿದಾಗ, ಅದು ಲಾಕ್ಡೌನ್ ಮತ್ತು ನಾನು ಹಿಮಾಲಯದಲ್ಲಿದ್ದೆ ಮತ್ತು ಅವಳು ಲಂಡನ್ ನಲ್ಲಿದ್ದಳು. ನಾವು ಭೇಟಿಯಾಗಲು ಸಾಧ್ಯವಾಗಲಿಲ್ಲ ಮತ್ತು ಪರಸ್ಪರ ವಾಟ್ಸಾಪ್ ಮಾಡಬೇಕಾಗಿತ್ತು. ಈ ಪ್ರಶ್ನೆಗಳ ಬಗ್ಗೆ ನಾವು ಯೋಚಿಸುತ್ತಿದ್ದೆವು ಮತ್ತು ಮಾತನಾಡುತ್ತಿದ್ದೆವು" ಎಂದು ಶೇಖರ್ ಅವರು ನೆನಪಿಸಿಕೊಳ್ಳುತ್ತಾರೆ.

  First published: