Shehnaaz Kaur Gill: ಮಸೀದಿಯಿಂದ ʼಅಜಾನ್ʼ ಕೇಳ್ತಿದ್ದಂತೆ ಹಾಡು ನಿಲ್ಲಿಸಿದ ನಟಿ!

ಶೆಹನಾಜ್ ಗಿಲ್

ಶೆಹನಾಜ್ ಗಿಲ್

ಹಾಡುವುದನ್ನು ಶುರು ಮಾಡಿದ ಸ್ವಲ್ಪ ಸಮಯದ ನಂತರ ಅಲ್ಲಿ ಅಜಾನ್ ಕರೆ ಕೇಳಿದ ನಂತರ ಶೆಹನಾಜ್ ಅವರು ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಹಾಡುವುದನ್ನು ನಿಲ್ಲಿಸಿದರು.

  • Trending Desk
  • 5-MIN READ
  • Last Updated :
  • Share this:

ನಮ್ಮ ಭಾರತ ದೇಶದಲ್ಲಿ (India) ಅನೇಕ ರೀತಿಯ ಧರ್ಮಗಳ ಜನರು ಇದ್ದು, ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಯಾವುದೇ ಧರ್ಮಕ್ಕೆ ಸೇರಿರಲಿ, ನಮ್ಮ ಧರ್ಮದ (Religion) ಬಗ್ಗೆ ನಮಗಿರುವ ಗೌರವ ಬೇರೆ ಧರ್ಮದ ಬಗ್ಗೆಯೂ ಇರಬೇಕು. ಆಗಲೇ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಈಗಂತೂ ನಾವು ಅನೇಕ ಘಟನೆಗಳನ್ನು  (Incident) ನೋಡುತ್ತಿರುತ್ತೇವೆ. ಅದರಲ್ಲಿ ಜನರು ಬೇರೆ ಧರ್ಮದ ಬಗ್ಗೆ ಗೌರವವನ್ನು ತೋರಿಸಿರುತ್ತಾರೆ.


ಅರೇ.. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲಿಯೂ ಸಹ ಇದೇ ರೀತಿಯಾದ ಒಂದು ಘಟನೆ ನಡೆದಿದೆ ನೋಡಿ. ಇಲ್ಲೊಬ್ಬ ನಟಿ ಒಂದು ಪ್ರಶಸ್ತಿ ಸಮಾರಂಭದಲ್ಲಿ ಹಾಡು ಹೇಳುವಾಗ ಮುಸ್ಲಿಂ ಬಾಂಧವರ ಅಜಾನ್ ಕರೆ ಕೇಳಿಸಿದ್ದಕ್ಕೆ ಅದಕ್ಕೆ ಗೌರವ ಸೂಚಿಸಿ ತಮ್ಮ ಹಾಡನ್ನು ಅಲ್ಲಿಗೆ ಸ್ವಲ್ಪ ನಿಲ್ಲಿಸಿ ನಂತರ ಮುಂದುವರೆಸಿದ್ದಾರೆ ನೋಡಿ.


ಅಜಾನ್ ಕರೆ ಕೇಳಿದ ತಕ್ಷಣ ಹಾಡು ನಿಲ್ಲಿಸಿದ ನಟಿ


ಹೌದು.. ಹಿಂದಿ ಭಾಷೆಯ ಬಿಗ್‌ಬಾಸ್ ಸೀಸನ್ 13 ನ ಸ್ಪರ್ಧಿಯಾಗಿದ್ದ ನಟಿ ಶೆಹನಾಜ್ ಗಿಲ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಒಳ್ಳೆಯ ನಡುವಳಿಕೆಯಿಂದ ಅಲ್ಲಿದ್ದವರನ್ನು ಒಂದು ಕ್ಷಣ ಅಚ್ಚರಿಗೊಳಿಸಿದರು ಅಂತ ಹೇಳಬಹುದು.




ಶೆಹನಾಜ್ ಅವರನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಕರೆಸಲಾಯಿತು. ಹಾಗೆಯೇ ಅಲ್ಲಿದ್ದವರು ಅವರನ್ನು ಒಂದು ಹಾಡನ್ನು ಹಾಡಲು ಕೇಳಿದರು. ಹಾಡುವುದನ್ನು ಶುರು ಮಾಡಿದ ಸ್ವಲ್ಪ ಸಮಯದ ನಂತರ ಅಲ್ಲಿ ಅಜಾನ್ ಕರೆ ಕೇಳಿದ ನಂತರ ಶೆಹನಾಜ್ ಅವರು ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಹಾಡುವುದನ್ನು ನಿಲ್ಲಿಸಿದರು.


ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏನು ನಡಿತು ಆ ದಿನ?


ಶೆಹನಾಜ್ ಗಿಲ್ ಕಪ್ಪು ಗೌನ್ ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು ಮತ್ತು ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರ ಉಪಸ್ಥಿತಿಯಲ್ಲಿ ಮಹಾರಾಷ್ಟ್ರದ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಗೆ ಕರೆಸಲಾಯಿತು. ನಿರೂಪಕ ನಟಿ ಶೆಹನಾಜ್ ಅವರನ್ನು ಒಂದು ಹಾಡು ಹಾಡುವಂತೆ ವಿನಂತಿಸಿಕೊಂಡರು. ಆಗ ಅವರು ಹಾಡಲು ಪ್ರಾರಂಭಿಸಿದರು, ಆದರೆ ಅಜಾನ್ ಕರೆ ಕೇಳಿದ ನಂತರ ಆ ಹಾಡನ್ನು ಅಲ್ಲಿಗೆ ನಿಲ್ಲಿಸಿದರು.


Shehnaaz Gill stops singing after hearing azaan call at award function
ಶೆಹನಾಜ್ ಗಿಲ್


ಈ ವೀಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಮತ್ತು ಮುಸ್ಲಿಂ ಸಮುದಾಯದ ಪವಿತ್ರ ಪ್ರಾರ್ಥನೆಯನ್ನು ಗೌರವಿಸಿದ್ದಕ್ಕಾಗಿ ಅಭಿಮಾನಿಗಳು ಈ ಬಿಗ್‌ಬಾಸ್ ಸ್ಪರ್ಧಿಯನ್ನು ಹಾಡಿ ಹೊಗಳಿದ್ದಾರೆ.


ಶೆಹನಾಜ್ ಗಿಲ್ ಅವರನ್ನು ಶ್ಲಾಘಿಸಿದ ನೆಟ್ಟಿಗರು


ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶೆಹನಾಜ್ ಗಿಲ್ ಅವರ ವೀಡಿಯೋವನ್ನು ಮರು ಟ್ವೀಟ್ ಮಾಡಿದ್ದಾರೆ ಮತ್ತು ಇತರ ಧರ್ಮಗಳಿಗೂ ಸಹ ಗೌರವವನ್ನು ತೋರಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.


"ಶೆಹನಾಜ್ ಅವರು ಅಜಾನ್ ಕರೆಯನ್ನು ಕೇಳಿದ ತಕ್ಷಣ ಹಾಡನ್ನು ಅಲ್ಲಿಗೆ ನಿರ್ಧರಿಸಿದ್ದು ಅವರ ಪರಿಶುದ್ಧ ಆತ್ಮವನ್ನು ತೋರಿಸುತ್ತದೆ. ಇತರರ ಧರ್ಮ ಮತ್ತು ಅವರ ನಂಬಿಕೆಗಳನ್ನು ಪರಿಗಣಿಸುವುದು ತುಂಬಾನೇ ಒಳ್ಳೆಯ ಕೆಲಸ. ಶೆಹನಾಜ್ ಅವರೇ ನನ್ನ ಹೃದಯವನ್ನು ಅದೆಷ್ಟು ಬಾರಿ ಗೆಲ್ಲುವಿರಿ, ನನಗೆ ಇರೋದು ಒಂದೇ ಹೃದಯ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Urvashi Rautela Birthday: ಸ್ವಂತ ಥಿಯೇಟರ್, ಲಕ್ಷುರಿ ಕಾರ್! ಮಾಡಿದ್ದು ಕೆಲವೇ ಸಿನಿಮಾ ಆದ್ರೂ ಊರ್ವಶಿ ಸಿಕ್ಕಾಪಟ್ಟೆ ರಿಚ್


ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಈ ವೀಡಿಯೋ ತುಂಬಾನೇ ಚೆನ್ನಾಗಿದೆ. ಇವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಇತರ ಧರ್ಮಗಳನ್ನು ಗೌರವಿಸುವುದು ಎಲ್ಲಕ್ಕಿಂತ ಮಿಗಿಲಾದುದು. ನಿಮಗೆ ಹ್ಯಾಟ್ಸ್ ಆಫ್" ಎಂದು ಕಾಮೆಂಟ್ ಮಾಡಿದ್ದಾರೆ.




ಮತ್ತೊಬ್ಬ ನೆಟ್ಟಿಗರು "ಇವರ ಬಗ್ಗೆ ನಮಗೆ ತುಂಬಾನೇ ಹೆಮ್ಮೆಯಿದೆ" ಎಂದು ಬರೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ 16 ವಿಜೇತ ಎಂಸಿ ಸ್ಟಾನ್ ಮತ್ತು ಲಾಕ್ ಅಪ್ ವಿಜೇತ ಮುನಾವರ್ ಫಾರೂಕಿ ಕೂಡ ಭಾಗವಹಿಸಿದ್ದರು.


ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ ಅಭಿನಯದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಸಾಜಿದ್ ಖಾನ್ ಅವರ ಮುಂದಿನ ನಿರ್ದೇಶನದ ‘100 ಪರ್ಸೆಂಟ್’ ಚಿತ್ರದ ಭಾಗವಾಗಿದ್ದಾರೆ.

Published by:Divya D
First published: