ಸಾಮಾನ್ಯವಾಗಿ ಸಿನಿಮಾ (Cinema) ರಂಗದಲ್ಲಿ ಇರುವವರು ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನು ಒಮ್ಮೆ ಹೆಚ್ಚು ಮಾಡಿಕೊಂಡು ತುಂಬಾನೇ ಗುಂಡ ಗುಂಡಕ್ಕೆ ಕಂಡರೆ, ಇನ್ನೊಮ್ಮೆ ದೇಹದ ತೂಕವನ್ನು (Weight Loss) ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ಸಹ ಕಾಣುತ್ತಾರೆ. ಒಟ್ಟಿನಲ್ಲಿ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ತಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳುತ್ತಾರೆ ಈ ನಟ-ನಟಿಯರು (Actor-Actress). ಇಲ್ಲಿಯೂ ಸಹ ಒಬ್ಬ ನಟಿಗೆ ಸಿನಿಮಾದಲ್ಲಿನ ಪಾತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳುವುದು ಅಂದರೆ ತುಂಬಾನೇ ಇಷ್ಟವಂತೆ. ಆದರೆ ಆ ಚಿತ್ರ ದೊಡ್ಡ ಮಟ್ಟದ ಚಿತ್ರವಾಗಿರಬೇಕಂತೆ ನೋಡಿ.
ನಟಿ ಶೆಹನಾಜ್ ಗಿಲ್ ಗೆ ಚಿತ್ರದ ಪಾತ್ರಕ್ಕಾಗಿ ತನ್ನ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶ ಸಿಕ್ಕರೆ ಗ್ಯಾರೆಂಟಿ ಮಾಡಿಕೊಳ್ಳುತ್ತಾರಂತೆ.
ಹನಿ ಸಿಂಗ್ ಇತ್ತೀಚೆಗೆ ಶೆಹನಾಜ್ ಗಿಲ್ ಅವರ ಶೋಗೆ ಬಂದಿದ್ರಂತೆ
ಇತ್ತೀಚೆಗೆ ಹನಿ ಸಿಂಗ್ ಅವರು ಶೆಹನಾಜ್ ಗಿಲ್ ಅವರ ಶೋ ಗೆ ಬಂದಿದ್ದರು, ಅಲ್ಲಿ ಅವರು ತಮ್ಮ ಸುತ್ತಲೂ ಇರುವಂತಹ ಅನೇಕ ರೀತಿಯ ವಿವಾದಗಳು, ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು. ಶೆಹನಾಜ್ ಅವರು ಹನಿ ಅವರ ಕಟ್ಟಾ ಅಭಿಮಾನಿಯಾಗಿರುವುದರಿಂದ ಅವರ ಹಾಡುಗಳ ಬಗ್ಗೆ ಮೊದಲು ಕೇಳಿದರು.
ಇದನ್ನೂ ಓದಿ: ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ; ಸವಿನೆನಪು ಹಂಚಿಕೊಂಡ್ರು ಅಣ್ಣಾವ್ರ ಮುದ್ದಿನ ಸೊಸೆ ಅಶ್ವಿನಿ
ನಂತರ ಶೆಹನಾಜ್ ಅವರು ಹನಿ ಸಿಂಗ್ ಅವರಿಗೆ 7 ವರ್ಷಗಳ ಕಾಲ ನಡೆದ ವಿವಾದ ಮತ್ತು ರಿಹಾಬ್ನ ಬಗ್ಗೆ ಎಲ್ಲವನ್ನೂ ಕೇಳಿದರು. ಆ ವರ್ಷಗಳಲ್ಲಿ ನಿಜವಾಗಿ ಏನಾಯಿತು ಮತ್ತು ಸಹಾಯವನ್ನು ಪಡೆಯುವುದು ಏಕೆ ಅಗತ್ಯವಾಗಿತ್ತು ಎಂಬುದರ ಬಗ್ಗೆ ಗಾಯಕನು ಸಹ ಅಷ್ಟೇ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಂಡರು.
ಈ ಹಿಂದೆ, ಹಿಂದಿ ಬಿಗ್‌ಬಾಸ್ ನಲ್ಲಿ ಕಾಣಿಸಿಕೊಂಡ ಶೆಹನಾಜ್ ಗಿಲ್ ಅವರನ್ನು ಕುರಿತು ಹನಿ ಸಿಂಗ್ "ಬಿಗ್‌ಬಾಸ್ ರಿಯಾಲಿಟಿ ಶೋ ಗೆ ಹೋಗುವ ಮೊದಲು ನೀವು ಪಂಜಾಬ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದೀರಲ್ಲ" ಅಂತ ಹನಿ ಸಿಂಗ್ ಕೇಳಿದರು.
ಇದಕ್ಕೆ ಶೆಹನಾಜ್ ಅವರು "ನಾನು ಅಷ್ಟೊಂದು ಪ್ರಸಿದ್ಧಳಾಗಿದ್ದರೆ, ಆಗ ನಿಮ್ಮ ಹಾಡುಗಳಿಗಾಗಿ ನೀವು ನನ್ನನ್ನು ಏಕೆ ಸಂಪರ್ಕಿಸಲಿಲ್ಲ?" ಅಂತ ನೇರವಾಗಿ ಕೇಳಿಯೇ ಬಿಟ್ಟರು.
ಹನಿ ಸಿಂಗ್ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರ ಬಗ್ಗೆ ಕೇಳಿದ ಶೆಹನಾಜ್
ದೇಹದ ತೂಕ ಇಳಿಸಿಕೊಳ್ಳಲು ಮತ್ತು ಫಿಟ್ ಆಗಿರುವ ಆಕಾರಕ್ಕೆ ಮರಳಲು ಎರಡು ವರ್ಷಗಳು ಬೇಕಾಯಿತು ಅಂತ ಹನಿ ಸಿಂಗ್ ಹೇಳಿದರು. ನಂತರ ಹನಿ ಸಿಂಗ್ ಅವರು ಶೆಹನಾಜ್ ಅವರನ್ನು ಕುರಿತು "ನೀವು ಮೊದಲು ತುಂಬಾನೇ ಸುಂದರವಾಗಿ ಕಾಣ್ತಿದ್ರಿ” ಅಂತ ಹೇಳಿದರು. ಆಗ ಶೆಹನಾಜ್ ಅವರು ಮೊದಲು ತುಂಬಾನೇ ದಪ್ಪ ಇದ್ದೆ ಅಂತ ಹೇಳಿದ್ದಕ್ಕೆ, ಹನಿ ಸಿಂಗ್ "ಅಲ್ಲ, ಒಳ್ಳೆ ಪರಿಯಂತೆ ಕಾಣ್ತಿದ್ರಿ” ಅಂತ ಹೇಳಿದರು.
ಶೆಹನಾಜ್ ಚಿತ್ರೋದ್ಯಮದಲ್ಲಿ ದಪ್ಪ ದೇಹವನ್ನು ಇಟ್ಟುಕೊಂಡು ಕೆಲಸ ಹುಡುಕುವುದು ತುಂಬಾನೇ ಕಷ್ಟಕರವಾಗಿರುತ್ತದೆ ಎಂದು ಹೇಳಿದರು. ಅದರಲ್ಲೂ ಹಸಿವು ಜಾಸ್ತಿ ಇರುವವರಿಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಕಷ್ಟದ ಕೆಲಸ ಅಂತ ಹೇಳಿದರು ನಟಿ.
ಆದರೆ ಒಳ್ಳೆಯ ಮತ್ತು ದೊಡ್ಡ ಚಿತ್ರಗಳಿಗಾಗಿ ನಾನು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಿದ್ಧಳಿದ್ದೇನೆ ಅಂತ ನಟಿ ಹೇಳಿದರು. "ನಾನು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕಾದ ಪಾತ್ರವಿದ್ದರೆ, ನಾನು ಅದನ್ನು ಖಂಡಿತವಾಗಿಯೂ ಮಾಡುತ್ತೇನೆ" ಎಂದು ಶೆಹನಾಜ್ ಹೇಳಿದರು.
ಹನಿ ಸಿಂಗ್ ಅವರನ್ನ ಹೊಗಳಿದ್ರಂತೆ ಶೆಹನಾಜ್
ವಿವಾದಗಳ ಹೊರತಾಗಿಯೂ ನೈಜವಾಗಿ ಉಳಿದಿದ್ದಕ್ಕಾಗಿ ಶೆಹನಾಜ್ ಅವರು ಹನಿ ಸಿಂಗ್ ಅವರನ್ನು ತುಂಬಾನೇ ಶ್ಲಾಘಿಸಿದರು, "ಉದ್ಯಮಕ್ಕೆ ಪ್ರವೇಶಿಸುವ ಜನರು ಆಗಾಗ್ಗೆ ಬಾಯಲ್ಲಿ ಫಿಲ್ಟರ್ ನೊಂದಿಗೆ ಬರುತ್ತಾರೆ ಮತ್ತು ಹೆಚ್ಚಿನ ಸಮಯದಲ್ಲಿ ಅವರು ನೈಜತೆಯನ್ನು ಮರೆಮಾಚುತ್ತಾರೆ. ಆದರೆ ನಿಮ್ಮ ಬಗ್ಗೆ ಈ ಒಂದು ವಿಷಯವನ್ನು ನಾನು ತುಂಬಾನೇ ಇಷ್ಟಪಡುತ್ತೇನೆ” ಅಂತ ನಟಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ