Sidharth Shukla ಸಾವಿನ ಬಳಿಕ ಮಗಳ ಆರೋಗ್ಯ ಚೆನ್ನಾಗಿಲ್ಲ!; ಶೆಹನಾಜ್​ ತಂದೆ ಸಂತೋಷ್​ ಸಿಂಗ್​ ಸುಖ್​

Sidharth Shukla’s Death: ಸಿದ್ದಾರ್ಥ್​ ಸಾವಿನ ಸುದ್ದಿ ಕೇಳಿದ ಶೆಹನಾಜ್​ ಅವರನ್ನು ನೋಡಲು ತಕ್ಷಣ ಮುಂಬೈಗೆ ತೆರಳಿದ್ದಾರೆ. ಇವರಿಬ್ಬರನ್ನು ‘ಸಿದ್​ ನಾಜ್’​ ಎಂದು ಕರೆಯಲಾಗುತ್ತಿತ್ತು.  ಬಿಗ್​ ಬಾಸ್ 13ರಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಅಭಿಮಾನಿಗಳನ್ನು ರಂಜಿಸುವ ಮೂಲಕ ಇವರು ಜನಪ್ರಿಯರಾದರು.

ಸಿದ್ಧಾರ್ಥ್​ ಶುಕ್ಲಾ - ಶೆಹನಾಜ್

ಸಿದ್ಧಾರ್ಥ್​ ಶುಕ್ಲಾ - ಶೆಹನಾಜ್

 • Share this:
   Shehnaaz Gill unwell: ಬಾಲಿವುಡ್​ ನಟ, ಬಿಗ್​ ಬಾಸ್​ ಸೀಸನ್​ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ  ಸಾವಿನ ಸುದ್ದಿ ಕೇಳಿದ ನಂತರ ಮಗಳು ಶೆಹನಾಜ್​ ಕೌರ್​ ಗಿಲ್ ಆರೋಗ್ಯವಾಗಿಲ್ಲ ಎಂದು ನಟಿಯ ತಂದೆ ಸಂತೋಷ್​ ಸಿಂಗ್ ಸುಖ್​ ಮಾಧ್ಯಮ ಮುಂದೆ ಹೇಳಿದ್ದಾರೆ. ಕುಟುಂಬವು  ಆಕೆಯ ಜೊತೆಗಿರಲು ಪ್ರಯ ತ್ನಿಸುತ್ತಿದೆ. ಆದರೆ ಸಿದ್ಧಾರ್ಥ್​ ನಂತರ ತುಂಬಾನೇ ನೊಂದುಕೊಂಡಿದ್ದಾಳೆ ಎಂದರು.

  ಶೆಹನಾಜ್​ ಕೌರ್​ ಗಿಲ್ ತಂದೆ ಸಂತೋಷ್​ ಸಿಂಗ್​ ಅವರು ಬಿಗ್​ ಬಾಸ್​ ಮನೆಯೊಳಗೆ ಭೇಟಿ ನೀಡಿದಾಗ ಸಿದ್ಧಾರ್ಥ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿದ್ಧಾರ್ಥ್​ ಅವರನ್ನು ಸ್ಮಾರ್ಟ್​ ಬಾಯ್​ ಎಂದು ಹೊಗಳಿದ್ದರು. ಆದರೀಗ ಸಿದ್ಥಾರ್ಥ್​ ಸಾವು ಎಲ್ಲರಿಗೂ ಬೇಸತರಿಸಿದೆ ಎಂದು ಸಂತೋಷ್​ ಸಿಂಗ್​ ಹೇಳಿದ್ದಾರೆ.

  ಸಿದ್ದಾರ್ಥ್​ ಹೃದಯಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿದ ಶೆಹನಾಜ್​ ಅವರನ್ನು ನೋಡಲು ತಕ್ಷಣ ಮುಂಬೈಗೆ ತೆರಳಿದ್ದಾರೆ. ಇವರಿಬ್ಬರನ್ನು ‘ಸಿದ್​ ನಾಜ್’​ ಎಂದು ಕರೆಯಲಾಗುತ್ತಿತ್ತು.  ಬಿಗ್​ ಬಾಸ್ 13ರಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಅಭಿಮಾನಿಗಳನ್ನು ರಂಜಿಸುವ ಮೂಲಕ ಇವರು ಜನಪ್ರಿಯರಾದರು.

  ಶಹನಾಜ್​ ನೊಂದಿಗೆ ಮಾತನಾಡಿದೆ. ಸಿದ್ಧಾರ್ಥ್​ ಸಾವಿನಿಂದಾಗಿ ತುಂಬಾ ನೋಂದುಕೊಂಡಿದ್ದಾಳೆ. ಆಕೆಯ ಆರೋಗ್ಯ ಚೆನ್ನಾಗಿಲ್ಲ. ಆಕೆಯ ಕಾಳಜಿಗಾಗಿ ನನ್ನ ಮಗ ಮುಂಬೈ ಹೋಗಿದ್ದಾನೆ. ನಾನು ನಂತರ ಹೋಗುತ್ತೇನೆ ಎಂದು ಸಂತೋಷ್​ ಹೇಳಿದರು.

  ನಂತರ ಮಾತನಾಡಿದ ಅವರು ಸಿದ್ಧಾರ್ಥ್​​ ಬಗ್ಗೆ ಜಾಸ್ತಿ ಮಾತನಾಡುವ ಸ್ಥಿತಿಯಲ್ಲಿ ನಾನಿಲ್ಲ. ಎನಾಯಿತು ಎಂದು ನಂಬಲು ಸಾದ್ತವಾಗುತ್ತಿಲ್ಲ ಎಂದರು.

  ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ ‘Did It Hurt’ ಪದ: ಸಾಮಾಜಿಕ ತಾಣದಲ್ಲಿ ಹಾಸ್ಯಮಯ ಮೀಮ್ಸ್ ರಚಿಸಿದ ನೆಟ್ಟಿಗರು!

  ಹೃದಯಾಘಾತದಿಂದ ಸಾವನ್ನಪ್ಪಿದ ಸಿದ್ಧಾರ್ಥ್​ ಬಗ್ಗೆ ಅನೇಕ ತಾರೆ ಬೇಸರ ಹೊರಹಾಕಿದ್ದಾರೆ. ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸನಾ ಖಾನ್​ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸಿದ್ಧಾರ್ಥ್​ ಸಾವು ಶಹನಾಜ್​ಗೆ ಭಾರೀ ಆಘಾತವುಂಟು ಮಾಡಲಿದೆ. ಇದು ಊಹಿಸಲಾಗದ ನೋವು. ಆಕೆಗೆ ದೇವರು ಶಕ್ತಿ ಮತ್ತು ಯೋಗಕ್ಷೇಮ ನೀಡಲಿ ಎಂದು ಹೇಳಿದ್ದಾರೆ.

  ಸಿದ್ಧಾರ್ಥ್​ ಮತ್ತು ಶೆಹನಾಜ್​ ಕೊನೆಯದಾಗಿ ‘‘ಡ್ಯಾನ್ಸ್​ ದೀವಾನೆ 3’’ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಶೇಷ ಸಂಚಿಕೆಯಲ್ಲಿ ಇವರಿಬ್ಬರನ್ನು ಕರೆಸಿಕೊಳ್ಳಲಾಗಿತ್ತು.

  ಸಿದ್ಧಾರ್ಥ್​ ಶುಕ್ಲಾ ಮುಂಬೈನವರಾಗಿದ್ದು, 12 ಡಿಸೆಂಬರ್​ 1980ರಲ್ಲಿ  ಜನಿಸಿದರು. 40 ವರ್ಷ ವಯಸ್ಸಿವರಾಗಿರು ಶುಕ್ಲಾ, ಬಿಗ್​ ಬಾಸ್​ 13ರ ವಿನ್ನರ್​ ಆಗಿ ಜನಪ್ರಿಯತೆ ಪಡೆದರು.
  Published by:Harshith AS
  First published: