ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಸ್ಟಾರ್ ನಟರೊಂದಿಗೆ ಮಿಂಚಿ ಸಿನಿ ರಂಗದಿಂದ ದೂರ ಉಳಿದಿರುವ ನಟಿ ಮಾನ್ಯಾ ನಾಯ್ಡು, ದರ್ಶನ್ ಅವರೊಂದಿಗೆ ಶಾಸ್ತ್ರಿ ಹಾಗೂ ಶ್ರೀಮುರಳಿ ಜೊತೆ 'ಶಂಭು' ನಟಿ ಸಿದ್ದಾರೆ. ವಿವಾಹವಾದ ನಂತರ ವಿದೇಶದಲ್ಲಿ ನೆಲೆಸಿರುವ ಮಾನ್ಯಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ತಮ್ಮ ಮನೆಯಲ್ಲಿ ಮಗಳು ಓಮಿ ಹಾಗೂ ಅಮ್ಮನ ಜೊತೆ ಫನ್ನಿ ವಿಡಿಯೋ ಗಳನ್ನು ಮಾಡುತ್ತಾಅವುಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಆಗಾಗ ಲೈವ್ ಬಂದು ಫ್ಯಾನ್ಸ್ಗಳ ಜೊತೆ ಮಾತುಕತೆ ಸಹ ನಡೆಸುತ್ತಿರುತ್ತಾರೆ. ಇಷ್ಟು ಆ್ಯಕ್ಟೀವ್ ಆಗಿರುವ ನಟಿ ಮಾನ್ಯಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನ್ಯಾ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನೂ ಮಾನ್ಯಾ ಫ್ಯಾನ್ಸ್ ಜತೆ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ತನಗೆ ಆರೋಗ್ಯ ಸರಿಯಾಗಿಲ್ಲ. ಮೊದಲಿನಿಂತೆ ಕುಳಿತುಕೊಳ್ಳಲು, ನಿಲ್ಲಲು ಹಾಗೂ ನಡೆದಾಡಲು ಆಗುತ್ತಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಮಾನ್ಯಾ ನಾಯ್ಡು.
'ಮೂರು ವಾರಗಳ ಹಿಂದೆ ನನಗೆ ಪೆಟ್ಟಾಗಿತ್ತು. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಎಡಗಾಲಿಗೆ ಪಾರ್ಶ್ವವಾಯು ಆಗಿದೆ. ಕಾಲನ್ನು ಅಲುಗಾಡಿಸಲು ಆಗುತ್ತಿಲ್ಲ. ನನ್ನ ಎಡಗಾಲು ಕೆಲಸ ಮಾಡುತ್ತಿಲ್ಲ ಜೊತೆಗೆ ತುಂಬಾ ನೋವಿತ್ತು. ನನ್ನನ್ನು ತೀವ್ರ ನಿಗಾ ಘಟಕದಲ್ಲಿಟ್ಟು, ಬೆನ್ನು ಮೂಳೆಗೆ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಪಡೆಯುವ ಮೊಲದು ಹಾಗೂ ನಂತರದ ಫೋಟೋ ತೆಗೆದುಕೊಂಡಿದ್ದೇನೆ. ನನಗೆ ತುಂಬಾ ಭಯವಾಗಿತ್ತು. ಆಸ್ಪತ್ರೆಯಲ್ಲಿ ಸದ್ಯ ಕೋವಿಡ್ ಕಾರಣದಿಂದಾಗಿ ಯಾರನ್ನೂ ಜೊತೆಗಿರಲು ಬಿಡುತ್ತಿಲ್ಲ. ಒಬ್ಬಳ್ಳೇಇದ್ದೇನೆ. ಇನ್ನು ನೋವಿನಿಂದಾಗಿ ಮೂರು ವಾರಗಳಿಂದ ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ. ಜೀವನದಲ್ಲಿ ಯಾವಾಗ ಏನು ಆಗುತ್ತದೆ ಎಂದು ಊಹಿಸಲೂ ಆಗುವುದಿಲ್ಲ' ಎಂದು ಬರೆದುಕೊಂಡಿದ್ದಾರೆ ಮಾನ್ಯಾ.
ಇದನ್ನೂ ಓದಿ: ಕಡೆಗೂ ರಿಲೀಸ್ ಆಗುತ್ತಿದೆ ಯುವರತ್ನ ಸಿನಿಮಾ ಪಾಠಶಾಲಾ ಹಾಡು...!
'ಕೇವಲ ವೆಕೇಷನ್ ಫೋಟೋಗಳು ಹಾಗೂ ನನ್ನ ಖುಷಿಯ ಕ್ಷಣಗಳನ್ನು ಮಾತ್ರ ಹಂಚಿಕೊಳ್ಳುವುದಿಲ್ಲ. ನನ್ನ ಕಷ್ಟದ ದಿನಗಳ ಅನುಭವಗಳನ್ನೂ ಶೇರ್ ಮಾಡುತ್ತಿದ್ದೇನೆ. ಆದಷ್ಟು ಬೇಗ ಮೊದಲಿನಂತೆ ಆಗಿ ನನ್ನ ಮಗಳೊಂದಿಗೆ ಡ್ಯಾನ್ಸ್ ಮಾಡುತ್ತಾ ವಿಡಿಯೋ ಹಂಚಿಕೊಳ್ಳುತ್ತೇನೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಈ ನಟಿ.
ಇನ್ನು ಮಾನ್ಯಾ ಅವರ ಆರೋಗ್ಯ ಸುಧಾರಿಸಲೆಂದು ಅವರ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಜೊತೆಗೆ ಆರೋಗ್ಯದತ್ತ ಗಮನ ಹರಿಸುವಂತೆ ಮನವಿ ಮಾಡುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ ದರ್ಶನ್ ಅಭಿನಯದ 'ಶಾಸ್ತ್ರಿ' ಸಿನಿಮಾದ 'ಓ ಹೃದಯ ಓ ಹೃದಯ' ಹಾಡನ್ನು ಹಾಡಿದ್ದ ಮ್ಯಾನ್ಯಾ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಟಾಲಿವುಡ್ ಜೊತೆಗೆ ಕನ್ನಡದಲ್ಲೂ ನಟಿಸಿರುವ ಮಾನ್ಯಾ ನಾಯ್ಡು ದರ್ಶನ್ ಅವರೊಂದಿಗೆ 'ಶಾಸ್ತ್ರಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾ ತೆರೆಕಂಡು 15 ವರ್ಷಗಳಾಗಿದೆ. 2005ರ ಜೂನ್ 10ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. ಅದರ ನೆನಪಿನಲ್ಲೇ ಹಾಡು ಹಾಡಿದ್ದರು.
ಅಲ್ಲದೆ ಅದಕ್ಕೂ ಹಿಂದೆ ಮಾನ್ಯಾ ನಾಯ್ಡು ಮಗಳಿಗಾಗಿ ತಮ್ಮ ಅಭಿನಯದ ಮೊದಲ ಕನ್ನಡ ಸಿನಿಮಾ 'ವರ್ಷ'ದ 'ವಾಸಂತಿ ವಾಸಂತಿ' ಹಾಡು ಹಾಡಿದ್ದರು. ಈ ಚಿತ್ರದ ಮೂಲಕ ಮಾನ್ಯಾ ಸ್ಯಾಂಡಲ್ವುಡ್ಗೆ ಪರಿಚಯವಾಗಿದ್ದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ