ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!

ವಿದ್ಯಾಭ್ಯಾಸದ ವೇಳೆ ನಾಟಕ, ಡೊಳ್ಳು ಕುಣಿತ ಮತ್ತು ಕಲೆಯ ಬಗ್ಗೆ ಆಸಕ್ತಿ ಬೆಳೆಸಿದ್ದ ಶಶಿ ಕೆಲ ಸೀರಿಯಲ್​ನಲ್ಲೂ ಅಭಿನಯಿಸಿದ್ದಾರೆ.

zahir | news18
Updated:January 28, 2019, 9:12 AM IST
ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!
ಶಶಿ ಕುಮಾರ್
  • News18
  • Last Updated: January 28, 2019, 9:12 AM IST
  • Share this:
ಬಿಗ್​ ಬಾಸ್​ ಚಾಂಪಿಯನ್​ ಆಗಿ ಶಶಿ ಕುಮಾರ್ ಹೊರ ಹೊಮ್ಮಿದ್ದಾರೆ. ತಮ್ಮ ನೇರ ನುಡಿ, ಮಾನವೀಯ ಗುಣಗಳಿಂದ ಪ್ರೇಕ್ಷಕರನ್ನು ಕೊನೆಯವರೆಗೂ ತನ್ನತ್ತ ಸೆಳೆಯುವಲ್ಲಿ  ಯಶಸ್ವಿಯಾಗಿದ್ದಾರೆ. ಈ ಎಲ್ಲಾ ಗುಣಗಳಿಂದಲೇ ​ಶಶಿ ಇಂದು ಬಿಗ್ ಬಾಸ್​ ವಿನ್ನರ್ ಆಗಿದ್ದಾರೆ.

ಆರನೇ ಆವೃತ್ತಿಯ ಆಲ್​ರೌಂಡರ್​ ಆಗಿ ಮಿಂಚಿರುವ ಶಶಿ ಬಿಗ್ ​ಬಾಸ್​ ಮನೆಯಲ್ಲಿ ಮಾಡರ್ನ್​ ರೈತ ಎಂದೇ ಖ್ಯಾತಿಗಳಿಸಿದ್ದರು. ಬಿಎಸ್ಸಿ ಕೃಷಿ ಪದವೀಧರನಾಗಿರುವ ಶಶಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡವರು. ರಕ್ತದಾನ ಶಿಬಿರ ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳನ್ನೂ ಕೂಡ ಶಶಿ ಮಾಡಿದ್ದಾರೆ.

ಬಾಲ್ಯದಿಂದಲೇ ಬುದ್ದಿವಂತನಾಗಿ ಗುರುತಿಸಿಕೊಂಡಿದ್ದ ಶಶಿ  ಓದಿನಲ್ಲೂ ಮುಂದಿದ್ದರು. ತನ್ನ ಎಂಎಸ್ಸಿ ಪದವಿ ವೇಳೆ  ಐದು ಗೋಲ್ಡ್​ ಮೆಡಲ್​ ಕೂಡ ಪಡೆದಿದ್ದರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯಲ್ಲಿ ನಡೆಸಿದ ಮೆಕ್​ ಇನ್​ ಇಂಡಿಯಾ ಶೋನಲ್ಲೂ ಶಶಿ ಕುಮಾರ್ ಮತ್ತು ತಂಡ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಟಾಸ್ಕ್​ಗಳಲ್ಲಿ ಛಲ ಬಿಡದೇ ಸ್ಪರ್ಧಿಸಿದ್ದ ಶಶಿ ಕುಮಾರ್ ಸದಾ ಸೋಲನ್ನು ದ್ವೇಷಿಸುತ್ತಿದ್ದ. ಈ ಒಂದು ಗುಣವೇ ಮಾಡರ್ನ್​ ರೈತನನ್ನು ಚಾಂಪಿಯನ್ನಾಗಿಸಿದೆ. ಈ ಹಿಂದೆ ಬೆಂಗಳೂರಿನ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಕೂಡ ಗಿಟ್ಟಿಸಿಕೊಂಡಿದ್ದರು. ಲಕ್ಷ ಸಂಬಳದ ಪ್ಯಾಕೇಜ್​ ನೀಡಲಾಗಿದ್ದರೂ ಶಶಿಯ ಮನಸ್ಸು ಮಾತ್ರ ವ್ಯವಸಾಯದ ಕಡೆ ಹೊರಳಿತ್ತು. ಹೀಗಾಗಿ ಕೆಲಸದ ಆಫರ್​ ಕೈ ಬಿಟ್ಟು ಕೃಷಿಯತ್ತ ಮುಖ ಮಾಡಿದ್ದರು.

ಇದಕ್ಕಾಗಿಯೇ ರಾಮನಗರದಲ್ಲಿ ಜಾಗವನ್ನು ಲೀಸ್​ ಪಡೆದು ತನ್ನ ಕನಸನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ್ದರು. ಅಲ್ಲಿ ತರಕಾರಿ ಬೆಳೆಗಳನ್ನು ಬೆಳೆದೆದ್ದಲ್ಲದೆ, ಕೋಳಿ ಫಾರಂಗಳನ್ನೂ ಸ್ಥಾಪಿಸಿದ್ದರು. ಅಷ್ಟೇ ಅಲ್ಲದೆ ಕೃಷಿಯ ಬಗ್ಗೆ ಜನರಿಗೆ ಸಲಹೆಗಳನ್ನು ನೀಡಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗುವಂತ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ವಿದ್ಯಾಭ್ಯಾಸದ ವೇಳೆ ನಾಟಕ, ಡೊಳ್ಳು ಕುಣಿತ ಮತ್ತು ಕಲೆಯ ಬಗ್ಗೆ ಆಸಕ್ತಿ ಬೆಳೆಸಿದ್ದ ಶಶಿ ಕೆಲ ಸೀರಿಯಲ್​ನಲ್ಲೂ ಅಭಿನಯಿಸಿದ್ದಾರೆ. ಇವೆಲ್ಲದರ ನಡುವೆ ಕೃಷಿಯನ್ನೇ ನೆಚ್ಚಿಕೊಂಡಿರುವ ಶಶಿ ಕುಮಾರ್​ ಈಗಲೂ ಕೂಡ ತನ್ನ ತಂದೆ ತಾಯಿ ಮುದ್ದಿನ ಮಗ ಎಂಬುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ: ಈ ಬಾರಿಯ ಬಿಗ್​ ಬಾಸ್​ ವಿನ್ನರ್​ ಮಾಡರ್ನ್​ ರೈತ ಶಶಿ ಕುಮಾರ್ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್‌ ಫಿಲಂ ಸಿಟಿಯಲ್ಲಿ ಭಾನುವಾರ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಶಶಿ ಕುಮಾರ್ ಬಿಗ್​ ಬಾಸ್​ ವಿನ್ನರ್​ ಆಗಿದ್ದಾರೆ. ಈ ಮೂಲಕ ಚಿತ್ರರಂಗದವರ ಹೊರತಾಗಿ ಮೊದಲ ಬಾರಿಗೆ ರೈತನೊಬ್ಬ ಕೂಡ ಬಿಗ್​ ಬಾಸ್​ ಚಾಂಪಿಯನ್​ ಆಗಬಹುದು ಎಂದು ಮಾಡರ್ನ್​ ರೈತ ಶಶಿ ಕುಮಾರ್ ನಿರೂಪಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

First published: January 27, 2019, 11:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading