ಆನ್​ಲೈನ್​ನಲ್ಲಿ ಕಿಂಗ್​ ಖಾನ್​ ಶಾರುಖ್​ರನ್ನೂ ಹಿಂದಿಕ್ಕಿದ ರಾಕಿಂಗ್​ ಸ್ಟಾರ್​ ಯಶ್​..!

ಒಟ್ಟಾರೆ ಆನ್‍ಲೈನ್ ರೇಟಿಂಗ್‍ನಲ್ಲೇನೋ ಕೆ.ಜಿ.ಎಫ್, ಬೇರೆ ಸಿನಿಮಾಗಳನ್ನು ಹಿಂದಕ್ಕೆ ಹಾಕಿದೆ. ಅದೇ ರೀತಿ ಬಿಡುಗಡೆಯಾದ ಮೇಲೆ ಕಲೆಕ್ಷನ್‍ನಲ್ಲೂ ಈ ಕಮಾಲ್ ಮಾಡೋಕಾಗುತ್ತಾ ಅನ್ನೋದು ಪರಭಾಷಾ ಸಿನಿಪಂಡಿತರ ಪ್ರಶ್ನೆ

Anitha E | news18
Updated:November 30, 2018, 5:21 PM IST
ಆನ್​ಲೈನ್​ನಲ್ಲಿ ಕಿಂಗ್​ ಖಾನ್​ ಶಾರುಖ್​ರನ್ನೂ ಹಿಂದಿಕ್ಕಿದ ರಾಕಿಂಗ್​ ಸ್ಟಾರ್​ ಯಶ್​..!
ಸಾಂದರ್ಭಿಕ ಚಿತ್ರ
Anitha E | news18
Updated: November 30, 2018, 5:21 PM IST
ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್‍ನ ಕಿಂಗ್ ಖಾನ್ ಶಾರುಖ್‍ರನ್ನೂ ಬೀಟ್ ಮಾಡಿದ್ದಾರೆ. ಕಾರಣ, ಯಶ್‍ರ 'ಕೆ.ಜಿ.ಎಫ್', ರೇಟಿಂಗ್ ವಿಷಯದಲ್ಲಿ ಶಾರುಖ್ ಅಭಿನಯದ 'ಝೀರೋ' ಚಿತ್ರವನ್ನೇ ಝೀರೋ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಕೆ.ಜಿ.ಎಫ್', ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಏಕ ಕಾಲದಲ್ಲಿ ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ, ಹೀಗೆ ಐದು ಭಾಷೆಗಳಲ್ಲಿ ರಿಲೀಸ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇಂತಹ ಸಾಹಸಕ್ಕೆ ಕೈಹಾಕಿರುವ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಯಶ್, ಧೈರ್ಯಕ್ಕೆ ಇಡಿ ಸ್ಯಾಂಡಲ್‍ವುಡ್ ಬೆನ್ನುತಟ್ಟಿದೆ.

ಇದನ್ನು ಓದಿ: ಅಮ್ಮನಿಗೆ ನೋವಾಗುತ್ತೆ ಎಂದು ದುಖಃವನ್ನೇ ನುಂಗಿದ ಅಂಬಿ ಮಗ ಅಭಿ

ಇಂತಹ ಬಹುನಿರೀಕ್ಷಿತ 'ಕೆ.ಜಿ.ಎಫ್' ಈಗ ಬಾಲಿವುಡ್ ಕಿಂಗ್​ಖಾನ್ ಶಾರುಖ್ ಖಾನ್ ನಟಿಸಿರುವ 'ಝೋರೋ' ಚಿತ್ರಕ್ಕೂ ಸವಾಲು ಹಾಕಿದೆ. ಹೌದು, ಈ ಎರಡೂ ಚಿತ್ರಗಳೂ ಇದೇ ಡಿಸೆಂಬರ್ 21ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸುತ್ತಿವೆ. ಬಿಡುಗಡೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಚಿತ್ರಗಳು ಅಭಿಮಾನಿಗಳ ಮನಸ್ಸು ಹಾಗೂ ಆನ್‍ಲೈನ್ ಎರಡೂ ಕಡೆಗಳಲ್ಲಿ ಟ್ರೆಂಡ್​ ಆಗೋದು ಸಾಮಾನ್ಯ. ಹೀಗಾಗಿಯೇ 'ಕೆ.ಜಿ.ಎಫ್' ಹಾಗೂ 'ಝೀರೋ' ಚಿತ್ರದ ಕ್ರೇಜ್ ಕೂಡ ದಿನೇ ದಿನೇ ಹೆಚ್ಚುತ್ತಿದೆ.ಆದರೆ ವಿಶೇಷ ಅಂದರೆ ಕೆಜಿಎಫ್ ಅಬ್ಬರದ ನಡುವೆ 'ಝೀರೋ' ಕಳೆದುಹೋಗಿದೆ. ಅದಕ್ಕೆ ಸಾಕ್ಷಿಯೆಂಬಂತೆ, ವಿಶ್ವದಾದ್ಯಂತ ಸುಮಾರು 5 ಲಕ್ಷ ಚಿತ್ರಗಳ ಮಾಹಿತಿ ಹೊಂದಿರುವ ಅತಿ ದೊಡ್ಡ ಸಿನಿಮಾ ರೇಟಿಂಗ್ ವೆಬ್‍ಸೈಟ್ ಐಎಂಡಿಬಿ ಹೊಸ ಅಂಕಿ ಅಂಶಗಳನ್ನು ಬಿಡುಗಡೆಮಾಡಿದೆ.  ಅದರ ಪ್ರಕಾರ ಆನ್‍ಲೈನ್‍ನಲ್ಲಿ 'ಕೆ.ಜಿ.ಎಫ್', 'ಝೀರೋ' ಚಿತ್ರಕ್ಕಿಂತ ಮೂರು ಪಟ್ಟು ಹೆಚ್ಚು ಸದ್ದು ಮಾಡುತ್ತಿದೆ. 'ಕೆ.ಜಿ.ಎಫ್' ಶೇ 56.8ರಷ್ಟು ಅಂಕ ಪಡೆದಿದ್ದರೆ, 'ಝೀರೋ' ಕೇವಲ ಶೇ 18.7ಕ್ಕೆ ಸುಸ್ತಾಗಿದೆ. ದಿನಕಳೆದಂತೆ 'ಕೆ.ಜಿ.ಎಫ್' ರೇಟಿಂಗ್ ಹೆಚ್ಚಾಗುತ್ತಿರೋದು, ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಉಳಿದಂತೆ ಮಲಯಾಳಂ ಸೂಪರ್​ಸ್ಟಾರ್​ ಮೋಹನ್‍ಲಾಲ್ ನಟಿಸಿರುವ 'ಒಡಿಯಾನ್', ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‍ಪೂತ್ ನಟಿಸಿರುವ ಕೇದಾರ್​ನಾಥ್, ರಣವೀರ್ ಸಿಂಗ್ ನಟಿಸಿರುವ 'ಸಿಂಬಾ', ಮರಾಠಿ ಚಿತ್ರ 'ಮೌಲಿ', ಚಿತ್ರಗಳು ನಂತರದ ಸ್ಥಾನದಲ್ಲಿವೆ. ಆ ಮೂಲಕ ಬಾಲಿವುಡ್ ಮಾತ್ರವಲ್ಲ ಬೇರೆ ಭಾಷೆಯ ಸಿನಿಮಾಗಳನ್ನೂ 'ಕೆ.ಜಿ.ಎಫ್' ಬಗ್ಗುಬಡಿದಿದೆ.
Loading...

ಇದನ್ನೂ ಓದಿ: ಅಪ್ಪಾಜಿಗಾಗಿ ಮತ್ತೆ ಕಾಲಿಡುವುದಿಲ್ಲ ಎಂದ ದಾಸ ದರ್ಶನ್​...

ಒಟ್ಟಾರೆ ಆನ್‍ಲೈನ್ ರೇಟಿಂಗ್‍ನಲ್ಲೇನೋ 'ಕೆ.ಜಿ.ಎಫ್', ಬೇರೆ ಸಿನಿಮಾಗಳನ್ನು ಹಿಂದಕ್ಕೆ ಹಾಕಿದೆ. ಅದೇ ರೀತಿ ಬಿಡುಗಡೆಯಾದ ಮೇಲೆ ಕಲೆಕ್ಷನ್‍ನಲ್ಲೂ ಈ ಕಮಾಲ್ ಮಾಡೋಕಾಗುತ್ತಾ ಅನ್ನೋದು ಪರಭಾಷಾ ಸಿನಿಪಂಡಿತರ ಪ್ರಶ್ನೆ. ಆ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ರಾಕಿಂಗ್ ಉತ್ತರ ಕೊಡ್ತೀವಿ ಅಂತಿದ್ದಾರೆ ಅಣ್ತಮ್ಮ ಅಭಿಮಾನಿಗಳು.

First published:November 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...