ಸಖತ್ ವೈರಲ್ ಆಗುತ್ತಿದೆ ಕೊರೋನಾ ವೈರಸ್ ಡೈಲಾಗ್

ದೇಶದಲ್ಲಿ ಸೋಂಕಿತರ ಸಂಖ್ಯೆ 650 ಕ್ಕೆ ಏರಿಕೆಯಾಗಿದ್ದು, ಈವರೆಗೆ 15 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ.

news18-kannada
Updated:March 26, 2020, 7:27 PM IST
ಸಖತ್ ವೈರಲ್ ಆಗುತ್ತಿದೆ ಕೊರೋನಾ ವೈರಸ್ ಡೈಲಾಗ್
ವೈರಸ್
  • Share this:
ಮಾರಣಾಂತಿಕ ಕೊರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ಈಗಾಗಲೇ ವಿಶ್ವದಾದ್ಯಂತ 21,000 ಜನ ಮೃತಪಟ್ಟಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ 4 ಲಕ್ಷವನ್ನೂ ಮೀರಿದೆ. ಇತ್ತ ಭಾರತದಲ್ಲೂ ಈ ಸೋಂಕು ಹರಡದಂತೆ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ.

ಆದರೂ ದೇಶದಲ್ಲಿ ಸೋಂಕಿತರ ಸಂಖ್ಯೆ 650 ಕ್ಕೆ ಏರಿಕೆಯಾಗಿದ್ದು, ಈವರೆಗೆ 15 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ.

ಇದರ ನಡುವೆ ಕೆಲವು ನೆಟ್ಟಿಗರು ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲಿ 3 ಈಡಿಯಟ್ಸ್​ ಚಿತ್ರದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. rajಚಿತ್ರದ ಸನ್ನಿವೇಶವೊಂದರಲ್ಲಿ ಅಮೀರ್ ಖಾನ್, ಶರ್ಮನ್ ಜೋಶಿ ಹಾಗೂ ಮಾಧವನ್ ಕಂಠಪೂರ್ತಿ ಕುಡಿದು ಮಾತನಾಡುವ ದೃಶ್ಯ. ಇದೇ ವೇಳೆ ಈ ವೈರಸ್​ನ್ನು ಜಗತ್ತಿನಿಂದ ಕರೆಸಿಕೋ ಎಂದು ಶರ್ಮ ಜೋಶಿ ದೇವರಲ್ಲಿ ಕೇಳಿಕೊಳ್ಳುತ್ತಾರೆ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಇರುವ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಅಂದಹಾಗೆ 3 ಈಡಿಯಟ್ಸ್ ಚಿತ್ರದಲ್ಲಿ ವೈರಸ್ ಅಂದರೆ ಕಾಲೇಜ್ ಪ್ರಿನ್ಸಿಪಾಲ್ ಅವರ ಅಡ್ಡ ಹೆಸರು. ಒಟ್ಟಿನಲ್ಲಿ ವರ್ಷಗಳ ಹಿಂದೆ ರಾಜ್​ ಕುಮಾರ್ ಹಿರಾನಿ ಬತ್ತಳಿಕೆಯಿಂದ ಮೂಡಿ ಬಂದಿದ್ದ 3 ಈಡಿಯಟ್ಸ್ ಚಿತ್ರದ ಈ ಡೈಲಾಗ್ ಪ್ರಸ್ತುತ ಸನ್ನಿವೇಶದ ಎಲ್ಲರ ಪ್ರಾರ್ಥನೆ ಎಂಬುದು ನೆಟ್ಟಿಗರ ಅಂಬೋಣ.
First published: March 26, 2020, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading