`ಶಾರ್ಕ್ ಟ್ಯಾಂಕ್ ಇಂಡಿಯಾ‘ ನೂತನ ರಿಯಾಲಿಟಿ ಶೋ: ಡಿ.20ರಿಂದ ಸೋನಿ ಚಾನೆಲ್​ನಲ್ಲಿ ಆರಂಭ!

ಸೋನಿ ಚಾನೆಲ್​ನಲ್ಲಿ “ಶಾರ್ಕ್ ಟ್ಯಾಂಕ್ ಇಂಡಿಯಾ(Shark Tank India)” ನೂತನ ರಿಯಾಲಿಟಿ ಶೋ ಆರಂಭವಾಗುತ್ತಿದೆ ಬಿಸಿನೆಸ್ ತೆರೆಯುವ ಆಸೆ ಇದ್ದವರಿಗೆ ಬಿಸಿನೆಸ್ ಶಾರ್ಕ್​ಗಳಿಂದ ಐಡಿಯಾ(Idea) ನೀಡುವ ಶೋ ಇದಾಗಿದೆ.

ಶಾರ್ಕ್​ ಟ್ಯಾಂಕ್​ ಇಂಡಿಯಾ ಜಡ್ಜ್​ಗಳು

ಶಾರ್ಕ್​ ಟ್ಯಾಂಕ್​ ಇಂಡಿಯಾ ಜಡ್ಜ್​ಗಳು

  • Share this:
ಸೋನಿ (Sony) ಸಂಸ್ಥೆಯಲ್ಲಿ ಸದಾ ಹೊಸತನಕ್ಕೆ ಹೆಚ್ಚು ಮಹತ್ವ. ಇದೀಗ ಸೋನಿ ಚಾನೆಲ್​ನಲ್ಲಿ ವಿನೂತನ ರಿಯಾಲಿಟಿ ಶೋ (Reality Show) ಒಂದು ಆರಂಭವಾಗುತ್ತಿದೆ. ಯುವಪೀಳಿಗೆಗೆ ಈಗ ಬ್ಯುಸಿನೆಸ್(Busniess)​ ಮಾಡುವ ಆಸೆ ಹೆ್ಚಿರುತ್ತೆ. ಸ್ವಲ್ಪ ಹಣ ಹೂಡಿಕೆ ಮಾಡಿ ದುಪಟ್ಟು ಹಣ ಗಳಿಸುಬೇಕೆಂಬ ಆಸೆ ಯಾರಿಗಿಲ್ಲ ಹೇಳಿ. ಇಂಥವರಿಗಾಗಿಯೇ ಸೋನಿ ಚಾನೆಲ್​ನಲ್ಲಿ “ಶಾರ್ಕ್ ಟ್ಯಾಂಕ್ ಇಂಡಿಯಾ” (Shark Tank India) ನೂತನ ರಿಯಾಲಿಟಿ ಶೋ ಆರಂಭವಾಗುತ್ತಿದೆ ಬಿಸಿನೆಸ್ ತೆರೆಯುವ ಆಸೆ ಇದ್ದವರಿಗೆ ಬಿಸಿನೆಸ್ ಶಾರ್ಕ್​ಗಳಿಂದ ಐಡಿಯಾ (Idea) ನೀಡುವ ಶೋ ಇದಾಗಿದೆ. ಬ್ಯುಸಿನೆಸ್​ ಪಂಡಿತರು ಹೇಗೆ ಒಂದು ಬ್ಯುಸಿನೆಸ್​ ಶುರು ಮಾಡಲು ಟಿಪ್ಸ್​ ನೀಡಲಿದ್ದಾರೆ.  ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಕೌನ್‌ಬನೇಗಾ ಕರೋಡ್ ಪತಿ (Kaun Banega Crorepati) ಮುಕ್ತಾಯದ ಬಳಿಕ ಡಿಸೆಂಬರ್ 20ರಿಂದ ರಾತ್ರಿ 9 ಗಂಟೆಗೆ “ಶಾರ್ಕ್ ಟ್ಯಾಂಕ್ ಇಂಡಿಯಾ” ಎಂಬ ನೂತನ ರಿಯಾಲಿಟಿ ಶೋ ಪ್ರಾರಂಭಿಸುತ್ತಿದ್ದು, ಸೋನಿ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.ಸೋನಿ ಪಿಕ್ಚರ್ಸ್ ಇಂಡಿಯಾ (Sony Pictures India) ಸ್ವಾಧೀನ ಪಡಿಸಿಕೊಂಡಿರುವ ಜಾಗತಿಕವಾಗಿ ಈಗಾಗಲೇ ಯಶಸ್ವಿ ಕಂಡಿರುವ ಶಾರ್ಕ್ ಟ್ಯಾಂಕ್ ಶೋನನ್ನು ಭಾರತದ ಟೆಲಿವಿಷನ್‌ (Televisoin) ನಲ್ಲಿಯೂ ಪ್ರಸಾರ ಮಾಡುವ ಇಂಗಿತದಿಂದ ಈ ರಿಯಾಲಿಟಿ ಶೋ ಪ್ರಾರಂಭಿಸಲಾಗಿದ್ದು, ಇದರ ಮೊದಲ ಆವೃತ್ತಿ ಡಿಸೆಂಬರ್20 ರಿಂದ ಆರಂಭಗೊಳ್ಳತ್ತಿದೆ.

ಬ್ಯುಸಿನೆಸ್​ ಸಂಬಂಧಿತ ಶೋ ‘ಶಾರ್ಕ್​ ಟ್ಯಾಂಕ್​’!

ಶಾರ್ಕ್ ಟ್ಯಾಂಕ್ ಈ ರಿಯಾಲಿಟಿ ಶೋ ಎಲ್ಲಾ ಶೋಗಳಿಗಿಂತ ವಿಭಿನ್ನವಾಗಿದೆ. ಬಿಸಿನೆಸ್ ಸಂಬಂಧಿತ ಶೋ ಆಗಿರುವ ಇದು, ಎಲ್ಲಾ ವರ್ಗದ ಅತಿದೊಡ್ಡ ಬಿಸಿನೆಸ್ ಮ್ಯಾನ್‌ಗಳನ್ನು ಈ ರಿಯಾಲಿಟಿ ಶೋಗಳಲ್ಲಿ ಪರಿಚರಿಸಲಾಗುತ್ತದೆ. ಈ ಶೋನಲ್ಲಿ ಬಿಸಿನೆಸ್ ಸಂಬಂಧಿತ ಆಕ್ಟಿವಿಟೀಸ್‌ಗಳನ್ನು ನೀಡಲಾಗುತ್ತದೆ. ಇದರಲ್ಲಿ ಬಿಸಿನೆಸ್ ಸಂಬಂಧಿತ ಐಡಿಯಾ, ಅವಕಾಶ ಮತ್ತು ವೇದಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದನ್ನು ಶಾರ್ಕ್ ಗಳೆಂದು ಗುರುತಿಸಿಕೊಳ್ಳುವ ಅತಿದೊಡ್ಡ ಬಿಸಿನೆಸ್‌ಮ್ಯಾನ್‌ಗಳು ಅಭ್ಯರ್ಥಿಗಳ ಬಿಸಿನೆಸ್ ಐಡಿಯಾಗಳನ್ನು ಮೌಲ್ಯಮಾಪನ ಮಾಡುತ್ತಾರೆ.


ಇದನ್ನು ಓದಿ : ಸೆಕ್ಸಿ ಲುಕ್​ನಲ್ಲಿ ಪೋಸ್​ ಕೊಟ್ಟ ಅನನ್ಯಾ ಪಾಂಡೆ: `ಲೈಗರ್’ ಬೆಡಗಿಯ ಅವತಾರಕ್ಕೆ ಫ್ಯಾನ್ಸ್​ ಫಿದಾ!

ಮೊದಲ ಆವೃತ್ತಿಯಲ್ಲೇ ಘಟಾನುಘಟಿಗಳು!

ಮೊದಲ ಆವೃತ್ತಿಯ ಶಾರ್ಕ್ ಗಳೆಂದರೆ ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನೀತಾ ಸಿಂಗ್, ಲೆನ್ಸ್ ಕಾರ್ಟ್ ಸಂಸ್ಥಾಪಕ ಪೆಯೂಶ್ ಬನ್ಸಾಲ್, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಕಾರ್ಯನಿರ್ವಾಹಕ ನಿರ್ದೇಶಕ ನಮಿತಾ ಥಾಪರ್, ಭಾರತ್ ಸಂಸ್ಥಾಪಕ ಅಶ್ನೀರ್ ಗ್ರೋವರ್, ಮಾಮಅರ್ಥ್ ಸಹ ಸಂಸ್ಥಾಪಕ ಗಜಲ್ ಅಲಾಗ್, ಬೋಟ್ ಹಾಗೂ ಶಾದಿ.ಕಾಂ ಸಂಸ್ಥೆಯ ಮುಖ್ಯಸ್ಥರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.ಈ ಶೋನನ್ನು ರಣವಿಜಯ್ ಸಿಂಹ ನಡೆಸಿಕೊಡುತ್ತಿದ್ದಾರೆ.

ಇದನ್ನು ಓದಿ : ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

ಕೋವಿಡ್​ ಕಾರಣದಿಂದ ತಡವಾದ ಶೋ!

ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮುಖ್ಯಸ್ಥ ಆಶಿಶದ್ ಗೋಲ್ವಾಲ್ಕರ್ (Ashish Golwalkar) ಮಾತನಾಡಿ, ಮೂರು ವರ್ಷಗಳ ಹಿಂದೆಯೇ ಈ ಶೋನನ್ನು ಭಾರತದಲ್ಲಿ ಪ್ರದರ್ಶಿಸುವ ಇಂಗಿತ ಹೊಂದಿದ್ದೆವು. ಆದರೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಭಾರತದಲ್ಲಿ ಬಿಸಿನೆಸ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಬಿಸಿನೆಸ್ ತಂತ್ರಗಳು ಸೇರಿದಂತೆ ಬಿಸಿನೆಸ್ ಸಂಬಂಧಿತ ಆಕ್ಟಿವಿಟೀಸ್ ಹೊಂದಿರುವ ಶೋ ಇದಾಗಿದ್ದು, ಜನರಿಗೆ ಮೆಚ್ಚುಗೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನೂ ಈ ವಿನೂತನ ಕಾರ್ಯಕ್ರಮದಿಂದ ಬ್ಯುಸಿನೆಸ್​ ಮಾಡುವ ಆಸೆ ಇರುವವರುಗೆ ಬಹಳ ಅನುಕೂಲವಾಗಲಿದೆ. ಹೀಗಾಗಿ ಈ ರಿಯಾಲಿಟಿ ಶೋ ಅನ್ನು ಮರೆಯದೇ ನೋಡಿ ಡಿಸೆಂಬರ್​ 20ರಿಂದ ಈ ಶಾರ್ಕ್​ ಟ್ಯಾಂಕ್​ ಇಂಡಿಯಾ ರಿಯಾಲಿಟಿ ಶೋ ಆರಂಭವಾಗಲಿದೆ.
Published by:Vasudeva M
First published: