ಮತ್ತೆ ಬಂದ ಗುರು ಶಿಷ್ಯರು: ಶರಣ್ ನಟನೆಯ ಹೊಸ ಚಿತ್ರಕ್ಕೆ ಹಳೇ ಟೈಟಲ್

ಈ ವರ್ಷ ಜೆಂಟಲ್ ಮನ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶಕರಾದ ಜಡೇಶ್ ಹಂಪಿ ಗುರು ಶಿಷ್ಯರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಮತ್ತೆ ಬಂದ ಗುರು ಶಿಷ್ಯರು

ಮತ್ತೆ ಬಂದ ಗುರು ಶಿಷ್ಯರು

  • Share this:
ಶರಣ್ ನಟನೆಯ ಹೊಸ ಚಿತ್ರಕ್ಕೆ ಗುರು ಶಿಷ್ಯರು ಎಂಬ ಶೀರ್ಷಿಕೆ ಫಿಕ್ಸ್ ಆಗಿದೆ. ಟೈಟಲ್ ಬಿಡುಗಡೆಗಾಗಿಯೇ ಇದೇ ಮೊದಲ ಬಾರಿಗೆ ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಒಟ್ಟಾಗಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದರು. ಹಿರಿಯ ನಿರ್ಮಾಪಕ ದ್ವಾರಕೀಶ್, ಈ ಟೈಟಲ್ ಟೀಸರ್ ಬಿಡುಗಡೆ ಮಾಡಿ ಶೀರ್ಷಿಕೆ ಅನಾವರಣ ಗೊಳಿಸಿದರು. ಅಂದಹಾಗೆ 1981 ರಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿತ್ತು "ಗುರು ಶಿಷ್ಯರು" ಸಿನಿಮಾ. ಈಗ ಇದೇ ಶೀರ್ಷಿಕೆಯನ್ನು ಮತ್ತೆ ತಮ್ಮ ಚಿತ್ರಕ್ಕಾಗಿ ಮರುಬಳಕೆ ಮಾಡುತ್ತಿದ್ದಾರೆ ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ಹಾಗೂ ಶರಣ್. ಲಡ್ಡು ಫಿಲ್ಮ್ಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ಸ್ ಈ ಹೊಸ ಸಿನೆಮಾ ನಿರ್ಮಾಣ ಮಾಡುತ್ತಿವೆ.

ಶರಣ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕರೂ ಕೂಡ. "ದ್ವಾರಕೀಶ್ ಅವರ ಗುರು ಶಿಷ್ಯರು ಕನ್ನಡದಲ್ಲಿ ಒಂದು ಎಪಿಕ್ ಸಿನೆಮಾ. ದ್ವಾರಕೀಶ್ ಅವರು ನಮ್ಮ ಲಿವಿಂಗ್ ಲೆಜೆಂಡ್. ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಸಿನೆಮಾ ಮತ್ತು ಟೈಟಲ್ ಗುರುಶಿಷ್ಯರು. ಅದನ್ನು ನಾವು ಬಳಸಲು ಅವರನ್ನು ಕೇಳಿದಾಗ ಅವರು ತೋರಿಸಿದ ಪ್ರೀತಿ ಮತ್ತು ಆಶೀರ್ವಾದ ದೊಡ್ಡದು. ಲಡ್ಡು ಸಿನಿಮಾಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ಸ್ ಒಂದೇ ಸಂಸ್ಥೆ ಎಂದರೂ ತಪಲ್ಲ" ಎನ್ನೋದು ಶರಣ್ ಮಾತು.

Samantha Akkineni: ಅಭಿಮಾನಿಗಳನ್ನು ದಂಗಾಗಿಸಿದ ಸಮಂತಾ ಸಂಭಾವನೆ: ಒಂದು ಶೋ ನಿರೂಪಣೆಗೆ ಎಷ್ಟು ಗೊತ್ತೇ?

ಈ ವರ್ಷ ಜೆಂಟಲ್ ಮನ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶಕರಾದ ಜಡೇಶ್ ಹಂಪಿ ಗುರು ಶಿಷ್ಯರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 1995ರಲ್ಲಿ ನಡೆಯುವ ಕಥೆ ಎಂದು ಹೇಳಿರುವ ಈ ಚಿತ್ರದ ಇತರೇ ವಿವರಗಳು ಸದ್ಯಕ್ಕೆ ಬಹಿರಂಗವಾಗಿಲ್ಲ.

ಬಿ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು, ಆರೂರು ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಲಡ್ಡು ಸಿನಿಮಾ ಹೌಸ್, ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್​ನ ಸಿನಿಮಾ ಇದಾಗಿದೆ.
Published by:Vinay Bhat
First published: