HOME » NEWS » Entertainment » SHARAN AND ASHIKA RANGANATH STARRER AVATAR PURUSHA KANNADA MOVIE TEASER RELEASED RMD

ಶರಣ್​-ಆಶಿಕಾ ನಡುವೆ ಮತ್ತೆ ಚುಟು ಚುಟು; ಅನಾವರಣಗೊಂಡಿತು ಅವತಾರ ಪುರುಷನ ನಾನಾವತಾರ!

ಸುನಿ ನಿರ್ದೇಶನದ ‘ಅವತಾರ ಪುರಷ’ ಚಿತ್ರಕ್ಕೆ ಶರಣ್​ ನಾಯಕನಾದರೆ, ಆಶಿಕಾ ನಾಯಕಿ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದ್ದು, ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.

Rajesh Duggumane | news18-kannada
Updated:February 6, 2020, 11:01 AM IST
ಶರಣ್​-ಆಶಿಕಾ ನಡುವೆ ಮತ್ತೆ ಚುಟು ಚುಟು; ಅನಾವರಣಗೊಂಡಿತು ಅವತಾರ ಪುರುಷನ ನಾನಾವತಾರ!
ಆಶಿಕಾ-ಶರಣ್​
  • Share this:
ನಟ ಶರಣ್​ ಹಾಗೂ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದ ‘ಚುಟು ಚುಟು’ ಹಾಡು ಸಖತ್​ ವೈರಲ್​ ಆಗಿತ್ತು. ಈ ಹಾಡು ಕೋಟಿ ಕೋಟಿ ವೀಕ್ಷಣೆ ಕಂಡಿತ್ತು. ಈಗ ಶರಣ್​ ಎದೆಯಲ್ಲಿ ಮತ್ತೆ ಚುಟು ಚುಟು ಶುರುವಾಗಿದೆ. ಇದಕ್ಕೆಲ್ಲ ಉತ್ತರ ‘ಅವತಾರ ಪುರುಷ’ ಟೀಸರ್​.

ಇಂದು ಶರಣ್​ ಜನ್ಮದಿನ. ಹೀಗಾಗಿ ಅವರ ನಟನೆಯ ‘ಅವತಾರ ಪುರುಷ’ ಚಿತ್ರದ ಟೀಸರ್​ ಇಂದು ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಸಿಂಪಲ್​ ಸುನಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ.  ಸುನಿ ಚಿತ್ರ ಎಂದರೆ ಅಲ್ಲಿ ಭರಪೂರ ಮನರಂಜನೆ ಇದ್ದೇ ಇರುತ್ತದೆ. ‘ಅವತಾರ ಪುರಷ’ ಕೂಡ ಹೀಗೆಯೇ ಇರಲಿದೆ ಎನ್ನುವುದಕ್ಕೆ ಟೀಸರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಇದರ ಜೊತೆ ಒಂದಷ್ಟು ಸೆಂಟಿಮೆಂಟ್​ ಕೂಡ ಬೆರೆಸಲಾಗಿದೆ.

ಕಾಣೆಯಾದ ಮಗ. ಮಗನ ಕೊರಗಲ್ಲಿ ಹಾಸಿಗೆ ಹಿಡಿದ ತಾಯಿ. ಈ ಮಧ್ಯೆ ಸಿನಿಮಾ ಚಾನ್ಸ್​​ಗಾಗಿ ಅಲೆಯುತ್ತಿರುವ ಕರ್ಣ (ಶರಣ್​). ಈ ವೇಳೆ ತಾಯಿಯ ಆರೋಗ್ಯ ಸರಿ ಮಾಡಲು ಮಗನ ರೂಪದಲ್ಲಿ ಬರುತ್ತಾನೆ ಕರ್ಣ​. ಈ ವೇಳೆ ಕರ್ಣ ನಾನಾವತಾರ ತಾಳುತ್ತಾನೆ.ಇನ್ನು ಟೀಸರ್​ನ ಕೊನೆಯಲ್ಲಿ ನಿರ್ದೇಶಕರು ಹೊಸ ಟ್ವಿಸ್ಟ್​ ಇಟ್ಟಿದ್ದಾರೆ. ಸಿನಿಮಾದಲ್ಲಿ ಸಸ್ಪೆನ್ಸ್​ ಕೂಡ ಇರಲಿದೆ ಎನ್ನುವ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು, ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.

ಸುನಿ ನಿರ್ದೇಶನದ ‘ಅವತಾರ ಪುರಷ’ ಚಿತ್ರಕ್ಕೆ ಶರಣ್​ ನಾಯಕನಾದರೆ, ಆಶಿಕಾ ನಾಯಕಿ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದ್ದು, ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.
First published: February 6, 2020, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading