Shane Warne: ಕಮರಿಹೋಯ್ತು ಶೇನ್​ ವಾರ್ನ್​ರ ಆ ಕನಸು.. ಬಣ್ಣ ಹಚ್ಚಬೇಕು ಅನ್ನುವಷ್ಟರಲ್ಲೇ ಕಥೆ ಮುಗಿಯಿತು!

ಕ್ರಿಕೆಟ್​ ಮೂಲಕ ಅಸಂಖ್ಯಾತ ಅಭಿಮಾಣಿಗಳನ್ನು ಶೇನ್​ ವಾರ್ನ್ ಅವರು ಸಂಪಾದಿಸಿದ್ದರು. ಕ್ರೀಡೆ ಹೊರತಾಗಿ ಸಿನಿಮಾದಲ್ಲಿ ನಟಿಸುವ ಆಸೆ ಶೇನ್​ ವಾರ್ನ್ ಅವರಿಗೆ ಇತ್ತಂತೆ. ಅದಕ್ಕೆ ಸಾಕಷ್ಟು ಪ್ಲ್ಯಾನ್​ ಕೂಡ ಮಾಡಿಕೊಂಡಿದ್ದರಂತೆ ಶೇನ್​ ವಾರ್ನ್.

ಲಿಯೊನಾರ್ಡೊ, ಶೇನ್​ ವಾರ್ನ್, ಬ್ರಾಡ್​ ಪಿಟ್​

ಲಿಯೊನಾರ್ಡೊ, ಶೇನ್​ ವಾರ್ನ್, ಬ್ರಾಡ್​ ಪಿಟ್​

  • Share this:
ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್(Leg Spinner) ಶೇನ್ ವಾರ್ನ್​ ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿದ್ದಾರೆ (Shane Warne Passes Away). ಅವರಿಗೆ 52 ವರ್ಷ ವಯಸ್ಸಾಗಿತ್ತು. ಥೈಲ್ಯಾಂಡ್‌ನಲ್ಲಿದ್ದ ಶೇನ್ ವಾರ್ನ್ ಇದ್ದಕ್ಕಿದ್ದಂತೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯನ್ ನ್ಯೂಸ್ ಚಾನೆಲ್ ಫಾಕ್ಸ್ ಸ್ಪೋರ್ಟ್‌(Fox Sports) ವರದಿ ಮಾಡಿದೆ. ವಾರ್ನ್ ಅವರು ಥಾಯ್ಲೆಂಡ್‌(Thailand)ನ ವಿಲ್ಲಾದಲ್ಲಿ ನೆಲೆಸಿದ್ದರು. ಶನಿವಾರ ಬೆಳಿಗ್ಗೆ  ಅವರು ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಕ್ರಿಕೆಟ್​ನ ದಿಗ್ಗಜನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಮ್ಮನ್ನೆಲ್ಲ ಬಿಟ್ಟು ಸ್ಪಿನ್ ಮಾಂತ್ರಿಕ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.ತಮ್ಮ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಹಲವು ದಾಖಲೆಗಳು ಶೇನ್ ವಾರ್ನ್ ಹೆಸರಿನಲ್ಲಿವೆ. 

ಸಿನಿಮಾ ಮಾಡುವ ಕನಸು ಹೊಂದಿದ್ದ ಶೇನ್​ ವಾರ್ನ್!

ಕ್ರಿಕೆಟ್​ ಮೂಲಕ ಅಸಂಖ್ಯಾತ ಅಭಿಮಾಣಿಗಳನ್ನು ಶೇನ್​ ವಾರ್ನ್ ಅವರು ಸಂಪಾದಿಸಿದ್ದರು. ಕ್ರೀಡೆ ಹೊರತಾಗಿ ಸಿನಿಮಾದಲ್ಲಿ ನಟಿಸುವ ಆಸೆ ಶೇನ್​ ವಾರ್ನ್ ಅವರಿಗೆ ಇತ್ತಂತೆ. ಅದಕ್ಕೆ ಸಾಕಷ್ಟು ಪ್ಲ್ಯಾನ್​ ಕೂಡ ಮಾಡಿಕೊಂಡಿದ್ದರಂತೆ ಶೇನ್​ ವಾರ್ನ್. ಅದು ಕೂಡ ಭಾರತ ಸಿನಿಮಾದಲ್ಲಿಯೇ ನಟಿಸುವ ಹಲವಾರು ಆಫರ್​​ಗಳು ಕೂಡ ಅವರಿಗೆ ಬಂದಿತ್ತಂತೆ. ಕೆಟ್​ ಮತ್ತು ಸಿನಿಮಾ ಜಗತ್ತಿನ ನಡುವೆ ಮೊದಲಿನಿಂದಲೂ ಒಂದು ನಂಟು ಇದೆ. ಕೆಲವು​ ಲೆಜೆಂಡರಿ ಕ್ರಿಕೆಟರ್​​ಗಳ ಕುರಿತು ಸಿನಿಮಾ ಮಾಡಲಾಗಿದೆ. ಅದೇ ರೀತಿ ಶೇನ್​ ವಾರ್ನ್​ ಕುರಿತಾಗಿಯೂ ಸಿನಿಮಾ ಸಿದ್ಧಗೊಳ್ಳುವ ಬಗ್ಗೆ ಮಾತುಕತೆ ನಡೆದಿತ್ತು.

ಶೇನ್​ ವಾರ್ನ್ ಬಯೋಪಿಕ್​ ಬಗ್ಗೆ ಹರಿದಾಡಿತ್ತು ಸುದ್ದಿ

ಹೌದು, ಶೇನ್​ ವಾರ್ನ್​ ಅವರ ಬಯೋಪಿಕ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿತ್ತು.  2017ರಲ್ಲಿ ಶೇನ್​ ವಾರ್ನ್​ ಮೊದಲಿಗೆ ಬಾಲಿವುಡ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಶೇನ್​ ವಾರ್ನ್​ ತಿಳಿಸಿದ್ದರು.‘ ನನಗೆ ಸಾಕಷ್ಟು ಬಾಲಿವುಡ್​ ಸಿನಿಮಾಗಳಿಂದ ಆಫರ್​ ಬರುತ್ತಿದೆ’ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಆ ಸಿನಿಮಾಗಳು ಡ್ರಾಪ್​ ಆಗಿದ್ದವು. ಇದಾದ ನಂತರ ಶೇನ್​ ವಾರ್ನ್ ಬಯೋಪಿಕ್​ ಬರಲಿದೆ ಅಂತ ಸುದ್ದಿಯಾಗಿತ್ತು. ಕೊರೋನಾ ಕಾರಣದಿಂದ ಆ ಸಿನಿಮಾ ಕೂಡ ನಿಂತಿತ್ತು.

ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಬ್ರಾಡ್​ ಪಿಟ್​, ಲಿಯೊನಾರ್ಡೊ ನಟಿಸಬೇಕು ಅಂದಿದ್ರು ಶೇನ್​!

ಹೌದು, ಶೇನ್​ ವಾರ್ನ್ ಅವರ ಬಯೋಪಿಕ್​ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು. ‘ನನ್ನ ಬಯೋಪಿಕ್​ನಲ್ಲಿ ನನ್ನ ಪಾತ್ರವನ್ನು ಹಾಲಿವುಡ್​ ಹೀರೋಗಳಾದ ಬ್ರಾಡ್​ ಪಿಟ್​ ಅಥವಾ ಲಿಯೊನಾರ್ಡೊ ಡಿಕಾಪ್ರಿಯೊ ನಟಿಸಬೇಕು’ ಎಂದು ಶೇನ್​ ವಾರ್ನ್ ಹೇಳಿಕೊಂಡಿದ್ದರು.ಡ್ರಗ್ಸ್​, ಪರಸ್ತ್ರೀ ಸಹವಾಸ, ವಿವಾದ ಸೇರಿದಂತೆ ಶೇನ್​ ವಾರ್ನ್​ ಅವರ ಬದುಕಿನ ಎಲ್ಲ ವಿವರಗಳನ್ನೂ ಆ ಸಿನಿಮಾ ಒಳಗೊಂಡಿರಬೇಕು ಎಂದು ಪ್ಲ್ಯಾನ್​ ಮಾಡಲಾಗಿತ್ತು. ಆದರೆ, ಶೇನ್​ ವಾರ್ನ್ ಇದ್ದಕಿದ್ದ ಹಾಗೇ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​​, ಫಿಕ್ಸಿಂಗ್​​ ವಿವಾದಗಳಿಂದ ಹೊರತಾಗಿರಲಿಲ್ಲ ವಾರ್ನ್ ಬದುಕು

ಭಾವನಾತ್ಮಕ ಟ್ವೀಟ್​ ಮಾಡಿದ ಸಚಿನ್ ತೆಂಡೂಲ್ಕರ್​!

‘ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ.  ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ನಮ್ಮ ಸ್ಪರ್ಧೆ ಮತ್ತು ಮೈದಾನದ ಹೊರಗೆ ನಮ್ಮ ಹಾಸ್ಯಮಯ ಕ್ಷಣಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ’ ಎಂದು ಸಚಿನ್​ ತೆಂಡೂಲ್ಕರ್​ ಟ್ವೀಟ್ ಮಾಡಿದ್ದಾರೆ.
Published by:Vasudeva M
First published: