Bedhadak: ಬಾಲಿವುಡ್ ಗೆ ಮತ್ತೊಂದು ಬ್ಯೂಟಿ ಕ್ವೀನ್ ಎಂಟ್ರಿ, ಯಾರು ಈ ಚೆಂದುಳ್ಳಿ ಚೆಲುವೆ?

ಶಶಾಂಕ್ ಖೈತಾನ್ ನಿರ್ದೇಶಿಸಲಿರುವ ‘ಬೇಧಡಕ್’ ಚಿತ್ರದ ಮೂಲಕ ಬಾಲಿವುಡ್ ನ ಬಣ್ಣದ ಲೋಕಕ್ಕೆ ನಟಿ ಶನಾಯಾ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಲಿದ್ದು, ಈಗಾಗಲೇ ಚಿತ್ರತಂಡ ನಟಿ ಶನಾಯಾ ಅವರ ಮೊದಲ ಲುಕ್ ಅನ್ನು ಹಂಚಿಕೊಂಡಿದೆ.

’ಬೇಧಡಕ್’

’ಬೇಧಡಕ್’

  • Share this:
ಬಾಲಿವುಡ್ ನಲ್ಲಿ ಶನಾಯಾ ಕಪೂರ್ (Shanaya kapoor) ಎಂದರೆ ಥಟ್ಟನೆ ಬಹುತೇಕರಿಗೆ ನೆನಪಾಗುವುದಿಲ್ಲ, ಅದೇ ಅವರ ತಂದೆ ಸಂಜಯ್ ಕಪೂರ್ (Sanjay kapoor) ಅವರ ಹೆಸರು ಕೇಳಿದರೆ ಹೌದು, ನಟ ಸಂಜಯ್ ಕಪೂರ್ ಅವರ ಮಗಳು ಅಂತಾ ನೆನಪಾಗುತ್ತದೆ. ಆದರೆ ಈಗ ನಾವು ಹೇಳುತ್ತಿರುವುದು ಬಾಲಿವುಡ್ ಗೆ ಸದ್ಯದಲ್ಲೇ ಎಂಟ್ರಿ ನೀಡಲಿರುವ ಶನಾಯಾ ಬಗ್ಗೆ. ಇವರು ಶಶಾಂಕ್ ಖೈತಾನ್ ನಿರ್ದೇಶಿಸಲಿರುವ ‘ಬೇಧಡಕ್’ (Bedhadak) ಚಿತ್ರದ ಮೂಲಕ ಬಾಲಿವುಡ್ ನ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ (Karan johar) ನಿರ್ಮಿಸಲಿದ್ದಾರೆ. ಈಗಾಗಲೇ ಚಿತ್ರತಂಡ ನಟಿ ಶನಾಯಾ ಅವರ ಮೊದಲ ಲುಕ್ ಅನ್ನು ಹಂಚಿಕೊಂಡಿದೆ. ಇನ್ನು, ಚಿತ್ರದಲ್ಲಿ ನಿಮ್ರಿತ್ ಎಂಬ ಪಾತ್ರದಲ್ಲಿ ಸುಂದರ ನಟಿ ಶನಾಯಾ ಕಪೂರ್ ಕಾಣಿಸಿಕೊಳ್ಳಲಿದ್ದು, ಅವರ ನಟನೆಯಲ್ಲಿರುವ ಉತ್ಸಾಹವನ್ನು ಪರದೆಯ ಮೇಲೆ ನೋಡಲು ನಾವು ಕಾತುರರಾಗಿದ್ದೇವೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಬಾಲಿವುಡ್​ ಗೆ ಎಂಟ್ರಿ ಕೊಟ್ಟ ಶನಾಯಾ:

ಬೇಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿರುವುದರ ಬಗ್ಗೆ ಶನಾಯಾ ಮಾತನಾಡಿದ್ದು, ’ಅದ್ಭುತ ನಿರ್ದೇಶಕರಾದ ಶಶಾಂಕ್ ಖೈತಾನ್ ನಿರ್ದೇಶಿಸುತ್ತಿರುವ ಬೇಧಡಕ್ ಚಿತ್ರದ ಮೂಲಕ ಬಾಲಿವುಡ್​ ಗೆ ಪಾದಾಪರ್ಣಣೆ ಮಾಡುತ್ತಿರುವ ನನಗೆ ತುಂಬಾ ಖುಷಿಯಾಗುತ್ತಿದೆ. ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಇನ್ನೂ ಕಾಯಲು ಸಾಧ್ಯವಿಲ್ಲ, ನನ್ನ ಮೇಲೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಇರಲಿ’ ಎಂದು ಹೇಳಿದರು.

ಪ್ರೀತಿಯ ಹೊಸ ಯುಗವನ್ನು ನಿಮಗಾಗಿ ತರುತ್ತಿದ್ದೇವೆ:

ಚಿತ್ರದ ನಿರ್ಮಾಪಕ ಕರಣ್ ಜೋಹರ್ ಸಹ ತಮ್ಮ ಚಿತ್ರದಲ್ಲಿ ನಟಿಸುತ್ತಿರುವ ನಟ ಲಕ್ಷ್ಯ ಮತ್ತು ಗುರ್ಫತೇ ಸಿಂಗ್ ಪಿರ್ಜಾದಾ ಅವರೊಂದಿಗೆ ಶನಾಯಾ ಅವರ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ನಾವು ಪ್ರೀತಿಯ ಹೊಸ ಯುಗವನ್ನು ನಿಮಗಾಗಿ ತರುತ್ತಿದ್ದೇವೆ, ಅದುವೇ ಬೇಧಡಕ್. ಧರ್ಮಾ ಕುಟುಂಬಕ್ಕೆ ನಮ್ಮ ಇತ್ತೀಚಿನ ಸೇರ್ಪಡೆ - ಲಕ್ಷ್ಯ, ಶನಾಯಾ ಕಪೂರ್ ಮತ್ತು ಗುರ್ಫತೇ ಸಿಂಗ್ ಪಿರ್ಜಾದಾ. ಜೊತೆಗೆ ಚಿತ್ರವನ್ನು ಶಶಾಂಕ್ ಖೈತಾನ್ ನಿರ್ದೇಶಿಸಿದ್ದಾರೆ’ ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಸಿನಿಮಾ ಮೂಲಕ ಕರಣ್ ಜೋಹರ್​ಗೆ ಶಾಕ್ ಕೊಟ್ಟ ನೆಟ್​ಫ್ಲಿಕ್ಸ್

ಚಿತ್ರದಲ್ಲಿ ನಟ ಲಕ್ಷ್ಯ ಅವರ ಮೊದಲ ನೋಟವನ್ನು ಹಂಚಿಕೊಂಡ ಕರಣ್ ಜೋಹರ್, ’ಅವರ ನಗುವು ಅಷ್ಟೇ ಸುಲಭವಾಗಿ ನಿಮ್ಮ ಹೃದಯವನ್ನು ಕರಗಿಸುತ್ತದೆ. ಬೇಧಡಕ್ ಚಿತ್ರದಲ್ಲಿ ಲಕ್ಷ್ಯನನ್ನು ಕರಣ್ ಆಗಿ ಪ್ರಸ್ತುತ ಪಡಿಸುತ್ತಿದ್ದೇವೆ’ ಎಂದು ಶೀರ್ಷಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಸಹಾಯಕ ನಿರ್ದೇಶಕಿಯಾಗಿ ಶನಾಯಾ:

ಶನಾಯಾ ಕಪೂರ್ 2020ರಲ್ಲಿ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಚಿತ್ರ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ನಲ್ಲಿ ಸಹಾಯಕ ನಿರ್ದೇಶಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು, ಇದರಲ್ಲಿ ಅವರ ಸೋದರ ಸಂಬಂಧಿ ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಶನಾಯಾ ಅವರ ಸೋದರ ಸಂಬಂಧಿ ಜಾನ್ವಿ ಕಪೂರ್ ಕೂಡ ಧರ್ಮ ಪ್ರೊಡಕ್ಷನ್ಸ್ ಚಿತ್ರದ ಮೂಲಕವೇ ಪಾದಾರ್ಪಣೆ ಮಾಡಿದ್ದರು. ಇದನ್ನು ಸಹ ಶಶಾಂಕ್ ಖೈತಾನ್ ಅವರೇ ನಿರ್ದೇಶಿಸಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

ನೆಟ್‌ಫ್ಲಿಕ್ಸ್ ನ ಸ್ಮ್ಯಾಶ್ ಹಿಟ್ ‘ದಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ ನಲ್ಲಿ ಶನಾಯಾ ಕಪೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಪ್ರಕರಣ: ಕರಣ್​ ಜೋಹರ್, ಏಕ್ತಾ ಕಪೂರ್​, ಸಲ್ಮಾನ್​ ಖಾನ್​ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಿಹಾರದ ಕೋರ್ಟ್​..!

ಕರಣ್ ಜೋಹರ್ ಅವರು ಹೀಗೆ ಹಿರಿಯ ಬಾಲಿವುಡ್ ನಟ ನಟಿಯರ ಮಕ್ಕಳನ್ನು ತಮ್ಮ ಚಿತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುವುದರ ಮೂಲಕ ಅನೇಕ ಸ್ಟಾರ್ ಕಿಡ್ಸ್ ಗಳನ್ನು ಬಾಲಿವುಡ್ ಗೆ ಪರಿಚಯಿಸಿದ್ದಾರೆ ಎಂದು ಹೇಳಬಹುದು. ಇದರಲ್ಲಿ ಮಹೇಶ್ ಭಟ್ ಅವರ ಮಗಳು ನಟಿ ಆಲಿಯಾ ಭಟ್, ನಿರ್ದೇಶಕ ಡೇವಿಡ್ ಧವನ್ ಅವರ ಪುತ್ರ ವರುಣ್ ಧವನ್, ದಿವಂಗತ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಮಗಳು ಜಾಹ್ನವಿ ಹೀಗೆ ಅನೇಕರನ್ನು ಬಾಲಿವುಡ್ ಗೆ ಪರಿಚಯಿಸಿದ್ದಾರೆ ಎಂದು ಹೇಳಬಹುದು.
Published by:shrikrishna bhat
First published: