Hindi Bigboss: ಸಲ್ಮಾನ್​ ಖಾನ್​ ಜೊತೆ ತುಳು ಭಾಷೆಯಲ್ಲಿ ಮಾತನಾಡಿದ ಶಮಿತಾ ಶೆಟ್ಟಿ

Shamita Shetty Talks Tulu With Salman: ನಟಿ ಶಮಿತಾ ಶೆಟ್ಟಿ ಸಿನಿಮಾ ರಂಗದಲ್ಲಿ ಅಷ್ಟೊಂದು ಹೆಸರು ಮಾಡಿಲ್ಲ. ಇವರ ಯಾವುದೇ ಸಿನಿಮಾಗಳು ಬಿಗ್​ ಹಿಟ್​ ಬಿರುದು ತಂದುಕೊಟ್ಟಿಲ್ಲ. ಸಿನಿಮಾ ರಂಗದಲ್ಲಿ ಮಾಡಲಾಗದ ಸಾಧನೆಯನ್ನ ಬಿಗ್​ಬಾಸ್​ ವೇದಿಕೆ ಮೂಲಕ ಮಾಡುತ್ತಿದ್ದಾರೆ.

ನಟಿ ಶಮಿತಾ ಶೆಟ್ಟಿ

ನಟಿ ಶಮಿತಾ ಶೆಟ್ಟಿ

 • Share this:
  ಒಂಟಿ ಮನೆಲೀ ದೊಡ್ಡ ದೊಡ್ಡ ಮಂದಿ ಅಡ್ಡಡ್ಡ ಉದ್ದುದ್ದ ಮಲಗ್ವರೆ. ಬದುಕವರು ಅವರು, ನೋಡುವವರು ನಾವು.. ಊರೆಲ್ಲಾ ಕ್ಯಾಮರಾ ಇಟ್ಟವರೇ..ಹೊರಗಡೆಯಿಂದ ಅರಮೆನೆ, ಒಳಗಡೆ ಬಂದರೇ ಸೆರೆಮನೆ.. ತೊಂಬತ್ತೆಂಟು ದಿನ ಜೀವಂತ ಇದ್ದರೆ ಅವರಿಗೆ ಹಾಫ್​ ಕೋಟಿ ರೂಪಾಯಿ.. ಬಿಗ್​ ಬಾಸ್​.. ಬಿಗ್​ ಬಾಸ್​​..’ಹೌದು ಕಿರುತರೆಯ ಬಿಗ್​ಬಾಸ್​(Bigboss) ರಿಯಾಲಿಟಿ ಶೋ ಅಂದ್ರೆ ಎಲ್ಲರಿಗೂ ಸಖತ್​ ಫೇವರಿಟ್​(Favriout). ಬಿಗ್​ಬಾಸ್ ಸೀಸನ್​ ಆರಂಭವಾದರೆ, ಸರಿಯಾಗಿ ಶೋ ಶುರುವಾಗುವ ಮುನ್ನ ಟಿವಿ (Tv)ಮುಂದೆ ರಿಮೋಟ್(Remote) ಹಿಡಿದು ಕೂರುವವರು ಇದ್ದಾರೆ. ಕ್ರಿಕೆಟ್​ನಲ್ಲಿ ಐಪಿಎಲ್​(IPL) ಟೂರ್ನಿ ಹೇಗೋ ಹಾಗೆ ರಿಯಾಲಿಟಿ ಶೋಗಳಲ್ಲಿ ಬಿಗ್​ಬಾಸ್​ ಸಖತ್​ ಕಿಕ್​ ನೀಡುತ್ತೆ. ಹೀಗಾಗಿಯೇ ಬಿಗ್​ ಬಾಸ್​ ಶೋ ಬಹಳ ಜನಪ್ರಿಯತೆ ಪಡೆದುಕೊಂಡಿದೆ.

  ಬಿಗ್​ ಬಾಸ್​ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತೆ. ಎಲ್ಲಾ ಭಾಷೆಗಳಲ್ಲೂ ಆಯಾ ಭಾಷೆಗಳ ಸ್ಟಾರ್​ ನಟರು ನಿರೂಪಣೆ ಮಾಡುತ್ತಾರೆ. ಹಿಂದಿ ಭಾಷೆಯ ಬಿಗ್​​ ಬಾಸ್​ ಸೀಸನ್​ 3 ರಿಂದಲೂ ಸಲ್ಮಾನ್​ ಖಾನ್(Salman Khan)​ ಶೋ ನಿರೂಪಣೆ(Host) ಜವಾಬ್ದಾರಿ ಹೊತ್ತಿದ್ದಾರೆ. ಅಕ್ಟೋಬರ್​ 2ರಿಂದ ಹಿಂದಿ ಬಿಗ್​ ಬಾಸ್​ ಸೀಸನ್ 15 ಶುರುವಾಗಿ ಸಖತ್​ ಕಿಕ್ ನೀಡುತ್ತಿದೆ.

  ತುಳು ಮಾತಾಡಿದ ಶಮಿತಾ, ಸಲ್ಲು
  ಶೋ ಶುರುವಾಗಿ 15 ದಿನ ಕಳೆದ ಮೇಲೆ ಯಾಕೆ ಈಗ ಇದರ ಬಗ್ಗೆ ಹೇಳುತ್ತಾ ಇದೀವಿ ಅಂತ ಕನ್ಫೂಸ್​ ಆಯ್ತಾ? ಅದಕ್ಕೆ ಕಾರಣ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ. ಹೌದು ಬಿಗ್​ ಬಾಸ್​ ಸೀಸನ್ 15ರ ವೀಕೆಂಡ್​ ಎಪಿಸೋಡ್​ನಲ್ಲಿ ಶಮಿತಾ ಶೆಟ್ಟಿ ಹಾಗೂ ಸಲ್ಮಾನ್​ ಖಾನ್​ ತುಳು ಭಾಷೆಯಲ್ಲಿ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ.  ಎಲ್ಲೆಡೆ ಇದೀಗ ಈ ವಿಡಿಯೋ ಕ್ಲಿಪ್​ ಸಖತ್​ ವೈರಲ್​ ಆಗುತ್ತಿದೆ. ‘ಹೇಗಿದ್ದೀರಿ?’, ‘ಚೆನ್ನಾಗಿದ್ದೇನೆ’ ಎಂಬ ಪದಗಳನ್ನು ತುಳು ಭಾಷೆಯಲ್ಲಿ ಹೇಗೆ ಹೇಳಬೇಕು ಎಂಬುದನ್ನ ಸಲ್ಮಾನ್​ ಖಾನ್​ಗೆ ಶಮಿತಾ ಶೆಟ್ಟಿ ಕಲಿಸಿಕೊಟ್ಟಿದ್ದಾರೆ.

  ತುಳು ಮರೆಯದ ಶಿಲ್ಪಾ ಶೆಟ್ಟಿ ಫ್ಯಾಮಿಲಿ
  ಶಿಲ್ಪಾ ಶೆಟ್ಟಿ ಕುಟುಂಬದವರು ಮೂಲತಃ ಮಂಗಳೂರಿನವರು. ತುಳು ಅವರ ಮಾತೃಭಾಷೆ. ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿಇಬ್ಬರು ಸಹ ಬಹಳ ವರ್ಷಗಳ ಹಿಂದೆ ಮುಂಬೈಗೆ ಬಂದು ನೆಲೆಸಿದ್ದಾರೆ. ಈ ಹಿಂದೆ ಅನೇಕ ವೇದಿಕೆಗಳಲ್ಲಿ ಶಿಲ್ಪಾ ಶೆಟ್ಟಿ ತುಳು ಮಾತನಾಡಿ ಗಮನ ಸೆಳೆದಿದ್ದರು. ಈಗ ಶಮಿತಾ ಶೆಟ್ಟಿ ಕೂಡ ಬಿಗ್​ ಬಾಸ್​ ವೇದಿಕೆ ಮೇಲೆ ಸಲ್ಮಾನ್​ ಖಾನ್​ ಜೊತೆ ತುಳು ಮಾತನಾಡುವ ಮೂಲಕ ಮಾತೃಭಾಷೆಯ ಅಭಿಮಾನ ಮೆರೆದಿದ್ದಾರೆ.

  ಓಟಿಟಿಯಿಂದ ಆಯ್ಕೆಯಾದ ಶಮಿತಾ ಶೆಟ್ಟಿ
  ನಟಿ ಶಮಿತಾ ಶೆಟ್ಟಿ ಸಿನಿಮಾ ರಂಗದಲ್ಲಿ ಅಷ್ಟೊಂದು ಹೆಸರು ಮಾಡಿಲ್ಲ. ಇವರ ಯಾವುದೇ ಸಿನಿಮಾಗಳು ಬಿಗ್​ ಹಿಟ್​ ಬಿರುದು ತಂದುಕೊಟ್ಟಿಲ್ಲ. ಸಿನಿಮಾ ರಂಗದಲ್ಲಿ ಮಾಡಲಾಗದ ಸಾಧನೆಯನ್ನ ಬಿಗ್​ಬಾಸ್​ ವೇದಿಕೆ ಮೂಲಕ ಮಾಡುತ್ತಿದ್ದಾರೆ. ಭಾವ ರಾಜ್​ಕುಂದ್ರಾ ‘ಸೆಕ್ಸ್​​ ರಾಕೆಟ್​’ ಕೇಸ್​ ಬಳಿಕ ಬಿಗ್​ಬಾಸ್​​ ಒಟಿಟಿಗೆ ಬಂದಿದ್ದರು. ಇದರಲ್ಲಿ ಅದ್ಭುತ ಪರ್ಫಾಮೆನ್ಸ್​​ ನೀಡಿದ ಶಮಿತಾ ಶೆಟ್ಟಿ ಬಿಗ್​ಬಾಸ್​ ಸೀಸನ್​ 15ರಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.

  ಇದನ್ನೂ ಓದಿ: ದಸರಾಗೆ Surprise ಕೊಟ್ಟ ಸರ್ಪ್ರೈಸ್ ಚಿತ್ರ ತಂಡ; ಹೊಸ ಪೋಸ್ಟರ್​ ರಿಲೀಸ್!

  ಈ ಬಾರಿ ಓಟಿಟಿ ಇಂದ ಶಮಿತಾ ಶೆಟ್ಟಿ, ನಿಶಾಂತ್​ ಭಟ್​, ಪ್ರತೀಕ್​ ಸೆಹೆಜ್​ ಬಂದಿದ್ದಾರೆ. ಇನ್ನು ಸ್ಪರ್ಧಿಗಳಾಗಿ ತೇಜಸ್ವಿ ಪ್ರಕಾಶ್​​, ಕರಣ್​ ಕುಂದ್ರಾ, ಡೊನಾಲ್​ ಬಿಸ್ಟ್​, ಸಿಂಬಾ ನಾಗ್ ಪಾಲ್​, ವಿಧಿ ಪಾಂಡ್ಯ ಸೇರಿದಂತೆ ಇನ್ನು ಹೆಚ್ಚಿನ ಸ್ಫರ್ಧಿಗಳು ದೊಡ್ಡ ಮನೆ ಸೇರಿಕೊಂಡಿದ್ದಾರೆ.

  ವರದಿ- ವಾಸುದೇವ್​.ಎಂ
  Published by:Sandhya M
  First published: