ಬಿಗ್ ಬಾಸ್ 15 ರ(Bigboss 15) ವಿವಾದಾತ್ಮಕ ಕಾರ್ಯಕ್ರಮ ತನ್ನ ಮೊದಲ ವಾರ ನಡೆಯುತ್ತಿದ್ದು,ಅದರ ಅಂತ್ಯಕ್ಕೆ ಸ್ಪರ್ಧಿಗಳ ಮಧ್ಯೆ ಫೈಟ್ ಆರಂಭವಾಗಿದೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅವಹೇಳನ ಮಾಡುವ ಅವಕಾಶವನ್ನು ಬಿಡುವುದಿಲ್ಲ.ಬಿಗ್ಬಾಸ್ ಮನೆ ಒಂಥರ ಜಗಳಗಳಿಗೆ ಪ್ರಸಿದ್ಧವಾಗಿದ್ದು,ಇದು ಪ್ರೇಕ್ಷಕರನ್ನು ರಂಜಿಸುತ್ತಿರುವುದು ಸುಳ್ಳಲ್ಲ. ಈ ಕಾರ್ಯಕ್ರಮ ಬಹಳ ಜನಪ್ರಿಯವಾಗಿದೆ. ಈ ಬಾರಿ ಬಿಗ್ಬಾಸ್ ಒಟಿಟಿ ಕಾರ್ಯಕ್ರಮವನ್ನು ಸಹ ಮಾಡಲಾಗಿತ್ತು.ಅದರಲ್ಲಿ ಭಾಗವಹಿಸಿದ್ದ, ಶಮಿತಾ ಶೆಟ್ಟಿ,(Shamita Shetty) ಪ್ರತೀಕ್ ಸೆಹಜಪಾಲ್ ಮತ್ತು ನಿಶಾಂತ್ ಈ ಮೂವರು ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ 15 ಮನೆಗೆ ಪ್ರವೇಶಿಸಿದ್ದಾರೆ.
ಇತ್ತೀಚೆಗೆ, ಒಂದು ಟಾಸ್ಕ್ನ ಸಮಯದಲ್ಲಿ, ಪ್ರತೀಕ್ ಮನೆಯ ನಕ್ಷೆಯನ್ನು ಕದ್ದಿದ್ದರು, ಅಲ್ಲದೇ ಶಮಿತಾ ಮತ್ತು ನಿಶಾಂತ್ ಜೊತೆಗೆ ಸೇರಿ ಅದನ್ನು ಜಂಗಲ್ವಾಸಿಗೆ ಹಿಂದಿರುಗಿಸದಿರಲು ನಿರ್ಧರಿಸಿದ್ದರು. ಇದು ಮನೆಯ ವಿಭಜನೆಗೆ ಕಾರಣವಾಗಿದ್ದು, ಈಗ ಜೈ ಭಾನುಶಾಲಿ, ಕರಣ್ ಕುಂದ್ರಾ, ಉಮರ್ ರಿಯಾಜ್ ಮತ್ತು ಇತರರು ಮನೆಯ ಒಂದು ಭಾಗದಲ್ಲಿದ್ದಾರೆ. ಪ್ರತೀಕ್, ನಿಶಾಂತ್ ಮತ್ತು ಶಮಿತಾ ಮನೆಯ ಇನ್ನೊಂದು ಭಾಗದಲ್ಲಿದ್ದಾರೆ. ಆದರೆ ಇದು ಇಲ್ಲಿಗೆ ನಿಲ್ಲಲಿಲ್ಲ ಏಕೆಂದರೆ ಪ್ರತೀಕ್ ಮತ್ತು ಜಯ್ ನಡುವೆ ಜಗಳ ಆರಂಭವಾಗಿದೆ. ಈ ಕಾರಣದಿಂದಾಗಿ ಪ್ರತೀಕ್, ಶಮಿತಾ ಮತ್ತು ನಿಶಾಂತ್ ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ, ಶಮಿತಾ ಪ್ರತೀಕ್ಗೆ ನಕ್ಷೆಯನ್ನು ಸ್ಪರ್ಧಿಗಳಿಗೆ ಹಿಂತಿರುಗಿಸುವಂತೆ ಕೇಳಿದಾಗ, ಅವರು ನಿರಾಕರಿಸಿದ್ದಾರೆ. ಪ್ರತಿಯಾಗಿ, ಕರಣ್ ಕುಂದ್ರಾ ತಮ್ಮ ಬಟ್ಟೆಗಳನ್ನು ಬಚ್ಚಿಟ್ಟಿದ್ದರು. ಇದು, ಶಮಿತಾ, ಪ್ರತೀಕ್ ಮತ್ತು ನಿಶಾಂತ್ ನಡುವೆ ಜಗಳಕ್ಕೆ ಕಾರಣವಾಗಿದ್ದು, ಮೂವರ ನಡುವೆ ತೀವ್ರ ವಾಗ್ವಾದ ನಡೆಯಿತು. ಆದರೆ ಈ ಜಗಳದಲ್ಲಿ ಶಮಿತಾ ನಡೆಯನ್ನು ಅವರ ಅಭಿಮಾನಿಗಳು ಮೆಚ್ಚಿದ್ದಾರೆ.
ಇದನ್ನೂ ಓದಿ: ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕನ ಜೊತೆ 25ನೇ ಸಿನಿಮಾ ಪ್ರಕಟಿಸಿದ Prabhas
ನಟಿ ಕಾಮ್ಯ ಪಂಜಾಬಿ ಕೂಡ ಚೆನ್ನಾಗಿ ಆಟವಾಡಿದ್ದಕ್ಕಾಗಿ ಶಮಿತಾ ಅವರನ್ನು ಬೆಂಬಲಿಸಿದರು. ಕಾಮ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೌದು ಹೌದು #ಶಮಿತಾಶೆಟ್ಟಿ ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ, ನಿಮ್ಮ ಸ್ವಂತ ಆಟವನ್ನು ಆಡಿ, ಸ್ವತಂತ್ರರಾಗಿರಿ,ಅದು ಅದ್ಭುತ @ColorsTV @ShamitaShetty #Biggboss15 ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ, ಕರಣ್ ಕುಂದ್ರಾ ಅವರು ಕಾರ್ಯಕ್ರಮದಲ್ಲಿ ಶಮಿತಾ ಅವರನ್ನು ಆಂಟಿ ಎಂದು ಕರೆದಿದ್ದರು. ಆತನನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು, ನಂತರ ಕರಣ್ ಶಮಿತಾ ಅವರ ಕ್ಷಮೆಯಾಚಿಸಿದ್ದರು. ಕರಣ್ ಅವರ ಮಾತಗಳಿಗೆ ಹಲವಾರು ಜನರು ವಿರೋಧ ವ್ಯಕ್ತಪಡಿಸಿದ್ದರು.
ನಾನು ಬಿಗ್ಬಾಸ್ ನೋಡುತ್ತಿಲ್ಲ. ಆದ್ರೆ ಕರಣ್ ಮಾತುಗಳ ಬಗ್ಗೆ ಕೇಳಿದಾಗ ಕೆಲ ವಿಡಿಯೋ ಕ್ಲಿಪ್ ಗಳನ್ನು ನೋಡಿದೆ. ಬಿಗ್ಬಾಸ್ನಲ್ಲಿ ಶಮಿತಾ ಸೇರಿದಂತೆ ಎಲ್ಲರೂ ಆಟವೇ ಆಡುತ್ತಿದ್ದಾರೆ. ಸಹ ಕರಣ್ ಕುಂದ್ರಾ ಅವರೇ ಬಿಗ್ಬಾಸ್ ನಲ್ಲಿ ಶಮಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡೋದನ್ನು ನಿಲ್ಲಿಸಿ, ನಿಮ್ಮ ಆಟ ಆಡಬೇಕು. ತನ್ನ ವಲಯದಲ್ಲಿ ಸಾಧನೆ ಮಾಡಿರುವ ಮಹಿಳೆಯನ್ನು ಆಂಟಿ ಎಂದು ಸಂಬೋದಿಸುವುದು ತಪ್ಪು. ಅದರಲ್ಲಿ ನಿಮ್ಮ ವಯಸ್ಸು 37. ಆದ್ರೂ ಮತ್ತೊಬ್ಬರನ್ನು ಆಂಟಿ ಎಂದು ಕರೆಯುವ ನೈತಿಕತೆ ನಿಮಗಿಲ್ಲ ಎಂದು ನೇಹಾ ಬಸಿನ್ ಎಂಬವರು ಕರಣ್ ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ: ನಿನ್ನ ಸನಿಹಕೆ... ನಿಮ್ಮ ಸನಿಹಕೆ: ಲಿವಿನ್ ಸಂಬಂಧದಲ್ಲಿರುವ ಜೋಡಿಯೊಂದರ ಕಥೆ-ವ್ಯಥೆ
ಬಿಗ್ಬಾಸ್ನಲ್ಲಿ ಮೂರನೇ ಇನ್ನಿಂಗ್ಸ್:
ಶಮಿತಾ ಶೆಟ್ಟಿ ಬಿಗ್ಬಾಸ್ ಮೂರನೇ ಸೀಸನ್ ನಲ್ಲಿ ಬಿಗ್ ಮನೆ ಪ್ರವೇಶಿಸಿದ್ದರು. ಆದ್ರೆ ಸೋದರಿ ಶಿಲ್ಪಾ ಶೆಟ್ಟಿ (Shilpa Shetty) ಮದುವೆ ಹಿನ್ನೆಲೆ ಅರ್ಧಕ್ಕೆ ರಿಯಾಲಿಟಿ ಶೋನಿಂದ ಹೊರ ಬಂದಿದ್ದರು. ಬಿಗ್ಬಾಸ್ ಓಟಿಟಿಯ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಶಮಿತಾ ಎರಡನೇ ರನ್ನರ್ ಅಪ್ ಆಗಿದ್ದರು. ಇದೀಗ ಮೂರನೇ ಬಾರಿ ಬಿಗ್ಬಾಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಶಮಿತಾ, ಪ್ರತಿಬಾರಿಯೂ ಹೊಸದನ್ನು ಕಲಿಯುವ ಅವಕಾಶ ಸಿಕ್ಕಿದೆ. ಮನೆಯಿಂದ ಹೊರ ಬಂದಾಗ ಸ್ಟ್ರಾಂಗ್ ಆಗಿದ್ದೇನೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ