Shambo Shiva Shankara: ಹಾಡುಗಳತ್ತ ಶಂಭೋ ಶಿವ ಶಂಕರ ಚಿತ್ತ

ಕಳೆದ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಶಂಭೋ ಶಿವ ಶಂಕರ ಸಿನಿಮಾ ಸೆಟ್ಟೇರಿತ್ತು. ತಕ್ಷಣ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಸದ್ಯ ಎರಡು ಶೆಡ್ಯೂಲ್‌ಗಳನ್ನ ಪೂರ್ಣಗೊಳಿಸಿಕೊಂಡು ಸದ್ಯ ಹಾಡುಗಳ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

shambo shiva shankara

shambo shiva shankara

  • Share this:
ಸುಪ್ರೀಮ್‌ ಹೀರೋ ಶಶಿಕುಮಾರ್‌ ನಟಿಸುತ್ತಿರುವ ಲೇಟೆಸ್ಟ್‌ ಸಿನಿಮಾ ಶಂಭೋ ಶಿವ ಶಂಕರ. ಸದ್ಯ ಎರಡನೇ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹಾಡುಗಳ ಶೂಟಿಂಗ್‌ಗೆ ಸಿದ್ಧತೆ ನಡೆಸುತ್ತಿದೆ.
ಶಂಕರ್‌ ಕೋನಮಾನಹಳ್ಳಿ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್‌ ಕೋನಮಾನಹಳ್ಳಿಯವರಿಗೆ ಇದು ಚೊಚ್ಚಲ ಸಿನಿಮಾ ಕೂಡ ಹೌದು. ಕಥೆ, ಚಿತ್ರಕಥೆ, ಸಂಭಾಷಣೆಗಳನ್ನೂ ತಾವೇ ಬರೆದು ಖುದ್ದು ತಾವೇ ನಿರ್ದೇಶನ ಮಾಡುತ್ತಿದ್ದಾರೆ ಶಂಕರ್‌.

ಶಂಭೋ ಶಿವ ಶಂಕರ ಚಿತ್ರದ ಮೂರು ನಾಯಕರ ಪಾತ್ರಗಳ ಹೆಸರಾಗಿದ್ದು, ಶಂಭು ಪಾತ್ರದಲ್ಲಿ ಅಭಯ್‌ ಪುನೀತ್‌, ಶಿವನ ಪಾತ್ರದಲ್ಲಿ ರಕ್ಷಕ್‌ ಹಾಗೂ ಶಂಕರನ ಪಾತ್ರದಲ್ಲಿ ರೋಹಿತ್‌ ನಟಿಸುತ್ತಿದ್ದಾರೆ. ಚಿತ್ರಕ್ಕೆ ಪಂಚತಂತ್ರ ಖ್ಯಾತಿಯ ಸೋನಲ್‌ ಮೊಂಟೆರೋ ನಾಯಕಿಯಾಗಿ ನಟಿಸುತ್ತಿದ್ದು, ಜೋಗಿ ನಾಗರಾಜ್‌, ಪ್ರದೀಪ್‌ ತಿಪಟೂರು, ಆಶಾ, ಸುಜಯ್‌, ಪ್ರೇಮ, ರೋಹಿಣಿ, ಸಂಗಮೇಶ್‌ ಹಾಗೂ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.

ಪ್ರಮುಖ ಹಾಗೂ ವಿಶೇಷ ಪಾತ್ರದಲ್ಲಿ ಸುಪ್ರೀಮ್‌ ಹೀರೋ ಶಶಿಕುಮಾರ್‌ ನಟಿಸುತ್ತಿರುವುದು ಶಂಭೋ ಶಿವ ಶಂಕರ ಚಿತ್ರದ ವಿಶೇಷತೆ. ಇಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಶಶಿಕುಮಾರ್‌ ನಟಿಸುತ್ತಿದ್ದಾರೆ.
ಗೌಸ್‌ ಪೀರ್‌ ಹಾಗೂ ಹಿತನ್‌ ಹಾಸನ್‌ ಶಂಭೋ ಶಿವ ಶಂಕರ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.

ಹಿತನ್‌ ಹಾಸನ್‌ ಸಾಹಿತ್ಯದ ಜೊತೆಗೆ ಚಿತ್ರಕ್ಕೆ ಸಂಗೀತವನ್ನೂ ನೀಡುತ್ತಿದ್ದಾರೆ. ಹಾಗೇ ಈ ಸಿನಿಮಾಗೆ ನಟರಾಜ್‌ ಮುದ್ದಾಲ ಅವರ ಛಾಯಾಗ್ರಹಣವಿದೆ. ಕಲೈ ಅವರ ನೃತ್ಯ ನಿರ್ದೇಶನವಿದೆ, ಅಲ್ಟಿಮೇಟ್‌ ಶಿವು ಸಾಹಸ ನಿರ್ದೇಶನ ಹಾಗೂ ವೆಂಕಟೇಶ್‌ ಅವರ ಸಂಕಲನವಿದೆ. ಅಘನ್ಯ ಪಿಕ್ಚರ್ಸ್‌ ಲಾಂಛನದಲ್ಲಿ ವರ್ತೂರ್‌ ಮಂಜು ಅವರು ಶಂಭೋ ಶಿವ ಶಂಕರ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕಳೆದ ಡಿಸೆಂಬರ್‌ ೯ರಿಂದ ಎರಡನೇ ಶೆಡ್ಯೂಲ್‌ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ, ಬೆಂಗಳೂರಿನಲ್ಲಿಯೇ ಸೆಕೆಂಡ್‌ ಶೆಡ್ಯೂಲ್‌ ಪೂರ್ಣಗೊಳಿಸಿದೆ. ಎರಡನೇ ಶೆಡ್ಯೂಲ್‌ನಲ್ಲಿ ಬೆಂಗಳೂರಿನಲ್ಲೇ ೨೬ ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಸದ್ಯ ಹಾಡುಗಳ ಶೂಟಿಂಗ್‌ನತ್ತ ಗಮನ ಹರಿಸಿದೆ ಶಂಭೋ ಶಿವ ಶಂಕರ ಚಿತ್ರತಂಡ.
ಇದೇ ತಿಂಗಳಂತ್ಯದಲ್ಲಿ ಶಂಭೋ ಶಿವ ಶಂಕರ ಚಿತ್ರದ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕಾಗಿ ಸಿನಿಮಾ ಟೀಂ ಅದ್ಧೂರಿ ಸೆಟ್‌ಗಳನ್ನೂ ನಿರ್ಮಿಸುತ್ತಿದೆ.

ಕಳೆದ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಶಂಭೋ ಶಿವ ಶಂಕರ ಸಿನಿಮಾ ಸೆಟ್ಟೇರಿತ್ತು. ತಕ್ಷಣ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಸದ್ಯ ಎರಡು ಶೆಡ್ಯೂಲ್‌ಗಳನ್ನ ಪೂರ್ಣಗೊಳಿಸಿಕೊಂಡು ಸದ್ಯ ಹಾಡುಗಳ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಒಟ್ಟಾರೆ ಲಾಕ್‌ಡೌನ್‌ ಬಳಿಕ ಪ್ರಾರಂಭವಾದ ಚಿತ್ರತಂಡಗಳು ಹಂತ ಹಂತವಾಗಿ ಶೂಟಿಂಗ್‌ ಮುಗಿಸಿಕೊಂಡು ಆದಷ್ಟು ಬೇಗ ತೆರೆಗೆ ಬರಲು ರೆಡಿಯಾಗುತ್ತಿವೆ. ಆದರೆ ಮತ್ತೊಂದೆಡೆ ಥಿಯೇಟರ್‌ಗಳ ಮೇಲಿನ ನಿರ್ಬಂಧ ಶೇಕಡಾ ೫೦ ಪ್ರತಿಶತಃ ಸೀಟ್‌ಗಳನ್ನು ಬುಕ್‌ ಮಾಡುವ ಇನ್ನೂ ಹಾಗೇ ಇದೆ. ಈಗ ಕೊರೊನಾ ಲಸಿಕೆಯೂ ಬಂದಿರುವ ಕಾರಣ ಇನ್ನಾದರೂ ಆದಷ್ಟು ಬೇಗ ಥಿಯೇಟರ್‌ಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಲಿ ಎಂಬುದೇ ಚಿತ್ರರಂಗಗಳು ಹಾಗೂ ಚಿತ್ರತಂಡಗಳ ಬೇಡಿಕೆ.
Published by:zahir
First published: