• Home
 • »
 • News
 • »
 • entertainment
 • »
 • Shama Sikander: ಅವಕಾಶಕ್ಕಾಗಿ ನಟಿಯರ ದುರ್ಬಳಕೆ ಮಾಡ್ತಾರಾ; ಕಾಸ್ಟಿಂಗ್‌ ಕೌಚ್ ಶಮಾ ಈ ಬಗ್ಗೆ ಏನಂದ್ರು ಗೊತ್ತಾ?

Shama Sikander: ಅವಕಾಶಕ್ಕಾಗಿ ನಟಿಯರ ದುರ್ಬಳಕೆ ಮಾಡ್ತಾರಾ; ಕಾಸ್ಟಿಂಗ್‌ ಕೌಚ್ ಶಮಾ ಈ ಬಗ್ಗೆ ಏನಂದ್ರು ಗೊತ್ತಾ?

ಶಮಾ ಸಿಕಂದರ್

ಶಮಾ ಸಿಕಂದರ್

ಹಲವು ದಿನಗಳ ಬಳಿಕ ಮಾತಿಗೆ ಸಿಕ್ಕಿರುವ ನಟಿ ಶಮಾ ಸಿಕಂದರ್‌ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದ ದೊಡ್ಡ ಪಿಡುಗಾಗಿ ಉಳಿದಿರುವ ಕಾಸ್ಟಿಂಗ್‌ ಕೌಚ್‌ ಯಾವುಗಲೂ ಸುದ್ದಿಯಾಗುತ್ತಲೇ ಇರುವಂತದ್ದು. ಚಿತ್ರರಂಗದ ಕರಾಳ ಮುಖ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ನಟ-ನಟಿಯರು ತಮಗಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ.

ಮುಂದೆ ಓದಿ ...
 • Share this:

  ಯೇ ಮೇರಿ ಲೈಫ್ ಹೈ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವ ಹಾಟ್‌ ಬೆಡಗಿ ಶಮಾ ಸಿಕಂದರ್ (Shama Sikander) ತಮ್ಮ ಸಿನಿ ಪಯಣದಲ್ಲಿ ಹಲವು ಸೀರಿಸ್‌ ಗಳಿಂದ ಖ್ಯಾತಿ ಪಡೆದಿರುವ ಕಲಾವಿದೆ. ಇತ್ತೀಚೆಗಷ್ಟೆ ತಮ್ಮ ಬಹುಕಾಲದ ಗೆಳೆಯ ಜೇಮ್ಸ್ ಮಿಲಿರಾನ್ ಅವರನ್ನು ವಿವಾಹವಾದರು (Marriage). ಮದುವೆ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಕಮ್‌ ಬ್ಯಾಕ್‌ ಮಾಡಲು ಬಯಸುತ್ತಿರುವ ಶಮಾ ಸಿಕಂದರ್‌ ಈಗಾಗಲೇ ಹಲವಾರು ಸ್ಕ್ರಿಪ್ಟ್‌ಗಳನ್ನು (Scripts) ಓದುತ್ತಿದ್ದಾರೆ. ಒಂದೊಳ್ಳೆ ಅವಕಾಶದದೊಂದಿಗೆ ಮತ್ತೆ ಚಿತ್ರರಂಗಕ್ಕೆ ಬರಲು ಎದುರು ನೋಡುತ್ತಿದ್ದಾರೆ. ಹಲವು ದಿನಗಳ ಬಳಿಕ ಮಾತಿಗೆ ಸಿಕ್ಕಿರುವ ನಟಿ ಶಮಾ ಸಿಕಂದರ್‌ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಕಾಸ್ಟಿಂಗ್ ಕೌಚ್ (Casting Couch) ಅನುಭವವನ್ನು ಹಂಚಿಕೊಂಡಿದ್ದಾರೆ.


  ಚಿತ್ರರಂಗದ ದೊಡ್ಡ ಪಿಡುಗಾಗಿ ಉಳಿದಿರುವ ಕಾಸ್ಟಿಂಗ್‌ ಕೌಚ್‌ ಯಾವುಗಲೂ ಸುದ್ದಿಯಾಗುತ್ತಲೇ ಇರುವಂತದ್ದು. ಚಿತ್ರರಂಗದ ಕರಾಳ ಮುಖ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ನಟ-ನಟಿಯರು ತಮಗಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ.


  "ಸೆಕ್ಸ್‌ ಗೆ ಒತ್ತಾಯಿಸುವ ಪರಿಕಲ್ಪನೆ ಬದಲಾಗಿದೆ"
  ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ನಟಿಮಣಿ ಪ್ರಸ್ತುತ ಕೆಲಸಕ್ಕೆ ಪ್ರತಿಯಾಗಿ ನಟಿಯರನ್ನು ದುರ್ಬಳಕೆ ಮಾಡಿಕೊಳ್ಳುವ, ಸೆಕ್ಸ್‌ ಗೆ ಒತ್ತಾಯಿಸುವ ಪರಿಕಲ್ಪನೆ ಅತ್ಯಂತ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಕೆಲಸಕ್ಕೆ ಪ್ರತಿಯಾಗಿ ಸೆಕ್ಸ್‌ ಗೆ ಒತ್ತಾಯಿಸುವ ಪರಿಕಲ್ಪನೆಯು ಅತ್ಯಂತ ಕಡಿಮೆಯಾಗಿದೆ ಎಂದಿರುವ ನಟಿ ಉದ್ಯಮವು ತುಂಬಾ ಬದಲಾಗಿದೆ ಮತ್ತು ಒಳ್ಳೆಯ ಹಾದಿಯಲ್ಲಿ ಸಾಗುತ್ತಿದೆ.


  ಪ್ರಸ್ತುತ, ಈಗಿನ ಯುವ ನಿರ್ದೇಶಕರು ಅರ್ಥ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಕ್ಯಾಶ್ಯುವಲ್ ಆಗಿ ತುಂಬಾ ಪ್ರೊಫೆಷನಲ್ ಆಗಿ ಇರ್ತಾರೆ. ಮಹಿಳೆಯರನ್ನು ಗೌರವಿಸುತ್ತಾರೆ. ಆದರೆ ಇದು ಆಗ ಇರಲಿಲ್ಲ. ಮೊದಲು ನಿರ್ಮಾಪಕರ ಜೊತೆ ಸಂಬಂಧ ಇಟ್ಟುಕೊಳ್ಳದಿದ್ದರೇ ಏನೂ ನಡೆಯುತ್ತಿರಲಿಲ್ಲ ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.


  ಇದನ್ನೂ ಓದಿ: Sunny Leone: ಮಾಲ್ಡೀವ್ಸ್​ನಲ್ಲಿ ಸನ್ನಿ ಹವಾ! ಸ್ಟೈಲಿಷ್ ಫೋಟೋಸ್ ವೈರಲ್


  ನಾವು ನಿನಗೆ ಆ ಕೆಲಸ ಮಾಡಿಕೊಟ್ಟರೆ ಬದಲಿಗೆ ನೀನು ಏನು ಕೊಡುತ್ತೀಯಾ ಕೇಳುತ್ತಿದ್ದರು. ಇದು ಚಿತ್ರರಂಗ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಕೆಲವರು ನೇರವಾಗಿಯೇ ಕೇಳುತ್ತಿದ್ದರು. ಮಹಿಳೆಯರ ಮನಸ್ಸು ಗೆದ್ದು ಸ್ವಂತ ಮಾಡಿಕೊಂಡವರು ಇದ್ದಾರೆ" ಎಂದು ಶಮಾ ವಿವರಿಸಿದ್ದಾಳೆ.


  "ನನಗೂ ನಿರ್ಮಾಪಕರು ಅವರ ಜೊತೆ ಸಲುಗೆ ಇಂದ ಇರಲು ಕೇಳುತ್ತಿದ್ದರು"
  "ಹಿಂದೆ ಕೆಲ ನಿರ್ಮಾಪಕರು, ನಿರ್ದೇಶಕರು ಅವರ ಜೊತೆ ಯಾವುದೇ ಸಿನಿಮಾ ಮಾಡದೇ ಇದ್ದರೂ ಸಲುಗೆಯಿಂದ ಇರುವಂತೆ ಕೇಳುತ್ತಿದ್ದರು. ಅವರ ಮಾತುಗಳು ನನಗೆ ಅಚ್ಚರಿ ಮೂಡಿಸುತ್ತಿದ್ದವು. ಅವರ ಜೊತೆ ಯಾವುದೇ ಕೆಲಸ ಮಾಡದೇ ಇದ್ದರೂ ಯಾಕೆ ಸಲುಗೆಯಿಂದ ಇರಬೇಕು ಎಂದು ನಾನು ಕೇಳುತ್ತಿದ್ದೆ. ಆಗ ಅವಕಾಶ ಬೇಕು ಎಂದರೆ ಎಲ್ಲದಕ್ಕೂ ಸಿದ್ಧರಿರಬೇಕು ಎನ್ನುವಂತಿತ್ತು. ಆದರೆ ಈಗ ಅದು ಕಮ್ಮಿ ಆಗಿದೆ" ಎಂದು ಶಮಾ ಹೇಳಿದ್ದಾಳೆ.


  "ಬಾಲಿವುಡ್‌ ಮಾತ್ರವಲ್ಲ ಎಲ್ಲಾ ಕಡೆ ಕಾಸ್ಟಿಂಗ್ ಕೌಚ್ ಇದೆ"
  ಕಾಸ್ಟಿಂಗ್ ಕೌಚ್ ಕೇವಲ ಬಾಲಿವುಡ್‌ಗೆ ಸೀಮಿತವಾಗಿಲ್ಲ. ಇದು ಎಲ್ಲಾ ಕಡೆ ನಡೆಯುತ್ತದೆ. ಹೆಸರು ಹೇಳಲು ಬಯಸದ ಶಮಾ, ಕೆಲವು ಪ್ರಭಾವಿ ನಿರ್ಮಾಪಕರು ದುರುದ್ದೇಶದಿಂದ ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಬಾಲಿವುಡ್‌ನಲ್ಲಿ ನಾನು ಕೆಲವು ಉತ್ತಮರನ್ನು ಭೇಟಿಯಾಗಿದ್ದೇನೆ. ಅವರ ಜೊತೆ ಕೆಲಸ ಮಾಡುವುದು ಸುರಕ್ಷಿತ ಭಾವನೆ ನೀಡುತ್ತದೆ. ಅದಕ್ಕಾಗಿ ಬಾಲಿವುಡ್ ಅನ್ನು ದೂಷಿಸುವುದು ತಪ್ಪು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದುಷ್ಟತನವಿದೆ. ಕೆಲಸಕ್ಕೆ ಪ್ರತಿಯಾಗಿ ಮಂಚಕ್ಕೆ ಕರೆಯುವ ಪರಿಕಲ್ಪನೆಯು ಅತ್ಯಂತ ಕೆಳಮಟ್ಟದ್ದಾಗಿದೆ ಎಂದು ನಾನು ಭಾವಿಸುತ್ತೇನೆ. " ಎಂದು ತಮ್ಮ ಸಂದರ್ಶನದಲ್ಲಿ ಶಮಾ ಸಿಕಂದರ್‌ ಹೇಳಿದ್ದಾರೆ.


  ಇದನ್ನೂ ಓದಿ:  Rashmika Mandanna: ಜೂನಿಯರ್​ NTR ಜೊತೆ ನಟಿಸೋಕೆ ಈ ಪಾಟಿ ದುಡ್ಡು ಕೇಳಿದ್ರಂತೆ ಕೊಡಗಿನ ಕುವರಿ!


  ಇನ್ನು ಸಿನಿ ಪಯಣದಲ್ಲಿ ಶಮಾ ಯೇ ಮೇರಿ ಲೈಫ್ ಹೈ, ಸಿಐಡಿ, ಬಟ್ಲಿವಾಲಾ ಹೌಸ್ ನಂ. 43, ಕಾಜ್ಜಲ್, ಸೆವೆನ್, ಬಾಲ್ ವೀರ್ ಝಂಡ್ ಮನ್ ಮೇ ಹೈ ವಿಶ್ವಾಸ್ ನಂತಹ ಟಿವಿ ಶೋಗಳಲ್ಲಿನ ಪ್ರಮುಖ ಪಾತ್ರಗಳಿಗಾಗಿ ಶಮಾ ಸಿಕಂದರ್ ಖ್ಯಾತಿ ಪಡೆದಿದ್ದಾರೆ.

  Published by:Ashwini Prabhu
  First published: