VIDEO: ಮತ್ತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಅರ್ಜುನ್​ ರೆಡ್ಡಿ ಹಿರೋಯಿನ್ ಶಾಲಿನಿ ಪಾಂಡೆ!

ತಮಿಳಿನಲ್ಲಿ 100% ಕಾದಲ್​ ಟೈಟಲ್​ನಡಿ ಈ ಚಿತ್ರ ತಯರಾಗಿದ್ದು, ಸದ್ಯಕ್ಕೆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ.

news18-kannada
Updated:September 14, 2019, 9:34 PM IST
VIDEO: ಮತ್ತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಅರ್ಜುನ್​ ರೆಡ್ಡಿ ಹಿರೋಯಿನ್ ಶಾಲಿನಿ ಪಾಂಡೆ!
100% ಕಾದಲ್ ಸಿನಿಮಾ
news18-kannada
Updated: September 14, 2019, 9:34 PM IST
ಟಾಲಿವುಡ್​​ನಲ್ಲಿ ಸಂಚಲನ ಮೂಡಿಸಿದ್ದ ‘100% ಲವ್​‘ ಸಿನಿಮಾ ಇದೀಗ ತಮಿಳು ಭಾಷೆಗೆ ರಿಮೇಕ್​ ಆಗುತ್ತಿದೆ. 2011 ರಲ್ಲಿ ಸುಕುಮಾರ್​ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನಂತರ ಈ ಸಿನಿಮಾದ ಕಥೆ ಬೆಂಗಾಳಿ ಭಾಷೆಯಲ್ಲೂ 'ಪ್ರೇಮ್​ ಕಿ ಬುಜಿನಿ' ಹೆಸರಿನಲ್ಲಿ ರಿಮೇಕ್​ ಆಗಿ 2016ರಲ್ಲಿ ಬಿಡುಗಡೆಯಾಯಿತು.

ಟಾಲಿವುಡ್​ನಲ್ಲಿ ಭಾರೀ ಸಕ್ಸಸ್​ ಕಂಡ '100% ಲವ್'​ ಇತ್ತ ತೆಲುಗಿಗೂ ರಿಮೇಕ್​ ಆಯಿತು. ತೆಲುಗಿನಲ್ಲಿ ತಮನ್ನಾ ಭಾಟಿಯಾ ಹಾಗೂ ನಾಗ ಚೈತನ್ಯ ಪ್ರೇಮಿಗಳಾಗಿ ತೆರೆ ಹಂಚಿಕೊಂಡಿದ್ದರು. ಮತ್ತೇ ಅದೇ ಸಿನಿಮಾ ತಮಿಳು ಭಾಷೆಯಲ್ಲಿ ರಿಮೇಕ್​ ಆಗುತ್ತಿದ್ದು, ಕಾಲಿವುಡ್​ ಸಿನಿ ಪ್ರೇಮಿಗಳ ಕದ ತಟ್ಟಲು ಸಿದ್ಧವಾಗಿದೆ.

ತಮಿಳಿನಲ್ಲಿ '100% ಕಾದಲ್'​ ಟೈಟಲ್​ನಡಿ ಈ ಚಿತ್ರ ತಯರಾಗಿದ್ದು, ಸದ್ಯಕ್ಕೆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇನ್ನು ಕಾದಲ್​ ಚಿತ್ರದಲ್ಲಿ ‘ ಅರ್ಜುನ್​ ರೆಡ್ಡಿ‘ ಸಿನಿಮಾದಲ್ಲಿ ವಿಜಯ್​ ದೇವರಕೊಂಡಗೆ ಜೋಡಿಯಾಗಿದ್ದ ಗ್ಲಾಮರ್​ಗೊಂಬೆ ಶಾಲಿನಿ ಪಾಂಡೆ '100%'ಕಾದಲ್'​ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಶಾಲಿಗೆ ನಾಯಕಿಯಾಗೆ ಜಿ.ವಿ ಪ್ರಕಾಶ್​ ಕುಮಾರ್​ ಅಭಿನಯಿಸಿದ್ದಾರೆ.



ಇದನ್ನೂ ಓದಿ: ಬೇಡಿಕೆ ಕಳೆದುಕೊಳ್ಳುತ್ತಿದ್ದಾರೆ ವಿಜಯ್ ದೇವರಕೊಂಡ ಜೊತೆ ನಟಿಸಿದ ಹೀರೋಯಿನ್​ಗಳು!

ಎಂ.ಎಂ. ಚಂದ್ರಮೌಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕ್ರಿಯೇಟಿವ್​ ಸಿನಿಮಾಸ್​ ಹಾಗೂ ಎನ್​ಜೆ ಎಂಟರ್​ಟೈನ್ಮೆಂಟ್​ ಬ್ಯಾನರ್​​ ಅಡಿ ಸಿನಿಮಾ ನಿರ್ಮಾಣವಾಗಿದೆ.  ಟ್ರೈಲರ್​ ಬಿಡುಗಡೆಯಾದ ಒಂದೇ ದಿನದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸದ್ಯದಲ್ಲೇ 100 ಕಾದಲ್ ಸಿನಿಮಾ ತೆರೆ ಮೇಲೆ ಬರಲಿದೆ
First published:September 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...