news18-kannada Updated:July 15, 2020, 5:17 PM IST
ಶಕುಂತಲಾ ದೇವಿ
ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದಿರುವ ಕನ್ನಡತಿ ಶಕುಂತಲಾ ದೇವಿ ಅವರ ಕುರಿತಾಗಿ ಬಾಲಿವುಡ್ನಲ್ಲಿ ಸಿನಿಮಾ ಮೂಡಿಬರುತ್ತಿದೆ. ನಟಿ ವಿದ್ಯಾ ಬಾಲನ್ ಅವರು ಶಕುಂತಲಾ ದೇವಿ ಪಾತ್ರವನ್ನು ಮಾಡಿದ್ದಾರೆ. ಇದೀಗ ಈ ಸಿನಿಮಾದ ಟ್ರೇಲರ್ ಯ್ಯೂಟೂಬ್ನಲ್ಲಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದೆ.
ಅನು ಮೆನನ್ ನಿರ್ದೇಶನದಲ್ಲಿ ‘ಶಕುಂತಲಾ ದೇವಿ’ ಸಿನಿಮಾ ಮೂಡಿ ಬರುತ್ತಿದೆ. ಗಣಿತದಲ್ಲಿ ಮಹತ್ತರ ಸಾಧನೆ ಮಾಡಿದ ಶಕುಂತಲಾ ಅವರ ಜೀವನ ಚರಿತ್ರೆಯನ್ನು ಇಟ್ಟುಕೊಂಡು ಅನು ಮೆನನ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಜು.31 ರಂದು ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಮಾಡುತ್ತಿದೆ.
ಅಮೆಜಾನ್ ಪ್ರೈಮ್ ಯ್ಯೂಟೂಬ್ ಖಾತೆಯಲ್ಲಿ ಶಕುಂತಲಾ ದೇವಿ ಟ್ರೇಲರ್ ಬಿಡುಗಡೆಗೊಂಡಿದ್ದು, 4 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅನೇಕರು ವಿದ್ಯಾ ಬಾಲನ್ ಅವರ ನಟನೆಯ ಫಿದಾ ಆಗಿದ್ದು, ಬಗೆ ಬಗೆಯ ಕಾಮೆಂಟ್ ಬರೆಯುತ್ತಿದ್ದಾರೆ.
ಇನ್ನು ಶಕುಂತಲಾ ದೇವಿ ಸಿನಿಮಾದಲ್ಲಿ ಸಾನ್ಯ ಮಲ್ಹೋತ್ರ, ಪ್ರಕಾಶ್ ಬೆಳವಾಡಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶಕುಂತಲಾ ದೇವಿ:
ಶಕುಂತಲಾ ದೇವಿ ಮೂಲತಃ ಬೆಂಗಳೂರಿನವರು. 1929ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಬುದ್ಧಿವಂತೆ. ಗಣಿತದಲ್ಲಿ ಹೆಚ್ಚು ಪರಿಣಿತೆ. ಇವರ ಪ್ರತಿಭಾನ್ವಿತೆಯನ್ನು ಗಮನಿಸಿ 1982ರಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾಡ್ಗೆ ಇವರ ಹೆಸರು ಸೇರ್ಪಡೆಯಾಗಿದೆ. ಅಷ್ಟು ಮಾತ್ರವಲ್ಲದೆ, ಸಾಕಷ್ಟು ಪುಸ್ತಕಗಳನ್ನು ಅವರು ಬರೆದಿದ್ದಾರೆ.
ಶಕುಂತಲಾ ಅವರು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಂತಹ ಕನ್ನಡದ ಸಾಧಕಿಯ ಜೀವನದ ಕುರಿತಾಗಿ ಬಾಲಿವುಡ್ನಲ್ಲಿ ಸಿನಿಮಾವೊಂದು ನಿರ್ಮಾಣವಾಗಿ ಬಿಡುಗಡೆಯಾಗುತ್ತಿರುವ ಕನ್ನಡಿಗೆ ಹೆಮ್ಮೆಯ ಸಂಗತಿಯಾಗಿದೆ.
Published by:
Harshith AS
First published:
July 15, 2020, 5:05 PM IST