• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • ಶಕ್ತಿ ಮತ್ತು ಮುಕ್ತಿ ಮೋಹನ್​ರವರ ಮನೆ ಅನ್ಯೋನ್ಯತೆ ಮತ್ತು ವೈಯಕ್ತಿಕತೆಯನ್ನು ಸಂಯೋಜಿಸಿದೆ

ಶಕ್ತಿ ಮತ್ತು ಮುಕ್ತಿ ಮೋಹನ್​ರವರ ಮನೆ ಅನ್ಯೋನ್ಯತೆ ಮತ್ತು ವೈಯಕ್ತಿಕತೆಯನ್ನು ಸಂಯೋಜಿಸಿದೆ

ಶಕ್ತಿ ಮತ್ತು ಮುಕ್ತಿ ಮೋಹನ್

ಶಕ್ತಿ ಮತ್ತು ಮುಕ್ತಿ ಮೋಹನ್

ಶಕ್ತಿ ಮತ್ತು ಮುಕ್ತಿ ಮೋಹನ್ ರಿಗೆ, ತಮ್ಮ ಮನೆ ಕೇವಲ ವೃತ್ತಿಯ ಗುರುತು ಮಾತ್ರವಲ್ಲದೇ, ಅನೇಕ ವೈಯಕ್ತಿಕ ನೆನಪುಗಳ ತಾಣವೂ ಆಗಿತ್ತು. ತಮ್ಮ ಕುಟುಂಬದೊಂದಿಗೆ ವಾಸಿಸುವ ಅನುಭವ ಸಹೋದರಿಯರಿಗೆ ಮನೆಯ ವಾತಾವರಣವನ್ನು ಅನುಭವಿಸುವ ಅವಕಾಶ ನೀಡಿದ್ದು, ಇಲ್ಲಿ ಕೆಲವು ಹಬ್ಬಗಳನ್ನೂ ಆಚರಿಸುತ್ತಿದ್ದರು.

ಮುಂದೆ ಓದಿ ...
 • Share this:

  ಶಕ್ತಿ ಮತ್ತು ಮುಕ್ತಿ ಮೋಹನ್ ತಮ್ಮ ಜೀವನಶೈಲಿ ಮತ್ತು ಲಿವಿಂಗ್ ಸ್ಪೇಸ್ ಅನ್ನು ಸೃಜನಶೀಲತೆ ಮತ್ತು ಪ್ರತ್ಯೇಕತೆಯಿಂದ ರೂಪಿಸುವ ಮೂಲಕ ಯುವ ಭಾರತೀಯರ ವಿಶಿಷ್ಟ ತಲೆಮಾರನ್ನು ಪ್ರತಿನಿಧಿಸುತ್ತಾರೆ. ಪ್ರಸಿದ್ಧ ನೃತ್ಯಗಾರ್ತಿಯ ಸಹೋದರ ಜೋಡಿ Asian Paints Where The Heart Is’ ಸೀಸನ್ 4ನ ರ ಅಂತಿಮ ಸರಣಿಯಲ್ಲಿ ದೆಹಲಿಯಲ್ಲಿ ತಮ್ಮ ದುಬಾರಿ ಮನೆಯ ಅದ್ಭುತ ವೀಕ್ಷಕ ವಿವರಣೆಯನ್ನು ನೀಡಿದ್ದು, ಕುಟುಂಬದೊಂದಿಗೆ ಶಾಶ್ವತ ಬಾಂಧವ್ಯವನ್ನು ರೂಪಿಸುವುದರೊಂದಿಗೆ ವೈಯಕ್ತಿಕ ಆದ್ಯತೆಯನ್ನೂ ಪೋಷಿಸುವ ಮೂಲಕ ತಮ್ಮ ಸ್ಥಳವನ್ನು ಪ್ರದರ್ಶಿಸಿದ್ದಾರೆ.


  ಪ್ರಸಿದ್ಧಿಗೆ ಬರುವ ತಮ್ಮ ಪ್ರಯಾಣದುದ್ದಕ್ಕೂ, ಫಿಲ್ಮ್ ಮತ್ತು ನೃತ್ಯಗಳ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಶಕ್ತಿ ಮತ್ತು ಮುಕ್ತಿರವರ ಕ್ರಿಯಾತ್ಮಕ ಮನೆ ಸಕಾರಾತ್ಮಕ ಸಂಯೋಜನೆ ಮತ್ತು ಸಾಮರ್ಥ್ಯದ ವೇದಿಕೆಯಾಗಿತ್ತು. ನಿಯಮಿತ ಅನುಯಾಯಿಗಳು ಇಬ್ಬರ ನೃತ್ಯ ವೀಡಿಯೋಗಳನ್ನು ವೈರಲ್ ಮಾಡಿದ್ದು, ಈ ಮೂಲಕ ಹಚ್ಚಹಸುರಾದ ಟೆರೇಸ್ ಗಾರ್ಡನ್ ವೀಕ್ಷಿಸುವ ಅವಕಾಶ ವೀಕ್ಷಕರಿಗೆ ದೊರೆಯಿತು,  ಇದು ನೃತ್ಯಾಭ್ಯಾಸ ಮಾಡಲು ಅವರ ಮೆಚ್ಚಿನ ಸ್ಥಳವಾಗಿದ್ದು, ತಾವೇ ಖುದ್ದು ಆಸಕ್ತಿಯಿಂದ ಇದನ್ನು ರೂಪಿಸಿದ್ದರು. ಆದರೆ ಟೆರೇಸ್ ನಲ್ಲಿ ಹೆಚ್ಚು ಬಿಸಿಲಿದ್ದಾಗ ಅಥವಾ ಮಳೆ ಬಂದಾಗ, ಕೆಳಮಹಡಿಯಲ್ಲಿರುವ ಸಮೃದ್ಧ ಲಿವಿಂಗ್ ರೂಂ ಅನ್ನು ತಮ್ಮ ನೃತ್ಯದ ಸ್ಟುಡಿಯೋ ಮಾಡಿಕೊಂಡಿದ್ದು, ಕೆಲವು ಫರ್ನಿಚರ್ ಗಳನ್ನು ಬದಿಗೆ ಸರಿಸಿ ಅಭ್ಯಾಸ ಮಾಡುತ್ತಿದ್ದರು.


  ಶಕ್ತಿ ಮತ್ತು ಮುಕ್ತಿ ಮೋಹನ್ ರಿಗೆ, ತಮ್ಮ ಮನೆ ಕೇವಲ ವೃತ್ತಿಯ ಗುರುತು ಮಾತ್ರವಲ್ಲದೇ, ಅನೇಕ ವೈಯಕ್ತಿಕ ನೆನಪುಗಳ ತಾಣವೂ ಆಗಿತ್ತು. ತಮ್ಮ ಕುಟುಂಬದೊಂದಿಗೆ ವಾಸಿಸುವ ಅನುಭವ ಸಹೋದರಿಯರಿಗೆ ಮನೆಯ ವಾತಾವರಣವನ್ನು ಅನುಭವಿಸುವ ಅವಕಾಶ ನೀಡಿದ್ದು, ಇಲ್ಲಿ ಕೆಲವು ಹಬ್ಬಗಳನ್ನೂ ಆಚರಿಸುತ್ತಿದ್ದರು. ಹೆಚ್ಚಾಗಿ, ಇದು ಶಕ್ತಿ ಮತ್ತು ಮುಕ್ತಿ ಪರಸ್ಪರ ವಿನಿಮಯ ಮಾಡಿಕೊಂಡಿದ್ದ ಆತ್ಮೀಯ ಬಾಂಧವ್ಯದ ಪ್ರತಿಫಲನವೂ ಆಗಿದ್ದು, ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಒಂದಾಗಿ ವಿಲೀನಗೊಳಿಸಿದ್ದರು. ಮನೆಯಲ್ಲಿ ಒಟ್ಟಾಗಿರುವುದು, ಈ ಸಹೋದರ ಜೋಡಿಗೆ ತಮ್ಮ ಜೀವನದ ಹಂತಗಳು ಮತ್ತು ಅಭಿರುಚಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಸ್ವಾಭಾವಿಕತೆ ನೀಡಿತ್ತು.


  ತಮ್ಮ ಮಲಗುವ ಕೋಣೆಗಳಿಗೆ ಭೇಟಿ ನೀಡಿದಾಗ ಅವರ ವ್ಯಕ್ತಿತ್ವಗಳಲ್ಲಿ ಭಿನ್ನತೆ ಸ್ಪಷ್ಟವಾಗುತ್ತದೆ. ಎರಡು ವರ್ಷ ಹಿರಿಯಳಾದ ಶಕ್ತಿ, ವೈಯಕ್ತಿಕ ಸ್ಥಳ ಮತ್ತು ನಿಶ್ಶಬ್ದ ಹಾಗೂ ಪ್ರತಿಫಲನಕ್ಕೆ ಆದ್ಯತೆ ನೀಡಿದರೆ, ಮುಕ್ತಿಯ ಕೊಠಡಿ ಕ್ರಿಯಾತ್ಮಕತೆ ಮತ್ತು ಪ್ರಪಂಚಕ್ಕೆ ಚೈತನ್ಯದಾಯಕತೆ ನೀಡುವುದನ್ನು ಪ್ರತಿಫಲಿಸುತ್ತದೆ. ಸಹೋದರಿಯರು ತಮ್ಮ ವ್ಯಕ್ತಿತ್ವ ಹಾಗೂ ಆದ್ಯತೆಯನ್ನು ಪ್ರತಿಬಿಂಬಿಸುವ ಸಾಮಗ್ರಿಗಳು ಮತ್ತು ಅಲಂಕಾರಿಕ ವಸ್ತುಗಳಿಂದ ತಮ್ಮ ಕೊಠಡಿಯನ್ನು ಅಲಂಕರಿಸಿದ್ದಾರೆ.


  ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ, ಮೋಹನ್ ಸಹೋದರಿಯರ ಮನೆಯ ಸುಂದರವಾದ ಸ್ಥಳದ ಪ್ರವಾಸವನ್ನು ಕೈಗೊಳ್ಳಿ.
  ಇದು  ’Asian Paints Where The Heart Is’ ಸೀಸನ್ 4' ರ ಹೆಗ್ಗುರುತಾದ ಪ್ರಸಿದ್ಧ ವ್ಯಕ್ತಿಗಳ ಮನೆಯ ಒಳಾಂಗಣದ ವಿಧವಾಗಿದೆ. ಈ ಸರಣಿಯ ಅವಧಿಯಲ್ಲಿ, ವೀಕ್ಷಕರು ತಮ್ಮ ಮನೆ ಮತ್ತು ಹೃದಯದ ಬಾಗಿಲನ್ನು ತೆರೆದಿರುವ ಶಂಕರ್ ಮಹದೇವನ್, ತಮನ್ನಾ ಭಾಟಿಯಾ, ಅನಿತಾ ಡೋಂಗ್ರೆ, ಸ್ಮೃತಿ ಮಂದಣ್ಣ, ಪ್ರತೀಕ್ ಕುಹಾದ್ ಮತ್ತು ರಾಜ್ ಕುಮಾರ್ ರಾವ್ ರವರ ಮನೆಯ ಒಳಾಂಗಣವನ್ನೂ ನೋಡಬಹುದಾಗಿದೆ. ಈ ಅದ್ಭುತವಾದ, ಪ್ರಸಿದ್ಧ ವ್ಯಕ್ತಿಗಳ ಮನೆಗಳ ವೈಯಕ್ತಿಕ ನೋಟವನ್ನು ಹಿಂದಿನ ಮೂರು ಸೀಸನ್ ಗಳ ’ Asian Paints Where The Heart Is’ ನಲ್ಲಿ 250 ಕ್ಕೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಹಾಗೂ ಸೀಸನ್ 4 ರಲ್ಲಿ, ನಾವು ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದ್ದೇವೆ!

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು