ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದ 'ಶಕೀಲಾ' ಚಿತ್ರದ ಟೀಸರ್ ಔಟ್..!

Shakeela Official Teaser: 90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿಯೊಬ್ಬರ ಕಥೆ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ಮೂಡಿಬರಲಿದೆ.

Shakeela movie

Shakeela movie

 • Share this:
  90ರ ದಶಕದಲ್ಲಿ ಮುದುಕರಿಂದ ಹಿಡಿದು ಯುವಕರವರೆಗೂ ನಿದ್ದೆಗೆಡಿಸಿದ್ದ ನೀಲಿ ಚಿತ್ರತಾರೆಯರ ಜೀವನಾಧಾರಿತ ಸಿನಿಮಾಗಳು ಒಂದೊಂದಾಗಿ ಹೊರಬೀಳುತ್ತಿದೆ.  ಹಾಟ್ ತಾರೆಯಾಗಿ ಮಿಂಚಿದ್ದ ಸಿಲ್ಕಿ ಸ್ಮಿತಾ ಅವರ ತೆರೆ ಮರೆಯ ಕಹಾನಿಯನ್ನು ಬಾಲಿವುಡ್ ನಟಿ ವಿದ್ಯಾ ಬಾಲನ್ 'ಡರ್ಟಿ ಪಿಕ್ಚರ್'​ ಮೂಲಕ ಅನಾವರಣಗೊಳಿಸಿದ್ದರು.

  ಇದರ ಬೆನ್ನಲ್ಲೇ ಮಾದಕ ಮದನಾರಿ ಶಕೀಲಾ ಕುರಿತಾದ ಸಿನಿಮಾ ಮಾಡುವುದಾಗಿ ಕನ್ನಡ ನಿರ್ದೇಶಕ ಇಂದ್ರಜಿತ್ ಲಂಕೇಶ್ ಘೋಷಿಸಿದ್ದರು. ಚಿತ್ರದಲ್ಲಿನ ಬೋಲ್ಡ್ ಪಾತ್ರಕ್ಕಾಗಿ ಬಾಲಿವುಡ್ ನಟಿ ರಿಚಾ ಚಡ್ಡಾರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಆ ಬಳಿಕ ಅದೇನಾಯ್ತೊ ಗೊತ್ತಿಲ್ಲ, ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ಗಳು ಹೊರಬಿದ್ದಿರಲಿಲ್ಲ.

  ಶಕೀಲಾ ಪಾತ್ರದಲ್ಲಿ ನಟಿ ಸರಾಯು ಮೋಹನ್


  ಇದೀಗ ಅತ್ತ ಮಾಲಿವುಡ್​ನಿಂದಲೇ ಶಕೀಲಾ ಕುರಿತಾದ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗಿದೆ. ಚಿತ್ರದ ಹೆಸರು ಕೂಡ 'ಶಕೀಲಾ'. ಇಲ್ಲಿ ಶೃಂಗಾರ ಕಥೆಯ ವೈಯ್ಯಾರಿಯಾಗಿ ಕಾಣಿಸಿಕೊಂಡಿರುವುದು ನಟಿ ಸರಾಯು ಮೋಹನ್. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇಲ್ಲೂ ಕೂಡ ಶಕೀಲಾ ಸಿನಿಮಾದ 90ರ ಪ್ರಚಾರದ ಝಲಕ್​ನ್ನು ತೋರಿಸಲಾಗಿದೆ.

  ಸುಗೀಶ್ ನಿರ್ದೇಶಿಸಿರುವ ಈ ಸಿನಿಮಾ ಮೂಲಕ ಶಕೀಲಾ ಜೀವನದ ಪರದೆಯ ಹಿಂದಿನ ಅಸಲಿ ಕಹಾನಿಗಳು ಹೊರಬೀಳಲಿದೆ ಎಂಬ ಮಾತುಗಳು ಮಾಲಿವುಡ್​ನಲ್ಲಿದೆ. ಅಲ್ಲದೆ ಸಾಮಾನ್ಯ ಕುಟುಂಬದ ಹುಡುಗಿ ಹೇಗೆ ಅಶ್ಲೀಲ ಚಿತ್ರತಾರೆಯಾಗಿ ಸೌತ್ ಸಿನಿರಂಗವನ್ನು ಆಳಿದರು ಎಂಬುದು ಕೂಡ ಅನಾವರಣವಾಗಲಿದೆ.

  ನಟಿ ಸರಾಯು ಮೋಹನ್


  ಇನ್ನು ಫನ್​ಡೆ ಕ್ಲಬ್ ಕತ್ತರ್ ನಿರ್ಮಿಸಿರುವ ಶಕೀಲಾ ಸಿನಿಮಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ 90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿಯೊಬ್ಬರ ಕಥೆ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ಮೂಡಿಬರಲಿದೆ.
  First published: