ಬಿ-ಟೌನ್​ನಲ್ಲಿ 26 ವರ್ಷ ಪೂರೈಸಿದ ಕಿಂಗ್​ ಖಾನ್​ ಶಾರುಖ್​

news18
Updated:June 26, 2018, 1:37 PM IST
ಬಿ-ಟೌನ್​ನಲ್ಲಿ 26 ವರ್ಷ ಪೂರೈಸಿದ ಕಿಂಗ್​ ಖಾನ್​ ಶಾರುಖ್​
news18
Updated: June 26, 2018, 1:37 PM IST
ನ್ಯೂಸ್​ 18 ಕನ್ನಡ

ಕಿಂಗ್​ ಖಾನ್​ ಶಾರುಖ್​ ಒಂದು ಕಾಲದಲ್ಲಿ ಬಾಲಿವುಡ್​ ಅನ್ನು ಆಳಿದ ನಟ. ಅಮಿತಾಭ್​ ನಂತರ ಬಾಲಿವುಡ್​ನ ಬಾದ್​ಶಾ ಶಾರುಖ್​ ಅನ್ನೋದು ಅಘೋಷಿತವಾಗಿತ್ತು. ಅದರಂತೆಯೇ ಶಾರುಖ್​ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್​ನ ಕಿಂಗ್​ ಖಾನ್​ ಎನಿಸಿಕೊಂಡಿದ್ದಾರೆ.

ಕಿಂಗ್​ ಖಾನ್​ ಬಿ-ಟೌನ್​ ಅಂಗಳಕ್ಕೆ ಕಾಲಿಟ್ಟು ನಿನ್ನೆಗೆ 26 ವರ್ಷವಾಗಿದೆ. ಜೂನ್​ 25 1992ರಲ್ಲಿ ಶಾರುಖ್​ ಅಭಿನಯದ ಮೊದಲ ಸಿನಿಮಾ 'ದಿವಾನಾ' ಬಿಡುಗಡೆಯಾಗಿತ್ತು. ಅದಕ್ಕೂ ಮುಂಚೆ ಶಾರುಖ್​ ಕಿರುತೆರೆಯಲ್ಲಿ 'ಸರ್ಕಸ್​' ಹಾಗೂ 'ಫೌಜಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ತನ್ನ ಮೊದಲ ಸಿನಿಮಾದ ಬಿಡುಗಡೆಯಾಗಿ 26 ವರ್ಷ ಆದ ಖುಷಿಯನ್ನು ಶಾರುಖ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಏಳು-ಬೀಳು, ಯಶಸ್ಸು, ಸಾಧನೆ, ಖುಷಿಯ ಕ್ಷಣಗಳು, ಬೇಸರದ ದಿನಗಳು.. ಇವೆಲ್ಲದರ ನಡುವೆ ಎಲ್ಲೋ ಒಮ್ಮೆಯಾದರೂ ನಿಮ್ಮ ಮನಸ್ಸನ್ನು ಮುಟ್ಟಿದ್ದೇನೆ ಅನ್ನೋ ತೃಪ್ತಿ ಇದೆ. ಇದು ನನ್ನ ಜೀವನದುದ್ದಕ್ಕೂ ಮುಂದುವರಿಯಲಿದೆ' ಎಂದು ಬರೆದುಕೊಂಡಿದ್ದಾರೆ.

Tomorrow will be exactly half a lifetime of being ‘others’. Expressing love,happiness, sadness,dancing,falling & flying. Hope I hav touched small bits of ur hearts & hope I can do so for the whole lifetime... ’रोशनी मेरी बहुत दूर तक जायेगी, पर शर्त यह है, की सलीखे से जलाओ मुझको ‘


Loading...

ಶಾರುಖ್​ ಅಭಿನಯದ 'ದಿವಾನಾ' ಸಿನಿಮಾದಿಂದ ಬಾಲಿವುಡ್​ನಲ್ಲಿ ಅವರ ಅದೃಷ್ಟದ ಖಾತೆ ತೆರೆಯಿತು. ಈ ಸಿನಿಮಾದಲ್ಲಿ ರಿಷಿ ಕಪೂರ್ ಹಾಗೂ ದಿವ್ಯಾ ಭಾರತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರೆ, ಶಾರುಖ್​ ಎರಡನೇ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಅಭಿನಯದಿಂದ ಬಿ-ಟೌನ್​ನಲ್ಲಿ ನೆಲೆಯೂರುವಂತಾಯಿತು.

26 ವರ್ಷಗಳಲ್ಲಿ ಶಾರುಖ್​ ಸಾಕಷ್ಟು ಹಿಡ್​ ಸಿನಿಮಾಗಳನ್ನು ನೀಡಿದ್ದು, 'ಡರ್​', 'ದಿಲ್​ವಾಲೆ ದುಲ್ಹನಿಯಾ ಲೇಜಾಯೆಂಗೆ', 'ಮೊಹಬತೆ', 'ದಿಲ್​ ತೋ ಪಾಗಲ್​ ಹೈ', 'ಸ್ವದೇಶ್​' ,'ಚಕ್​ ದೆ ಇಂಡಿಯಾ' ಸೇರಿದಂತೆ ಸಾಕಷ್ಟು ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿವೆ. ಸದ್ಯ 'ಝೀರೋ' ಸಿನಿಮಾದಲ್ಲಿ ಕತ್ರಿನಾ ಹಾಗೂ ಅನುಷ್ಕಾ ಜತೆ ಅಭಿನಿಯಿಸುತ್ತಿದ್ದಾರೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...